ಸಿಸ್ಟರ್ ಸಿಮೋನಾ ಬ್ರಾಂಬಿಲ್ಲಾ ಸಿಸ್ಟರ್ ಸಿಮೋನಾ ಬ್ರಾಂಬಿಲ್ಲಾ 

ಜಗದ್ಗರು XIVನೇ ಲಿಯೋರವರು ಸಿಸ್ಟರ್ ಸಿಮೋನಾ ಬ್ರಾಂಬಿಲ್ಲಾ ರವರನ್ನು ಧರ್ಮಾದ್ಯಕ್ಷರ ಡಿಕಾಸ್ಟರಿ ಸದಸ್ಯೆಯಾಗಿ ನೇಮಕ ಮಾಡಿದ್ದಾರೆ.

ಡಿಕಾಸ್ಟರಿ ಫಾರ್ ಇನ್‌ಸ್ಟಿಟ್ಯೂಟ್ಸ್ ಆಫ್ ಕನ್ಸೆಕ್ರೇಟೆಡ್ ಲೈಫ್ ಅಂಡ್ ಸೊಸೈಟೀಸ್ ಆಫ್ ಅಪೋಸ್ಟೋಲಿಕ್ ಲೈಫ್‌ನ ಪ್ರಿಫೆಕ್ಟ್ ಆಗಿರುವ ಸಿಸ್ಟರ್ ಸಿಮೋನಾ ಬ್ರಾಂಬಿಲ್ಲಾ ರವರನ್ನು ಈಗ ಧರ್ಮಾದ್ಯಕ್ಷರ ಡಿಕಾಸ್ಟರಿ ಸದಸ್ಯೆಯಾಗಿ ಸೇವೆ ಸಲ್ಲಿಸಲು ಕರೆಯಲಾಗಿದೆ. ಅವರು ಈಗಾಗಲೇ 2022ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರಿಂದ ನೇಮಕಗೊಂಡ ಸಿಸ್ಟರ್ ರಫಾಯೆಲ್ಲಾ ಪೆಟ್ರಿನಿ ಮತ್ತು ಮರಿಯಾ ಲಿಯಾ ಜೆರ್ವಿನೋ ರವರೊಂದಿಗೆ ಸೇರಿ ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸಿಸ್ಟರ್ ಸಿಮೋನಾ ಬ್ರಾಂಬಿಲ್ಲಾ ರವರನ್ನು ಧರ್ಮಾದ್ಯಕ್ಷರ ಡಿಕಾಸ್ಟರಿ ಸದಸ್ಯರಾಗಿ ನೇಮಕ ಮಾಡಿದ್ದಾರೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಛೇರಿಯು ಫೆಬ್ರವರಿ 14 ರಂದು ಪ್ರಕಟಿಸಿದೆ. ಇಟಲಿಯಲ್ಲಿ ಜನಿಸಿದ ಸಿಸ್ಟರ್ ಬ್ರಾಂಬಿಲ್ಲಾ ರವರು ಮಾರ್ಚ್ 27 ರಂದು 61 ವರ್ಷ ಪೂರೈಸಲಿದ್ದಾರೆ. ಅವರು ಕಾನ್ಸೋಲಾಟಾ ಮಿಷನರೀಸ್ ಸಂಘದ ಸದಸ್ಯೆಯಾಗಿದ್ದು, ಜನವರಿ 2025ರಿಂದ ಡಿಕಾಸ್ಟರಿ ಫಾರ್ ಇನ್‌ಸ್ಟಿಟ್ಯೂಟ್ಸ್ ಆಫ್ ಕನ್ಸೆಕ್ರೇಟೆಡ್ ಲೈಫ್ ಅಂಡ್ ಸೊಸೈಟೀಸ್ ಆಫ್ ಅಪೋಸ್ಟೋಲಿಕ್ ಲೈಫ್‌ನ ಪ್ರಿಫೆಕ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಿಸ್ಟರ್ ಬ್ರಾಂಬಿಲ್ಲಾ ರವರು ಈಗ ಧರ್ಮಾದ್ಯಕ್ಷರ ಡಿಕಾಸ್ಟರಿಯಲ್ಲಿ ಈಗಾಗಲೇ ಸದಸ್ಯರಾಗಿರುವ ಇನ್ನಿಬ್ಬರು ಮಹಿಳೆಯರಾದ ಸಿಸ್ಟರ್ ರಫಾಯೆಲ್ಲಾ ಪೆಟ್ರಿನಿ ಮತ್ತು ಮರಿಯಾ ಲಿಯಾ ಜೆರ್ವಿನೋ ರವರೊಂದಿಗೆ ಸೇರಲಿದ್ದಾರೆ. ಇವರಿಬ್ಬರನ್ನೂ 2022ರ ಜುಲೈನಲ್ಲಿ ಜಗದ್ಗುರು ಫ್ರಾನ್ಸಿಸ್ ನೇಮಕ ಮಾಡಿದ್ದರು. ಈಗ ಜಗದ್ಗುರು XIVನೇ ಲಿಯೋರವರು ಅವರನ್ನು ಮರುಸ್ಥಾಪನೆ ಮಾಡಿ ದೃಢೀಕರಿಸಿದ್ದಾರೆ. ಈ ಡಿಕಾಸ್ಟರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರುಗಳ ನೇಮಕಾತಿ ಹಾಗೂ ಸ್ಥಳೀಯ ಧರ್ಮ ಸಭೆಗಳ ವ್ಯವಸ್ಥಾಪನೆಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ನೋಡಿಕೊಳ್ಳುತ್ತದೆ.

