ಜಗದ್ಗುರು XIVನೇ ಲಿಯೋರವರು ಸುವಾರ್ತಾಬೋಧನೆಗಾಗಿ ಡಿಕ್ಯಾಸ್ಟರಿಯ ಸಮಗ್ರ ಸಭೆಯನ್ನು ಭೇಟಿಯಾದರು. ಜಗದ್ಗುರು XIVನೇ ಲಿಯೋರವರು ಸುವಾರ್ತಾಬೋಧನೆಗಾಗಿ ಡಿಕ್ಯಾಸ್ಟರಿಯ ಸಮಗ್ರ ಸಭೆಯನ್ನು ಭೇಟಿಯಾದರು.  (ANSA)

ಜಗದ್ಗುರು XIVನೇ ಲಿಯೋರವರು: ಆತ್ಮಿಕ ಬಡತನದ ನಡುವೆ ಯುವಜನರಿಗೆ ಸುವಾರ್ತೆ ಸಾರಲು ಕಥೋಲಿಕ ಸಮುದಾಯಗಳು ಮುಂದಾಗಬೇಕು.

ಜಗದ್ಗುರು XIVನೇ ಲಿಯೋರವರು, ಯುವಜನರಲ್ಲಿ ಹೆಚ್ಚುತ್ತಿರುವ ಆತ್ಮಿಕ ಬಡತನದ ಸಂಕಟಕ್ಕೆ ಪ್ರತಿಕ್ರಿಯಿಸುವ ಪ್ರಯತ್ನಗಳಲ್ಲಿ ವಿಶ್ವದಾದ್ಯಂತದ ಕಥೋಲಿಕ ಸಮುದಾಯಗಳಿಗೆ ಸಹಾಯ ಮಾಡುವಂತೆ ಸುವಾರ್ತಾಬೋಧನೆಗಾಗಿ ಡಿಕ್ಯಾಸ್ಟರಿಯನ್ನು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಗುರುವಾರ, ವಿಶ್ವದಲ್ಲಿನ ಸುವಾರ್ತಾ ಪ್ರಸಾರದ ಮೂಲಭೂತ ಪ್ರಶ್ನೆಗಳ ವಿಭಾಗಕ್ಕೆ ಸೇರಿದ ಸುವಾರ್ತಾಬೋಧನೆಗಾಗಿ ಡಿಕ್ಯಾಸ್ಟರಿಯ ಪೂರ್ಣಾಂಗ ಸಭೆಯಲ್ಲಿ ಭಾಗವಹಿಸಿದವರನ್ನು ಭೇಟಿಯಾದರು.

2025ರ “ಭರವಸೆಯ ಮಹಾಜೂಬಿಲಿ” ಸಂದರ್ಭದಲ್ಲಿ 3.3 ಕೋಟಿ ಜನರು ರೋಮಿಗೆ ಭೇಟಿ ನೀಡಿದ್ದನ್ನು ಅವರು ಸ್ಮರಿಸಿದರು ಹಾಗೂ ಅಷ್ಟು ದೊಡ್ಡ ಸಂಖ್ಯೆಯ ಭಕ್ತರನ್ನು ಸ್ವಾಗತಿಸಲು ಸಮನ್ವಯ ಸಾಧಿಸಿದ ಡಿಕಾಸ್ಟರಿಯ ಸೇವೆಗೆ ಕೃತಜ್ಞತೆ ಸಲ್ಲಿಸಿದರು.

ಅದನ್ನು “ಕೃಪೆಯ ಕಾಲ” ಎಂದು ವರ್ಣಿಸಿದ ಜಗದ್ಗುರುಗಳು, ಈ ಮಹಾಜೂಬಿಲಿಯನ್ನು ರೋಮಿನ ನಾಲ್ಕು ಜಗದ್ಗುರುಗಳು ಬಸಿಲಿಕಾಗಳಿಗೆ ನಡೆದ ತೀರ್ಥಯಾತ್ರೆಗಳ ಮೂಲಕವೂ, ಸ್ಥಳೀಯ ಧರ್ಮಸಭೆ ಸಮುದಾಯಗಳಲ್ಲಿಯೂ ಆಚರಿಸಲಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲೇ ಕಥೋಲಿಕರು  ಭರವಸೆಯ ಮೇಲಿನ ನಮ್ಮ ಆಳವಾದ ಹಂಬಲವನ್ನು ಗುರುತಿಸಿದರು ಎಂದರು.

