VATICAN-RELIGION-POPE-AUDIENCE

ಜಗದ್ಗುರುಗಳು ಡೊನಾಲ್ಡ್ ಟ್ರಂಪ್ ಹಾಗೂ ವಿಶ್ವದ ನಾಯಕರಿಗೆ ಮನವಿ: ಯುದ್ಧವನ್ನು ಅಂತ್ಯಗೊಳಿಸಲು ಪರಿಹಾರಗಳನ್ನು ಕಂಡುಹಿಡಿಯಿರಿ

ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಜಗದ್ಗುರು XIVನೇ ಲಿಯೋರವರು ವಿಶ್ವದ ನಾಯಕರಿಗೆ “ಮತ್ತೆ ಮಾತುಕತೆಯ ಮೇಜಿನತ್ತ ಮರಳಿರಿ” ಮತ್ತು ಸಂವಾದದ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿರಿ ಎಂದು ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ

“ನನಗೆ ತಿಳಿದಿರುವಂತೆ, ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ರವರು ಇತ್ತೀಚೆಗೆ ಯುದ್ಧವನ್ನು ಅಂತ್ಯಗೊಳಿಸಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಅವರು ಹಿಂಸೆಯನ್ನು ಕಡಿಮೆ ಮಾಡಲು ಹೊರಬರುವ ಮಾರ್ಗವನ್ನು ಹುಡುಕುತ್ತಿದ್ದಾರೆ ಎಂದು ನಾವು ಆಶಿಸುತ್ತೇವೆ. ಬಾಂಬ್ ದಾಳಿ ಮತ್ತು ಹಿಂಸಾಚಾರವನ್ನು ಕಡಿಮೆ ಮಾಡುವ ಮಾರ್ಗವನ್ನು ಅವರು ಕಂಡುಕೊಳ್ಳಲಿ ಎಂದು ನಾವು ನಿರೀಕ್ಷಿಸುತ್ತೇವೆ ಇದು ಮಧ್ಯಪ್ರಾಚ್ಯದಲ್ಲೂ ಮತ್ತು ಇತರ ಪ್ರದೇಶಗಳಲ್ಲೂ ನಿರಂತರವಾಗಿ ಹೆಚ್ಚುತ್ತಿರುವ ದ್ವೇಷವನ್ನು ಕಡಿಮೆ ಮಾಡುವ ಮಹತ್ವದ ಕೊಡುಗೆಯಾಗುತ್ತದೆ.

ಪಾಸ್ಕ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಜಗದ್ಗುರು XIVನೇ ಲಿಯೋರವರು ಸಂಘರ್ಷ ಮತ್ತು ಹಿಂಸೆಯಿಂದ ಗಾಯಗೊಂಡಿರುವ ವಿಶ್ವದಲ್ಲಿ ಶಾಂತಿಗಾಗಿ ತಮ್ಮ ಮನವಿಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಮಾರ್ಚ್ 31ರ ಸಂಜೆ ಕ್ಯಾಸ್ಟೆಲ್ ಗ್ಯಾಂಡೋಲ್ಫೊ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುವ ವೇಳೆ, ಜಗದ್ಗುರುಗಳು ವಿಶ್ವದ ಎಲ್ಲಾ ನಾಯಕರಿಗೂ ಕರೆ ನೀಡಿದರು. ಮತ್ತೆ ಮಾತುಕತೆಯ ಮೇಜಿನತ್ತ ಮರಳಿ, ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕೋಣ. ನಾವು ಉತ್ತೇಜಿಸುತ್ತಿರುವ ಹಿಂಸೆಯನ್ನು ಕಡಿಮೆ ಮಾಡುವ ಮಾರ್ಗಗಳನ್ನು ಹುಡುಕೋಣ, ವಿಶೇಷವಾಗಿ ಪಾಸ್ಕ ಸಮಯದಲ್ಲಿ ನಮ್ಮ ಹೃದಯಗಳಲ್ಲಿ ಶಾಂತಿ ಆಳಲಿ ಎಂದರು.

ಪಾಸ್ಕ ವಿರಾಮ (Easter truce)

ಪಾಸ್ಖ ಹಬ್ಬದ ಕುರಿತು ಜಗದ್ಗುರುಗಳು ನೆನಪಿಸಿದರು: ಇದು ವರ್ಷದ ಅತ್ಯಂತ ಪವಿತ್ರ ಮತ್ತು ಪವಿತ್ರವಾದ ಸಮಯವಾಗಿರಬೇಕು. ಇದು ಶಾಂತಿಯ ಸಮಯ, ಆಳವಾದ ಚಿಂತನೆಯ ಸಮಯ. ಆದರೆ ನಾವು ಎಲ್ಲರೂ ತಿಳಿದಿರುವಂತೆ, ಇಂದಿಗೂ ವಿಶ್ವದ ಅನೇಕ ಕಡೆಗಳಲ್ಲಿ ಅಪಾರವಾದ ನೋವು, ಅನೇಕ ಸಾವುಗಳು, ನಿರಪರಾಧ ಮಕ್ಕಳ ಸಾವುಗಳನ್ನೂ ನಾವು ನೋಡುತ್ತಿದ್ದೇವೆ.

ನಾವು ನಿರಂತರವಾಗಿ ಶಾಂತಿಗಾಗಿ ಮನವಿ ಮಾಡುತ್ತೇವೆ, ಆದರೆ ದುರದೃಷ್ಟವಶಾತ್ ಹಲವರು ದ್ವೇಷ, ಹಿಂಸೆ ಮತ್ತು ಯುದ್ಧವನ್ನು ಉತ್ತೇಜಿಸಲು ಬಯಸುತ್ತಾರೆ, ಎಂದು ಜಗದ್ಗುರುಗಳು ಒತ್ತಿ ಹೇಳಿದರು. ಈ ಕಾರಣಕ್ಕಾಗಿ ಅವರು ಎಲ್ಲರನ್ನೂ, “ವಿಶೇಷವಾಗಿ ಕ್ರೈಸ್ತರನ್ನು,” ಈ ದಿನಗಳನ್ನು ಈ ಅರಿವಿನಿಂದ ಬದುಕಲು ಕರೆ ನೀಡಿದರು ಕ್ರಿಸ್ತನು ಇಂದಿಗೂ ಶಿಲುಬೆಗೆ ಹಾಕಲ್ಪಡುತ್ತಿದ್ದಾನೆ, ಕ್ರಿಸ್ತನು ಇಂದಿಗೂ ನಿರಪರಾಧಿಗಳಲ್ಲಿ, ವಿಶೇಷವಾಗಿ ಹಿಂಸೆ, ದ್ವೇಷ ಮತ್ತು ಯುದ್ಧದಿಂದ ಬಳಲುತ್ತಿರುವವರಲ್ಲಿ ಕಷ್ಟ ಅನುಭವಿಸುತ್ತಿದ್ದಾನೆ.

ನಾವು ಅವರಿಗಾಗಿ ಪ್ರಾರ್ಥಿಸೋಣ ಯುದ್ಧದ ಬಲಿಗಳಿಗಾಗಿ. ನಿಜವಾದ ಹೊಸ ಶಾಂತಿ ಉದಯಿಸಲಿ, ಅದು ಎಲ್ಲರಿಗೂ ಹೊಸ ಜೀವನ ನೀಡಲಿ, ಎಂದು ಜಗದ್ಗುರು XIVನೇ ಲಿಯೋರವರು ಮನವಿ ಮಾಡಿದರು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರವಾಗಿ, ಪಾಸ್ಕ ಸಂದರ್ಭದಲ್ಲಿ ಒಂದು ವಿರಾಮ (truce) ಪಾಲಿಸಲಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಗುಡ್ ಫ್ರೈಡೇ – ಶಿಲುಬೆಯ ಹಾದಿ

ಜಗದ್ಗುರುಗಳು ಕೊಲೋಸಿಯಂನಲ್ಲಿ ನಡೆಯುವ ಸಂಪ್ರದಾಯಬದ್ಧ ಶುಕ್ರವಾರದ ಶಿಲುಬೆಯ ಮಾರ್ಗದಲ್ಲಿ ಸ್ವತಃ ಶಿಲುಬೆಯನ್ನು ಹೊರುವ ತಮ್ಮ ನಿರ್ಧಾರದ ಕುರಿತು ಪ್ರಶ್ನಿಸಲ್ಪಟ್ಟರು.

