ಜಗದ್ಗುರು XIVನೇ ಲಿಯೋರವರು ಮೂರು ಬೆನೆಡಿಕ್ಟೈನ್ ಸನ್ಯಾಸಿ ಸಮುದಾಯಗಳನ್ನು ಸ್ವಾಗತಿಸಿದರು ಜಗದ್ಗುರು XIVನೇ ಲಿಯೋರವರು ಮೂರು ಬೆನೆಡಿಕ್ಟೈನ್ ಸನ್ಯಾಸಿ ಸಮುದಾಯಗಳನ್ನು ಸ್ವಾಗತಿಸಿದರು  (ANSA)

ಬೆನೆಡಿಕ್ಟಿನ್ ಧಾರ್ಮಿಕರಿಗೆ ಧರ್ಮ ಸಭೆಗಾಗಿ ಮಾಡುವ ಸತ್ಕಾರ್ಯಗಳಿಗೆ ಜಗದ್ಗುರುಗಳು ಕೃತಜ್ಞತೆ ಸಲ್ಲಿಸಿದರು

ವ್ಯಾಟಿಕನ್‌ನಲ್ಲಿ ಬೆನೆಡಿಕ್ಟಿನ್ ಸಮುದಾಯಗಳನ್ನು ಸ್ವಾಗತಿಸಿದ ಜಗದ್ಗುರು XIVನೇ ಲಿಯೋರವರು, ಧರ್ಮ ಸಭೆಗಾಗಿ ಮಾಡುವ ಮಹತ್ತರವಾದ ಸತ್ಕಾರ್ಯಗಳಿಗೆ ಕೃತಜ್ಞತೆ ಸಲ್ಲಿಸಿ, ತಮ್ಮ ದೇವರ ಕಾರ್ಯವನ್ನು ಮುಂದುವರಿಸಲು ಅವರನ್ನು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

“ಪ್ರಿಯ ಸಹೋದರರು ಮತ್ತು ಸಹೋದರಿಯರೇ, ನಿಮ್ಮ ಅರ್ಪಣೆ, ನಿಮ್ಮ ನಿರಂತರ ಪ್ರಾರ್ಥನೆ, ನಿಮ್ಮ ಸೇವೆ ಮತ್ತು ನಿಮ್ಮ ಜೀವನದ ಸಾಕ್ಷಿಯ ಮೂಲಕ ನೀವು ಧರ್ಮ ಸಭೆಗಾಗಿ ಮಾಡುತ್ತಿರುವ ಮಹತ್ತರ ಮತ್ತು ಅಡಗಿರುವ ಸತ್ಕಾರ್ಯಗಳಿಗೆ ಧನ್ಯವಾದಗಳು. ದೇವರ ಕಾರ್ಯವಾಗಿರುವ ಈ ಸೇವೆಯನ್ನು ಮುಂದುವರಿಸಿ” ಎಂದು ಹೇಳಿದರು

ಸೋಮವಾರ ವ್ಯಾಟಿಕನ್‌ನಲ್ಲಿ ನಡೆದ ಭೇಟಿಯಲ್ಲಿ, ಜಗದ್ಗುರು XIVನೇ ಲಿಯೋರವರು ಈ ಪ್ರೋತ್ಸಾಹದ ಮಾತುಗಳನ್ನು ಬೆನೆಡಿಕ್ಟಿನ್ ಧಾರ್ಮಿಕರ ಮೂರು ಸಮುದಾಯಗಳಿಗೆ  ಸುಬಿಯಾಕೋದಲ್ಲಿನ ಸಂತ ಸ್ಕೋಲಾಸ್ಟಿಕಾ ಮಠ ಸಮುದಾಯ, ಚೆಸೇನಾದ ಸಂತ ಮೇರಿ ಆಫ್ ದಿ ಮೌಂಟ್ ಮಠ ಸಮುದಾಯ, ಮತ್ತು ಬಾರಿಯಲ್ಲಿನ ಸಂತ ಸ್ಕೋಲಾಸ್ಟಿಕಾ ಮಠದ ಬೆನೆಡಿಕ್ಟಿನ್ ಸನ್ಯಾಸಿನಿಯರ ಗುಂಪಿಗೂ ನೀಡಿದರು.

ಅವರನ್ನು ಭೇಟಿಯಾಗಲು ಅವಕಾಶ ದೊರೆತಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಜಗದ್ಗುರುಗಳು, ಬೆನೆಡಿಕ್ಟಿನ್ ವರದಾನದ ಮೌಲ್ಯವನ್ನು ಅವರ ಜೀವನದಲ್ಲಿ, ಧರ್ಮ ಸಭೆಯಲ್ಲಿ ಮತ್ತು ಜಗತ್ತಿನಲ್ಲಿ ಒಟ್ಟಾಗಿ ಪರಾಮರ್ಶಿಸಿದರು.

