ಲೆಬನಾನ್‌ನ ಬೈರುತ್‌ನಲ್ಲಿರುವ ಧರ್ಮ ಸಭೆಯ ಹೊರಗೆ ಮಕ್ಕಳು ಪ್ರಾರ್ಥಿಸುತ್ತಾರೆ. ಲೆಬನಾನ್‌ನ ಬೈರುತ್‌ನಲ್ಲಿರುವ ಧರ್ಮ ಸಭೆಯ ಹೊರಗೆ ಮಕ್ಕಳು ಪ್ರಾರ್ಥಿಸುತ್ತಾರೆ. 

ಜಗದ್ಗುರು XIVನೇ ಲಿಯೋರವರು ಚೀನಾ ಮತ್ತು ಮಧ್ಯಪ್ರಾಚ್ಯದ ಕ್ರೈಸ್ತರಿಗಾಗಿ ಪ್ರಾರ್ಥಿಸಿದರು.

ರೆಜಿನಾ ಚೇಲಿ ಪ್ರಾರ್ಥನೆಯ ನಂತರ, ಜಗದ್ಗುರು ಲಿಯೋರವರು ಚೀನಾದ ಕ್ರೈಸ್ತರನ್ನು ಕನ್ಯಾ ಮರಿಯಮ್ಮನ ರಕ್ಷಣೆಗೆ ಸಮರ್ಪಿಸಿ, ಅವರು “ಭರವಸೆ ಮತ್ತು ಶಾಂತಿಯ ಸಾಕ್ಷಿಗಳಾಗಿರಲಿ” ಎಂದು ಪ್ರಾರ್ಥಿಸಿದರು. ಇದೇ ವೇಳೆ, ಪವಿತ್ರ ಭೂಮಿಯಲ್ಲಿ ನಡೆಯುತ್ತಿರುವ ಸಂಘರ್ಷದಿಂದ ದುಃಖ ಅನುಭವಿಸುತ್ತಿರುವ ಜನರತ್ತವೂ ಜಗದ್ಗುರುಗಳ ಮನಸ್ಸು ತಿರುಗಿತು.

ವ್ಯಾಟಿಕನ್ ವರದಿ

ಭಾನುವಾರದ ರೆಜಿನಾ ಚೇಲಿ ಪ್ರಾರ್ಥನೆಯ ನಂತರ, ಜಗದ್ಗುರು ಲಿಯೋರವರು ಚೀನಾದ ಧರ್ಮ ಸಭೆಗಾಗಿ ಆಚರಿಸಲ್ಪಡುವ ವಿಶ್ವ ಪ್ರಾರ್ಥನಾ ದಿನವನ್ನು ಸ್ಮರಿಸಿದರು. ಈ ಪ್ರಾರ್ಥನಾ ದಿನವು ಶಾಂಘೈಯ ಶೇಷಾನ್ ಧಾಮದಲ್ಲಿ “ಆಳವಾದ ಭಕ್ತಿಯಿಂದ” ಪೂಜಿಸಲ್ಪಡುವ ಕ್ರೈಸ್ತರ ಸಹಾಯಕಿಯಾದ ಧನ್ಯ ಕನ್ಯಾ ಮರಿಯಮ್ಮನ ಹಬ್ಬದ ದಿನದೊಂದಿಗೆ ಕೂಡಿಬರುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಆದುದರಿಂದ, ಜಗದ್ಗುರು XIVನೇ ಲಿಯೋರವರು ಚೀನಾದ ಕ್ರೈಸ್ತ ಸಮುದಾಯವನ್ನು ಮರಿಯಮ್ಮನವರಿಗೆ ಸಮರ್ಪಿಸಿ, ಅವರು ಸುವಾರ್ತೆಗೆ ಸಾಕ್ಷಿಗಳಾಗಿ ಮುಂದುವರಿಯಲೆಂದು ಪ್ರಾರ್ಥಿಸಿದರು.

“ಚೀನಾದ ಕಥೋಲಿಕರೊಂದಿಗೆ ನಮ್ಮ ಪ್ರಾರ್ಥನೆಗಳನ್ನು ಒಂದಾಗಿಸೋಣ. ಇದು ಅವರ ಮೇಲಿನ ನಮ್ಮ ಪ್ರೀತಿ ಹಾಗೂ ವಿಶ್ವವ್ಯಾಪಿ ಧರ್ಮ ಸಭೆಯ ಮತ್ತು ಪೇತ್ರನ ಉತ್ತರಾಧಿಕಾರಿಯೊಂದಿಗೆ ಅವರ ಏಕತೆಯ ಸಂಕೇತವಾಗಿರಲಿ. ಪರಲೋಕದ ರಾಣಿಯಾದ ಮರಿಯಮ್ಮನ ಮಧ್ಯಸ್ಥಿಕೆಯಿಂದ, ಚೀನಾದ ವಿಶ್ವಾಸಿ ಸಮುದಾಯಕ್ಕೆ ಏಕತೆಯ ಕೃಪೆ ದೊರಕಲಿ ಮತ್ತು ಪ್ರತಿಯೊಬ್ಬರಿಗೂ ತಮ್ಮ ದೈನಂದಿನ ಹೋರಾಟಗಳಲ್ಲಿ ಸುವಾರ್ತೆಗೆ ಸಾಕ್ಷಿಯಾಗುವ ಶಕ್ತಿ ಲಭಿಸಲಿ. ಅವರು ಭರವಸೆ ಮತ್ತು ಶಾಂತಿಯ ಬೀಜಗಳಾಗಿರಲಿ. ವಿಶೇಷವಾಗಿ, ಉತ್ತರ ಚೀನಾದ ಇತ್ತೀಚಿನ ಗಣಿ ದುರಂತದಲ್ಲಿ ಮೃತಪಟ್ಟವರಿಗಾಗಿ ನಾನು ನಿತ್ಯ ಶಾಂತಿಯನ್ನು ಕೋರುತ್ತೇನೆ.”

ನಂತರ, ಜಗದ್ಗುರುಗಳ ಮತ್ತೆ ಕ್ರೈಸ್ತರ ಸಹಾಯಕಿಯಾದ ಮರಿಯಮ್ಮನ ಮಧ್ಯಸ್ಥಿಕೆಯನ್ನು ಬೇಡಿ, “ಯುದ್ಧದ ಕಾರಣದಿಂದ ಸಂಕಷ್ಟ ಅನುಭವಿಸುತ್ತಿರುವ ಪವಿತ್ರ ಭೂಮಿ, ಲೆಬನಾನ್ ಮತ್ತು ಸಂಪೂರ್ಣ ಮಧ್ಯಪ್ರಾಚ್ಯದ ಕ್ರೈಸ್ತ ಸಮುದಾಯಗಳನ್ನು” ಅವರ ರಕ್ಷಣೆಗೆ ಸಮರ್ಪಿಸಿದರು.

24 ಮೇ 2026, 15:15