Papa a S.Maria Galeria in Centro Radio Vaticana Papa a S.Maria Galeria in Centro Radio Vaticana  (ANSA)

ಸಂವಹನಕ್ಕಾಗಿ ಡಿಕ್ಯಾಸ್ಟರಿಯು

ಸಂವಹನಕ್ಕಾಗಿ ಡಿಕ್ಯಾಸ್ಟರಿಯು ಪ್ರೇಷಿತ ಪೀಠಾಧಿಕಾರಿಯ ಸಂಪೂರ್ಣ ಸಂವಹನ ಜಾಲವನ್ನು ಮೇಲ್ವಿಚಾರಣೆ ಮಾಡುತ್ತದೆ, ಇದರಿಂದಾಗಿ ಇಡೀ ವ್ಯವಸ್ಥೆಯು ಡಿಜಿಟಲ್ ಮಾಧ್ಯಮದ ಉಪಸ್ಥಿತಿ, ಅಭಿವೃದ್ಧಿ, ಒಮ್ಮುಖ ಮತ್ತು ಪರಸ್ಪರ ಕ್ರಿಯೆಯ ಅಂಶಗಳಿಂದ ನಿರೂಪಿಸಲ್ಪಟ್ಟ ಸಂದರ್ಭದಲ್ಲಿ ಧರ್ಮಸಭೆಯ ಸುವಾರ್ತಾ ಪ್ರಚಾರದ ಅಗತ್ಯಗಳಿಗೆ ಸಮಗ್ರ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ.

ಅಲೆಸ್ಸಾಂಡ್ರೊ ಡಿ ಬುಸ್ಸೊಲೊ

ಸಂವಹನಕ್ಕಾಗಿ ಡಿಕ್ಯಾಸ್ಟರಿಯನ್ನು ಸೇತುವೆಗಳನ್ನು ನಿರ್ಮಿಸಲು, ಅನೇಕರು ಗೋಡೆಗಳನ್ನು ಎತ್ತಿದಾಗ - ಸಿದ್ಧಾಂತಗಳ ಗೋಡೆಗಳು; ಒಡನಾಟವನ್ನು ಬೆಳೆಸಲು, ಅನೇಕರು ವಿಭಜನೆಯನ್ನು ಪ್ರಚೋದಿಸಿದಾಗ; ನಮ್ಮ ಕಾಲದ ನಾಟಕೀಯ ಕ್ರಿಯೆಗಳಲ್ಲಿ ಭಾಗಿಯಾಗಲು, ಅನೇಕರು ಉದಾಸೀನತೆಯನ್ನು ಬಯಸುತ್ತಾರೆ ಎಂದು ವಿಶ್ವಗುರು ಫ್ರಾನ್ಸಿಸ್ ರವರು, ಅಕ್ಟೋಬರ್ 31, 2024 ರಂದು ಡಿಕ್ಯಾಸ್ಟರಿಯೊಂದಿಗೆ ತಮ್ಮ ಕೊನೆಯ ವಿಚಾರಣೆಯಲ್ಲಿ ಹೇಳಿದರು.

ವಿಶ್ವಗುರು ಹದಿನಾಲ್ಕನೇ ಲಿಯೋರವರು, ತಮ್ಮ ಚುನಾವಣೆಯ ನಂತರ ವ್ಯಾಟಿಕನ್ ಸಂವಹನ ತಂಡದೊಂದಿಗೆ ತಮ್ಮ ಮೊದಲ ಸಭೆಯನ್ನು ನಡೆಸುತ್ತಾ, ಯಾವುದೇ ವೆಚ್ಚದಲ್ಲಿಯೂ ಒಮ್ಮತವನ್ನು ಬಯಸದ, ಆಕ್ರಮಣಕಾರಿ ಪದಗಳಲ್ಲಿ ತನ್ನನ್ನು ತಾನು ಕವಚದೊಳಗಿರಸದ, ಸ್ಪರ್ಧೆಯ ಮಾದರಿಯನ್ನು ಅಳವಡಿಸಿಕೊಳ್ಳದ ಮತ್ತು ಸತ್ಯದ ಹುಡುಕಾಟವನ್ನು ನಾವು ವಿನಮ್ರತೆಯಿಂದ ಹುಡುಕಬೇಕಾದ ಪ್ರೀತಿಯಿಂದ ಎಂದಿಗೂ ಬೇರ್ಪಡಿಸದ ಸಂವಹನವನ್ನು ಮುಂದುವರಿಸಲು ಅವರನ್ನು ಆಹ್ವಾನಿಸುತ್ತಾರೆ.

