ಪೆರುವಿನ ಚಿಕ್ಲಾಯೊದಲ್ಲಿರುವ ದೇವರ ತಾಯಿ ಸಂತ ಮರಿಯಮ್ಮನವರ ಕೆಥೆಡ್ರಲ್, 34 ನೇ ವಿಶ್ವ ರೋಗಿಗಳ ದಿನದ ಆಚರಣೆಗಳನ್ನು ಆಯೋಜಿಸಲಿದೆ. ಪೆರುವಿನ ಚಿಕ್ಲಾಯೊದಲ್ಲಿರುವ ದೇವರ ತಾಯಿ ಸಂತ ಮರಿಯಮ್ಮನವರ ಕೆಥೆಡ್ರಲ್, 34 ನೇ ವಿಶ್ವ ರೋಗಿಗಳ ದಿನದ ಆಚರಣೆಗಳನ್ನು ಆಯೋಜಿಸಲಿದೆ.  (AFP or licensors)

ಜಗದ್ಗುರಗಳು: ದುಃಖ ಅನುಭವಿಸುವವರು ದೇವರ ಪ್ರೀತಿಯಲ್ಲಿ ನಿಜವಾದ ಶಾಂತಿಯನ್ನು ಪಡೆಯಲಿ

ಜಗದ್ಗುರು XIVನೇ ಲಿಯೋರವರು ಫೆಬ್ರವರಿ 11ರಂದು ಪೆರು ದೇಶದ ಚಿಕ್ಲಾಯೊದಲ್ಲಿರುವ ಶಾಂತಿಯ ತಾಯಿ ದೇವಾಲಯದಲ್ಲಿ ನಡೆಯುವ 34ನೇ ವಿಶ್ವ ರೋಗಿಗಳ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ವಿಶೇಷ ಪ್ರತಿನಿಧಿಯಾಗಿರುವ ಕಾರ್ಡಿನಲ್ ಮೈಕೆಲ್ ಝೆರ್ನಿಗೆ ಪತ್ರವೊಂದನ್ನು ಕಳುಹಿಸಿದ್ದಾರೆ. ಜಗದ್ಗುರುಗಳು ರೋಗಿಗಳಿಗೆ ತಮ್ಮ ದುಃಖವನ್ನು ಲೋಕದ ಶಾಂತಿಗಾಗಿ ಪ್ರಭುವಿಗೆ ಅರ್ಪಿಸಲು ಆಹ್ವಾನಿಸಿದ್ದು, ಅವರ ಜೊತೆಗೆ ಆರೈಕೆ ಮಾಡುವವರೊಂದಿಗೆ ಸೇರಿ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಗೆ ಸಾಕ್ಷಿಗಳಾಗುವಂತೆ ಪ್ರೇರೇಪಿಸಿದ್ದಾರೆ.

ವ್ಯಾಟಿಕನ್ ವರದಿ

ಲೋಕದಾದ್ಯಂತ ವ್ಯಾಪಿಸಿರುವ ಧರ್ಮಸಭೆಯೊಂದಿಗೆ ವಿಶೇಷ ಪ್ರಾರ್ಥನಾ ಏಕತೆಯಲ್ಲಿ, ರೋಗ, ಕಾಯಿಲೆ ಅಥವಾ ನೋವಿನಿಂದ ಬಳಲುತ್ತಿರುವ ಎಲ್ಲಾ ವಿಶ್ವಾಸಿಗಳಿಗಾಗಿ ಜಗದ್ಗುರು XIVನೇ ಲಿಯೋರವರು ಪ್ರಾರ್ಥಿಸುತ್ತಿದ್ದಾರೆ. ತಾಯಿಯಾದ ಮರಿಯಮ್ಮನವರ ಮಾತೃತ್ವದ ಮಧ್ಯಸ್ಥಿಕೆಯ ಬೆಂಬಲದೊಂದಿಗೆ, ಅವರು ತಮ್ಮ ಜೀವನದ ಎಲ್ಲಾ ಸಂಕಷ್ಟಗಳನ್ನು ಮರಿಯಮ್ಮನವರ ಮೂಲಕ ಈ ಲೋಕದ ಶಾಂತಿಗಾಗಿ ದಯಾಮಯ ದೇವರಿಗೆ ಪ್ರೀತಿಪೂರ್ವಕವಾಗಿ ಅರ್ಪಿಸಲಿ ಎಂದು ಜಗದ್ಗುರುಗಳು ಪ್ರಾರ್ಥಿಸುತ್ತಾರೆ.

