ಹಂಗೇರಿಯ ಅಧ್ಯಕ್ಷ ತಮಾಸ್ ಶುಲ್ಯೋಕ್ ಅವರನ್ನು ಜಗದ್ಗುರು XIVನೇ ಲಿಯೋರವರು ಸ್ವಾಗತಿಸಿದರು. ಹಂಗೇರಿಯ ಅಧ್ಯಕ್ಷ ತಮಾಸ್ ಶುಲ್ಯೋಕ್ ಅವರನ್ನು ಜಗದ್ಗುರು XIVನೇ ಲಿಯೋರವರು ಸ್ವಾಗತಿಸಿದರು.  (ANSA)

ಹಂಗೇರಿಯ ಅಧ್ಯಕ್ಷ ತಮಾಸ್ ಶುಲ್ಯೋಕ್ ಅವರನ್ನು ಜಗದ್ಗುರು XIVನೇ ಲಿಯೋರವರು ಭೇಟಿಯಾದರು

ಹಂಗೇರಿಯ ಅಧ್ಯಕ್ಷ ತಮಾಸ್ ಶುಲ್ಯೋಕ್ ರವರನ್ನು ಇಂದು ಬೆಳಿಗ್ಗೆ ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ಪ್ರೇಷಿತರ ಅರಮನೆಯಲ್ಲಿ ಆತಿಥ್ಯ ಸ್ವೀಕರಿಸಿದರು. ನಂತರ ಕಾರ್ಯದರ್ಶಿ ರಾಜ್ಯದ ಕಚೇರಿಯಲ್ಲಿ ನಡೆದ ಮಾತುಕತೆಯಲ್ಲಿ, ಎರಡು ರಾಷ್ಟ್ರಗಳ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಹಾಗೂ ದೇಶದ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಕಥೋಲಿಕ ಧರ್ಮ ಸಭೆ ನೀಡುತ್ತಿರುವ ಮಹತ್ವದ ಕೊಡುಗೆ ಬಗ್ಗೆ ತೃಪ್ತಿ ವ್ಯಕ್ತಪಡಿಸಲಾಯಿತು. ಸಾಮಾನ್ಯ ಆಸಕ್ತಿಯ ವಿಷಯಗಳನ್ನೂ ಚರ್ಚಿಸಲಾಯಿತು ವಿಶೇಷವಾಗಿ ಕುಟುಂಬದ ಕೇಂದ್ರಸ್ಥಾನದ ಕುರಿತು ವಿಶೇಷ ಉಲ್ಲೇಖ ಮಾಡಲಾಯಿತು.

ವ್ಯಾಟಿಕನ್ ವರದಿ

 

ಹಂಗೇರಿಯ ಅಧ್ಯಕ್ಷ ತಮಾಸ್ ಶುಲ್ಯೋಕ್ ರವರು ಫೆಬ್ರವರಿ 21ರಂದು ಬೆಳಿಗ್ಗೆ ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ಪ್ರೇಷಿತರ ಅರಮನೆಯಲ್ಲಿ ಭೇಟಿಯಾದರು.

ಜಗದ್ಗರುಗಳನ್ನು ಭೇಟಿಯಾದ ನಂತರ, ಅಧ್ಯಕ್ಷ ಸುಲ್ಯೋಕ್ ರವರು ರಾಜ್ಯ ಕಾರ್ಯದರ್ಶಿಯಾದ ಪಿಯಾತ್ರ ಪಾರಲಿನ್ ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಷ್ಟ್ರಗಳೊಂದಿಗೆ ಸಂಬಂಧಗಳ ಉಪ ಕಾರ್ಯದರ್ಶಿಯಾದ ಮಿಹೈಟಾ ಬ್ಲಾಜ್ ರವರು ಸಹ ಉಪಸ್ಥಿತರಿದ್ದರು.

ಜಗದ್ಗರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಮಾತುಕತೆಗಳು ಸ್ನೇಹಪೂರ್ಣ ವಾತಾವರಣದಲ್ಲಿ ನಡೆದವು. ಬಲವಾದ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಹಾಗೂ ದೇಶದ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಕಥೋಲಿಕ ಧರ್ಮ ಸಭೆ ನೀಡುತ್ತಿರುವ ಕೊಡುಗೆ ಬಗ್ಗೆ ತೃಪ್ತಿ ವ್ಯಕ್ತಪಡಿಸಲಾಯಿತು.

ಸಾಮಾನ್ಯ ಆಸಕ್ತಿಯ ವಿಷಯಗಳನ್ನೂ ಉಲ್ಲೇಖಿಸಲಾಯಿತು ವಿಶೇಷವಾಗಿ ಕುಟುಂಬದ ಕೇಂದ್ರಸ್ಥಾನ ಮತ್ತು ಜಗತ್ತಿನಾದ್ಯಂತ ಅತ್ಯಂತ ನಾಜೂಕಿನ ಕ್ರೈಸ್ತ ಸಮುದಾಯಗಳ ರಕ್ಷಣೆಗೆ ವಿಶೇಷ ಗಮನ ಹರಿಸಲಾಯಿತು.

ಮಾತುಕತೆ ಮುಂದುವರಿದಂತೆ, ಪ್ರಕಟಣೆ ಸೇರಿಸಿದೆ, ಪ್ರಸ್ತುತ ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಅಭಿಪ್ರಾಯ ವಿನಿಮಯ ನಡೆಯಿತು ವಿಶೇಷವಾಗಿ ಸಂಘರ್ಷಗಳ ಪರಿಸ್ಥಿತಿಗಳನ್ನು ಉಲ್ಲೇಖಿಸಿ, ಶಾಂತಿ ಪ್ರಚಾರಕ್ಕೆ ಇನ್ನಷ್ಟು ಬದ್ಧತೆಯನ್ನು ತೋರಬೇಕೆಂಬ ಭರವಸೆ ವ್ಯಕ್ತಪಡಿಸಲಾಯಿತು.”

21 ಫೆಬ್ರವರಿ 2026, 16:16