ಕಳೆದ ವರ್ಷ ಸಂತ ಪೀಟರ್ಸ್ ಬೆಸಿಲಿಕಾದಲ್ಲಿ ಜಗದ್ಗುರು XIVನೇ ಲಿಯೋರವರಿಂದ ದೀಕ್ಷೆ ಪಡೆದ ಯಾಜಕರು ಕಳೆದ ವರ್ಷ ಸಂತ ಪೀಟರ್ಸ್ ಬೆಸಿಲಿಕಾದಲ್ಲಿ ಜಗದ್ಗುರು XIVನೇ ಲಿಯೋರವರಿಂದ ದೀಕ್ಷೆ ಪಡೆದ ಯಾಜಕರು 

ಜಗದ್ಗುರು XIVನೇ ಲಿಯೋರವರು ಪವಿತ್ರ ಗುರುವಾರದಂದು 12 ರೋಮನ್ ಯಾಜಕರ ಕಾಲುಗಳನ್ನು ತೊಳೆಯಲಿದ್ದಾರೆ.

ಪವಿತ್ರ ಗುರುವಾರದ “ಕೊಯೆನಾ ಡೊಮಿನಿಯಲ್ಲಿ” ಪವಿತ್ರ ಬಲಿಪೂಜೆಯ ಸಮಯದಲ್ಲಿ ಜಗದ್ಗುರು XIVನೇ ಲಿಯೋರವರು ಹನ್ನೆರಡು ಯಾಜಕರ ಕಾಲುಗಳನ್ನು ತೊಳೆಯಲಿದ್ದಾರೆ ಅವರಲ್ಲಿ ಹನ್ನೊಂದು ಮಂದಿಯನ್ನು ಅವರು ಕಳೆದ ವರ್ಷವೇ ಯಾಜಕರಾಗಿ ಅಭಿಷೇಕಿಸಿದ್ದರು.

ವ್ಯಾಟಿಕನ್ ವರದಿ

ಪವಿತ್ರ ಗುರುವಾರದಂದು ಜಗದ್ಗುರು XIVನೇ ಲಿಯೋರವರು “ಕೊಯೆನಾ ಡೊಮಿನಿಯಲ್ಲಿ ” ಪವಿತ್ರ ಬಲಿ ಪೂಜೆಯ ಸಂದರ್ಭದಲ್ಲಿ ಹನ್ನೆರಡು ಯಾಜಕರ ಕಾಲುಗಳನ್ನು ತೊಳೆಯಲಿದ್ದಾರೆ. ಈ ಪವಿತ್ರ ವಿಧಿ ಸಂಜೆ 5:30ಕ್ಕೆ ಸೇಂಟ್ ಜಾನ್ ಲ್ಯಾಟೆರನ್ ಬೆಸಿಲಿಕಾದಲ್ಲಿ ಆರಂಭವಾಗುತ್ತದೆ.

ರೋಮಿನ ಡಯಾಸಿಸ್ ಪ್ರಕಟಿಸಿದ ಪ್ರಕಟಣೆಯ ಪ್ರಕಾರ, ಈ 12 ಯಾಜಕರ ಹೆಸರುಗಳು ಹೀಗಿವೆ ವಂ.ಸ್ವಾಮಿ ಆಂಡ್ರಿಯಾ ಅಲೆಸ್ಸಿ, ವಂ.ಸ್ವಾಮಿ ಗ್ಯಾಬ್ರಿಯೆಲೆ ಡಿ ಮೆನ್ನೊ ಡಿ ಬುಕ್ಕಿಯಾನಿಕೊ, ವಂ.ಸ್ವಾಮಿ ರೆನ್ಜೊ ಕಿಯೆಸಾ, ವಂ.ಸ್ವಾಮಿ ಫ್ರಾನ್ಚೆಸ್ಕೊ ಮೆಲೋನೆ,ವಂ.ಸ್ವಾಮಿ ಕ್ಲೋಡಿ ಮೆರ್ಫಾಲೆನ್, ವಂ.ಸ್ವಾಮಿ ಫೆಡರಿಕೊ ಪೆಲೋಸಿಯೊ, ವಂ.ಸ್ವಾಮಿ ಮಾರ್ಕೊ ಪೆಟ್ರೋಲೊ, ವಂ.ಸ್ವಾಮಿ ಪಿಯೆಟ್ರೋ ಹಿಯು ನ್ಗುಯೆನ್ ಹುಯೈ, ವಂ.ಸ್ವಾಮಿ ಮತ್ಯೊ ರೆಂಜಿ,ವಂ.ಸ್ವಾಮಿ ಜ್ಯೂಸೆಪ್ಪೆ ಟೆರ್‌ರಾನೊವಾ, ವಂ.ಸ್ವಾಮಿ ಸಿಮೋನೆ ಟ್ರೊಯಿಲೊ ಮತ್ತು ವಂ.ಸ್ವಾಮಿ ಎನ್ರಿಕೊ ಮರಿಯಾ ಟ್ರುಸಿಯಾನಿರವರು.

ಈ ಯಾಜಕರಲ್ಲಿ ಹನ್ನೊಂದು ಮಂದಿಯನ್ನು ಕಳೆದ ವರ್ಷವೇ ಜಗದ್ಗುರು XIVನೇ ಲಿಯೋರವರು ಯಾಜಕರಾಗಿ ಅಭಿಷೇಕಿಸಿದ್ದರು. ವಂ.ಸ್ವಾಮಿ ರೆನ್ಜೊ ಕಿಯೆಸಾ ಮಾತ್ರ ಪಾಂಟಿಫಿಕಲ್ ರೋಮನ್ ಮೇಜರ್ ಸೆಮಿನರಿಯ ಆಧ್ಯಾತ್ಮಿಕ ನಿರ್ದೇಶಕರಾಗಿದ್ದಾರೆ.

ಪವಿತ್ರ ವಿಧಿಯ ಅಂತ್ಯದಲ್ಲಿ, ಜಗದ್ಗುರುಗಳು ಪರಮಪವಿತ್ರ ಪರಮ ಪ್ರಸಾದವನ್ನು ಸೇಂಟ್ ಫ್ರಾನ್ಸಿಸ್ ಚಾಪೆಲ್ ನಲ್ಲಿ ಇರುವ ವಿಶ್ರಾಂತಿ ಸ್ಥಳಕ್ಕೆ ಕೊಂಡೊಯ್ಯಲಿದ್ದಾರೆ.

01 ಏಪ್ರಿಲ್ 2026, 18:32