ಸಂತ ಆಗಸ್ಟಿನ್ ರವರು ತಮ್ಮ ಕನ್‌ಫೆಷನ್ಸ್ ಕೃತಿಯಲ್ಲಿ ಯಥಾರ್ಥವಾಗಿ ಬೋಧಿಸುವಂತೆ, ಮಾನವ ಆತ್ಮ ಅಶಾಂತವಾಗಿದೆ ದೇವರ ಅಪ್ರತಿಮ ಪ್ರೀತಿಯಲ್ಲಿ ಮಾತ್ರ ಮತ್ತು ಅದನ್ನು ದೈನಂದಿನ ಹಾಗೂ ಆತ್ಮೀಯ ಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಮಾತ್ರ ಅದು ನಿಜವಾದ ಹಾಗೂ ಶಾಶ್ವತ ಶಾಂತಿಯನ್ನು ಕಂಡುಕೊಳ್ಳುತ್ತದೆ ಎಂಬುದನ್ನು ಜಗದ್ಗುರುಗಳು ಸ್ಮರಿಸುತ್ತಾರೆ.

ಈ ಮಾತುಗಳು ಫೆಬ್ರವರಿ 11ರಂದು ಈ ವರ್ಷ ಪೆರು ದೇಶದ ಚಿಕ್ಲಾಯೊ ಧರ್ಮಪ್ರಾಂತ್ಯದಲ್ಲಿರುವ ಶಾಂತಿಯ ತಾಯಿ ದೇವಾಲಯದಲ್ಲಿ ನಡೆಯುವ 34ನೇ ವಿಶ್ವ ರೋಗಿಗಳ ದಿನಾಚರಣೆಗೆ ತಮ್ಮ ವಿಶೇಷ ಪ್ರತಿನಿಧಿಯಾಗಿರುವ ಕಾರ್ಡಿನಲ್ ಮೈಕೆಲ್ ಝೆರ್ನಿಗೆ ಪೋಪ್ ಕಳುಹಿಸಿದ ಪತ್ರದಲ್ಲಿವೆ.

ಸುವಾರ್ತೆಯ ಸಾಂತ್ವನ

ಜನವರಿ 21ರಂದು  ಈ ಸಂದೇಶದಲ್ಲಿ, ಸಮಗ್ರ ಮಾನವ ಅಭಿವೃದ್ಧಿಯ ಉತ್ತೇಜನಕ್ಕಾಗಿ ಸ್ಥಾಪಿತ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿರುವ ತಮ್ಮ ಪ್ರತಿನಿಧಿಯನ್ನು, ಈ ಸಂದರ್ಭದಲ್ಲಿ ಲೂರ್ಡ್ಸ್‌ನ ಪವಿತ್ರ ಕನ್ಯಾ ಮರಿಯಮ್ಮನವರ ದೈವಾರಾಧನ ವಿಧಿಯ ಸ್ಮರಣಾ ದಿನದಂದು ಸೇರಿರುವ ಎಲ್ಲಾ ವಿಶ್ವಾಸಿಗಳಿಗೆ, ವಿಶೇಷವಾಗಿ ಎಲ್ಲಾ ರೋಗಿಗಳಿಗೆ, ಕ್ರಿಸ್ತನೊಂದಿಗೆ ಇರುವ ಅಪ್ರತಿಮ ಸಹಭಾಗಿತ್ವದಿಂದ ಉಂಟಾಗುವ ಸುವಾರ್ತೆಯ ಸಾಂತ್ವನದಿಂದ ಬಂದ ಆರಾಮ ಮತ್ತು ಪ್ರೋತ್ಸಾಹವನ್ನು ತಲುಪಿಸುವಂತೆ ಜಗದ್ಗುರುಗಳು ವಿನಂತಿಸುತ್ತಾರೆ. ಎಲ್ಲ ಸಂದರ್ಭಗಳಲ್ಲಿಯೂ, ಪ್ರತಿದಿನವೂ, ಲೋಕಾಂತ್ಯದವರೆಗೆ ನಮ್ಮ ಜೊತೆಯಲ್ಲಿರುತ್ತೇನೆ ಎಂದು ವಾಗ್ದಾನ ಮಾಡಿದ ಕ್ರಿಸ್ತನಿಂದ ಈ ಸಾಂತ್ವನ ಬರುತ್ತದೆ.

