ಜಗದ್ಗುರು XIV ನೇ ಲಿಯೋರವರು  ಪೋಲಿಕೊರೊ ಯೋಜನೆಯ ಸದಸ್ಯರೊಂದಿಗೆ ಮಾತನಾಡುತ್ತಾರೆ. ಜಗದ್ಗುರು XIV ನೇ ಲಿಯೋರವರು ಪೋಲಿಕೊರೊ ಯೋಜನೆಯ ಸದಸ್ಯರೊಂದಿಗೆ ಮಾತನಾಡುತ್ತಾರೆ.  (ANSA)

ಜಗದ್ಗುರುಗಳು: ಅಜ್ಞಾನಿ ಸರಳತೆಯನ್ನೂ ಮತ್ತು ‘ವಿನಾಶದ ಪ್ರವಾದಿಗಳನ್ನೂ’ ತಪ್ಪಿಸಿ

ಜಗದ್ಗುರು XIV ನೇ ಲಿಯೋರವರು ಇಟಾಲಿಯನ್ ಎಪಿಸ್ಕೋಪಲ್ ಕಾನ್ಫರೆನ್ಸ್‌ನ “ಪೊಲಿಕೋರೊ ಯೋಜನೆ” ಸದಸ್ಯರನ್ನು ಭೇಟಿಯಾದರು. ಈ ಯೋಜನೆ ದೇಶದ ಯುವಕರಿಗೆ ಉದ್ಯೋಗವನ್ನು ಕಂಡುಹಿಡಿಯಲು ಸಹಾಯ ಮಾಡುವುದನ್ನು ಉದ್ದೇಶವಾಗಿಟ್ಟುಕೊಂಡಿದೆ.

ವ್ಯಾಟಿಕನ್ ವರದಿ

 

ಯುವಕರೇ, ನೀವು ಕೈಬಿಡದ, ಹತಾಶರಾಗದ, ತೋಳನ್ನು ಮಡಚಿ ಮತ್ತೆ ಎದ್ದು ನಿಲ್ಲುವ ಇಟಲಿಯ ಸುಂದರ ಮುಖವಾಗಿದ್ದೀರಿ.

ಶನಿವಾರ ಜಗದ್ಗುರು XIVನೇ ಲಿಯೋರವರು “ಪೊಲಿಕೋರೊ ಯೋಜನೆ” ಸದಸ್ಯರಿಗೆ ಸಲ್ಲಿಸಿದ ಗೌರವದ ಮಾತುಗಳು ಇವು. ಈ ಯೋಜನೆಯನ್ನು 1995ರ ಡಿಸೆಂಬರ್‌ನಲ್ಲಿ ಯುವ ಸೇವೆಯಲ್ಲಿ ತೊಡಗಿದ್ದ ಇಟಾಲಿಯನ್ ಪಾದ್ರಿ ಮಾರಿಯೋ ಒಪರ್ಟಿರವರು ಆರಂಭಿಸಿದರು.

ಆರಂಭದಿಂದಲೇ ಈ ಉಪಕ್ರಮವು ಮೊದಲಿಗೆ ದಕ್ಷಿಣ ಇಟಲಿಯಲ್ಲಿ, ನಂತರ ಸಂಪೂರ್ಣ ದೇಶದಾದ್ಯಂತ ಕೆಲಸದ ಜಗತ್ತಿಗೆ ಸುವಾರ್ತೆಯನ್ನು ತಲುಪಿಸುವುದನ್ನು ಉದ್ದೇಶಿಸಿತ್ತು.

ದೇಶದ ಆರ್ಥಿಕವಾಗಿ ಹಿಂದುಳಿದ ಮತ್ತು ಸಂಘಟಿತ ಅಪರಾಧದಿಂದ ಬಳಲುತ್ತಿರುವ ಮೆಜ್ಜೋಜಿಯೋರ್ಣೊ (ದಕ್ಷಿಣ ಭಾಗ)ದಲ್ಲಿ ಹುಟ್ಟಿದ ಈ ಯೋಜನೆ, ನಂತರ ಕೇವಲ ಉದ್ಯೋಗ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ವಿಸ್ತರಿಸಿತು. ಭ್ರಷ್ಟಾಚಾರ, ಕಾರ್ಮಿಕರ ಶೋಷಣೆ ಮತ್ತು ಅನ್ಯಾಯಗಳ ವಿರುದ್ಧದ ಅದರ ಕಾರ್ಯವನ್ನು ಜಗದ್ಗುರುಗಳು ಪ್ರಶಂಸಿಸಿದರು. ಹಾಗೆಯೇ ಮಾಫಿಯಾಗಳಿಂದ ವಶಪಡಿಸಿಕೊಂಡ ಆಸ್ತಿಗಳನ್ನು ಸಾಮಾಜಿಕ ಉಪಕ್ರಮಗಳಾಗಿ ಪರಿವರ್ತಿಸಿ, ಉದ್ಯಮ ಆರಂಭಿಸುವ ಯುವಕರಿಗೆ ಬೆಂಬಲ ನೀಡುತ್ತಿರುವುದನ್ನೂ ಅವರು ವಿಶೇಷವಾಗಿ ಉಲ್ಲೇಖಿಸಿದರು.

