Pope Leo XIV holds general audience at the Vatican

ಜಗದ್ಗುರುಗಳು ಸಾರ್ವಜನಿಕ ಸಭೆಯಲ್ಲಿ: ಸಾಮಾನ್ಯ ವಿಶ್ವಾಸಿಗಳು ಧರ್ಮ ಸಭೆಗೆ ಎಲ್ಲರಿಗೂ ತಲುಪಲು ಮತ್ತು ಶಾಂತಿಯನ್ನು ಉತ್ತೇಜಿಸಲು ಸಹಕರಿಸುತ್ತಾರೆ

ವಾರಾಂತ್ಯರ ಸಾಮಾನ್ಯ ಸಭೆಯ ವೇಳೆ ಜಗದ್ಗುರು XIVನೇ ಲಿಯೋರವರು ಧರ್ಮ ಸಭೆಯ ಗುರಿಯಲ್ಲಿ ಸಾಮಾನ್ಯ ವಿಶ್ವಾಸಿಗಳು ವಹಿಸುವ ಮಹತ್ವದ ಪಾತ್ರವನ್ನು ಒತ್ತಿಹೇಳಿದರು. ಅವರು “ಲುಮೆನ್ ಜೆಂಟಿಯಮ್” ಎಂಬ ಸಭಾ ದಸ್ತಾವೇಜಿನ ಕುರಿತು ತಮ್ಮ ಚಿಂತನೆಗಳನ್ನು ಮುಂದುವರಿಸುತ್ತಾ, ಸುವಾರ್ತೆಗೆ ಸಾಕ್ಷಿಯಾಗುವಲ್ಲಿ ಅವರ ಪಾತ್ರದ ಮಹತ್ವವನ್ನು ವಿವರಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಏಪ್ರಿಲ್ 1ರಂದು ಸಂತ ಪೇತ್ರರ ಚೌಕದಲ್ಲಿ  ನಡೆದ ಬುಧವಾರದ ಸಾಮಾನ್ಯ ಸಭೆಯಲ್ಲಿ, ಧರ್ಮ ಸಭೆಯ ನಿರ್ಮಾಣದಲ್ಲಿ ಸಾಮಾನ್ಯ ವಿಶ್ವಾಸಿಗಳ  ಕೊಡುಗೆ, ಸೇವೆ ಮತ್ತು ಸಾಕ್ಷ್ಯ ಅತ್ಯಂತ ಅಗತ್ಯವೆಂದು ಒತ್ತಿಹೇಳಿದರು. ಅವರು ಧರ್ಮ ಸಭೆಯ ಎಲ್ಲರಿಗೂ ತಲುಪುವಂತೆ, ಸುವಾರ್ತೆಯನ್ನು ಪ್ರಸಾರ ಮಾಡುವಂತೆ, ಹಾಗೆಯೇ ನ್ಯಾಯ, ದಾನಧರ್ಮ ಮತ್ತು ಶಾಂತಿಯನ್ನು ಉತ್ತೇಜಿಸುವಲ್ಲಿ ಸಾಮಾನ್ಯ ಜನರ ಪಾತ್ರ ಮಹತ್ವದ್ದೆಂದು ಹೇಳಿದರು.

