ಸ್ಫೋಟದ ಘಟನೆಯ ಐದು ವರ್ಷಗಳ ನಂತರ
ಸಾಲ್ವಟೋರ್ ಸೆರ್ನುಜಿಯೊ
ಆಗಸ್ಟ್ 4, 2020 ರಂದು ಬೈರುತ್ ಬಂದರಿನಲ್ಲಿ ನಡೆದ ಸ್ಫೋಟದ ಐದನೇ ವಾರ್ಷಿಕೋತ್ಸವದ ಪ್ರಾರ್ಥನಾ ಜಾಗರಣೆಯ ಅಂಗವಾಗಿ ಸಾಕ್ಷ್ಯಗಳು, ನೆನಪುಗಳು, ಮೌನ ಮೆರವಣಿಗೆ ಮತ್ತು ಸಂತ್ರಸ್ತರುಗಳ ಹೆಸರನ್ನು ಹೊಂದಿರುವ 75 ಮರಗಳನ್ನು ನೆಡಲಾಯಿತು. ಐದು ವರ್ಷಗಳ ನಂತರ, ಲೆಬನಾನಿನ ಜನರು 245 ಮಂದಿ ಸತ್ತರು ಮತ್ತು 6,000 ಮಂದಿ ಗಾಯಗೊಂಡವರನ್ನು ಮತ್ತೊಮ್ಮೆ ಸ್ಮರಿಸಿದಾಗ ಕಣ್ಣೀರು ಮತ್ತು ಪ್ರಾರ್ಥನೆಗಳು ಜೊತೆಗೂಡಿದವು. ಯುದ್ಧ, ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳು ಹಾಗೂ ಸಾಮಾಜಿಕ ಅಸ್ಥಿರತೆಯ ಜೊತೆಗೆ, ಒಂದು ತೆರೆದ ಗಾಯ, ಸೀಡರ್‌ಗಳ ಭೂಮಿಗೆ ಇದು ಮತ್ತೊಂದು ಪರೀಕ್ಷೆಯಾಗಿದೆ.
ವಿಶ್ವಗುರುಗಳಿಗೆ ಪ್ರಿಯವಾದ ನಾಡಿಗೆ- ಇದನ್ನು "ಸಂದೇಶ" ಎಂದು ಕರೆದ ವಿಶ್ವಗುರು ದ್ವಿತೀಯ ಜಾನ್ ಪೌಲ್ ರವರಿಂದ, ಕೇವಲ ಒಂದು ವರ್ಷದ ಹಿಂದೆ, ಆಗಸ್ಟ್‌ನಲ್ಲಿ, ಬಂದರು ದುರಂತದ ಸಂತ್ರಸ್ತರುಗಳ ಸಂಬಂಧಿಕರ ಗುಂಪನ್ನು ಸ್ವೀಕರಿಸಿದ ಫ್ರಾನ್ಸಿಸ್ ವರೆಗೆ. ಈಗ ವಿಶ್ವಗುರು ಲಿಯೋರವರು, ಕಾರ್ಡಿನಲ್ ಸೆಕ್ರೆಟರಿ ಆಫ್ ಸ್ಟೇಟ್ ಪಿಯೆಟ್ರೊ ಪರೋಲಿನ್ ರವರು ಸಹಿ ಮಾಡಿದ ಸಂದೇಶದ ಮೂಲಕ, ಕ್ರಿಸ್ತನ ಕಣ್ಣೀರು "ಯಾತನೆ ಮತ್ತು ಸಂಕಟದ ಸಂದರ್ಭದಲ್ಲಿ ನಮ್ಮ ಕಣ್ಣೀರಿನೊಂದಿಗೆ ಸೇರಿದೆ" ಎಂದು ಭರವಸೆ ನೀಡುತ್ತಾರೆ.
