FILE PHOTO: Pope Leo XIV holds general audience in St. Peter's Square at the Vatican

ಜಗದ್ಗುರು XIVನೇ ಲಿಯೋರವರು, ಸಂತ ಪೇತ್ರರ ಚೌಕದಲ್ಲಿ ಉಷ್ಣತೆಯಿಂದ ಅಸ್ವಸ್ಥಗೊಂಡ ಯಾಜಕರಿಗೆ ನೆರವಾದರು.

ಫ್ರಾಂಕೊ ಸೆಮೆರಾರೊ ರವರು ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಮೇ 27ರಂದು ಸಂತ ಪೇತ್ರರ ಚೌಕದಲ್ಲಿ ನಡೆದ ಸಾಮಾನ್ಯ ಸಾರ್ವಜನಿಕ ಭೇಟಿಯ ಅಂತ್ಯದಲ್ಲಿ ಅಸ್ವಸ್ಥಗೊಂಡ ತಮ್ಮ ಸಹೋದರ ಡಿಯಾಗೋ ಸೆಮೆರಾರೊರವರಿಗೆ ಜಗದ್ಗುರು XIVನೇ ಲಿಯೋರವರು ಹೇಗೆ ನೆರವಾದರು ಎಂಬುದನ್ನು ವಿವರಿಸಿದರು.

 ವ್ಯಾಟಿಕನ್ ವರದಿ

ಈ ದೃಶ್ಯವು ಕ್ಷಣಾರ್ಧದಲ್ಲೇ ವಿಶ್ವದಾದ್ಯಂತ ಹರಡಿತು ಮೇ 27ರಂದು ಬುಧವಾರದ ಸಾಮಾನ್ಯ ಸಾರ್ವಜನಿಕ ಭೇಟಿಯ ಅಂತ್ಯದಲ್ಲಿ ಸಂತ ಪೇತ್ರರ ಚೌಕದ ಮುಂಭಾಗದ ಸಾಲುಗಳಲ್ಲಿ ಕಪ್ಪು ಸೂಟ್ ಧರಿಸಿದ್ದ ಕೆಲವು ಪುರುಷರು ಗುಂಪುಗೂಡಿದ್ದರು. ಆಗ ಜಗದ್ಗುರು XIVನೇ ಲಿಯೋರವರು ಮಾತನಾಡುತ್ತಿದ್ದ ವೇದಿಕೆಯಿಂದ ಇಳಿದು ಬಂದು, ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲು ಮೊಣಕಾಲೂರಿದರು.

ಸಹಾಯ ಪಡೆಯುತ್ತಿದ್ದವರು ದಕ್ಷಿಣ ಇಟಲಿಯ ಪುಗ್ಲಿಯಾ ಪ್ರದೇಶದ ಮಾರ್ಟಿನಾ ಫ್ರಾಂಕಾ ಪಟ್ಟಣದ ಯಾಜಕರಾದ ಡಿಯಾಗೋ ಸೆಮೆರಾರೊ. ಅವರು ತಮ್ಮ ಸಹೋದರ ಫ್ರಾಂಕೊ ಸೆಮೆರಾರೊ ರವರೊಂದಿಗೆ ರೋಮಿಗೆ ಬಂದಿದ್ದರು ಮತ್ತು ತೀವ್ರ ಬಿಸಿಲಿನ ಕಾರಣದಿಂದ ಅಸ್ವಸ್ಥಗೊಂಡರು.

ವಂ. ಸ್ವಾಮಿ ಫ್ರಾಂಕೋರವರು ತಮ್ಮ ಯಾಜಕಾಭಿಷೇಕದ 60ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದು, ಸುಮಾರು 20 ವರ್ಷಗಳ ಹಿಂದೆ ಸಂತ ಆಗಸ್ಟಿನ್ ರವರ ಅವಶೇಷಗಳು ಮಾರ್ಟಿನಾ ಫ್ರಾಂಕಾಗೆ ಬಂದ ಸಂದರ್ಭದ ಛಾಯಾಚಿತ್ರಗಳನ್ನು ಒಳಗೊಂಡ ಆಲ್ಬಮ್ ಒಂದನ್ನು ಜಗದ್ಗುರು ಲಿಯೋರವರಿಗೆ ಉಡುಗೊರೆಯಾಗಿ ನೀಡಿದ್ದರು.

ಜಗದ್ಗುರು XIVನೇ ಲಿಯೋರವರು ವಂ.ಸ್ವಾಮಿ ಡಿಯಾಗೋ ರವರಿಗೆ ನೆರವಾದರು

“ಅದು ಅಸಾಧಾರಣ ಘಟನೆ,” ಎಂದು ವಂ.ಸ್ವಾಮಿ ಫ್ರಾಂಕೋ ವ್ಯಾಟಿಕನ್ ನ್ಯೂಸ್‌ಗೆ ತಿಳಿಸಿದರು.