ಜಗದ್ಗುರು XIVನೇ ಲಿಯೋರವರು ಸಂತ ಬೆನೆಡಿಕ್ಟ್ ವಿಶ್ವಾಸಿಗಳಿಗೆ ತಮ್ಮ ಜೀವನದ ಕಾರ್ಯಗಳನ್ನು ಸದಾ ಕಾಪಾಡಿಕೊಳ್ಳಬೇಕು ಎಂದು ಪ್ರೇರೇಪಿಸಿದುದನ್ನು ನೆನಪಿಸಿದರು. ಪ್ರಾರ್ಥನೆ ಮತ್ತು ದೇವರ ವಾಕ್ಯದ ಧ್ಯಾನಪೂರ್ವಕ ವಾಚನವು ಈ ಜಾಗೃತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಈ ರೀತಿಯಲ್ಲಿ, ಈ ಅಭ್ಯಾಸವನ್ನು ಅನುಸರಿಸುವವರು ತಮ್ಮ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ   ತಮ್ಮ ದೌರ್ಬಲ್ಯಗಳು ಮತ್ತು ಪಾಪಗಳನ್ನು ಅರಿತು, ಪ್ರಭುವಿನ ಕೃಪೆ ಮತ್ತು ಆಶೀರ್ವಾದಗಳನ್ನು ಆಚರಿಸುತ್ತಾರೆ. ಇದರಿಂದ, ಆತನಿಗೆ ಸೇರಿದವರಾಗಬೇಕೆಂಬ ನಮ್ಮ ಆಸೆ ಬಲಗೊಳ್ಳುತ್ತದೆ ಮತ್ತು ನಮ್ಮ ಸಮರ್ಪಣೆಯ ಪ್ರತಿಜ್ಞೆ ದೃಢವಾಗುತ್ತದೆ.

ಆದ್ದರಿಂದ, ಜಗದ್ಗುರುಗಳು , ಪವಿತ್ರ ಶಾಸ್ತ್ರವು ಯಾವಾಗಲೂ ನಿಮ್ಮ ಧ್ಯಾನದ ಹಾಗೂ ದೈನಂದಿನ ಜೀವನದ ಆಹಾರವಾಗಿರಬೇಕು, ನೀವು ಈ ಪರಿವರ್ತನೆಯ ಅನುಭವವನ್ನು ಹಂಚಿಕೊಳ್ಳುವಂತೆ ಒತ್ತಿಹೇಳಿದರು.

ಪವಿತ್ರೀಕರಣದ ಮಾರ್ಗ

ಒಬ್ಬ ಸನ್ಯಾಸಿನಿಯ ಪವಿತ್ರೀಕರಣದ ಮಾರ್ಗವು, ಎಷ್ಟು ಉತ್ಸಾಹಭರಿತವಾಗಿಯೂ ಪ್ರೇರಣೆಯುತವಾಗಿಯೂ ಇರಲಿ,ಕೇವಲ ವೈಯಕ್ತಿಕ ಪ್ರಯಾಣಕ್ಕೆ ಸೀಮಿತವಾಗಿರಲು ಸಾಧ್ಯವಿಲ್ಲ ಎಂದು ಜಗದ್ಗುರುಗಳು ಹೇಳಿದರು. ಅದು ಅನಿವಾರ್ಯವಾಗಿ ಸಮುದಾಯದ ಆಯಾಮವನ್ನು ಹೊಂದಿದ್ದು, ಸಹೋದರ ಸೇವೆಯ ಮೂಲಕ ಬದುಕಲ್ಪಡುತ್ತದೆ ಮತ್ತು ಧರ್ಮ ಸಭೆ ಮತ್ತು ಮಾನವಕುಲದ ಮೇಲಿನ ಕ್ರಿಸ್ತನ ವಿಶ್ವವ್ಯಾಪಕ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ.

ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಪರಸ್ಪರ ಆಲಿಸುವುದು, ಸಮೂಹ ವಿವೇಕಬುದ್ಧಿ, ಸ್ಥಳೀಯ ಧರ್ಮ ಸಭೆ ಮತ್ತು ಬೆನೆಡಿಕ್ಟಿನ್ ಮಠ ಸಂಘದೊಂದಿಗೆ ಏಕತೆಯಲ್ಲಿ ಒಟ್ಟಾಗಿ ನಡೆಯುವ ದೈನಂದಿನ ಅಭ್ಯಾಸದಲ್ಲಿ ಅವರು ಅವರನ್ನು ಪ್ರೋತ್ಸಾಹಿಸಿದರು.

