ಜಗದ್ಗುರು XIVನೇ ಲಿಯೋರವರು  ವ್ಯಾಟಿಕನ್‌ನಲ್ಲಿ ಆಸಿಲಿಯಾ ಫೌಂಡೇಶನ್‌ನ ಸದಸ್ಯರನ್ನು ಸ್ವೀಕರಿಸಿದರು ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ಆಸಿಲಿಯಾ ಫೌಂಡೇಶನ್‌ನ ಸದಸ್ಯರನ್ನು ಸ್ವೀಕರಿಸಿದರು  (ANSA)

ಜಗದ್ಗುರು ಲಿಯೋರವರು: ನಾವು ಯುವಜನರನ್ನು ಬೆಂಬಲಿಸಬೇಕು ಮತ್ತು ಅವರ ಮೇಲೆ ಹೂಡಿಕೆ ಮಾಡಬೇಕು

ವ್ಯಾಟಿಕನ್‌ನಲ್ಲಿ ಆಸಿಲಿಯಾ ಫೌಂಡೇಶನ್ ಸದಸ್ಯರನ್ನು ಭೇಟಿಯಾದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಯುವಜನರು ತಮ್ಮದೇ ಭವಿಷ್ಯದ ಪ್ರಮುಖ ಪಾತ್ರಧಾರಿಗಳಾಗಲು ಸಹಾಯ ಮಾಡುವ ಅಗತ್ಯವನ್ನು ಪುನರುಚ್ಚರಿಸಿದರು

ವ್ಯಾಟಿಕನ್ ವರದಿ

ವ್ಯಾಟಿಕನ್‌ನಲ್ಲಿ ಆಸಿಲಿಯಾ ಫೌಂಡೇಶನ್ ಸದಸ್ಯರನ್ನು ಸೋಮವಾರ ಭೇಟಿಯಾದ ಸಂದರ್ಭದಲ್ಲಿ, ಇಂತಹ ಅನಿಶ್ಚಿತತೆಯ ಕಾಲದಲ್ಲಿ ಯುವಜನರನ್ನು ಬೆಂಬಲಿಸುವುದು ಮತ್ತು ಅವರ ಮೇಲೆ ಹೂಡಿಕೆ ಮಾಡುವುದು ಅತ್ಯಾವಶ್ಯಕವೆಂದು ಜಗದ್ಗುರು ಲಿಯೋರವರು ಸೂಚಿಸಿದರು.

2013ರಲ್ಲಿ ಲಾಭರಹಿತ ಸಂಸ್ಥೆಯಾಗಿ ಸ್ಥಾಪಿತವಾದ ಈ ಫೌಂಡೇಶನ್, ಈಗ ದಾನಧರ್ಮ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಖ್ಯವಾಗಿ ಯುವಜನರ ಬೆಂಬಲ, ಶಿಕ್ಷಣ, ವಿದ್ಯಾರ್ಥಿವೇತನಗಳು ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಮೇಲೆ ಕೇಂದ್ರೀಕರಿಸಿದೆ.

ಪವಿತ್ರ ವಾರದ ಆರಂಭದಲ್ಲಿ ಅವರನ್ನು ಭೇಟಿಯಾಗುವ ಅವಕಾಶ ದೊರೆತಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸುವ ಮೂಲಕ ಜಗದ್ಗುರುಗಳು ತಮ್ಮ ಭಾಷಣವನ್ನು ಆರಂಭಿಸಿದರು. ನಮಗಾಗಿ ಶಿಲುಬೆಗೆ ಹಾಕಲ್ಪಟ್ಟು, ಮರಣಹೊಂದಿ, ಪುನರುತ್ಥಾನಗೊಂಡ ಯೇಸು ಕ್ರಿಸ್ತನ ಶಿಷ್ಯತ್ವವನ್ನು ಅನುಸರಿಸಲು ಇದು ದೇವರು ನೀಡಿದ ಅನುಕೂಲಕರ ಸಮಯ ಎಂದು ಅವರು ಹೇಳಿದರು.

ಜನರ ಮೇಲೆ ಹೂಡಿಕೆ

ಯುವಜನರ ರೂಪಿಕರಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅವರ ಏಕೀಕರಣಕ್ಕಾಗಿ ಮಾಡಿದ ನಿಮ್ಮ ಬದ್ಧತೆಗೆ ಜಗದ್ಗುರುಗಳು ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.

ವಸ್ತುಗಳ ಮೇಲೆ ಅಲ್ಲ, ಜನರ ಮೇಲೆ ಅವರ ಸಾಮರ್ಥ್ಯಗಳು ಮತ್ತು ಕೌಶಲ್ಯಗಳ ಮೇಲೆ ಹೂಡಿಕೆ ಮಾಡುವುದು, ಎಂದು ಜಗದ್ಗುರುಗಳು ಒತ್ತಿಹೇಳಿದರು, ಇದು ನಿಮ್ಮ ಕಾರ್ಯದ ಪ್ರಮುಖ ಶಕ್ತಿಯಾಗಿದೆ ಎಂದು ಹೇಳಿದರು.

ಯುವಜನರು ತಮ್ಮದೇ ಭವಿಷ್ಯದ ನಾಯಕರು ಆಗಬೇಕು

ಯುವಜನರು ತಮ್ಮದೇ ಭವಿಷ್ಯದ ಪ್ರಮುಖ ಪಾತ್ರಧಾರಿಗಳಾಗುತ್ತಾರೆ ಅವರನ್ನು ಯಾವುದೇ ಕಂಪನಿಯ ಉಪಯೋಗದ ಸಾಧನಗಳಾಗಿ ಅಥವಾ ವಾಣಿಜ್ಯ ಯಶಸ್ಸಿನ ಚಕ್ರದ ಒಂದು ಭಾಗವಾಗಿ ಮಾತ್ರ ಪರಿಗಣಿಸಲಾಗುವುದಿಲ್ಲ ಎಂದು ಅವರು ಮುಂದುವರಿಸಿದರು.

ಹೀಗಾಗಿ, ಫೌಂಡೇಶನ್ ಸದಸ್ಯರು ಪ್ರಾರಂಭಿಸಿರುವ ಎಲ್ಲಾ ಉಪಕ್ರಮಗಳಲ್ಲಿ ಸ್ಥೈರ್ಯದಿಂದ ಮುಂದುವರಿಯಲು ಜಗದ್ಗುರುಗಳು ಪ್ರೋತ್ಸಾಹಿಸಿದರು. ಪ್ರಸ್ತುತದ ಈ ಅನಿಶ್ಚಿತತೆಯ ವಾತಾವರಣದಲ್ಲಿಯೂ,ಎಂದು ಅವರು ಗಮನಿಸಿದರು, “ನೀವು ಉತ್ತೇಜಿಸುತ್ತಿರುವ ಜ್ಞಾನ ಮತ್ತು ಸಹಕಾರದ ಸತ್ಕಾರ್ಯ ಚಕ್ರವು ಖಂಡಿತವಾಗಿ ಉತ್ತಮ ಫಲಗಳನ್ನು ನೀಡುತ್ತದೆ ಎಂದರು.

ಕೊನೆಯಲ್ಲಿ, ಜಗದ್ಗುರು ಲಿಯೋರವರು ಅಲ್ಲಿ ಹಾಜರಿದ್ದ ಎಲ್ಲರಿಗೂ ಹಾಗೂ ಅವರ ಕುಟುಂಬದವರಿಗೆ ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.

30 ಮಾರ್ಚ್ 2026, 09:03