2021.03.21 Giornata contro il razzismo

ಜಗದ್ಗುರುಗಳು: ಮಾನವ ಭ್ರಾತೃತ್ವವು ಹಳೆಯ ಯುಟೋಪಿಯಾ ಅಲ್ಲ, ತುರ್ತು ಅವಶ್ಯಕತೆ

ವಿಶ್ವ ಮಾನವ ಭ್ರಾತೃತ್ವ ದಿನದ ಸಂದರ್ಭದಲ್ಲಿ ಹಾಗೂ ಝಾಯೆದ್ ಪ್ರಶಸ್ತಿಯ ಪ್ರದಾನ ಕಾರ್ಯಕ್ರಮಕ್ಕಾಗಿ ನೀಡಿದ ತಮ್ಮ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ಮಾನವ ಭ್ರಾತೃತ್ವವು ಸಂಘರ್ಷಗಳು, ಭಿನ್ನತೆಗಳು ಮತ್ತು ಉದ್ವಿಗ್ನತೆಗಳಿಗಿಂತ ಶಕ್ತಿಶಾಲಿಯಾದ ತುರ್ತು ಅವಶ್ಯಕತೆ ಎಂದು ವಿವರಿಸಿದ್ದಾರೆ. ಅದೇ ಸಮಯದಲ್ಲಿ, ಭ್ರಾತೃತ್ವವನ್ನು ಕೇವಲ ಆಲೋಚನೆಗಳ ಲೋಕದಲ್ಲೇ ಸೀಮಿತಗೊಳಿಸಿ ಬಿಡಬಾರದೆಂದು ಅವರು ಎಚ್ಚರಿಸಿದ್ದಾರೆ.

ವ್ಯಾಟಿಕನ್ ವರದಿ

ಶಾಂತಿಯನ್ನು ಹಳೆಯ ಯುಟೋಪಿಯಾ ಎಂದು ತಳ್ಳಿಹಾಕಲಾಗುತ್ತಿರುವ ಹಾಗೂ ಭ್ರಾತೃತ್ವವನ್ನು ಕೇವಲ ಸೈದ್ಧಾಂತಿಕ ಆಲೋಚನೆಗೆ ಸೀಮಿತಗೊಳಿಸಲಾಗುತ್ತಿರುವ ಇಂದಿನ ಜಗತ್ತಿನಲ್ಲಿ, ಮಾನವ ಭ್ರಾತೃತ್ವವು ಸಿದ್ಧಾಂತವಲ್ಲ, ತುರ್ತು ಅವಶ್ಯಕತೆ ಎಂಬುದನ್ನು ಜಗದ್ಗುರು XIVನೇ ಲಿಯೋರವರು ಗಟ್ಟಿಯಾಗಿ ಒತ್ತಿ ಹೇಳಿದ್ದಾರೆ. ಫೆಬ್ರವರಿ 4 ರಂದು ವಿಶ್ವ ಮಾನವ ಭ್ರಾತೃತ್ವ ದಿನ ಮತ್ತು ಝಾಯೆದ್ ಪ್ರಶಸ್ತಿ ಪ್ರದಾನ ಸಂದರ್ಭಕ್ಕಾಗಿ ಪ್ರಕಟಿಸಿದ ತಮ್ಮ ಸಂದೇಶದಲ್ಲಿ, ಸಂಘರ್ಷಗಳು, ಭಿನ್ನತೆಗಳು ಮತ್ತು ಉದ್ವಿಗ್ನತೆಗಳಿಗಿಂತ ಶಕ್ತಿಶಾಲಿಯಾದ ಭ್ರಾತೃತ್ವಕ್ಕೆ ಅವರು ಕರೆ ನೀಡಿದ್ದಾರೆ.

ಜಗದ್ಗುರುಗಳು, ಜಗದ್ಗುರು ಫ್ರಾನ್ಸಿಸ್ ಮತ್ತು ಗ್ರ್ಯಾಂಡ್ ಇಮಾಮ್ ಅಹ್ಮದ್ ಅಲ್-ತಯ್ಯೆಬ್ ಸಹಿ ಮಾಡಿದ ವಿಶ್ವ ಶಾಂತಿ ಮತ್ತು ಸಹಬಾಳ್ವೆಯ ಮಾನವ ಭ್ರಾತೃತ್ವ ದಾಖಲೆಯ ಏಳನೇ ವಾರ್ಷಿಕೋತ್ಸವವನ್ನು ಸ್ಮರಿಸುತ್ತಾ, ಮಾನವತೆಯಲ್ಲಿನ ಅತ್ಯಂತ ಅಮೂಲ್ಯ ಮತ್ತು ವಿಶ್ವವ್ಯಾಪಿ ಅಂಶವಾದ ನಮ್ಮ ಭ್ರಾತೃತ್ವವನ್ನು ಆಚರಿಸುವ ಅವಕಾಶವೆಂದು ಹೇಳಿದ್ದಾರೆ. ದೇವರ ರೂಪದಲ್ಲಿ ಸೃಷ್ಟಿಸಲ್ಪಟ್ಟ ಪ್ರತಿಯೊಬ್ಬ ಮನುಷ್ಯನನ್ನೂ ಒಂದಾಗಿ ಕಟ್ಟಿ ಹಿಡಿಯುವ  ಬಂಧವೇ ಇದು ಎಂದು ಅವರು ವಿವರಿಸಿದ್ದಾರೆ.