ದೇವರ ಜನರಿಗೆ ಮಾದರಿ

ಇಂದಿನ ಸ್ವಾರ್ಥ ಮತ್ತು ವೈಯಕ್ತಿಕತೆಯಿಂದ ತುಂಬಿದ ಜಗತ್ತಿನಲ್ಲಿ, ಮಠ ಜೀವನವು ದೇವರ ಸಂಪೂರ್ಣ ಜನರಿಗೆ ಮಾದರಿಯಾಗುತ್ತದೆ ಎಂದು ಜಗದ್ಗುರುಗಳು ಹೇಳಿದರು. ಕಾರ್ಯಗಳನ್ನು ಮಾಡುವುದಕ್ಕಿಂತ ಮುಂಚೆ, ಮಿಷನರಿಯಾಗಿರುವುದು ಬದುಕುವ ರೀತಿಯನ್ನೂ ಸಂಬಂಧಗಳನ್ನೂ ಒಳಗೊಂಡಿರಬೇಕು ಎಂಬುದನ್ನು ಇದು ನೆನಪಿಸುತ್ತದೆ.

ಮುಚ್ಚಿದ ಮಠ ಜೀವನದ ಒಂದು ಪ್ರಮುಖ ಅಂಶವಾದ ಮಧ್ಯಸ್ಥ ಪ್ರಾರ್ಥನೆಯನ್ನು ಅವರು ಪ್ರಶಂಸಿಸಿದರು. ಪ್ರಾರ್ಥನೆಯಾಗಿ ರೂಪಾಂತರಗೊಂಡ ದೇವರ ವಾಕ್ಯವು ನಮ್ಮನ್ನು ನಮ್ಮ ಪರವಾಗಿ ಮಧ್ಯಸ್ಥಿಕೆ ಮಾಡುವ ಕ್ರಿಸ್ತನೊಂದಿಗೆ ಏಕೀಕರಿಸುತ್ತದೆ.

ಇದು ನಿಮಗೆ ನೀಡಲ್ಪಟ್ಟ ಕಾರ್ಯದ ಮೂಲಭೂತ ಅಂಶವಾಗಿದೆ ಎಂದು ಜಗದ್ಗುರುಗಳು ಹೇಳಿದರು ಮತ್ತು ಉಪವಾಸ ಹಾಗೂ ಪ್ರಾರ್ಥನೆಯ ಮೂಲಕ ರಾತ್ರಿ ಹಗಲು ದೇವರಿಗೆ ಸೇವೆ ಸಲ್ಲಿಸಿದ್ದ ಅನ್ನಾ ಪ್ರವಾದಿನಿಯಿಂದ ಪ್ರೇರಣೆ ಪಡೆಯಲು ಆಹ್ವಾನಿಸಿದರು.

ವಿಧವೆಯಾಗಿ ವಯಸ್ಸಾದ ನಂತರವೂ, ದೇವರ ಮಂದಿರವನ್ನೇ ತನ್ನ ಮನೆ ಮಾಡಿಕೊಂಡಳು,ಎಂದು ಅವರು ಹೇಳಿ, ಪ್ರಾರ್ಥನೆ ಮತ್ತು ತಪಸ್ಸಿನ ಮೂಲಕ ಅವಳು ಮೆಸ್ಸಿಯನನ್ನು ಗುರುತಿಸಲು ಸಾಧ್ಯವಾಯಿತು ಎಂದು ವಿವರಿಸಿದರು.

ಪ್ರೀತಿಯ ಪ್ರಾಮುಖ್ಯತೆ ಮತ್ತು ಕ್ರಿಸ್ತನ ಪ್ರೀತಿ

ಜ್ಞಾನವನ್ನು ಮೀರಿದ ಕ್ರಿಸ್ತನ ಪ್ರೀತಿಯನ್ನು ತಿಳಿಯುವ ನೆಲೆಯಲ್ಲಿ ನಿರಂತರ ರೂಪಿಕರಣದ ಅಗತ್ಯವನ್ನೂ ಜಗದ್ಗುರುಗಳು ಒತ್ತಿಹೇಳಿದರು.

ಪ್ರೀತಿಯ ಪ್ರಾಮುಖ್ಯತೆಯಲ್ಲಿ ಬದುಕುತ್ತಿರುವ ಅವರ ಮಹತ್ತರ ಪ್ರಯತ್ನಗಳನ್ನು ಪ್ರಶಂಸಿಸಿದ ಜಗದ್ಗುರು XIVನೇ ಲಿಯೋರವರು, ಪ್ರತಿ ಮಠವೂ “ಪ್ರಭುವಿನ ಸೇವೆಯ ಶಾಲೆಯಾಗಿ” ಇನ್ನಷ್ಟು ಬೆಳೆಯಲಿ ಎಂದು ಆಶಿಸುತ್ತಾ, ಅವರನ್ನು ಧನ್ಯ ಮಾತೆ ಮೇರಿಗೆ, ಸಂತ ಬೆನೆಡಿಕ್ಟ್, ಸಂತ ಸ್ಕೋಲಾಸ್ಟಿಕಾ ಮತ್ತು ಅನೇಕ ಬೆನೆಡಿಕ್ಟಿನ್ ಸಂತರ ಮಧ್ಯಸ್ಥಿಕೆಗೆ ಒಪ್ಪಿಸಿದರು.

30 ಮಾರ್ಚ್ 2026, 09:15