ಜಗದ್ಗುರುಗಳು: ಪಾಸ್ಖ ಹಬ್ಬವು ದ್ವೇಷವನ್ನು ದೂರ ಮಾಡುತ್ತದೆ ಮತ್ತು ಶಕ್ತಿಶಾಲಿಗಳನ್ನು ಕೆಡವುತ್ತದೆ
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಶನಿವಾರ ಸಂಜೆ ಪಾಸ್ಖ ಜಾಗರಣೆ ಬಲಿಪೂಜೆಯವೇಳೆ ಸಂತ ಪೀಟರ್ ಬಸಿಲಿಕಾಯಲ್ಲಿ ಅಧ್ಯಕ್ಷತೆ ವಹಿಸಿ, ಒಳ್ಳೆಯದು, ಕೆಡುಕು ಮತ್ತು ಪುನರುತ್ಥಾನ ಕುರಿತು ಆಳವಾದ ಚಿಂತನೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅವರು ಪಾಸ್ಖ ಹಬ್ಬದ ಆತ್ಮೀಯ ಮಹತ್ವವನ್ನು ನೆನಪಿಸಿದರು.
ಪಾಸ್ಖ ಹಬ್ಬದ ಬಗ್ಗೆ ಮಾತನಾಡಿದ ಜಗದ್ಗುರುಗಳು, ಒಂದು ಪ್ರಾಚೀನ ಭಕ್ತಿಗೀತೆಯನ್ನು ಉಲ್ಲೇಖಿಸಿ, ಇದು ದ್ವೇಷವನ್ನು ದೂರ ಮಾಡುತ್ತದೆ, ಸೌಹಾರ್ದತೆಯನ್ನು ಬೆಳೆಸುತ್ತದೆ ಮತ್ತು ಶಕ್ತಿಶಾಲಿಗಳನ್ನು ಕೆಡವುತ್ತದೆ ಎಂದು ಹೇಳಿದರು. ಈ ಮಾತುಗಳ ಮೂಲಕ ಪಾಸ್ಖ ಹಬ್ಬದ ಶಾಂತಿ ಮತ್ತು ಏಕತೆಯ ಸಂದೇಶವನ್ನು ಅವರು ಒತ್ತಿ ಹೇಳಿದರು.
ಹೃದಯದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನವಿದ್ದರೂ, “ಈ ಪವಿತ್ರ ರಾತ್ರಿಯ ರಹಸ್ಯವು ಶತಮಾನಗಳಷ್ಟು ವ್ಯಾಪಿಸಿದೆ.” ಇದು ದೇವರ ರಕ್ಷಣಾ ಯೋಜನೆಯ ದೀರ್ಘ ಇತಿಹಾಸವನ್ನು ಸೂಚಿಸುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.
ದೈವಾರಾಧನೆ ವಿಧಿಯ ಸಮಯದಲ್ಲಿ ಓದಲಾದ ಒಂಬತ್ತು ಪವಿತ್ರ ಗ್ರಂಥ ಭಾಗಗಳಲ್ಲಿ, ಸೃಷ್ಟಿಯಿಂದ ಆರಂಭಿಸಿ ಇಸ್ರಾಯೇಲರ ಈಜಿಪ್ಟ್‌ನಿಂದ ಹೊರಟುದು, ಹಾಗೂ ಸಂತ ಪೌಲನ ಸೇವೆಯವರೆಗೆ ಸಮಾಧಾನ ಮತ್ತು ಕೃಪೆಯ ಮಾರ್ಗದ ವಿವಿಧ ಹಂತಗಳನ್ನು ನಾವು ಕಾಣುತ್ತೇವೆ ಎಂದು ಜಗದ್ಗುರುಗಳು ಹೇಳಿದರು.