ಸುವಾರ್ತೆಯ ಘೋಷಣೆ ಎಂದರೆ ಕಲ್ಪಿತ ಆದರ್ಶವಲ್ಲ, ಅದು ಪ್ರೀತಿ ಮತ್ತು ಸತ್ಯದ ಕರೆಯ ಮೂಲಕ ಇತರರನ್ನು ಆಕರ್ಷಿಸುವ ಸಾಕ್ಷಿಯಾಗಿದೆ ಎಂದು ಜಗದ್ಗುರು ಲಿಯೋರವರು ಹೇಳಿದರು.

ಸುವಾರ್ತಾ ಪ್ರಸಾರವು ವಿಶ್ವಧರ್ಮಸಭೆಯ ಹಾಗೂ ಸ್ಥಳೀಯ ಸಮುದಾಯಗಳ ಪ್ರತಿಯೊಂದು ಕಾರ್ಯಕ್ಕೂ ಮೂಲ ಪ್ರೇರಣೆಯಾಗಿ ಮುಂದುವರಿಯಬೇಕೆಂದು ಕೇಳುತ್ತದೆ,” ಎಂದು ಅವರು ಹೇಳಿದರು. “ಈ ರೀತಿಯಲ್ಲಿ ಮಾತ್ರ ನಂಬಿಕೆ ತನ್ನ ಸೌಂದರ್ಯದಲ್ಲಿ ಪುನಃಪುನಃ ಅನಾವರಣಗೊಳ್ಳುತ್ತದೆ ಮತ್ತು ತನ್ನ ವಿಶ್ವಾಸಾರ್ಹತೆಯನ್ನು ಅತ್ಯುತ್ತಮವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.

ವಿಶೇಷವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಂಬಿಕೆಯ ಸಂಕಟವು ಧಾರ್ಮಿಕ ನಿರಾಸಕ್ತಿಗೆ ಕಾರಣವಾಗಿದೆ ಎಂದು ಅವರು ಸೂಚಿಸಿದರು.

ಮಾನವಕುಲಕ್ಕೆ ಇರುವ ನಿಜವಾದ ಅಪಾಯವೆಂದರೆ, ಈ ನಿರಾಸಕ್ತಿ ಜೀವನದ ಅರ್ಥದ ಹುಡುಕಾಟದಂತಹ ಅಸ್ತಿತ್ವಾತ್ಮಕ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವುದನ್ನೇ ನಿಲ್ಲಿಸುವಂತಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿಯೂ ಸಹ,” ಎಂದು ಅವರು ಹೇಳಿದರು, “ಕ್ರಿಸ್ತನೊಂದಿಗಿನ ಭೇಟಿಯು ಜನರ ಜೀವನಕ್ಕೆ ಅರ್ಥ ಮತ್ತು ಮೌಲ್ಯದ ಸಂಪೂರ್ಣತೆಯನ್ನು ಮರುಸ್ಥಾಪಿಸಬಲ್ಲದು, ಮತ್ತು ಧರ್ಮ ಸಭೆಯ, ಜೀವಿತೋದ್ಧಾರ ಹೊಂದಿದ ಪ್ರಭುವಿನಿಂದ ಪಡೆದ ತನ್ನ ಕರೆಯ ಶಾಶ್ವತ ಪ್ರಸ್ತುತತೆಯನ್ನು ಮರುಅನ್ವೇಷಿಸುತ್ತದೆ.