ಸಾವು ಕೊನೆಯ ಮಾತಲ್ಲ ಮತ್ತು ಎಂದಿಗೂ ಕೊನೆಯ ಮಾತನ್ನು ಹೊಂದಿರುವುದಿಲ್ಲ ಎಂದು ವಿಶ್ವಗುರು ದೃಢೀಕರಿಸುತ್ತಾರೆ, ಲೆಬನಾನಿನ ಜನರಿಗೆ ತಮ್ಮ ಮತ್ತು ಇಡೀ ಧರ್ಮಸಭೆಯ ಪ್ರೀತಿಯನ್ನು ತಿಳಿಸುತ್ತಾರೆ. ವಿಶ್ವಗುರು ಲಿಯೋರವರು ಈ ದುರಂತದಿಂದ ಹೃದಯಗಳು ಗಾಯಗೊಂಡ ಅಥವಾ ಎಲ್ಲವನ್ನೂ ಕಳೆದುಕೊಂಡ ಎಲ್ಲರಿಗೂ ಮತ್ತೊಮ್ಮೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಲು ಬಯಸುತ್ತಾರೆ.
ಪ್ರೀತಿಯ ಮತ್ತು ಬಳಲುತ್ತಿರುವ ಲೆಬನಾನ್ ಅವರ ಪ್ರಾರ್ಥನೆಯ ಕೇಂದ್ರಬಿಂದುವಾಗಿದೆ ಎಂದು ಸಂದೇಶವನ್ನು ಓದುತ್ತದೆ. ಇದನ್ನು ನಿನ್ನೆ ರಾತ್ರಿಯ ಜಾಗರಣೆಯಲ್ಲಿ ಪ್ರೇಷಿತ ರಾಯಭಾರಿಯಾದ ಪಾವೊಲೊ ಬೋರ್ಗಿಯಾರವರ ಓದಿದರು. ಅವರು ವ್ಯಾಟಿಕನ್ ಮಾಧ್ಯಮದೊಂದಿಗೆ ದೇಶದ ದೃಷ್ಟಿಕೋನಗಳು ಮತ್ತು ಭರವಸೆಗಳನ್ನು ಹಂಚಿಕೊಂಡರು.
ಪ್ರಶ್ನೆ: ಗೌರವಾನ್ವಿತರೇ, ಬೈರುತ್ ಬಂದರು ಸ್ಫೋಟದ ಐದನೇ ವಾರ್ಷಿಕೋತ್ಸವದ ನಿಮಿತ್ತ ನಿನ್ನೆ ನಡೆದ ಜಾಗರಣೆ ಬಗ್ಗೆ ನಮಗೆ ತಿಳಿಸಿ
ಇದು ತುಂಬಾ ಹೃದಯಸ್ಪರ್ಶಿಯಾಗಿತ್ತು. ಇದು ಕರಂಟಿನಾದಲ್ಲಿ, ನೊಟ್ರೆ-ಡೇಮ್ ಡಿ ಲಾ ಡೆಲಿವ್ರಾನ್ಸ್ ಧರ್ಮಸಭೆಯ ಮುಂಭಾಗದ ಚೌಕದಲ್ಲಿ ನಡೆಯಿತು, ಇದು ಬಂದರಿನ ಪಕ್ಕದಲ್ಲಿರುವ ಮತ್ತು ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ, ಸ್ಫೋಟದ ನಂತರ ತಕ್ಷಣವೇ ಹೆಚ್ಚಿನ ಸಂಖ್ಯೆಯ ರಕ್ಷಣಾ ಪ್ರಯತ್ನಗಳು ನಡೆದ ಸ್ಥಳವಾಗಿದೆ. ಸಂತ್ರಸ್ತರುಗಳ ಕುಟುಂಬಗಳು ಮತ್ತು ಗಾಯಗೊಂಡವರು ಒಟ್ಟಿಗೆ ಸೇರಿದ ಒಂದು ಕ್ಷಣ ಪ್ರಾರ್ಥನೆ ನಡೆಯಿತು. ಕೆಲವು ಸಾಕ್ಷ್ಯಗಳು ಸಹ ಇದ್ದವು, ನಂತರ ಬಂದರಿಗೆ ಹೋಗುವ ರಸ್ತೆಯುದ್ದಕ್ಕೂ ಇರುವ ಉದ್ಯಾನಕ್ಕೆ ಮೌನ ಮೆರವಣಿಗೆ ನಡೆಯಿತು. ಅಲ್ಲಿ ಇತ್ತೀಚಿನ ದಿನಗಳಲ್ಲಿ ಸಂತ್ರಸ್ತರುಗಳ ಹೆಸರುಗಳನ್ನು ಹೊಂದಿರುವ 75 ಮರಗಳನ್ನು ನೆಡಲಾಯಿತು. ಭವಿಷ್ಯದಲ್ಲಿ ಇನ್ನಷ್ಟು ಗಿಡಗಳನ್ನು ನೆಡಲಾಗುವುದು. ಹೆಚ್ಚುವರಿಯಾಗಿ, ಆಗಸ್ಟ್ 4 ರಂದು ಸ್ಫೋಟಗೊಂಡ ಸಿಲೋವನ್ನು ಈಗ ದೇಶದ ಐತಿಹಾಸಿಕ ಸ್ಮಾರಕವೆಂದು ಪಟ್ಟಿ ಮಾಡಲಾಗಿದೆ ಎಂದು ಸಂಸ್ಕೃತಿ ಸಚಿವರು ಘೋಷಿಸಿದರು.
ಅದು ನಿಜಕ್ಕೂ ಒಂದು ಸೂಕ್ಷ್ಮವಾದ ಕ್ಷಣವಾಗಿತ್ತು, ಏಕೆಂದರೆ ಆ ದುರಂತ ಸ್ಫೋಟದ ಗಾಯಗಳು ಇನ್ನೂ ಆಳವಾಗಿ ಹರಡಿಕೊಂಡಿವೆ. ಬೈರುತ್‌ನ ಆಸ್ಪತ್ರೆಗಳಲ್ಲಿ ಆರು ಸಾವಿರದ ಐನೂರು ಜನರಿಗೆ ಚಿಕಿತ್ಸೆ ನೀಡಲಾಯಿತು. ಅವ್ಯವಸ್ಥೆ, ಬೀದಿಗಳಲ್ಲಿ ಸತ್ತವರು - ಇದೆಲ್ಲವೂ ಲೆಬನಾನಿನ ಜನರ ನೆನಪಿನಲ್ಲಿ ಇನ್ನೂ ಎದ್ದುಕಾಣುತ್ತದೆ.
ವಿಶ್ವಗುರು ಹದಿನಾಲ್ಕನೇ ಲಿಯೋರವರು ಕೂಡ ಈ ವಾರ್ಷಿಕೋತ್ಸವಕ್ಕೆ "ಉಪಸ್ಥಿತರಾಗಿರಬೇಕು" ಎಂದು ಬಯಸಿದ್ದರು...
ಹೌದು, ವಿದೇಶಾಂಗ ಕಾರ್ಯದರ್ಶಿ ಸಹಿ ಮಾಡಿದ ಹೃತ್ಪೂರ್ವಕ ಸಂದೇಶದ ಮೂಲಕ ಪವಿತ್ರ ತಂದೆ ಹಾಜರಿದ್ದರು. ಇದು ಅವರ ನಿಕಟತೆಯನ್ನು ವ್ಯಕ್ತಪಡಿಸುವ ಪ್ರೋತ್ಸಾಹದ ಸಂದೇಶವಾಗಿತ್ತು, ಜೊತೆಗೆ ಈ ವರ್ಷಗಳಲ್ಲಿ ಸಂತ್ರಸ್ತುರುಗಳು ಮತ್ತು ಅವರ ಕುಟುಂಬಗಳಿಗೆ ನಿರ್ದಿಷ್ಟ ಕಾಳಜಿ ಮತ್ತು ಸಾಮೀಪ್ಯವನ್ನು ತೋರಿಸಿರುವ ಪವಿತ್ರ ಪೀಠಾಧಿಕಾರಿಯ ನಿಕಟತೆಯನ್ನು ವ್ಯಕ್ತಪಡಿಸಿತು. ಕಳೆದ ವರ್ಷ ವಿಶ್ವಗುರು ಫ್ರಾನ್ಸಿಸ್ ರವರು ಸಂತ್ರಸ್ತುರುಗಳ ಸಂಬಂಧಿಕರ ನಿಯೋಗವನ್ನು ಸ್ವೀಕರಿಸಿದ್ದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ.
