ಕಾರ್ಡಿನಲ್ ಪಾಲ್ ಎಮಿಲ್ ಟ್ಚೆರಿಗ್ ರವರ ಅಂತ್ಯಕ್ರಿಯೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ಜಗದ್ಗುರು XIVನೇ ಲಿಯೋರವರು ಅಧ್ಯಕ್ಷತೆ ವಹಿಸುತ್ತಾರೆ. ಕಾರ್ಡಿನಲ್ ಪಾಲ್ ಎಮಿಲ್ ಟ್ಚೆರಿಗ್ ರವರ ಅಂತ್ಯಕ್ರಿಯೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ಜಗದ್ಗುರು XIVನೇ ಲಿಯೋರವರು ಅಧ್ಯಕ್ಷತೆ ವಹಿಸುತ್ತಾರೆ.  (ANSA)

ಅಂತ್ಯಕ್ರಿಯಾ ಬಲಿಪೂಜೆಯಲ್ಲಿ ಕಾರ್ಡಿನಲ್ ಷೆರ್ರಿಗ್ ರವರ ಆಶಾಭರವಸೆಯ ಸಾಕ್ಷಿಯನ್ನು ಜಗದ್ಗುರುಗಳು ಪ್ರಶಂಸಿಸಿದರು.

2026ರ ಮೇ 15ರಂದು ಶುಕ್ರವಾರ, ಸಂತ ಪೇತ್ರರ ಬಸಿಲಿಕಾದಲ್ಲಿ ನಡೆದ ಕಾರ್ಡಿನಲ್ ಪಾಲ್ ಎಮಿಲ್ ಷೆರ್ರಿಗ್ ರವರ ಅಂತ್ಯಕ್ರಿಯಾ ಬಲಿಪೂಜೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಜಗದ್ಗುರುಗಳ ಅಧಿಕಾರ ಸ್ಥಳದ ಕಾರ್ಡಿನಲ್ ರವರು ಸಲ್ಲಿಸಿದ ದಶಕಗಳ ರಾಜತಾಂತ್ರಿಕ ಹಾಗೂ ಧರ್ಮಾಧ್ಯಕ್ಷೀಯ ಸೇವೆಯನ್ನು ಸ್ಮರಿಸಿ, ಅವರ ಕ್ರೈಸ್ತೀಯ ಆಶಾಭರವಸೆಯ ಸಾಕ್ಷಿಯನ್ನು ಶ್ಲಾಘಿಸಿದರು.

ವ್ಯಾಟಿಕನ್ ವರದಿ

2026ರ ಮೇ 15ರಂದು ಸಂತ ಪೇತ್ರರ ಬಸಿಲಿಕಾದ “ಆಲ್ತಾರ್ ಆಫ್ ದ ಚೇರ್” ನಲ್ಲಿ ನಡೆದ ಕಾರ್ಡಿನಲ್ ಪಾಲ್ ಎಮಿಲ್ ಷೆರ್ರಿಗ್ ರವರ ಅಂತ್ಯಕ್ರಿಯಾ ಬಲಿಪೂಜೆಯನ್ನು ಜಗದ್ಗುರು XIVನೇ ಲಿಯೋರವರು ನೆರವೇರಿಸಿದರು. ಮೇ 12ರಂದು 79ನೇ ವಯಸ್ಸಿನಲ್ಲಿ ನಿಧನರಾದ ಸ್ವಿಸ್ ಕಾರ್ಡಿನಲ್ ರವರ ದೀರ್ಘಕಾಲದ ನಿಷ್ಠಾವಂತ ಸೇವೆಗೆ ಕೃತಜ್ಞತೆ ಸಲ್ಲಿಸಿದ ಜಗದ್ಗುರುಗಳು, ಅವರನ್ನು ದೇವರ ಕರುಣೆಗೆ ಒಪ್ಪಿಸಿದರು.

