2025.07.28 Messa celebrata presso il Santuario di Nostra Signora di Guadalupe

ಮಹಾಧರ್ಮಾಧ್ಯಕ್ಷರಾದ ಗಲ್ಲಾಘರವರು ಗೌದಾಲುಪೆ ಮಾತೆಯ ದೇವಾಲಯದಲ್ಲಿ ದಿವ್ಯಬಲಿಪೂಜೆಯನ್ನು ಅರ್ಪಿಸಿದರು

ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ವ್ಯಾಟಿಕನ್ ಕಾರ್ಯದರ್ಶಿ, ಮಹಾಧರ್ಮಾಧ್ಯಕ್ಷರಾದ ಪಾಲ್ ರಿಚರ್ಡ್ ಗಲ್ಲಾಘರವರು, ಈ ವಾರ ಮೆಕ್ಸಿಕೋಗೆ ಭೇಟಿ ನೀಡಿದಾಗ ಗೌದಾಲುಪೆಯ ಮಾತೆ ಮೇರಿಯ ದೇವಾಲಯದಲ್ಲಿ ದಿವ್ಯಬಲಿಪೂಜೆಯನ್ನು ಅರ್ಪಿಸಿದರು.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ನಾವು ಕೇವಲ ನಮ್ಮ ಮಾತೆ ಮೇರಿಯು ಮೆಚ್ಚಲು ಮಾತ್ರವಲ್ಲ, ದೇವರ ಯೋಜನೆಗೆ ಅವರ ಆಮೂಲಾಗ್ರ ಮುಕ್ತತೆಯನ್ನು ಅನುಕರಿಸಲು ಕರೆಯಲ್ಪಟ್ಟಿದ್ದೇವೆ ಎಂದು ಜುಲೈ 27, 2025 ರಂದು ಮೆಕ್ಸಿಕೋ ನಗರದ ಗೌದಾಲುಪೆಯ ಮಾತೆ ಮೇರಿಯ ದೇವಾಲಯದಲ್ಲಿ ದಿವ್ಯಬಲಿಪೂಜೆಯ ಸಮಯದಲ್ಲಿ, ರಾಜ್ಯಗಳು ಮತ್ತು ಬಹುಪಕ್ಷೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷರಾದ ಗಲ್ಲಾಘರವರು ಹೇಳಿದರು.

ತಮ್ಮ ಪ್ರಬೋಧನೆಯ ಸಮಯದಲ್ಲಿ, "ಸ್ವರ್ಗವು ಭೂಮಿಯನ್ನು ಸ್ಪರ್ಶಿಸಿದ ಮತ್ತು ನಜರೇತಿನ ಕನ್ಯಾ ಮರಿಯಳು ಈ ಭೂಮಿಯಲ್ಲಿ ಗೌದಲುಪೆಯ ಮಾತೆ ಮೇರಿ ಎಂದು ಕರೆಯಲ್ಪಡುವ ಈ ಪವಿತ್ರ ಮತ್ತು ಪ್ರೀತಿಯ ದೇವಾಲಯಕ್ಕೆ ನಾವು ಬರುವುದು ತಮಗೆ ದೊರೆತ ಒಂದು ಸೌಭಾಗ್ಯ" ಎಂದು ಅವರು ಒತ್ತಿ ಹೇಳಿದರು.

ಮಹಾಧರ್ಮಾಧ್ಯಕ್ಷರು ಒಟ್ಟಾಗಿ ದಿವ್ಯಬಲಿಪೂಜೆಯನ್ನು ಅರ್ಪಿಸಲು ಮತ್ತುವಿಶ್ವಗುರು ಹದಿನಾಲ್ಕನೇ ಲಿಯೋರವರ ಪರವಾಗಿ ಅವರ ಪ್ರೇಷಿತ ಆಶೀರ್ವಾದ ಮತ್ತು ಸಾಮೀಪ್ಯವನ್ನು ನೀಡಲು ಸಂತೋಷ ಮತ್ತು ಗೌರವವನ್ನು ವ್ಯಕ್ತಪಡಿಸಿದರು.

ಗೌದಾಲುಪೆಯ ಮಾತೆ ಮೇರಿಯು ಕೇವಲ ಮೆಕ್ಸಿಕೋದ ತಾಯಿಯಲ್ಲ. ಅವರು ಅಮೇರಿಕದ ತಾಯಿ, ಎಲ್ಲರ ತಾಯಿ. ಜಗತ್ತು ವಿಭಜಿಸಲು ಪ್ರಯತ್ನಿಸುವುದನ್ನು ಅವರು ಒಂದುಗೂಡಿಸುತ್ತಾರೆ. ಅವರ ತಿಲ್ಮಾರವರ ಚಿತ್ರಣವನ್ನು ಮಾತ್ರವಲ್ಲದೆ, ಬಳಲುತ್ತಿರುವವರು ಮತ್ತು ಅಂಚಿನಲ್ಲಿರುವವರೊಂದಿಗೆ ಅವರ ಒಗ್ಗಟ್ಟನ್ನು ಹೊಂದಿದೆ. ನಾವು ಮಾತೆ ಮೇರಿಯನ್ನು ಮೆಚ್ಚಿಸಲು ಮಾತ್ರವಲ್ಲ, ದೇವರ ಯೋಜನೆಗೆ ಅವರ ಆಮೂಲಾಗ್ರ ಮುಕ್ತತೆಯನ್ನು ಅನುಕರಿಸಲು ಕರೆಯಲ್ಪಟ್ಟಿದ್ದೇವೆ.

ಸುಮಾರು ಐದು ಶತಮಾನಗಳ ಹಿಂದೆ ಜುವಾನ್ ಡಿಯಾಗೋಗೆ ಕಾಣಿಸಿಕೊಂಡ ದೇವಮಾತೆಯ ರಕ್ಷಣಾತ್ಮಕ ನೋಟದಡಿಯಲ್ಲಿ ಅವರೆಲ್ಲರೂ ಒಟ್ಟುಗೂಡುತ್ತಿದ್ದಾರೆ ಮತ್ತು ಅವರ ಕೋಮಲ ಚಿತ್ರವು ವಿಶ್ವದಾದ್ಯಂತದ ಯಾತ್ರಿಕರನ್ನು ಸೆಳೆಯುತ್ತಿದೆ ಎಂದು ವ್ಯಾಟಿಕನ್ ಅಧಿಕಾರಿ ಎತ್ತಿ ತೋರಿಸಿದರು.
 

28 ಜುಲೈ 2025, 19:36