ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕ್ಯಾಸ್ಟ್ರಿಯ ಹೊಸ ಪ್ರಿಫೆಕ್ಟ್ ಸೀನಿಯರ್ ಅಲೆಸ್ಸಾಂಡ್ರಾ ಸ್ಮೆರಿಲ್ಲಿ. ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕ್ಯಾಸ್ಟ್ರಿಯ ಹೊಸ ಪ್ರಿಫೆಕ್ಟ್ ಸೀನಿಯರ್ ಅಲೆಸ್ಸಾಂಡ್ರಾ ಸ್ಮೆರಿಲ್ಲಿ.  (ANSA)

ಸಿಸ್ಟರ್ ಸ್ಮೆರಿಲ್ಲಿರವರು ಸಮಗ್ರ ಮಾನವ ಅಭಿವೃದ್ಧಿಗಾಗಿ ಇರುವ ಡಿಕಾಸ್ಟರಿಯ ಹೊಸ ಪ್ರಿಫೆಕ್ಟ್ ಆಗಿ ನೇಮಕಗೊಂಡರು.

ಜಗದ್ಗುರು ಲಿಯೋರವರು ಸಮಗ್ರ ಮಾನವ ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿ ಸಿಸ್ಟರ್ ಅಲೆಸ್ಸಾಂದ್ರಾ ಸ್ಮೆರಿಲ್ಲಿ, ಪ್ರೋ-ಪ್ರಿಫೆಕ್ಟ್ ಆಗಿ ಕಾರ್ಡಿನಲ್ ಫಾಬಿಯೊ ಬಾಜ್ಜಿಯೊ, ಹಾಗೂ ಕಾರ್ಯದರ್ಶಿಯಾಗಿ ಮಾನ್ಯ ವಂ. ಸ್ವಾಮಿ ಜೋಝೆಫ್ ಬರ್ಲಾಶ್ (ಮೊನ್ಸಿನ್ಯೋರ್ ಜೋಝೆಫ್ ಬರ್ಲಾಶ್) ರವರನ್ನು ನೇಮಕ ಮಾಡಿದ್ದಾರೆ. ಈ ಮೂರು ನೇಮಕಾತಿಗಳೂ 2026ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿವೆ.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಸಮಗ್ರ ಮಾನವ ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಇರುವ ಡಿಕಾಸ್ಟರಿಗೆ ಹೊಸ ನಾಯಕತ್ವವನ್ನು ನೇಮಿಸಿದ್ದು, ಸಿಸ್ಟರ್ ಅಲೆಸ್ಸಾಂದ್ರಾ ಸ್ಮೆರಿಲ್ಲಿ ರವರನ್ನು ಪ್ರಿಫೆಕ್ಟ್ ಆಗಿ, ಕಾರ್ಡಿನಲ್ ಫಾಬಿಯೊ ಬಾಜ್ಜಿಯೊ ಅವರನ್ನು ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರದ ವಿಶೇಷ ಹೊಣೆಗಾರಿಕೆಯೊಂದಿಗೆ ಪ್ರೋ-ಪ್ರಿಫೆಕ್ಟ್ ಆಗಿ ಹಾಗೂ ಮಾನ್ಯ ಮೊನ್ಸಿನ್ಯೋರ್ ಜೋಝೆಫ್ ಬರ್ಲಾಶ್ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.

ಈ ಮೂರು ನೇಮಕಾತಿಗಳನ್ನು ಮಂಗಳವಾರ ಪವಿತ್ರ ಸೀ  ಪ್ರಕಟಿಸಿದ್ದು, ಅವು 2026ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿವೆ.

ಡಾನ್ ಬೋಸ್ಕೊ ರವರ ಸಲೇಸಿಯನ್ ಸಹೋದರಿಯರ ಸದಸ್ಯೆಯಾಗಿರುವ ಸಿಸ್ಟರ್ ಅಲೆಸ್ಸಾಂದ್ರಾ ಸ್ಮೆರಿಲ್ಲಿ ಅವರು 2021ರಿಂದ ಈ ಡಿಕಾಸ್ಟರಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರು ಪ್ರಿಫೆಕ್ಟ್ ಆಗಿ ಡಿಕಾಸ್ಟರಿಯ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ. ಅವರು 2022ರಿಂದ ಈ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿ ಸೇವೆ ಸಲ್ಲಿಸಿದ್ದ ಕಾರ್ಡಿನಲ್ ಮೈಕೆಲ್ ಚೆರ್ನಿ ರವರ ಉತ್ತರಾಧಿಕಾರಿಯಾಗಲಿದ್ದಾರೆ.

ಅದೇ ರೀತಿ, ಈವರೆಗೆ ಡಿಕಾಸ್ಟರಿಯ ಉಪ-ಕಾರ್ಯದರ್ಶಿಯಾಗಿ  ಸೇವೆ ಸಲ್ಲಿಸಿದ್ದ ಕಾರ್ಡಿನಲ್ ಫಾಬಿಯೊ ಬಾಜ್ಜಿಯೊ ರವರನ್ನು ಜಗದ್ಗುರು XIVನೇ ಲಿಯೋರವರು ಪ್ರೋ-ಪ್ರಿಫೆಕ್ಟ್ ಆಗಿ ನೇಮಕ ಮಾಡಿದ್ದಾರೆ. ತಮ್ಮ ಹೊಸ ಹೊಣೆಗಾರಿಕೆಯಲ್ಲಿ, ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರದ ವಿಶೇಷ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಇದು ಸೃಷ್ಟಿಯ ಸಂರಕ್ಷಣೆಯಿಂದ ಪ್ರೇರಿತವಾದ ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಪವಿತ್ರ ಸೀಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಇದೇ ಸಂದರ್ಭದಲ್ಲಿ, ಜಗದ್ಗುರುಗಳು ಇದುವರೆಗೆ ಡಿಕಾಸ್ಟರಿಯ ಉಪ-ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಾನ್ಯ ಮೊನ್ಸಿನ್ಯೋರ್ ಜೋಝೆಫ್ ಬರ್ಲಾಶ್ ರವರನ್ನು ಅದರ ಹೊಸ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.

ಈ ನೇಮಕಾತಿಗಳೊಂದಿಗೆ ಸಮಗ್ರ ಮಾನವ ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಇರುವ ಡಿಕಾಸ್ಟರಿಗೆ ಹೊಸ ನಾಯಕತ್ವ ತಂಡವು ಪೂರ್ಣಗೊಂಡಿದೆ. ನ್ಯಾಯ ಮತ್ತು ಶಾಂತಿ, ವಲಸೆ, ಆರೋಗ್ಯ ಸೇವೆ, ದಾನಧರ್ಮ, ಸೃಷ್ಟಿಯ ಸಂರಕ್ಷಣೆ ಹಾಗೂ ವಿಶ್ವದಾದ್ಯಂತ ಮಾನವ ಘನತೆಯ ಉತ್ತೇಜನದ ಕ್ಷೇತ್ರಗಳಲ್ಲಿ ಚರ್ಚೆಯ ಸೇವೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಈ ವ್ಯಾಟಿಕನ್ ಡಿಕಾಸ್ಟರಿ ಹೊಂದಿದೆ.

30 ಜೂನ್ 2026, 00:00