The late Archbishop Noel Treanor The late Archbishop Noel Treanor 

ಯುರೋಪಿನ ಒಕ್ಕೂಟದ ರಾಯಭಾರಿ ದಿವಂಗತ ನೋಯೆಲ್ ಟ್ರೆನರ್ ರವರಿಗೆ ಮಹಾಧರ್ಮಾಧ್ಯಕ್ಷರಾದ ಗಲ್ಲಾಘರ್ ರವರ ಗೌರವ

ಐರ್ಲೆಂಡ್‌ನ ಪವಿತ್ರ ಪೀಠಾಧಿಕಾರಿ ರಾಯಭಾರ ಕಚೇರಿಯಿಂದ ಪ್ರಚಾರ ಮಾಡಲಾದ ಕಾರ್ಯಕ್ರಮದಲ್ಲಿ, ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷರಾದ ಪೌಲ್ ಗಲ್ಲಾಘರ್ ರವರು, ಯುರೋಪಿನ ಒಕ್ಕೂಟದ ಮಾಜಿ ಪ್ರೇಷಿತ ರಾಯಭಾರಿ ದಿವಂಗತ ಮಹಾಧರ್ಮಾಧ್ಯಕ್ಷ ನೋಯೆಲ್ ಟ್ರೆನರ್ ರವರ ಜೀವನ ಮತ್ತು ಪರಂಪರೆಯನ್ನು ಸ್ಮರಿಸುತ್ತಾರೆ.

ವ್ಯಾಟಿಕನ್ ಸುದ್ದಿ

ಯುರೋಪಿನ ಒಕ್ಕೂಟದ ಮಾಜಿ ಪ್ರೇಷಿತ ರಾಯಭಾರಿ ದಿವಂಗತ ಮಹಾಧರ್ಮಾಧ್ಯಕ್ಷ ನೋಯೆಲ್ ಟ್ರೆನರ್ ರವರ ಸ್ಮರಣಾರ್ಥ ಐರ್ಲೆಂಡ್‌ನ ರಾಯಭಾರ ಕಚೇರಿಯು ಪವಿತ್ರ ಪೀಠಾಧಿಕಾರಿಯು ಪ್ರಚಾರ ಮಾಡಿದ ಕಾರ್ಯಕ್ರಮದಲ್ಲಿ, ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ  ಮಹಾಧರ್ಮಾಧ್ಯಕ್ಷರಾದ ಪೌಲ್ ಗಲ್ಲಾಘರ್ ರವರು ಸ್ನೇಹಿತ, ಸಹ ವ್ಯಾಟಿಕನ್ ರಾಜತಾಂತ್ರಿಕರಾಗಿ ಅವರ ಜೀವನ ಮತ್ತು ಪರಂಪರೆಯನ್ನು ಮತ್ತು "ಯುರೋಪಿಯನ್ ಯೋಜನೆ" ಯಲ್ಲಿ ಧಾರ್ಮಿಕ ವಿಶ್ವಾಸದಿಂದ ಪ್ರೇರಿತವಾದ ಮೌಲ್ಯಗಳನ್ನು ಉತ್ತೇಜಿಸುವ ಅವರ ಬದ್ಧತೆಯನ್ನು ನೆನಪಿಸಿಕೊಂಡರು. ಈ ಕಾರ್ಯಕ್ರಮವು ಸೆಪ್ಟೆಂಬರ್ 8ರ ಸೋಮವಾರ ಸಂಜೆ ವಿಶ್ವಗುರುಗಳ ಐರಿಶ್ ಕಾಲೇಜಿನಲ್ಲಿ ನಡೆಯಿತು.