ತಮ್ಮ ಪ್ರಭೋಧನೆಯಲ್ಲಿ ಜಗದ್ಗುರುಗಳು, ಕಾರ್ಡಿನಲ್ ಷೆರ್ರಿಗ್ ರವರು ಈಗ “ಈ ಜೀವನದಲ್ಲಿ ಮಾಡಿದ ಸತ್ಕಾರ್ಯಗಳಿಗೆ ಪ್ರತಿಫಲ ಮತ್ತು ಮಾನವೀಯ ದೌರ್ಬಲ್ಯಗಳಿಂದ ಉಂಟಾದ ತಪ್ಪುಗಳಿಗೆ ಕ್ಷಮೆ ಪಡೆಯಲು” ದೇವರ ಸನ್ನಿಧಿಯಲ್ಲಿ ನಿಂತಿರುವ ಮಹತ್ವದ ಮತ್ತು ಗಂಭೀರ ಕ್ಷಣವನ್ನು ಸ್ಮರಿಸಿದರು. ಜಗದ್ಗುರುಗಳ ಅಧಿಕಾರ ಸ್ಥಳ ಸಲ್ಲಿಸಿದ ಸೇವೆಯನ್ನು ಪ್ರಶಂಸಿಸಿದ ಜಗದ್ಗುರುಗಳು, ಕಾರ್ಡಿನಲ್ ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಅವಧಿಯನ್ನು ವ್ಯಾಟಿಕನ್ ರಾಜತಾಂತ್ರಿಕ ಸೇವೆಯಲ್ಲಿ ಕಳೆದಿದ್ದು, ವಿಶ್ವದ ವಿವಿಧ ದೇಶಗಳಲ್ಲಿ ಜಗದ್ಗುರುಗಳ ಪ್ರತಿನಿಧಿಯಾಗಿ ಹಾಗೂ ರಾಜ್ಯ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರೆಂದು ಹೇಳಿದರು.

ಪ್ರಕಟನೆ ಗ್ರಂಥದ ಪಠಣವನ್ನು ಉಲ್ಲೇಖಿಸಿದ ಜಗದ್ಗುರುಗಳು, ಪ್ರೇಷಿತರ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟ ಹೊಸ ಜೆರೂಸಲೇಮಿನ ದೃಶ್ಯವನ್ನು ನೆನಪಿಸಿಕೊಂಡರು. ಕುರಿಮರಿಯ ಬೆಳಕಿನಿಂದ ಪ್ರಕಾಶಮಾನಗೊಂಡು, ಸಂತರ ಮಹಿಮೆಯಿಂದ ಅಲಂಕರಿಸಲ್ಪಟ್ಟ ಆ ದೇವರ ರಾಜ್ಯವನ್ನು ನಿರ್ಮಿಸಲು ಕಾರ್ಡಿನಲ್ ಷೆರ್ರಿಗ್ ತಮ್ಮ ಸಹನಶೀಲ ಮತ್ತು ನಿಷ್ಠಾವಂತ ಸೇವೆಯ ಮೂಲಕ ಕೊಡುಗೆ ನೀಡಿದರು ಎಂದು ಹೇಳಿದರು.

ಜಗದ್ಗುರು ಲಿಯೋರವರು, ಕಾರ್ಡಿನಲ್ ಷೆರ್ರಿಗ್ ರವರನ್ನು ಒಬ್ಬ ಸಮರ್ಪಿತ ಧರ್ಮಾಧೀಕಾರಿ ಹಾಗೂ ರಾಜತಾಂತ್ರಿಕ ವ್ಯಕ್ತಿಯಾಗಿ ಕೊಂಡಾಡಿದರು. ಜನಾಂಗಗಳ ನಡುವೆ ಸೌಹಾರ್ದತೆಯನ್ನು ಬೆಳೆಸಲು ಮತ್ತು ಸ್ಥಳೀಯ ಧರ್ಮ ಸಭೆಗಳು ಹಾಗೂ ಪ್ರೇಷಿತರ ಪೀಠದ ನಡುವಿನ ಐಕ್ಯತೆಯನ್ನು ಬಲಪಡಿಸಲು ಅವರು “ಸಹನೆ ಮತ್ತು ಆತ್ಮತ್ಯಾಗದೊಂದಿಗೆ” ದುಡಿದರೆಂದು ಹೇಳಿದರು. ಬುರುಂಡಿ, ಟ್ರಿನಿಡಾಡ್ ಮತ್ತು ಟೊಬ್ಯಾಗೋ, ಕೊರಿಯಾ, ಮಂಗೋಲಿಯಾ, ನಾರ್ಡಿಕ್ ರಾಷ್ಟ್ರಗಳು, ಅರ್ಜೆಂಟಿನಾ ಹಾಗೂ ಇಟಲಿ ಮತ್ತು ಸ್ಯಾನ್ ಮರಿನೋ ಸೇರಿ ಅನೇಕ ದೇಶಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.

