VATICAN-RELIGION-POPE-AUDIENCE

ಜಗದ್ಗುರು ಲಿಯೋರವರ ಸ್ಪೇನ್ ಭೇಟಿಗೆ ಲೋಗೋ ಮತ್ತು ಘೋಷವಾಕ್ಯ ಬಿಡುಗಡೆಗೊಂಡಿವೆ.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯು ಜಗದ್ಗುರು ಲಿಯೋರವರ ಮುಂಬರುವ ಸ್ಪೇನ್ ಪ್ರವಾಸದ ಲೋಗೋ ಮತ್ತು ಘೋಷವಾಕ್ಯವನ್ನು ಬಿಡುಗಡೆ ಮಾಡಿದೆ.

ವ್ಯಾಟಿಕನ್ ವರದಿ

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯು ಜಗದ್ಗುರು XIVನೇ ಲಿಯೋರವರ ಸ್ಪೇನ್ ದೇಶಕ್ಕೆ ನಡೆಯಲಿರುವ  ಪ್ರೇಷಿತರ ಪ್ರವಾಸದ (ಜೂನ್ 6ರಿಂದ 12ರವರೆಗೆ) ಲೋಗೋ ಮತ್ತು ಘೋಷವಾಕ್ಯವನ್ನು ಬಿಡುಗಡೆ ಮಾಡಿದೆ.

ಲೋಗೋ

ಲೋಗೋವು ಚಲನೆಯಲ್ಲಿರುವ ತೆರೆದ ವೃತ್ತದ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಒಟ್ಟಿಗೆ ಸೇರಿದ ಮಾನವ ಆಕೃತಿಗಳಿಂದ ನಿರ್ಮಿತವಾಗಿದ್ದು, ಮೇಲ್ಮುಖವಾಗಿ ಮುಖಮಾಡಿದೆ. ಈ ಚಿಹ್ನೆ ಸಮುದಾಯ, ಭೇಟಿಯ ಮನೋಭಾವ ಮತ್ತು ಪರಸ್ಪರ ಸಹಕಾರವನ್ನು ವ್ಯಕ್ತಪಡಿಸುತ್ತದೆ. ಇದು ಕೇವಲ ಒಟ್ಟಿಗೆ ಇರುವುದನ್ನು ಮಾತ್ರ ಸೂಚಿಸುವುದಿಲ್ಲ, ಬದಲಿಗೆ ಒಂದು ಸಾಮಾನ್ಯ ಉದ್ದೇಶದತ್ತ ಒಟ್ಟಾಗಿ ನಡೆಯುವುದನ್ನೂ ಸೂಚಿಸುತ್ತದೆ. ಮಧ್ಯದಲ್ಲಿ ಇರಿಸಲಾದ ಕನ್ಯಾ ಮರಿಯಮ್ಮನವರು, ಈ ಚಲನೆಯ ಹೃದಯವನ್ನು ಪ್ರತಿನಿಧಿಸುತ್ತಾರೆ  ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಪ್ರತಿಯೊಬ್ಬರ ದೃಷ್ಟಿಯನ್ನು ದೇವರ ಕಡೆಗೆ ತಿರುಗಿಸುವ ತಾಯಿಯ ಸಾನ್ನಿಧ್ಯವಾಗಿ, ಎಲ್ಲಾ ಜನರಿಗೆ ಏಕತೆ ಮತ್ತು ನಿರೀಕ್ಷೆಯ ಸಂಕೇತವಾಗಿ ನಿಲ್ಲುತ್ತಾರೆ.

ಘೋಷವಾಕ್ಯ

ಆಯ್ಕೆ ಮಾಡಲಾದ ಘೋಷವಾಕ್ಯ “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿರಿ” (ಯೋಹಾನ 4:35) ಎಂಬುದು ನಮ್ಮ ದೈನಂದಿನ ಚಿಂತೆಗಳಾಚೆಗೆ ನೋಡಲು ಮತ್ತು ದೇವರ ಸಾನ್ನಿಧ್ಯವನ್ನು ಮರುಅನ್ವೇಷಿಸಲು, ಜೊತೆಗೆ ಇತರರ ಕಡೆಗೆ ನಮ್ಮ ಮನಸ್ಸನ್ನು ತೆರೆಯಲು ನೀಡುವ ಆಹ್ವಾನವಾಗಿದೆ. ಇದು ನಿರೀಕ್ಷೆ ಮತ್ತು ಧ್ಯಾನದ ಕರೆಗೆ ಸಮಾನವಾಗಿದ್ದು, ಜನರು ತಮ್ಮನ್ನು ಮೀರಿ ಮುಂದೆ ಸಾಗಲು ಹಾಗೂ ಹಂಚಿಕೊಂಡ ಜೀವನದ ಸ್ಪಷ್ಟ ಅಭಿವ್ಯಕ್ತಿಗಳಾಗಿ ಏಕತೆ, ಸೌಂದರ್ಯ ಮತ್ತು ದಾನಶೀಲತೆಯನ್ನು ಮರುಪಡೆಯಲು ಪ್ರೇರೇಪಿಸುತ್ತದೆ. “ಕಣ್ಣುಗಳನ್ನು ಮೇಲಕ್ಕೆತ್ತುವುದು” ಎಂಬ ಈ ಸಂಕೇತವು ಸ್ಪೇನ್‌ನ ಧರ್ಮ ಸಭೆ ಜಗದ್ಗುರುಗಳ ಭೇಟಿಯನ್ನು ಹೇಗೆ ಸ್ವಾಗತಿಸುತ್ತದೆ ಎಂಬ ಮನೋಭಾವವನ್ನೂ ವ್ಯಕ್ತಪಡಿಸುತ್ತದೆ ತೆರೆದ ಹೃದಯಗಳಿಂದ, ಒಟ್ಟಾಗಿ ಮುಂದೆ ನಡೆಯಲು ಸಿದ್ಧರಾಗಿರುವ ಮನಸ್ಥಿತಿಯಿಂದ ಆಗಿದೆ.

07 ಏಪ್ರಿಲ್ 2026, 15:48