ಮಹಾಧರ್ಮಾಧ್ಯಕ್ಷರಾದ ಟ್ರೆನರ್ ರವರು ಆಗಸ್ಟ್ 11, 2024 ರಂದು ಹಠಾತ್ತನೆ ನಿಧನರಾದರು ಮತ್ತು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಯುರೋಪಿನ ಒಕ್ಕೂಟಕ್ಕೆ ಪ್ರೇಷಿತ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಐರ್ಲೆಂಡ್‌ನ ಡೌನ್ ಮತ್ತು ಕಾನರ್‌ನ ಧರ್ಮಾಧ್ಯಕ್ಷರಾದ ಶ್ರೇಷ್ಠಗುರುವಾಗಿದ್ದರು ಮತ್ತು ಅದಕ್ಕೂ ಮೊದಲು ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಆಯೋಗದ (COMECE) ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾಧರ್ಮಾಧ್ಯಕ್ಷರಾದ ಪೌಲ್ ಗಲ್ಲಾಘರ್ರವರು, ಯುರೋಪಿನ ಒಕ್ಕೂಟಕ್ಕೆ ಪ್ರೇಷಿತ ರಾಯಭಾರಿಯಾಗಿ ತಮ್ಮ ಸೇವೆಯಲ್ಲಿ ಮಹಾಧರ್ಮಾಧ್ಯಕ್ಷರಾದ ಟ್ರೆನರ್ ರವರ ಉತ್ಸಾಹ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು.  "ಯುರೋಪಿನ ಯೋಜನೆಗೆ ಧರ್ಮಸಭೆಯು ವಿಶಿಷ್ಟ ಕೊಡುಗೆಯನ್ನು ನೀಡುತ್ತದೆ ಎಂಬ ದೃಢನಿಶ್ಚಯದಿಂದ ಅವರು ಯುರೋಪಿನ ಒಕ್ಕೂಟಕ್ಕೆ ರಾಯಭಾರಿಯ ಪಾತ್ರವನ್ನು ವಹಿಸಿಕೊಂಡರು. ಈ ಕೊಡುಗೆಗೆ ಜನರು ಮತ್ತು ನಂಬಿಕೆಯ ಧರ್ಮಪಾಲಕರು ಖಂಡದ ಭವಿಷ್ಯಕ್ಕಾಗಿ ಅಂತಹ ಭವ್ಯವಾದ ದೃಷ್ಟಿಕೋನವನ್ನು ತಂದ ಸ್ಥಾಪಕ ಒಳನೋಟಗಳು ಮತ್ತು ತತ್ವಗಳನ್ನು ಸಂರಕ್ಷಿಸಲು ಅವಿಶ್ರಾಂತ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.

ಎಬಿಪಿ ಟ್ರೆನರ್ ರವರು ಯುರೋಪಿನ ಒಕ್ಕೂಟದಲ್ಲಿ ತಮ್ಮ ಕಾರ್ಯಾಚರಣೆಯಲ್ಲಿ ತುಲನಾತ್ಮಕವಾಗಿ ಕಡಿಮೆ ಅವಧಿಗೆ ಮಾತ್ರ ಸೇವೆ ಸಲ್ಲಿಸಿದ್ದರು. ಭವಿಷ್ಯದ ಬಗ್ಗೆ ಅನೇಕ ಯೋಜನೆಗಳು ಮತ್ತು ಆಲೋಚನೆಗಳನ್ನು ತಮ್ಮ ಉತ್ತರಾಧಿಕಾರಿಗಳಿಗೆ ಬಿಟ್ಟುಕೊಡಬೇಕಾಗಿತ್ತು ಎಂದು ಅವರು ನೆನಪಿಸಿಕೊಂಡರು. "ಆದರೆ ಅವರ ನೆನಪು ಮತ್ತು ಮಾದರಿ ಉಳಿದಿದೆ ಮತ್ತು ನಮಗೆ ಹಾಗೂ ಯುರೋಪ್ ನ್ನು ಪಾಲಿಸುವ ಮತ್ತು ಹಂಚಿಕೊಳ್ಳುವ ಎಲ್ಲರಿಗೂ ಪ್ರೋತ್ಸಾಹದ ಮೂಲವಾಗಿದೆ, ಅಲ್ಲಿ ಸುವಾರ್ತೆಯ ಮೌಲ್ಯಗಳು ಸಂಸ್ಥೆಗಳನ್ನು ಅವುಗಳ ಜೂಡೋ-ಕ್ರೈಸ್ತೀಯ ಬೇರುಗಳಿಂದ ಮೇಲಕ್ಕೆ ಪುನರುತ್ಪಾದಿಸಬಹುದು."