ಸಾಮಾನ್ಯ ಸಾರ್ವಜನಿಕ ಭೇಟಿಯ ಅಂತ್ಯದಲ್ಲಿ ಜಗದ್ಗುರುಗಳನ್ನು ಸಂಪ್ರದಾಯಬದ್ಧವಾಗಿ ಅಭಿನಂದಿಸಲು ಇಬ್ಬರು ಸಹೋದರರು ವೇದಿಕೆಯತ್ತ ಸಾಗುತ್ತಿದ್ದಾಗ, ವಂ. ಸ್ವಾಮಿ ಡಿಯಾಗೋರವರಿಗೆ ಅಸ್ವಸ್ಥತೆ ಕಾಣಿಸಿತು. “ಮೂರು ಗಂಟೆಗಳ ಕಾಲ ಬಿಸಿಲಿನಲ್ಲಿ ನಿಂತಿದ್ದರಿಂದ ನನ್ನ ಸಹೋದರಿಗೆ ತಲೆಸುತ್ತು ಬಂದು ಅವರು ಬಿದ್ದುಹೋದರು. ಈಗ ಅವರಿಗೆ ಸ್ವಲ್ಪ ನೋವಿದೆ, ಆದರೆ ದೇವರ ಕೃಪೆಯಿಂದ ಅವರು ಚೆನ್ನಾಗಿದ್ದಾರೆ,” ಎಂದು ವಂ.ಸ್ವಾಮಿ ಫ್ರಾಂಕೋ ವಿವರಿಸಿದರು.

ಜಗದ್ಗುರು XIVನೇ ಲಿಯೋರವರು “ಮೊದಲಿಗರಾಗಿ ಮೊಣಕಾಲೂರಿ ಅವರಿಗೆ ಸಹಾಯ ಮಾಡಲು ಧಾವಿಸಿದರು,” ಎಂದು ವಂ. ಸ್ವಾಮಿ ಫ್ರಾಂಕೋರವರು ಹೇಳಿದರು. ಈ ಘಟನೆ ವಂ.ಸ್ವಾಮಿ ಡಿಯಾಗೋರವರಿಗೂ ಆಶ್ಚರ್ಯ ತಂದಿದ್ದು, ಅವರು “ಪವಿತ್ರ ತಂದೆಯವರೇ, ನಿಜವಾಗಿಯೂ ನೀವು ಪವಿತ್ರರೇ?” ಎಂದು ಉದ್ಗರಿಸಿದರು.

ನಂತರ ಜಗದ್ಗುರುಗಳ ಕೈಕುಲುಕಿ ಅವರಿಗೆ ಜಪಮಾಲೆಯನ್ನು ಉಡುಗೊರೆಯಾಗಿ ನೀಡಿದರು. ಘಟನೆಯ ನಂತರ ಯಾಜಕರನ್ನು ಪರೀಕ್ಷೆಗಾಗಿ ವ್ಯಾಟಿಕನ್ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯಲಾಯಿತು. ಪರೀಕ್ಷೆಗಳಲ್ಲಿ ಯಾವುದೇ ಗಂಭೀರ ಸಮಸ್ಯೆ ಕಂಡುಬಂದಿಲ್ಲವೆಂದು ತಿಳಿದುಬಂದಿದೆ.

ನಂತರ ಅವರು ಸಾಮಾನ್ಯ ಸಾರ್ವಜನಿಕ ಭೇಟಿಯ ಬಳಿಕ ಊಟ ಮಾಡಿ, ಪವಿತ್ರ ಬಲಿಪೂಜೆಯನ್ನೂ ಆಚರಿಸಿದರು.

ಸಂತ ಪೇತ್ರರ ಚೌಕದಲ್ಲೇ ಯಾಜಕಾಭಿಷೇಕ

ಜೂನ್ ತಿಂಗಳಲ್ಲಿ 82 ವರ್ಷ ತುಂಬಲಿರುವ ವಂ.ಸ್ವಾಮಿ ಡಿಯಾಗೋರವರಿಗೆ ಸಂತ ಪೇತ್ರರ ಚೌಕದಲ್ಲಿ ಭಾವನಾತ್ಮಕ ಅನುಭವಗಳನ್ನು ನೀಡಿದ ಮೊದಲ ಸಂದರ್ಭ ಅಲ್ಲ. 1970ರಲ್ಲಿ ಅವರು ಅಲ್ಲಿಯೇ ಜಗದ್ಗುರು VIನೇ ಪಾಲ್ ರವರಿಂದ ಯಾಜಕರಾಗಿ ಅಭಿಷೇಕಗೊಂಡಿದ್ದರು.

ಅನೇಕ ವರ್ಷಗಳ ಕಾಲ ಅವರು ಮಾರ್ಟಿನಾ ಫ್ರಾಂಕಾದ ಪವಿತ್ರ ಕುಟುಂಬದ ಧರ್ಮ ಕೇಂದ್ರದಲ್ಲಿ ಸೇವೆ ಸಲ್ಲಿಸಿ ದೀರ್ಘಕಾಲದ ಧರ್ಮಾಧ್ಯಕ್ಷೀಯ ಸೇವೆಯನ್ನು ನೆರವೇರಿಸಿದರು.

28 ಮೇ 2026, 18:08