ಜಗದ್ಗುರು XIVನೇ ಲಿಯೋರವರು ಏಪ್ರಿಲ್‌ನಿಂದ ಜುಲೈವರೆಗೆ ಇರುವ ಧಾರ್ಮಿಕ ಆರಾಧನೆಯ ಕಾರ್ಯಕ್ರಮದಲ್ಲಿ ಏನು ಇದೆ?
ವ್ಯಾಟಿಕನ್ ವರದಿ
ಜಗದ್ಗುರುಗಳ ಧಾಮಿ೯ಕ ಆಚರಣೆಗಳ ಮುಖ್ಯಸ್ಥರು ಜಗದ್ಗುರುಗಳ 2026ರ ಏಪ್ರಿಲ್‌ನಿಂದ ಜುಲೈವರೆಗೆ ಇರುವ ಕಾರ್ಯಕ್ರಮಗಳ ಕ್ಯಾಲೆಂಡರ್ ಅನ್ನು ಪ್ರಕಟಿಸಿದ್ದಾರೆ. ಎಲ್ಲಾ ಸಮಯಗಳು ರೋಮಿನ ಸಮಯದ ಪ್ರಕಾರವೆಂಬುದನ್ನು ಗಮನಿಸಿ.
ಏಪ್ರಿಲ್‌ನಲ್ಲಿ ಆಫ್ರಿಕಾ ಪ್ರವಾಸ
ಕಾರ್ಯಕ್ರಮವು 2026ರಲ್ಲಿ ಜಗದ್ಗುರುಗಳ ಎರಡನೇ ಅಂತರರಾಷ್ಟ್ರೀಯ ಪ್ರವಾಸದಿಂದ ಆರಂಭವಾಗುತ್ತದೆ. ಏಪ್ರಿಲ್ 13ರಿಂದ 23ರವರೆಗೆ ಹತ್ತು ದಿನಗಳ ಕಾಲ ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಈಕ್ವಟೋರಿಯಲ್ ಗಿನಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಇದು ಜಗದ್ಗುರುಗಳಾಗಿ ಆಯ್ಕೆಯಾಗಿದ ನಂತರ ಆಫ್ರಿಕಾ ಖಂಡಕ್ಕೆ ಅವರ ಮೊದಲ ಪ್ರವಾಸವಾಗಲಿದೆ. ಆದರೆ, ಅವರು ಈಗಾಗಲೇ ಕಿನ್ಯಗೆ ಕನಿಷ್ಠ ಆರು ಬಾರಿ ಮತ್ತು ತಾಂಜೆನಿಯಾಗೆ ಸುಮಾರು ಐದು ಬಾರಿ ಭೇಟಿ ನೀಡಿದ್ದಾರೆ. ಇತ್ತೀಚೆಗೆ 2025ರ ಫೆಬ್ರವರಿಯಲ್ಲಿ, ಜಗದ್ಗುರುಗಳಾಗಿ ಆಯ್ಕೆಯಾಗುವ ಮೊದಲು ಎರಡು ತಿಂಗಳುಗಳ ಹಿಂದಷ್ಟೇ, ಅವರು ನೈರೋಬಿನಲ್ಲಿ ಹೊಸ ಚಾಪೆಲ್ ಸಮರ್ಪಣೆಯ ಬಲಿ ಪೂಜೆಗೆ ಅಧ್ಯಕ್ಷತೆ ವಹಿಸಲು ಕಿನ್ಯಾಗೆ ತೆರಳಿದ್ದರು.
ಅವರು ಆಗಸ್ಟಿನಿಯನ್ ಆದೇಶದ ಪ್ರಿಯರ್ ಜನರಲ್ ಆಗಿದ್ದಾಗ ನೈಜೀರಿಯಾದಲ್ಲಿ ಆಗಸ್ಟಿನಿಯನ್ ಅಧ್ಯಾಯಗಳಿಗೆ ಭೇಟಿ ನೀಡುತ್ತಿದ್ದರು.
ಏಪ್ರಿಲ್ 26ರಂದು, ಟಾಸ್ಕ್ ಕಾಲದ ನಾಲ್ಕನೇ ಭಾನುವಾರವಾದ ಬೆಳಗ್ಗೆ 9 ಗಂಟೆಗೆ ಸಂತ ಪೇತ್ರರ ಬಸಿಲಿಕಾದಲ್ಲಿ ಗುರುಗಳ ದೀಕ್ಷೆಯ ಬಲಿಪೂಜೆಗೆ ಜಗದ್ಗುರುಗಳು ಅಧ್ಯಕ್ಷತೆ ವಹಿಸಲಿದ್ದಾರೆ. ರೋಮಿನ ಧರ್ಮ ಪ್ರಾಂತ್ಯದ ಎಂಟು ಮಂದಿ ಆ ದಿನ ಗುರುಗಳಾಗಿ ದೀಕ್ಷೆಯನ್ನು ಪಡೆಯಲಿದ್ದಾರೆ. ಈ ಭಾನುವಾರವನ್ನು ಸಂಪ್ರದಾಯದಂತೆ “ಗುಡ್ ಶೆಪರ್ಡ್ ಭಾನುವಾರ” ಎಂದು ಕರೆಯಲಾಗುತ್ತದೆ.
ಮೇ ತಿಂಗಳು
ಮೇ 2ರಂದು ಸಂಜೆ 5 ಗಂಟೆಗೆ ಸಂತ ಜಾನ್ ಲ್ಯಾಟೆರನ್ ಬಸಿಲಿಕಾದಲ್ಲಿ ಬಿಷಪ್‌ಗಳ ದೀಕ್ಷೆಯ ಬಲಿಪೂಜೆಗೆ ಜಗದ್ಗುರುಗಳು ಅಧ್ಯಕ್ಷತೆ ವಹಿಸಲಿದ್ದಾರೆ.