2014ರ ನವೆಂಬರ್ 25 ರಂದು ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಯುರೋಪಿನ ಪಾರ್ಲಿಮೆಂಟ್ ನ್ನು ಉದ್ದೇಶಿಸಿ ಮಾತನಾಡಿದ ಮಹಾಧರ್ಮಾಧ್ಯಕ್ಷರಾದ ಪೌಲ್ ಗಲ್ಲಾಘರವರು, ಎಲ್ಲಾ ಯುರೋಪಿನ ನಾಗರಿಕರಿಗೆ ಭರವಸೆ ಮತ್ತು ಪ್ರೋತ್ಸಾಹದ ಮಾತುಗಳನ್ನು ವ್ಯಕ್ತಪಡಿಸಿದಾಗ, ಮಹಾಧರ್ಮಾಧ್ಯಕ್ಷರಾದ ಟ್ರೆನರ್ ರವರ ರಾಜತಾಂತ್ರಿಕ ಮತ್ತು ಧರ್ಮಪಾಲಕರ ಸಂಪರ್ಕದಲ್ಲಿ ಪ್ರತಿಬಿಂಬಿಸಿದ ಭಾವನೆಗಳು ಮತ್ತು ಬದ್ಧತೆಯನ್ನು ಪ್ರತಿಧ್ವನಿಸುವ ಮೂಲಕ ಈ ವಿಷಯದ ಕುರಿತು ವಿಶ್ವಗುರು ಫ್ರಾನ್ಸಿಸ್ ರವರ ಸ್ವಂತ ಮಾತುಗಳನ್ನು ಉಲ್ಲೇಖಿಸಿದರು: "ಇದು ಭರವಸೆಯ ಸಂದೇಶವಾಗಿದೆ, ಯುರೋಪ್ - ಇಡೀ ಪ್ರಪಂಚದೊಂದಿಗೆ - ಪ್ರಸ್ತುತ ಅನುಭವಿಸುತ್ತಿರುವ ಎಲ್ಲಾ ಭಯಗಳನ್ನು ನಿವಾರಿಸಲು ಕೆಲಸ ಮಾಡುವಲ್ಲಿ ನಮ್ಮ ಸಮಸ್ಯೆಗಳು ಏಕತೆಗೆ ಪ್ರಬಲ ಶಕ್ತಿಗಳಾಗಬಹುದು ಎಂಬ ವಿಶ್ವಾಸವನ್ನು ಆಧರಿಸಿದೆ.

ಇದು ಕೆಟ್ಟದ್ದನ್ನು ಒಳ್ಳೆಯದಾಗಿಯೂ ಸಾವನ್ನು ಜೀವನವಾಗಿಯೂ ಪರಿವರ್ತಿಸುವ ದೇವರಲ್ಲಿ ಭರವಸೆಯ ಸಂದೇಶವಾಗಿದೆ. ಯುರೋಪಿನ ಒಕ್ಕೂಟದ ಸಂಸ್ಥಾಪಕರ ದೃಢ ನಂಬಿಕೆಗೆ ಮರಳಲು ಇದು ಪ್ರೋತ್ಸಾಹದ ಸಂದೇಶವಾಗಿದೆ. ಅವರು ವಿಭಜನೆಗಳನ್ನು ನಿವಾರಿಸುವಲ್ಲಿ ಮತ್ತು ಈ ಖಂಡದ ಎಲ್ಲಾ ಜನರ ನಡುವೆ ಶಾಂತಿ ಮತ್ತು ಸಹಭಾಗಿತ್ವವನ್ನು ಬೆಳೆಸುವಲ್ಲಿ ಒಟ್ಟಾಗಿ ಕೆಲಸ ಮಾಡುವ ಸಾಮರ್ಥ್ಯದ ಆಧಾರದ ಮೇಲೆ ಭವಿಷ್ಯವನ್ನು ಕಲ್ಪಿಸಿಕೊಂಡರು.

08 ಸೆಪ್ಟೆಂಬರ್ 2025, 21:54