 ಧರ್ಮಾದ್ಯಕ್ಷರ ಡಿಕಾಸ್ಟರಿಕೆಲಸವೆಂದರೆ ಧರ್ಮಪ್ರಾಂತ್ಯ ಮತ್ತು ಟಿಟ್ಯುಲರ್ ಬಿಷಪ್‌ಗಳ ನೇಮಕಾತಿ, ಪ್ರೇಷಿತರ ಆಡಳಿತಗಾರರ ನೇಮಕ ಮತ್ತು ವಿಶೇಷ ಧರ್ಮ ಸಭೆಗಳ ನಿರ್ವಹಣೆಯಂತಹ ಪ್ರಮುಖ ವಿಷಯಗಳನ್ನು ಪರಿಶೀಲಿಸುವುದು. ಈ ಹಿನ್ನೆಲೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ವ್ಯಾಟಿಕನ್ ಆಡಳಿತದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಹಲವು ಕಾರ್ಡಿನಲ್‌ಗಳು ಮತ್ತು ಆರ್ಚ್‌ಬಿಷಪ್‌ಗಳನ್ನು ಡಿಕಾಸ್ಟರಿ ಸದಸ್ಯರಾಗಿ ದೃಢೀಕರಿಸಿದ್ದಾರೆ. ಇವರಲ್ಲಿ ಪ್ರಮುಖರು ಕಾರ್ಡಿನಲ್ ಪಿಯೇತ್ರೊ ಪ್ಯಾರೋಲಿನ್ (ರಾಜ್ಯ ಕಾರ್ಯದರ್ಶಿ), ಕಾರ್ಡಿನಲ್ ಕುರ್್ಟ್ ಕೊಚ್, ಕಾರ್ಡಿನಲ್ ಜೋವೊ ಬ್ರಾಜ್ ದಿ ಅವಿಜ್ ಹಾಗೂ ಇತರ ಹಲವರು ಸೇರಿದ್ದಾರೆ. ವಿಶ್ವದ ವಿವಿಧ ದೇಶಗಳಿಂದ ಬಂದಿರುವ ಈ ಧಾರ್ಮಿಕ ನಾಯಕರು ಡಿಕಾಸ್ಟರಿಯ ಕಾರ್ಯಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಈ ನೇಮಕಾತಿಗಳು ವಾಟಿಕನ್ ಆಡಳಿತದಲ್ಲಿ ಜಾಗತಿಕ ಪ್ರತಿನಿಧಿತ್ವ ಮತ್ತು ಸಮನ್ವಯತೆಯನ್ನು ವಿಶೇಷವಾಗಿ ಮಹಿಳೆಯರಿಗೆ ಪ್ರತಿಬಿಂಬಿಸುತ್ತವೆ.

14 ಫೆಬ್ರವರಿ 2026, 20:00