Pope Leo XIV delivers his "Urbi et Orbi" message from the main balcony of St. Peter's Basilica, on Easter Sunday, at the Vatican

ಉರ್ಬಿ ಎಟ್ ಓರ್ಬಿ: ಜಗದ್ಗುರುಗಳು ವಿಶ್ವ ನಾಯಕರಿಗೆ ಶಸ್ತ್ರಾಸ್ತ್ರಗಳನ್ನು ಇಳಿಸಲು ಮನವಿ ಮಾಡುತ್ತಾರೆ

ಪಾಸ್ಖ ಹಬ್ಬದ ಭಾನುವಾರದಂದು, ಜಗದ್ಗುರು XIVನೇ ಲಿಯೋರವರು ವಿಶ್ವ ನಾಯಕರಿಗೆ ಇತರರನ್ನು ಆಳುವದಕ್ಕಾಗಿ ಅಲ್ಲ, ಅವರನ್ನು ಭೇಟಿಯಾಗುವದಕ್ಕಾಗಿ ಆಯ್ಕೆ ಮಾಡಿರಿ ಎಂದು ಮನವಿ ಮಾಡಿದರು. ಅವರು ಇದೇ ವೇಳೆ ಏಪ್ರಿಲ್ 11ರ ಶನಿವಾರ ಸಂತ ಪೇತ್ರರ ಬಸಿಲಿಕಾದಲ್ಲಿ ಶಾಂತಿಗಾಗಿ ಪ್ರಾರ್ಥನಾ ಜಾಗರಣೆಯನ್ನು ತಾವು ಮುನ್ನಡೆಸುವುದಾಗಿ ಘೋಷಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ವಿಶ್ವ ನಾಯಕರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಇಳಿಸಿ, ಆಳ್ವಿಕೆಯ ಬದಲು ಭೇಟಿ ಮತ್ತು ಸಂವಾದವನ್ನು ಆಯ್ಕೆಮಾಡುವಂತೆ ಕರೆ ನೀಡಿದ್ದಾರೆ.

ಶಸ್ತ್ರಾಸ್ತ್ರಗಳನ್ನು ಹೊಂದಿರುವವರು ಅವುಗಳನ್ನು ಇಳಿಸಲಿ  ಎಂದು ಜಗದ್ಗುರುಗಳು ಟಾಸ್ಕ್ ಹಬ್ಬದ ಭಾನುವಾರದಂದು ತಮ್ಮ ಪರಂಪರೆಯ ಉರ್ಬಿ ಎಟ್ ಓರ್ಬಿ ಸಂದೇಶ (‘ನಗರಕ್ಕೂ ಮತ್ತು ವಿಶ್ವಕ್ಕೂ’) ಸಂದೇಶದಲ್ಲಿ ಮನವಿ ಮಾಡಿದರು.

ಸಂತ ಪೇತ್ರರ ಚೌಕದಲ್ಲಿ ಕೂಡಿದ್ದ ಸಾವಿರಾರು ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಯುದ್ಧಗಳನ್ನು ಪ್ರಾರಂಭಿಸುವ ಅಧಿಕಾರ ಹೊಂದಿರುವವರು ಶಾಂತಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಈ ಶಾಂತಿ ಬಲದಿಂದ ಹೇರಲ್ಪಟ್ಟದ್ದು ಆಗಿರಬಾರದು ಎಂದು ಅವರು ಒತ್ತಿಹೇಳಿದರು ಬದಲಿಗೆ ಸಂವಾದದ ಮೂಲಕ ಸಾಧಿಸಬೇಕಾದದ್ದು ಇತರರನ್ನು ಆಳುವ ಆಸೆಯಿಂದ ಅಲ್ಲ, ಅವರನ್ನು ಭೇಟಿಯಾಗುವ ಮನೋಭಾವದಿಂದ ಎಂದು ಹೇಳಿದರು.

ಜಗದ್ಗುರು ಲಿಯೋರವರು ಜಗತ್ತು ಹಿಂಸೆಗೆ ಹದವಾಗಿ ಹೋಗುತ್ತಿದೆ ಎಂದು ಎಚ್ಚರಿಸಿದರು. ನಾವು ಅಸಡ್ಡೆಯವರಾಗುತ್ತಿದ್ದೇವೆ, ಎಂದು ಅವರು ಹೇಳಿದರು, ಸಾವಿರಾರು ಜನರ ಮರಣಗಳ ಬಗ್ಗೆ ಮಾತ್ರವಲ್ಲ, ಯುದ್ಧದಿಂದ ಉಂಟಾಗುವ ದ್ವೇಷ ಮತ್ತು ವಿಭಜನೆಗಳ ಬಗ್ಗೆ ಹಾಗೂ ಅದರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಕೂಡ.