ಜಗದ್ಗುರುಗಳು“ಸಾಮಾನ್ಯ ಜನರ ಅಪೋಸ್ತೋಲಿಕ ಕ್ಷೇತ್ರವು ಧರ್ಮ ಸಭೆಯ ಒಳಗಷ್ಟೇ ಸೀಮಿತವಾಗಿಲ್ಲ ಅದು ಸಮಸ್ತ ಲೋಕದವರೆಗೆ ವಿಸ್ತರಿಸಿದೆ ಎಂದು ಹೇಳಿದರು. ಕೆಲಸದ ಸ್ಥಳಗಳಲ್ಲಿ, ನಾಗರಿಕ ಸಮಾಜದಲ್ಲಿ ಮತ್ತು ಮಾನವ ಸಂಬಂಧಗಳಲ್ಲೆಲ್ಲಾ, ಕ್ರೈಸ್ತ ಜೀವನದ ಸೌಂದರ್ಯವನ್ನು ತೋರಿಸುವ ಮೂಲಕ ಸುವಾರ್ತೆಗೆ ಸಾಕ್ಷಿಯಾಗುವಲ್ಲಿ ಅವರು ಪ್ರಮುಖ ಪಾತ್ರವಹಿಸುತ್ತಾರೆ ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಜಗದ್ಗುರುಗಳು ಲುಮೆನ್ ಜೆಂಟಿಯಮ್ ಎಂಬ ದ್ವಿತೀಯ ವ್ಯಾಟಿಕನ್ ಸಭೆಯ ದಸ್ತಾವೇಜಿನ ಕುರಿತು ತಮ್ಮ ಉಪದೇಶವನ್ನು ಮುಂದುವರಿಸಿದರು. ಧರ್ಮ ಸಭೆ “ಹೊರಗೆ ಹೋಗುವ ಚರ್ಚ್” ಆಗಿರಬೇಕು ಅಂದರೆ ಇತಿಹಾಸದೊಳಗೆ ಬದುಕುವ ಮತ್ತು ಸದಾ ಸುವಾರ್ತೆಯ ಸಾಕ್ಷ್ಯಕ್ಕೆ ತೆರೆದಿರುವ ಧರ್ಮ ಸಭೆ ಆಗಿರಬೇಕು ಎಂದು ಅವರು ವಿವರಿಸಿದರು.

ಜಗದ್ಗುರುಗಳು ಎಲ್ಲಾ ದೀಕ್ಷಿತರು (ಬ್ಯಾಪ್ಟಿಸ್ಟ) ಸಮಾನ ಗೌರವ ಹೊಂದಿದ್ದಾರೆ ಎಂದು ಒತ್ತಿ ಹೇಳಿದರು. ಸಾಮಾನ್ಯ ಜನರು ದೇವರ ಜನರ ಬಹುಮತವಾಗಿದ್ದು, ಯಾಜಕರು ಮತ್ತು ಧಾರ್ಮಿಕರು ಸೇವೆಗೆ ನೇಮಕಗೊಂಡವರು ಮಾತ್ರ ಎಂಬುದನ್ನು ಅವರು ಉಲ್ಲೇಖಿಸಿದರು. ಕ್ರಿಸ್ತನಲ್ಲಿ ಎಲ್ಲರೂ ಒಂದೇ ಗೌರವ ಮತ್ತು ಕರ್ತವ್ಯ ಹೊಂದಿದ್ದಾರೆ ಎಂಬುದು ಈ ಬೋಧನೆಯ ಮೂಲತತ್ತ್ವವಾಗಿದೆ.

ಮುಂದೆ ಅವರು ದೇವರ ಜನರು ಅಸಂಘಟಿತ ಗುಂಪಲ್ಲ, ಆದರೆ ಕ್ರಿಸ್ತನ ದೇಹವೆಂದು ವಿವರಿಸಿದರು. ಸಾಮಾನ್ಯ ವಿಶ್ವಾಸಿಗಳು ಕ್ರಿಸ್ತನ ಯಾಜಕ, ಪ್ರವಾದಿ ಮತ್ತು ರಾಜಕೀಯ ಕಾರ್ಯಗಳಲ್ಲಿ ಪಾಲುಗೊಳ್ಳುತ್ತಾರೆ ಮತ್ತು ಧರ್ಮ ಸಭೆಯ ಗುರಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಹೇಳಿದರು.

ಕೊನೆಯಲ್ಲಿ, ಜಗದ್ಗುರು IIನೇ ಜಾನ್ ಪಾಲ್ ರವರ ಬೋಧನೆಯನ್ನು ಉಲ್ಲೇಖಿಸಿ, ಧರ್ಮ ಸಭೆಯಲ್ಲಿ ಸಾಮಾನ್ಯ ಜನರ ಪಾತ್ರದ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದರು. ಮುಂದಿನ ಪಾಸ್ಕ ಹಬ್ಬದ ಸಂದರ್ಭದಲ್ಲಿ, ಮರಿಯಾ ಮಗ್ದಲೇನ, ಪೇತ್ರ ಮತ್ತು ಯೋಹಾನನಂತೆ ಪುನರುತ್ಥಾನಿ ಕ್ರಿಸ್ತನ ಸಾಕ್ಷಿಗಳಾಗುವಂತೆ ಎಲ್ಲರನ್ನೂ ಜಗದ್ಗುರುಗಳು ಪ್ರೇರೇಪಿಸಿದರು.

01 ಏಪ್ರಿಲ್ 2026, 18:27