ಮೇ 8ರಂದು, ಜಗದ್ಗುರುಗಳಾಗಿ ಮೊದಲ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ 10:30ಕ್ಕೆ ಪೊಂಪೈನ ಪವಿತ್ರ ಪೂಜ್ಯ ವರ್ಜಿನ್ ಅವರ ಪಾಂಟಿಫಿಕಲ್ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪೊಂಪೆಯಿ ಮತ್ತು ನೇಪಲ್ಸ್ ಪ್ರದೇಶಗಳಲ್ಲಿ ಬಲಿಪೂಜೆಯನ್ನು ಆಚರಿಸಿ, ಶ್ರೈನ್‌ನಲ್ಲಿ “(ಸಪ್ಲಿಕೇಶನ್)” ಭಿನ್ನಹ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.
ಮೂರು ವಾರಗಳ ನಂತರ, ಮೇ 24ರಂದು ಪಂಚಶತ್ತಮ ಮಹೋತ್ಸವದಂದು ಬೆಳಗ್ಗೆ 10 ಗಂಟೆಗೆ ಸಂತ ಪೇತ್ರರ ಬೆಸಿಲಿಕಾದಲ್ಲಿ ಬಲಿಪೂಜೆಗೆ ಅಧ್ಯಕ್ಷತೆ ವಹಿಸಲಿದ್ದಾರೆ.
ಜೂನ್ – ಸ್ಪೇನ್ ಹಾಗೂ ಇಟಲಿ ಪ್ರವಾಸಗಳು
ಜೂನ್ 6ರಿಂದ 12ರವರೆಗೆ ಜಗದ್ಗುರುಗಳು ಸ್ಪೇನ್ ಗೆ ಭೇಟಿ ನೀಡಿ, ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ನಗರಗಳಿಗೆ ತೆರಳಲಿದ್ದಾರೆ. ಬಾರ್ಸಿಲೋನಾದಲ್ಲಿ ,ಸಗ್ರಾಡಾ ಫ್ಯಾಮಿಲಿಯ ಬೆಸಿಲಿಕಾ ಹೊಸ ಹಾಗೂ ಅತ್ಯಂತ ಎತ್ತರದ ಗೋಪುರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕ್ಯಾನರಿ ದ್ವೀಪಗಳಲ್ಲಿ ಈ ಪ್ರವಾಸವನ್ನು ಮುಗಿಸಲಿದ್ದಾರೆ
ಜೂನ್ 20ರಂದು, ಇಟಲಿಯಲ್ಲಿಯೇ ಪಾವಿಯಾ ನಗರಕ್ಕೆ ಧರ್ಮಾಧ್ಯಕ್ಷೀಯ ಭೇಟಿ ನೀಡಿ ಸಂಜೆ 5 ಗಂಟೆಗೆ ಸಂಜೆ ಪ್ರಾರ್ಥನೆ ನಡೆಸಲಿದ್ದಾರೆ. ಈ ನಗರವು St. Augustine ಸಂತ ಅಗಸ್ಟೀನ್ ರವರ ಅವಶೇಷಗಳನ್ನು ಹೊಂದಿರುವ ಸಿಯೆಲ್ ಡಿ ಓರೊದಲ್ಲಿ ಸ್ಯಾನ್ ಪಿಯೆಟ್ರೋದ ಬೆಸಿಲಿಕಾದಿಂದ ಪ್ರಸಿದ್ಧವಾಗಿದೆ.
ಜೂನ್ 29ರಂದು, ಪೇತ್ರ ಮತ್ತು ಪೌಲರ ಮಹೋತ್ಸವದಂದು ಬೆಳಗ್ಗೆ 9:30ಕ್ಕೆ ಸಂತ ಪೇತ್ರರ ಬೆಸಿಲಿಕಾದಲ್ಲಿ ಹೊಸ ಮಹಾನಗರದ ಆರ್ಚ್‌ಬಿಷಪ್‌ಗಳಿಗೆ ಪಲ್ಲಿಯಂ ಆಶೀರ್ವಾದ ಹಾಗೂ ಧಾರಣೆ ಮಾಡುವ ಬಲಿ ಪೂಜೆಗೆ ಅಧ್ಯಕ್ಷತೆ ವಹಿಸಲಿದ್ದಾರೆ.
ಜುಲೈ – ಲಾಂಪೆಡುಸಾ ಭೇಟಿ
ಕೊನೆಗೆ, ಜುಲೈ 4ರಂದು ಪೋಪ್ ಲಾಂಪೆಡುಸಾಗೆ ಧರ್ಮಾಧ್ಯಕ್ಷೀಯ ಭೇಟಿ ನೀಡಿ ಬೆಳಗ್ಗೆ 10 ಗಂಟೆಗೆ ಬಲಿಪೂಜೆಯನ್ನು ಆಚರಿಸಲಿದ್ದಾರೆ. ಈ ದ್ವೀಪವು ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಿಂದ ಇಟಲಿ ಹಾಗೂ ಯುರೋಪಿಗೆ ಪ್ರವೇಶಿಸುವ ಸಾವಿರಾರು ವಲಸಿಗರ ಪ್ರವೇಶ ದ್ವಾರವಾಗಿರುವುದರಿಂದ ಪ್ರಸಿದ್ಧವಾಗಿದೆ.