ಇಂದಿನ ಜಗತ್ತಿನಲ್ಲಿ ಅಸಂಖ್ಯಾತ "ಅತಿಯಾಗಿ ಅನೇಕ” ಸಹೋದರರು ಮತ್ತು ಸಹೋದರಿಯರು ಹಿಂಸೆ ಮತ್ತು ಯುದ್ಧದ ಭೀಕರತೆಯನ್ನು ಅನುಭವಿಸುತ್ತಿದ್ದಾರೆ ಎಂದು ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಫ್ರಟೆಲ್ಲಿ ತುಟ್ಟಿ ಎಂಬ ಜಗದ್ಗುರು ಫ್ರಾನ್ಸಿಸ್ ರವರ ಎನ್‌ಸೈಕ್ಲಿಕಲ್ ಅನ್ನು ಉಲ್ಲೇಖಿಸಿ, ಪ್ರತಿ ಯುದ್ಧದ ಮೊದಲ ಬಲಿ ಮಾನವ ಕುಟುಂಬದ ಸಹಜ ಭ್ರಾತೃತ್ವದ ಕರೆಯೇ ಎಂದು ಅವರು ನೆನಪಿಸಿದರು.

ಶಾಂತಿಯನ್ನು ಒಟ್ಟಾಗಿ ನಿರ್ಮಿಸುವ ಕನಸನ್ನು ಹಳೆಯ ಯುಟೋಪಿಯಾ ಎಂದು ತಿರಸ್ಕರಿಸುವ ಕಾಲದಲ್ಲಿಯೇ, ಮಾನವ ಭ್ರಾತೃತ್ವವು ಬದುಕಿನಲ್ಲೇ ಅಸ್ತಿತ್ವ ಹೊಂದಿರುವ ವಾಸ್ತವಿಕ ಶಕ್ತಿ ಎಂದು ದೃಢ ನಂಬಿಕೆಯಿಂದ ಘೋಷಿಸಬೇಕೆಂದು ಜಗದ್ಗುರುಗಳು ಹೇಳಿದ್ದಾರೆ. ಆದರೆ ಈ ಶಕ್ತಿ ದಿನನಿತ್ಯದ, ಸ್ಪಷ್ಟವಾದ ಬದ್ಧತೆ ಪರಸ್ಪರ ಗೌರವ, ಹಂಚಿಕೆ ಮತ್ತು ಕರುಣೆಯ ಮೂಲಕವೇ ಸಾಕಾರಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

ಕೇವಲ ಮಾತುಗಳು ಸಾಕಾಗುವುದಿಲ್ಲ ಎಂದು ಜಗದ್ಗುರುಗಳು ಎಚ್ಚರಿಸಿದರು. ಆಲೋಚನೆಗಳು ಮತ್ತು ಸಿದ್ಧಾಂತಗಳ ಮಟ್ಟದಲ್ಲೇ ಉಳಿದು, ಪ್ರಾಯೋಗಿಕ ಪ್ರೀತಿಯ ಕೃತ್ಯಗಳಲ್ಲಿ ಅವು ವ್ಯಕ್ತವಾಗದಿದ್ದರೆ, ನಮ್ಮ ಅತ್ಯಂತ ಮೌಲ್ಯಮಯ ಭರವಸೆಗಳೂ ಕ್ಷೀಣಿಸುತ್ತವೆ ಎಂದು ಅವರು ಹೇಳಿದರು. ನಾವು ಎಲ್ಲರೂ ಸಹೋದರ ಸಹೋದರಿಯರಾಗಿ, ಪರಸ್ಪರ ಸೇರಿದ ಭಾವನೆಯತ್ತ ಮುನ್ನಡೆಯಬೇಕೆಂದು ಅವರು ಕರೆ ನೀಡಿದರು.

ಸಂದೇಶದ ಅಂತ್ಯದಲ್ಲಿ, ಝಾಯೆದ್ ಪ್ರಶಸ್ತಿ ವಿಜೇತರನ್ನು ಜಗದ್ಗುರು XIVನೇ ಲಿಯೋರವರು ಭರವಸೆಯ ಬೀಜ ಬಿತ್ತುವವರು ಎಂದು ಕರೆದರು. ಗೋಡೆಗಳನ್ನು ಕಟ್ಟುವ ಬದಲು ಸೇತುವೆಗಳನ್ನು ನಿರ್ಮಿಸುವ ಅವರ ಕಾರ್ಯಗಳು, ಗಾಢವಾದ ವಿಭಜನೆಗಳನ್ನೂ ಪ್ರೀತಿಯ ಕೃತಿಗಳ ಮೂಲಕ ಗುಣಪಡಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಇತರರನ್ನು ಅಪರಿಚಿತರಾಗಿಯೇ ಅಥವಾ ಭೀತಿಯ ರೂಪದಲ್ಲಿ ನೋಡುವುದನ್ನು ಬಿಟ್ಟು, ಸಹೋದರ ಅಥವಾ ಸಹೋದರಿಯರಾಗಿ ಗುರುತಿಸುವ ಜಗತ್ತಿಗಾಗಿ ನಾವು ಎಲ್ಲರೂ ಸೇರಿ ಕೆಲಸ ಮಾಡಬೇಕೆಂದು ಜಗದ್ಗುರುಗಳು ಮನವಿ ಮಾಡಿದರು.

04 ಫೆಬ್ರವರಿ 2026, 00:00