ಉತ್ಸಾಹವನ್ನು ಹಂಚಿರಿ

ಇಂದು ಕೂಡ ನಿಮ್ಮ ಬದ್ಧತೆ ಅಗತ್ಯವಾಗಿದೆ, ಎಂದು ಜಗದ್ಗುರುಗಳು ಹೇಳಿದರು. “ವಿಶೇಷವಾಗಿ ಜನನದರ ಕುಸಿತ ಮತ್ತು ದೇಶದ ಅತಿ ನಾಜೂಕಿನ ಪ್ರದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ, ಯುವಕರು ಹತಾಶರಾಗುವ ಮತ್ತು ತಮ್ಮೊಳಗೆ ಸಿಮಿತಗೊಳ್ಳುವ ಅಪಾಯವಿದೆ.

ಅತ್ಯಂತ ವಿರೋಧಾತ್ಮಕ ವಾತಾವರಣಗಳಲ್ಲಿಯೂ, ಹತಾಶ ಮನೋಭಾವ ಹೊಂದಿರುವ ಜನರ ನಡುವೆಯೂ ನಿಮ್ಮ ಉತ್ಸಾಹ ಮತ್ತು ಸಂವೇದನೆಯನ್ನು ಹಂಚುವ ಸಮಯ ಯಾವಾಗಲೂ ಇರುತ್ತದೆ,ಎಂದು ಅವರು ಸೇರಿಸಿದರು.

ಪೊಲಿಕೋರೊ ಯೋಜನೆ ತನ್ನ ಮಿಷನ್ ನೆರವೇರಿಸಲು ಒಂದು “ದಿಕ್ಕು ತೋರಿಸುವ ಸೂಚಕ” ಹೊಂದಿದೆ: ಸುವಾರ್ತೆ. ಅದು ಹೃದಯಗಳನ್ನೂ ಮತ್ತು ಜಗತ್ತನ್ನೂ ಪರಿವರ್ತಿಸುವ ನಿಜವಾದ ಶಕ್ತಿಯನ್ನು ಒಳಗೊಂಡಿದೆ. ಜೊತೆಗೆ ಧರ್ಮ ಸಭೆಯ ಸಾಮಾಜಿಕ ಉಪದೇಶಗಳ ಅಧ್ಯಯನವು ಈ ಕಾಲಘಟ್ಟವನ್ನು ಪ್ರೀತಿಸಲು ಸಹಾಯ ಮಾಡುತ್ತದೆ ಮತ್ತು ವಾಸ್ತವಿಕತೆಯನ್ನು ಅರ್ಥೈಸಲು ಸಾಧನಗಳನ್ನು ಒದಗಿಸುತ್ತದೆ.

ಯೋಜನೆಯ ಸದಸ್ಯರಿಗೆ, ಎಲ್ಲವನ್ನೂ ನಕಾರಾತ್ಮಕವಾಗಿ ನೋಡುವ ವಿನಾಶದ ಪ್ರವಾದಿಗಳಿಂದ ಮೋಹಿತರಾಗಬೇಡಿ, ಎಂದು ಜಗದ್ಗುರುಗಳು ಎಚ್ಚರಿಸಿದರು. ಆದರೆ ಎಲ್ಲವೂ ಚೆನ್ನಾಗಿದೆ ಎಂದು ಭಾವಿಸುವಷ್ಟು ಅಜ್ಞಾನಿಯಾಗಿಯೂ ಇರಬಾರದು ಎಂದು ಅವರು ಸೂಚಿಸಿದರು.