ದಿವಂಗತ ಜಗದ್ಗುರು ಫ್ರಾನ್ಸಿಸ್ ರವರ ಪದಗಳನ್ನು ಉಲ್ಲೇಖಿಸಿ, ಜಗದ್ಗುರು ಲಿಯೋರವರು ಹೆಚ್ಚುತ್ತಾ ಹೋಗುತ್ತಿರುವ ಅಸಡ್ಡೆಯ ಜಾಗತೀಕರಣ ಬಗ್ಗೆ ಎಚ್ಚರಿಸಿದರು.

ನಾವು ಇನ್ನು ಅಸಡ್ಡೆಯಿಂದ ಇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕೆಡುಕಿಗೆ ನಾವು ಶರಣಾಗಬಾರದು

ಈ ಕಾರಣಕ್ಕಾಗಿ, ಮುಂದಿನ ಏಪ್ರಿಲ್ 11ರ ಶನಿವಾರ ಸಂತ ಪೇತ್ರರ ಬಸಿಲಿಕಾದಲ್ಲಿ ಶಾಂತಿಗಾಗಿ ಪ್ರಾರ್ಥನಾ ಜಾಗರಣೆಯನ್ನು ತಾವು ಮುನ್ನಡೆಸುವುದಾಗಿ ಅವರು ಘೋಷಿಸಿದರು.

ಪಾಸ್ಖ ಹಬ್ಬದ ಸಂದರ್ಭದಲ್ಲಿ, ಯೇಸು ಮರಣದ ಮೇಲೆ ಜಯ ಸಾಧಿಸಿದ್ದಾರೆ ಎಂದು ಜಗದ್ಗುರುಗಳು ಹೇಳಿದರು, ಮತ್ತು ಈ ಮೂಲಕ ಈ ಲೋಕದ ಪ್ರಾಚೀನ ವಿರೋಧಿಯನ್ನು ಸಂಪೂರ್ಣವಾಗಿ ಸೋಲಿಸಿದ್ದಾರೆ.

ಆದರೆ ಈ ಜಯವನ್ನು ಕ್ರಿಸ್ತನು ಸಾಧಿಸಿದ ಶಕ್ತಿ ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಸೃಷ್ಟಿಸುವ ಮತ್ತು ಜೀವ ನೀಡುವ, ಕ್ಷಮಿಸುವ ಮತ್ತು ವಿಮೋಚಿಸುವ ಪ್ರೀತಿಯ ಮೇಲೆ ಆಧಾರಿತವಾಗಿದೆ ಎಂದು ಜಗದ್ಗುರು ಲಿಯೋರವರು ಹೇಳಿದರು.

ಈ ಪ್ರೀತಿ ಮತ್ತು ಕ್ಷಮೆಯ ಆತ್ಮವೇ ಶಾಂತಿಯನ್ನು ಸ್ಥಾಪಿಸುವ ನಿಜವಾದ ಶಕ್ತಿ ಎಂದು ಅವರು ಹೇಳಿದರು, ಅದು ವ್ಯಕ್ತಿಗಳಲ್ಲಿಯೂ ಸಮಾಜಗಳಲ್ಲಿಯೂ ಸಂಬಂಧಗಳನ್ನು ಬಲಪಡಿಸುತ್ತದೆ.

ಕೊನೆಯಲ್ಲಿ, ಪಾಸ್ಖ ಹಬ್ಬದ ಶಾಂತಿ ಕೇವಲ ಶಸ್ತ್ರಾಸ್ತ್ರಗಳ ಮೌನ ಮಾತ್ರವಲ್ಲ ಅದು ಪ್ರತಿಯೊಬ್ಬರ ಹೃದಯವನ್ನು ಸ್ಪರ್ಶಿಸಿ ಪರಿವರ್ತಿಸುವ ಆಂತರಿಕ ಶಾಂತಿಯೂ ಆಗಿದೆ ಎಂದು ಜಗದ್ಗುರುಗಳು ಹೇಳಿದರು.

ಕ್ರಿಸ್ತನ ಶಾಂತಿಯ ಮೂಲಕ ನಾವು ಪರಿವರ್ತಿತರಾಗಲು ಅವಕಾಶ ನೀಡೋಣ,ಎಂದು ಜಗದ್ಗುರುಗಳು ಮನವಿ ಮಾಡಿದರು, ಅವನಿಂದ ಮಾತ್ರ ದೊರೆಯುವ ನಿಜವಾದ ಶಾಂತಿಗಾಗಿ ಕಾಯುತ್ತಿರುವ ಎಲ್ಲ ಹೃದಯಗಳನ್ನು ಪ್ರಭುವಿಗೆ ಒಪ್ಪಿಸೋಣ.

05 ಏಪ್ರಿಲ್ 2026, 09:05