ನಂತರ, ಸಾಂತಾ ಮಾರಿಯಾ ಡಿ ಗಲೇರಿಯಾದಲ್ಲಿರುವ ವ್ಯಾಟಿಕನ್ ರೇಡಿಯೊದ ಪ್ರಸರಣ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ವಿಶ್ವಗುರು ಹದಿನಾಲ್ಕನೇ ಲಿಯೋರವರು ಲತೀನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ತಮ್ಮ ಧರ್ಮಪ್ರಚಾರಕ ಕಾರ್ಯವನ್ನು ನೆನಪಿಸಿಕೊಂಡರು, ವ್ಯಾಟಿಕನ್ ರೇಡಿಯೊದ ಶಾರ್ಟ್‌ವೇವ್ ಪ್ರಸಾರಗಳು, ಇತರ ಕೇಂದ್ರಗಳು ತಲುಪಲು ಕಷ್ಟಕರವಾದ ಸ್ಥಳಗಳನ್ನು ತಲುಪುತ್ತಿರುವುದು, "ಅಮೂಲ್ಯ" ಎಂದು ವಿವರಿಸಿದರು ಮತ್ತು ಸಂವಹನದ ಧರ್ಮಪ್ರಚಾರಕ ಮೌಲ್ಯವನ್ನು ಪುನರುಚ್ಚರಿಸಿದರು.

ಇವು ಡಿಕಾಸ್ಟ್ರಿಯ ಪ್ರಸ್ತುತ ಕೆಲಸದ ಅಡಿಪಾಯಗಳಾಗಿವೆ, ಈ ಕಾರ್ಯಗಳ ನೇತೃತ್ವವು ಪ್ರಿಫೆಕ್ಟ್ ಪಾವೊಲೊ ರುಫಿನಿರವರು ಮತ್ತು ಕಾರ್ಯದರ್ಶಿ ಶ್ರೇಷ್ಠಗುರು ಲೂಸಿಯೊ ರೂಯಿಜ್ ರವರೊಂದಿಗೆ ನಡೆಯಲಿದೆ.

ಐತಿಹಾಸಿಕ ಟಿಪ್ಪಣಿಗಳು
ಮೂಲತಃ ವಿಶ್ವಗುರು ಫ್ರಾನ್ಸಿಸ್ ರವರು ಜೂನ್ 27, 2015 ರಂದು ಮೋಟು ಪ್ರೊಪ್ರಿಯೊ ಎಲ್'ಅಟ್ಟುಯೇಲ್ ಕಾನ್ಟೆಸ್ಟೋ ಕಮ್ಯುನಿಕಾಟಿವೊದ ಮೂಲಕ ಸಂವಹನ ಸೇವಾಕಾರ್ಯವನ್ನು ಸ್ಥಾಪಿಸಿದರು, ಡಿಕಾಸ್ಟರಿಯನ್ನು ಪ್ರೇಷಿತ ಪೀಠಾಧಿಕಾರಿಯು ಸಂಪೂರ್ಣ ಸಂವಹನ ವ್ಯವಸ್ಥೆಯನ್ನು ಮರುಸಂಘಟಿಸುವ ಜವಾಬ್ದಾರಿಯನ್ನು ವಹಿಸಲಾಯಿತು.

ಸಾಮರ್ಥ್ಯ
ಪ್ರೇಷಿತ ಸಂವಿಧಾನದ ಪ್ರೆಡಿಕೇಟ್ ಇವಾಂಜೆಲಿಯಮ್‌ನಲ್ಲಿ ಹೇಳಿರುವಂತೆ ಸಂವಹನಕ್ಕಾಗಿ ಡಿಕ್ಯಾಸ್ಟರಿಯು, ಪ್ರೇಷಿತ ಪೀಠಾಧಿಕಾರಿಯ ಸಂಪೂರ್ಣ ಸಂವಹನ ವ್ಯವಸ್ಥೆಗೆ ಜವಾಬ್ದಾರಿ ವಹಿಸಿಕೊಂಡಿದೆ ಮತ್ತು ಸಂವಹನ ಕ್ಷೇತ್ರದಲ್ಲಿ ಪ್ರೇಷಿತ ಪೀಠಾಧಿಕಾರಿಯ ಎಲ್ಲಾ ಘಟಕಗಳನ್ನು ಏಕೀಕರಿಸುತ್ತದೆ, ಇದರಿಂದಾಗಿ ಇಡೀ ವ್ಯವಸ್ಥೆಯು ಧರ್ಮಸಭೆಯ ಸುವಾರ್ತಾ ಪ್ರಚಾರದ ಧ್ಯೇಯದ ಅಗತ್ಯಗಳಿಗೆ ಸುಸಂಬದ್ಧವಾಗಿ ಪ್ರತಿಕ್ರಿಯಿಸುತ್ತದೆ.
 

12 ಆಗಸ್ಟ್ 2025, 23:13