ರೋಮ್‌ನಲ್ಲಿ ಯುವಜನತೆಯ ಜೂಬಿಲಿಯ ಈ ದಿನಗಳಲ್ಲಿ, ವಯಾ ಡೆಲ್ಲಾ ಕಾನ್ಸಿಲಿಯಾಜಿಯೋನ್, ಸಂತ ಪೇತ್ರರ ಚೌಕದಲ್ಲಿ ಮತ್ತು ಟಾರ್ ವರ್ಗಾಟಾದಲ್ಲಿ ಹಲವಾರು ಲೆಬನಾನಿನ ಧ್ವಜಗಳು ಕಂಡುಬಂದಿವೆ. ಈ ಹೊಸ ಪೀಳಿಗೆಗಳು ಲೆಬನಾನ್‌ಗೆ ಏನನ್ನು ಪ್ರತಿನಿಧಿಸುತ್ತವೆ?
ಅವು ಎರಡು ವಿಷಯಗಳನ್ನು ಪ್ರತಿನಿಧಿಸುತ್ತವೆ. ಮೊದಲನೆಯದಾಗಿ, ಲೆಬನಾನ್‌ನಲ್ಲಿ ಬಹಳ ಜೀವಂತವಾಗಿರುವ ಮತ್ತು ಹಲವು ರೂಪಗಳಲ್ಲಿ ವ್ಯಕ್ತವಾಗುವ ವಿಶ್ವಾಸ. ಎರಡನೆಯದಾಗಿ, ವಿಶ್ವಗುರು ಮತ್ತು ಸಾರ್ವತ್ರಿಕ ಧರ್ಮಸಭೆಗೆ ಬಲವಾದ ಬಾಂಧವ್ಯ. ಎಲ್ಲವನ್ನೂ ಲೆಕ್ಕಿಸದೆ, ಮುಕ್ತರಾಗಲು, ಮರುಜನ್ಮ ಪಡೆಯಲು, ವಿಭಿನ್ನ ದೇಶವನ್ನು ನಿರ್ಮಿಸಲು ಬಯಸುವ ಯುವಕರ ಸಂಕೇತವಿದು. ಉತ್ತಮ ಜೀವನ ಪರಿಸ್ಥಿತಿಗಳನ್ನು ಅರಸುತ್ತಾ ಯುರೋಪ್, ಅಮೆರಿಕ, ಕೆನಡಾ ಅಥವಾ ಆಸ್ಟ್ರೇಲಿಯಾಕ್ಕೆ ಹೋಗಲು ಒತ್ತಾಯಿಸಲ್ಪಡುವ ಅನೇಕ ಯುವಕರಿಂದ ಲೆಬನಾನ್ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ ಇಲ್ಲಿಯೇ ಉಳಿದು ಕೆಲಸ ಮಾಡಲು ಬಯಸುವ ಅನೇಕ ಯುವಕರು ಸಹ ಇದ್ದಾರೆ. ದುಃಖಕರವೆಂದರೆ, ಇನ್ನೂ ಕಾಣೆಯಾಗಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಕಂಡುಕೊಳ್ಳುವ ಬಯಕೆಯನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ.