ಜಗದ್ಗರುಗಳು: ಪೇತ್ರನ ಉತ್ತರಾಧಿಕಾರಿ ಸತ್ಯವನ್ನು ಹೇಳಲು ಮತ್ತು ಶಾಂತಿಯನ್ನು ಉತ್ತೇಜಿಸಲು ಸ್ವತಂತ್ರರಾಗಿರಬೇಕು
ವ್ಯಾಟಿಕನ್ ವರದಿ
ಬುಧವಾರದಂದು ಜಗದ್ಗುರು XIVನೇ ಲಿಯೋರವರು ಪ್ರೊ ಪೆಟ್ರಿ ಸೆದೆ ಅಸೋಸಿಯೇಷನ್ ಸದಸ್ಯರನ್ನು ಭೇಟಿಯಾದರು. ಪೇತ್ರನ ಉತ್ತರಾಧಿಕಾರಿಯನ್ನು ಬೆಂಬಲಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುವ ಈ ಸಂಘಟನೆಯ ಸದಸ್ಯರು, ಜಗದ್ಗುರು IX ನೇ ಪಿಯಸ್ ರವರನ್ನು ಜಗದ್ಗುರುಗಳ ರಾಜ್ಯಗಳನ್ನು ರಕ್ಷಿಸಲು ಸಹಾಯ ಮಾಡಿದ ಯುವ ಕಥೋಲಿಕ ಸ್ವಯಂಸೇವಕರಾದ ಜಗದ್ಗುರುಗಳ ಝುವಾವ್ಸ್ ಪಡೆಗಳ ದೂರದ ವಾರಸುದಾರರು ಎಂದು ಅವರು ಸ್ಮರಿಸಿದರು.
ತಮ್ಮ ಭಾಷಣದಲ್ಲಿ, ಜಗದ್ಗುರುಗಳು ಈ ಸಂಘಟನೆಯು ಪ್ರೇಷಿತರಿಗೆ ನೀಡುತ್ತಿರುವ ಬೆಂಬಲವನ್ನು ಶ್ಲಾಘಿಸಿದರು. 19ನೇ ಶತಮಾನದ ಮಧ್ಯಭಾಗದಿಂದ ಸಾಮಾಜಿಕ ಐತಿಹಾಸಿಕ ಪರಿಸ್ಥಿತಿ ಬದಲಾಗಿದೆ ಎಂದು ಸೂಚಿಸಿ, ರೋಮನ್ ಜಗದ್ಗುರುಗಳ ಸ್ವಾತಂತ್ರ್ಯವನ್ನು ರಕ್ಷಿಸಲು ಈಗ ಆಯುಧಗಳಿಂದ ಹೋರಾಡುವ ಅಥವಾ ಯಾವುದೇ ರೀತಿಯ ಹಿಂಸೆಯನ್ನು ಉಪಯೋಗಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಜಗದ್ಗುರು IX ನೇ ಪಿಯಸ್ ರವರು ಕೂಡ 1870ರ ಸೆಪ್ಟೆಂಬರ್‌ನಲ್ಲಿ ಇಟಾಲಿಯನ್ ರಿಸೊರ್ಜಿಮೆಂಟೋ ಪಡೆಗಳು ರೋಮ್ ನಗರವನ್ನು ವಶಪಡಿಸಿಕೊಂಡಾಗ ರಕ್ತಪಾತ ನಡೆಯದಂತೆ ನಿರಾಕರಿಸಿ ಭವಿಷ್ಯವಾಣಿ ಗುಣದ ಹೆಜ್ಜೆಯನ್ನು ಇಟ್ಟಿದ್ದರು ಎಂದು ಅವರು ನೆನಪಿಸಿದರು. ಆದಾಗ್ಯೂ, ದೇವರ ರಾಜ್ಯದ ಘೋಷಣೆ ಇಂದಿಗೂ ಅನೇಕ ಕಡೆಗಳಲ್ಲಿ ಅಡ್ಡಿಪಡಿಸಲಾಗುತ್ತಿದೆ ಎಂದು ಜಗದ್ಗುರುಗಳು ಹೇಳಿದರು ಆದ್ದರಿಂದ ಈ ಸಂಘಟನೆಯ ಧ್ಯೇಯ ಇಂದು ಸಹ ಪ್ರಸ್ತುತವಾಗಿದೆ ಎಂದು ಒತ್ತಿಹೇಳಿದರು.
ರೋಮ್‌ನ ಬಿಷಪ್‌ಗೆ ವಿಶ್ವಾಸಿಗಳನ್ನು ಏಕತೆಯಲ್ಲಿ ಕೂಡಿಸಿ ರಕ್ಷಣೆಯ ಸುವಾರ್ತೆಯನ್ನು ಘೋಷಿಸುವ ಗುರಿ ನೀಡಲಾಗಿದೆ ಎಂದು ಅವರು ಹೇಳಿದರು. “ನಾವು ಬದುಕುತ್ತಿರುವ ಈ ಅಶಾಂತ ಕಾಲದಲ್ಲಿ ‘ಪೇತ್ರ’ ಸತ್ಯವನ್ನು ಹೇಳಲು, ಅನ್ಯಾಯವನ್ನು ಖಂಡಿಸಲು, ದುರ್ಬಲರ ಹಕ್ಕುಗಳನ್ನು ರಕ್ಷಿಸಲು, ಶಾಂತಿಯನ್ನು ಉತ್ತೇಜಿಸಲು ಮತ್ತು ಮುಖ್ಯವಾಗಿ ಶಿಲುಬೆಗೆ ಬಲಿಯಾಗಿ ಪುನರುತ್ಥಾನಗೊಂಡ ಯೇಸು ಕ್ರಿಸ್ತನನ್ನು ಘೋಷಿಸಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿರುವುದು ಅತ್ಯಂತ ಮಹತ್ವದ ಸಂಗತಿ ಎಂದು ಅವರು ಹೇಳಿದರು.
ಜಗದ್ಗರುಗಳ ಸಂಘಟನೆಯ ಸದಸ್ಯರಿಗೆ ಬಡವರ ಪರವಾಗಿ ನಡೆಸುತ್ತಿರುವ ಪ್ರಾರ್ಥನೆ ಮತ್ತು ದಾನಧರ್ಮ ಕಾರ್ಯಗಳಿಗಾಗಿ ಧನ್ಯವಾದಗಳನ್ನು ತಿಳಿಸಿದರು. ವಿಶೇಷವಾಗಿ, ಪೆರುವಿನ ಚಿಕ್ಲಾಯೋದಲ್ಲಿ ತಾವು ಹಿಂದಿನ ಬಿಷಪ್ ಆಗಿದ್ದ ಧರ್ಮಪ್ರಾಂತ್ಯದ ದಾನಕಾರ್ಯಕ್ಕೆ ನೀಡಿದ ಆರ್ಥಿಕ ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಅತಿ ಅಗತ್ಯವಿರುವವರಿಗಾಗಿ ತರಬೇತಿ ಕೇಂದ್ರವನ್ನು ಸ್ಥಾಪಿಸುವುದು ಬಹಳ ಉಪಯುಕ್ತವಾಗಲಿದೆ ಮತ್ತು ದೂರದಲ್ಲಿದ್ದರೂ ಮನಸ್ಸು ಮತ್ತು ದಯೆಯ ಮೂಲಕ ಅವರ ಹತ್ತಿರ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೊನೆಯಲ್ಲಿ, ಜಗದ್ಗುರುಗಳು ತಮ್ಮ ಹಾಗೂ ಅಧಿಕಾರ ಸ್ಥಳದ ಕಾರ್ಯವನ್ನು ಬೆಂಬಲಿಸುವಲ್ಲಿ ಪ್ರಾರ್ಥನೆಯ ಶಕ್ತಿಯನ್ನು ಒತ್ತಿಹೇಳಿ,ಪ್ರೊ ಪೆಟ್ರಿ ಸೆದೆ ಅಸೋಸಿಯೇಷನ್ ಸದಸ್ಯರನ್ನು ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಗೆ ಒಪ್ಪಿಸಿದರು.