ಜಗದ್ಗುರುಗಳು ರೋಗಿಗಳಿಗೂ ಹಾಗೂ ಅವರನ್ನು ಆರೈಕೆ ಮಾಡುವವರಿಗೂ, ಧಾರ್ಮಿಕ ಗುಣಗಳಾದ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಗಳಿಗೆ, ಹಾಗೆಯೇ ಅಗತ್ಯಕಾಲದಲ್ಲಿ ಮಾನವೀಯ ಹಾಗೂ ಕ್ರೈಸ್ತ ಸಮೀಪತೆಗೆ ಸಾಕ್ಷಿಗಳಾಗುವಂತೆ ಪ್ರೇರೇಪಿಸುತ್ತಾರೆ ಪರಸ್ಪರರ ಭಾರಗಳನ್ನು ಹೊತ್ತುಕೊಂಡು, ಹೃದಯದ ಆಳದಿಂದ ಕ್ರಿಸ್ತನ ನಿಯಮವನ್ನು ನೆರವೇರಿಸುವಂತೆ ಅವರು ಕರೆ ನೀಡುತ್ತಾರೆ.

ಪ್ರಿಯ ಪೆರು ಭೂಮಿ”ಯನ್ನು ಸ್ಮರಿಸುವುದು

ಈ ಪತ್ರದಲ್ಲಿ ಹೃದಯ ಮತ್ತು ಮನಸ್ಸಿನ ಸಂಪೂರ್ಣ ಪ್ರೀತಿಯೊಂದಿಗೆ ಪ್ರಿಯ ಪೆರು ಭೂಮಿಯನ್ನೂ ಹಾಗೂ ಚಿಕ್ಲಾಯೊ ಧರ್ಮಪ್ರಾಂತ್ಯವನ್ನೂ ಜಗದ್ಗುರುಗಳು ಸ್ಮರಿಸುತ್ತಾರೆ. ಹನ್ನೆರಡು ವರ್ಷಗಳ ಹಿಂದೆ, ದೇವಮಾತೆ ಮರಿಯಮ್ಮಳಿಗೆ ಸಮರ್ಪಿತ ಕ್ಯಾಥೆಡ್ರಲ್‌ನಲ್ಲಿ ಫಾ. ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ರವರು ಧರ್ಮಾಧ್ಯಕ್ಷರಾಗಿ ದೀಕ್ಷೆಯನ್ನು ಪಡೆದು ಕೊಂಡರು ಎಂಬುದನ್ನೂ ಅವರು ನೆನಪಿಸುತ್ತಾರೆ.

ಅಂತಿಮವಾಗಿ, ದೈವಿಕ ವ್ಯವಸ್ಥೆಯ ಪ್ರಕಾರ ಜಗದ್ಗುರು ಫ್ರಾನ್ಸಿಸ್ ರವರು 34ನೇ ವಿಶ್ವ ರೋಗಿಗಳ ದಿನಾಚರಣೆಯನ್ನು ವಿವಿಧ ದುಃಖಗಳು ಮತ್ತು ಕಾಯಿಲೆಗಳಿಂದ ಬಳಲುತ್ತಿರುವ ಎಲ್ಲರ ಮೇಲಿನ ಪವಿತ್ರ ಕನ್ಯಾ ಮರಿಯಮ್ಮನವರ ಮಾತೃತ್ವದ ಕಾಳಜಿಯನ್ನು ಇನ್ನಷ್ಟು ತೀವ್ರವಾಗಿ ವ್ಯಕ್ತಪಡಿಸುವುದಕ್ಕಾಗಿ ಪೆರು ಭೂಮಿಯಲ್ಲಿಯೇ ಆಚರಿಸಬೇಕೆಂದು ಬಯಸಿದರು ಎಂದು ಜಗದ್ಗುರುಗಳು ಒತ್ತಿಹೇಳುತ್ತಾರೆ. ಈ ನಿರ್ಧಾರವನ್ನು XIV ನೇ ಲಿಯೋರವರು ದೃಢಪಡಿಸಿದ್ದು, ಚಿಕ್ಲಾಯೊದಲ್ಲಿರುವ ಶಾಂತಿಯ ತಾಯಿ ದೇವಾಲಯದಲ್ಲಿ ತಾವು ಹಿಂದೆ ಅನೇಕ ಸಂದರ್ಭಗಳಲ್ಲಿ ದೇವರ ಸಹಾಯಕ್ಕಾಗಿ ಪ್ರಾರ್ಥನೆಯಲ್ಲಿ ವಿನಂತಿಸಿಕೊಂಡಿದ್ದೇನೆ ಎಂದು ಸ್ಮರಿಸುತ್ತಾರೆ.

07 ಫೆಬ್ರವರಿ 2026, 17:35