ಜಗದ್ಗುರುಗಳು ಪ್ರತಿನಿಧಿಸುವ ಅರ್ಥದ ಕಾರಣದಿಂದ ಇದು ಒಂದು ಮಹತ್ವದ ಸಂಕೇತವಾಗುತ್ತದೆ, ಎಂದು ಅವರು ಹೇಳಿದರು. ಇಂದಿನ ಜಗತ್ತಿನಲ್ಲಿ ಆಧ್ಯಾತ್ಮಿಕ ನಾಯಕನಾಗಿ, ಕ್ರಿಸ್ತನು ಇಂದಿಗೂ ಕಷ್ಟ ಅನುಭವಿಸುತ್ತಿದ್ದಾನೆ ಎಂಬುದನ್ನು ಹೇಳುವ ಧ್ವನಿಯಾಗಿ. ಈ ಎಲ್ಲಾ ನೋವುಗಳನ್ನು ನಾನು ನನ್ನ ಪ್ರಾರ್ಥನೆಗಳಲ್ಲಿ ಹೊತ್ತುಕೊಂಡಿದ್ದೇನೆ ಎಂದರು.

ಅವರು ಮತ್ತೆ ಸತ್ಪ್ರವೃತ್ತಿಯ ಎಲ್ಲಾ ಜನರಿಗೆ, ನಂಬಿಕೆಯ ಜನರಿಗೆ ಕರೆ ನೀಡಿದರು: “ನಾವು ಒಟ್ಟಾಗಿ ನಡೆಯೋಣ, ನಮಗಾಗಿ ಕಷ್ಟ ಅನುಭವಿಸಿದ ಕ್ರಿಸ್ತನೊಂದಿಗೆ ನಡೆಯೋಣ, ನಮಗೆ ರಕ್ಷಣೆ ನೀಡಿದವನೊಂದಿಗೆ, ಮತ್ತು ನಾವು ಸ್ವತಃ ಶಾಂತಿಯ ದೂತರಾಗಲು ಪ್ರಯತ್ನಿಸೋಣ ಎಂದು ಹೇಳಿದರು.

ಮುಂದಿನ ಸ್ಪೇನ್ ಭೇಟಿಯ ಕುರಿತು

ಜನಸ್ತೋಮವನ್ನು ಅಭಿನಂದಿಸುವ ಮೊದಲು, ಜೂನ್‌ನಲ್ಲಿ ನಡೆಯಲಿರುವ ತಮ್ಮ ಸ್ಪೇನ್ ಭೇಟಿಯಿಂದ ಏನು ನಿರೀಕ್ಷಿಸುತ್ತಾರೆ ಎಂದು ಜಗದ್ಗುರುಗಳನ್ನು ಕೇಳಲಾಯಿತು.

ನಂಬಿಕೆ, ಅಪಾರ ಪ್ರೀತಿ, ಆತಿಥ್ಯ ಮತ್ತು ಹೃತ್ಪೂರ್ವಕ ಸ್ವಾಗತ, ಎಂದು ಅವರು ಉತ್ತರಿಸಿದರು.

ನಾನು 40 ವರ್ಷಗಳಿಗೂ ಹೆಚ್ಚು ಕಾಲ ಸ್ಪೇನ್‌ಗೆ ಭೇಟಿ ನೀಡುತ್ತಿದ್ದೇನೆ, ಮತ್ತು ಸದಾ ಮಹಾನ್ ನಂಬಿಕೆ ಮತ್ತು ಸತ್ಪ್ರವೃತ್ತಿಯ ಜನರನ್ನು ಕಂಡಿದ್ದೇನೆ, ಎಂದು ಜಗದ್ಗುರುಗಳು ಹೇಳಿದರು, ಈ ಭೇಟಿಯಲ್ಲಿಯೂ ನಾವು ಈ ಎಲ್ಲವನ್ನು ಆಚರಿಸಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದರು.

01 ಏಪ್ರಿಲ್ 2026, 18:24