ಮಾನವಕುಲವು ವಿಶ್ವಾಸಾರ್ಹ ಅಡಿಪಾಯಗಳ ಮೇಲೆ ತನ್ನ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡುವುದೇ ಧರ್ಮ ಸಭೆಯ ಧ್ಯೇಯವೆಂದು ಜಗದ್ಗುರುಗಳು ಹೇಳಿದರು, ಹಾಗಾದರೆ ನಮ್ಮ ಭವಿಷ್ಯವು “ಶಾಂತಿ, ನ್ಯಾಯ, ಸ್ವಾತಂತ್ರ್ಯ ಮತ್ತು ಸಹೋದರತ್ವ”ದಿಂದ ತುಂಬಿರುತ್ತದೆ ಎಂದರು.

ಅನೇಕ ಯುವಜನರು ತಮ್ಮ ಆತ್ಮಿಕ ಹಸಿವಿನ ಬಗ್ಗೆ ಎಚ್ಚರಗೊಳ್ಳುತ್ತಿದ್ದಾರೆ ಎಂದು ಅವರು ಗಮನಿಸಿ, ಸುವಾರ್ತೆಯನ್ನು ಸಾರಲು ಹೊಸ ಮಾರ್ಗಗಳನ್ನು ಹುಡುಕುವುದರ ಮೂಲಕ ಧರ್ಮ ಸಭೆಯು ಆ ಹಂಬಲಕ್ಕೆ ಪ್ರತಿಕ್ರಿಯಿಸಬೇಕೆಂದು ಕರೆ ನೀಡಿದರು.

ಹೊಸ ಪೀಳಿಗೆ ಸುವಾರ್ತೆಗೆ ಮುಚ್ಚಿಕೊಂಡಿಲ್ಲ, ಎಂದು ಅವರು ಹೇಳಿದರು. “ವಿರುದ್ಧವಾಗಿ, ಅನೇಕರು ಅದನ್ನು ಮರುಅನ್ವೇಷಿಸಿದಾಗ ಅದನ್ನು ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಾರೆ, ಏಕೆಂದರೆ ಅದರೊಳಗೆ ನಿಜವಾದ ಸಂತೋಷದ ರಹಸ್ಯ ಅಡಗಿದೆ ಎಂಬುದನ್ನು ಅವರು ಅನುಭವಿಸುತ್ತಾರೆ.

ಸುವಾರ್ತಾ ಪ್ರಸಾರದ ವಿಧಾನಗಳು ನಿರಂತರವಾಗಿ ಬದಲಾಗುತ್ತಿರುವುದರಿಂದ, ಕಥೋಲಿಕ ಸಮುದಾಯಗಳು ಪವಿತ್ರಾತ್ಮನ ಧ್ವನಿಯನ್ನು ಆಲಿಸಬೇಕು, ಹೀಗೆ ಆತನು ಅನೇಕ ಜನರನ್ನು ಕ್ರಿಸ್ತನ ಬಳಿಗೂ, ಅವರ ರಕ್ಷಕ ಪ್ರೀತಿ ಮತ್ತು ವಾಕ್ಯದ ಬಳಿಗೂ ನಡೆಸಲಿ ಎಂದು ಜಗದ್ಗುರುಗಳು ಹೇಳಿದರು.

ಜಗತ್ತಿನ ಕೆಲವು ಭಾಗಗಳಲ್ಲಿ ನಂಬಿಕೆಯ ಹಸ್ತಾಂತರವೇ ಅಸ್ತವ್ಯಸ್ತಗೊಂಡಿದೆ ಎಂದು ಜಗದ್ಗುರು ಲಿಯೋರವರು ಹೇಳಿದರು. ಇದರಿಂದ ಆತ್ಮಿಕ “ಬಡತನ” ಉಂಟಾಗಿದೆ. ಅದನ್ನು ಅವರು ನಂಬಿಕೆಯ ಸಂಪೂರ್ಣ ಸ್ವಾತಂತ್ರ್ಯದಲ್ಲಿ ಪರಿಪಕ್ವಗೊಳ್ಳಲು ಅಗತ್ಯವಾದ ಪ್ರೇರಣೆ ಮತ್ತು ಸಾಧನಗಳ ಕೊರತೆಯೆಂದು ವಿವರಿಸಿದರು.