ದೇವರ ಪ್ರೀತಿಪೂರ್ಣ ಯೋಜನೆಗೆ ಹೊಂದುವ ಸಮಾಜವನ್ನು ನಿರ್ಮಿಸಲು, ಮಾನವ ವ್ಯಕ್ತಿಯ ಕೇಂದ್ರಸ್ಥಾನ, ಸಾಮೂಹಿಕ ಹಿತ, ಏಕಾತ್ಮತೆ, ಸಹಭಾಗಿತ್ವ, ಸಂಪತ್ತಿನ ಸರ್ವಸಾಮಾನ್ಯ ಗುರಿ, ಪಾಲ್ಗೊಳ್ಳುವಿಕೆ, ಸಮಗ್ರ ಪರಿಸರಶಾಸ್ತ್ರ ಮತ್ತು ಶಾಂತಿ ಇವುಗಳನ್ನು ಮರೆಯದೆ ಇರಬೇಕು ಎಂದು ಅವರು ಹೇಳಿದರು.

ಮೊದಲು ಸಮುದಾಯ

ಮೂರನೇ ಆಧಾರವೆಂದರೆ ಸಮುದಾಯ ಭವಿಷ್ಯದ ಇಂಕ್ಯೂಬೇಟರ್. ಇಂದಿನ ಸಂಸ್ಕೃತಿ ಏಕಾಂಗಿ ಜೀವನ, ಸ್ಪರ್ಧೆ ಮತ್ತು ಒಂಟಿ ಪ್ರತಿಭೆಯ ಪೌರಾಣಿಕ ಕಲ್ಪನೆಯನ್ನು ಉತ್ತೇಜಿಸುತ್ತಿದ್ದರೂ, ಆರ್ಥಿಕತೆ, ಕೆಲಸ, ರಾಜಕೀಯ ಮತ್ತು ಸಂವಹನ ಕ್ಷೇತ್ರಗಳು ವಾಸ್ತವವಾಗಿ ಸಾಮಾಜಿಕ ಸಂಬಂಧಗಳ ತಜ್ಞರ ಮೇಲೆ ಅವಲಂಬಿತವಾಗಿವೆ.

ಸಮಾಜದಲ್ಲಿಯೂ ಧರ್ಮ ಸಭೆಯಲ್ಲಿಯೂ ಸಮುದಾಯ ಜೀವನ ಬೆಳೆಯುವಾಗ, ಜೀವವು ಅರಳಲು ಅಗತ್ಯವಾದ ಪರಿಸ್ಥಿತಿಗಳನ್ನು ನಾವು ಸೃಷ್ಟಿಸುತ್ತೇವೆ, ಎಂದು ಜಗದ್ಗುರು ಲಿಯೋರವರು ಹೇಳಿದರು. “ನೀವು ಸಮುದಾಯದ ಜಾಲಗಳನ್ನು ಕಾಳಜಿ ವಹಿಸುವಾಗ ಫಲವತ್ತರಾಗುತ್ತೀರಿ. ಬುದ್ಧಿವಂತಿಕೆ, ಪ್ರತಿಭೆ, ಜ್ಞಾನ, ಸಾಮಾಜಿಕ ಸಂಘಟನೆ ಮತ್ತು ಪರಿಶ್ರಮ ಎಲ್ಲವು ಉತ್ತಮ ಸಂಬಂಧಗಳ ಮೂಲಕವೇ ಬೆಳೆಯುತ್ತವೆ.

ಯೋಜನೆಯಲ್ಲಿ ತೊಡಗಿರುವವರು ಆಧ್ಯಾತ್ಮಿಕ ತಂದೆ-ತಾಯಂದಿರು, ಸಂತರು ಮತ್ತು ಸಾಕ್ಷಿಗಳ ಮೇಲೂ ಅವಲಂಬಿಸಬಹುದು ಎಂದು ಅವರು ಹೇಳಿದರು. ಶತಮಾನಗಳ ಕಾಲ ಅವರ ಸಾಮಾಜಿಕ ಬದ್ಧತೆಯು ನಾಗರಿಕ ಮತ್ತು ದಾನಧರ್ಮ ಪುನರುಜ್ಜೀವನಕ್ಕೆ ಕಾರಣವಾಗಿದೆ. ಅವರ ಜೀವನಗಳನ್ನು ತಿಳಿದುಕೊಳ್ಳಿ ಮತ್ತು ಅವರ ಕಥೆಗಳನ್ನು ಹಂಚಿಕೊಳ್ಳಿ ಎಂದು ಜಗದ್ಗುರುಗಳು ಪ್ರೋತ್ಸಾಹಿಸಿದರು, ಏಕೆಂದರೆ ನಮ್ಮ ಸಮುದಾಯಗಳನ್ನು ಫಲವತ್ತಾಗಿಸಿದ ಪವಿತ್ರತೆಯ ಒಂದು ನದಿ ಇದೆ.

21 ಫೆಬ್ರವರಿ 2026, 16:13