ಜಗದ್ಗುರು ಫ್ರಾನ್ಸಿಸ್ ರವರು ಬ್ಯೂನಸ್ ಐರಿಸ್ ಮಹಾಧರ್ಮಾಧ್ಯಕ್ಷರಾಗಿದ್ದ ಕಾಲದಿಂದಲೇ ಕಾರ್ಡಿನಲ್ ಷೆರ್ರಿಗ್ ರವರಿಗೆ ಪರಿಚಿತರಾಗಿದ್ದರು ಎಂದು ಜಗದ್ಗುರು ಲಿಯೋರವರು ಸ್ಮರಿಸಿದರು. ಜಗತ್ತಿನಲ್ಲಿ ಶಾಂತಿ ಮತ್ತು ಒಳಿತಿಗಾಗಿ ಹಾತೊರೆಯುವ ಜನರಲ್ಲಿ “ಭರವಸೆಯನ್ನು ಅರಳಿಸುವ” ಕಾರ್ಯದಲ್ಲಿ ರಾಜತಾಂತ್ರಿಕರು ಸಹಕರಿಸಬೇಕೆಂದು ಜಗದ್ಗುರು ಫ್ರಾನ್ಸಿಸ್ ರವರು ನೀಡಿದ್ದ ಕರೆಗೂ ಅವರು ಉಲ್ಲೇಖ ಮಾಡಿದರು. “ನಮ್ಮ ಜಗತ್ತಿಗೆ ವಿಶ್ವಾಸವನ್ನು ಪುನಃ ಕಂಡುಕೊಳ್ಳಲು ಸಹಾಯ ಮಾಡುವ ಸಂದೇಶವಾಹಕರ ಅಗತ್ಯ ಬಹಳವಾಗಿದೆ” ಎಂದು ಜಗದ್ಗುರುಗಳು ಹೇಳಿದರು.

ಕೊನೆಯಲ್ಲಿ, ಲಾಜರನನ್ನು ಜೀವಂತಗೊಳಿಸಿದ ಸುವಾರ್ತೆಯ ಘಟನೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ಕ್ರೈಸ್ತೀಯ ಆಶಾಭಾವನೆಯ ಕೇಂದ್ರವು ಕ್ರಿಸ್ತನ ಪುನರುತ್ಥಾನದಲ್ಲಿದೆ ಎಂದು ವಿವರಿಸಿದರು. ಕಾರ್ಡಿನಲ್ ಷೆರ್ರಿಗ್ ಅವರು ಆಯ್ಕೆ ಮಾಡಿಕೊಂಡಿದ್ದ ಧರ್ಮಾಧ್ಯಕ್ಷೀಯ ಧ್ಯೇಯವಾಕ್ಯವಾದ “"ನನ್ನ ಕ್ರಿಸ್ತ ನನಗೆ ತುಂಬಾ ಇಷ್ಟ"— “ಕ್ರಿಸ್ತನೇ ನನ್ನ ನಿರೀಕ್ಷೆ” ಎಂಬುದನ್ನು ಸ್ಮರಿಸಿದ ಜಗದ್ಗುರುಗಳು, “ಕ್ರಿಸ್ತನು ಅವರ ಜೀವನಪೂರ್ತಿ ಅವರ ನಿರೀಕ್ಷೆಯಾಗಿದ್ದನು. ದೇವರ ಪ್ರೀತಿಯಲ್ಲಿ ನೆಲೆಯೂರಿದ್ದ ಆ ನಿರೀಕ್ಷೆ ಎಂದಿಗೂ ಅವರನ್ನು ನಿರಾಶೆಗೊಳಿಸಲಿಲ್ಲ” ಎಂದು ಹೇಳಿದರು.

15 ಮೇ 2026, 08:45