ಈ ಎಲ್ಲಾ ಘಟನೆಗಳಲ್ಲಿ ಒಟ್ಟುಗೂಡಿಸುವ ಮುಖ್ಯ ವಿಷಯವೆಂದರೆ, “ಪಾಪದ ಕಠಿಣತೆ ಅದು ವಿಭಜಿಸಿ ನಾಶಮಾಡುತ್ತದೆ ಅದಕ್ಕೆ ದೇವರು ಜೀವವನ್ನು ಒಂದಾಗಿಸಿ ಪುನಃಸ್ಥಾಪಿಸುವ ಪ್ರೀತಿಯ ಶಕ್ತಿಯಿಂದ ಪ್ರತಿಕ್ರಿಯಿಸುತ್ತಾರೆ ಎಂಬುದಾಗಿದೆ ಎಂದು ಅವರು ಒತ್ತಿ ಹೇಳಿದರು.
ನಂತರ ಜಗದ್ಗುರುಗಳು ಯೇಸು ಕ್ರಿಸ್ತನ ಪುನರುತ್ಥಾನದ ಘಟನೆಯನ್ನು ಸ್ಮರಿಸಿದರು. ಮಗ್ಧಲದಮರಿಯಳು ಯೇಸುವಿನ ಸಮಾಧಿಗೆ ಭೇಟಿ ನೀಡಿದಾಗ ಭೂಮಿ ನಡುಗುತ್ತದೆ, ಸಮಾಧಿಯ ಬಾಗಿಲನ್ನು ಮುಚ್ಚಿದ್ದ ಕಲ್ಲು ಸರಿಯುತ್ತದೆ. ಈ ಘಟನೆ ದೇವರ ಪ್ರೀತಿಯ ಶಕ್ತಿಯ ಮಹತ್ವವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಆ ಸಂದರ್ಭದಲ್ಲಿ ಮಹಿಳೆಯರು ಕಂಡದ್ದು ಕೆಡುಕಿನ ಯಾವುದೇ ಶಕ್ತಿಗಿಂತಲೂ ಬಲವಾದ ದೇವರ ಪ್ರೀತಿ ಎಂದು ಜಗದ್ಗುರುಗಳು ವಿವರಿಸಿದರು. ಮಾನವನು ದೇಹವನ್ನು ಕೊಲ್ಲಬಹುದು, ಆದರೆ ದೇವರ ಪ್ರೀತಿಯ ಜೀವ ಶಾಶ್ವತವಾದದ್ದು ಅದು ಮರಣವನ್ನು ಮೀರಿ ಸಾಗುತ್ತದೆ, ಯಾವುದೂ ಸಮಾಧಿ ಅದನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕೊನೆಯಲ್ಲಿ, ಜಗದ್ಗುರುಗಳು ಇಂದಿನ ಜಗತ್ತಿನ ತೆರೆಯಬೇಕಾದ ಸಮಾಧಿಗಳ ಕುರಿತು ಚಿಂತಿಸಿದರು – ಅವುಗಳಲ್ಲಿ ಅನುಮಾನ, ಭಯ, ಸ್ವಾರ್ಥ, ಅಸಹನೆ, ಯುದ್ಧ, ಅನ್ಯಾಯ ಮತ್ತು ಜನಾಂಗಗಳ ನಡುವೆ ಇರುವ ಏಕಾಂಗಿತನ ಸೇರಿವೆ. ಇಂತಹ ಸವಾಲುಗಳ ಮುಂದೆ ನಿರಾಶರಾಗದೆ, ಪವಿತ್ರರ ಮಾದರಿಯನ್ನು ಅನುಸರಿಸಿ, ಶಾಂತಿ ಮತ್ತು ಸೌಹಾರ್ದತೆಯ ಪಾಸ್ಖ ಹಬ್ಬದ ವರಗಳು ವಿಶ್ವದಾದ್ಯಂತ ಬೆಳೆಯುವಂತೆ ನಾವು ಪ್ರಯತ್ನಿಸಬೇಕು ಎಂದು ಅವರು ಪ್ರೇರೇಪಿಸಿದರು.