ಅತಿಯಾದ ಮಾಧ್ಯಮ ಪ್ರಭಾವ ಮತ್ತು ಉಪಭೋಗತಾವಾದದಿಂದ ಕೂಡಿದ ಸಮಾಜಗಳು ಜನರನ್ನು ಸಹನೆಯಿಂದ ಕಲಿಯಲು ಅಥವಾ ಸತ್ಯದ ವೈಯಕ್ತಿಕ ಹುಡುಕಾಟದಲ್ಲಿ ತೊಡಗಿಕೊಳ್ಳಲು ಕಡಿಮೆ ಸಿದ್ಧರನ್ನಾಗಿಸುತ್ತವೆ ಎಂದರು.

ಇಂತಹ ಸಂದರ್ಭಗಳಲ್ಲಿ ನಂಬಿಕೆಯ ಹಸ್ತಾಂತರವು ಸಂತೋಷದಿಂದ ಬದುಕುವ ಹಾಗೂ ಸುವಾರ್ತೆಯನ್ನು ನಿಷ್ಠೆಯಿಂದ ಮತ್ತು ವಿಶ್ವಾಸಾರ್ಹವಾಗಿ ಅನುಸರಿಸುವ ಸಮುದಾಯಗಳು ಮತ್ತು ವ್ಯಕ್ತಿಗಳೊಂದಿಗಿನ ಭೇಟಿಯ ಮೇಲೆ ಅವಲಂಬಿತವಾಗಿದೆ ಎಂದು ಜಗದ್ಗುರುಗಳು ಹೇಳಿದರು.

ಆದುದರಿಂದ, ಜೀವನದ ಪವಿತ್ರತೆಯೇ ಕ್ರೈಸ್ತ ನಂಬಿಕೆಯ ಸೌಂದರ್ಯದ ಅತ್ಯಂತ ಮನವರಿಕೆಯ ರೂಪವಾಗಿ ಉಳಿಯುತ್ತದೆ ಅದು ಕಾಲವನ್ನು ಮೀರಿ ಪ್ರತಿಯೊಂದು ಸಂಸ್ಕೃತಿಗೂ ಪ್ರಸ್ತಾಪವಾಗುತ್ತದೆ, ಎಂದು ಅವರು ಹೇಳಿದರು.

ಕೊನೆಯಲ್ಲಿ, ವಯಸ್ಕರಾಗಿ ದೀಕ್ಷಾಸ್ನಾನವನ್ನು ಕೋರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ಧರ್ಮೋಪದೇಶದ ಸೇವೆಯಲ್ಲಿ ಸಹಾಯ ಮಾಡುವ ತನ್ನ ಧ್ಯೇಯವನ್ನು ಸ್ವೀಕರಿಸುವಂತೆ ಜಗದ್ಗುರು XIVನೇ ಲಿಯೋರವರು ಡಿಕಾಸ್ಟರಿ ಫಾರ್ ಎವಾಂಜೆಲೈಸೇಶನ್‌ಗೆ ಉತ್ತೇಜನ ನೀಡಿದರು.

ಹೊಸ ಕಥೋಲಿಕರು ತಮ್ಮ ನಂಬಿಕೆಯ ಮೊದಲ ಹೆಜ್ಜೆಗಳನ್ನು ಇಡುವಾಗ, ಕಥೋಲಿಕ ಸಮುದಾಯಗಳು ಅವರಿಗೆ ಬೆಳವಣಿಗೆಗಾಗಿ ಹಾಗೂ ಪ್ರೀತಿ ಮತ್ತು ಪರಸ್ಪರ ಸೇವೆಯಲ್ಲಿ ಬದುಕುವ ಮಾನವ ಸಂಬಂಧಗಳಿಗಾಗಿ ಸೂಕ್ತವಾದ ವಾತಾವರಣವನ್ನು ಒದಗಿಸಬೇಕು ಎಂದು ಅವರು ಸಮಾಪಿಸಿದರು.

28 ಮೇ 2026, 17:57