ಡಿಜಿಟಲ್ ರೇರಮ್ ನೊವರಮ್: ನ್ಯಾಯ ಮತ್ತು ಶಾಂತಿಯ ಸೇವೆಯ ಕಾರ್ಯದಲ್ಲಿ AI
ವ್ಯಾಟಿಕನ್ ಸುದ್ದಿ
"ಡಿಜಿಟಲ್ ರೆರಮ್ ನೊವರಮ್: ಶಾಂತಿ, ಸಾಮಾಜಿಕ ನ್ಯಾಯ ಮತ್ತು ಸಮಗ್ರ ಮಾನವ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ" ಎಂಬ ವಿಷಯದ ಅಡಿಯಲ್ಲಿ, ಪಾಂಟಿಫಿಕಲ್ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸಸ್ ಅಕ್ಟೋಬರ್ 16–17 ರಂದು ವ್ಯಾಟಿಕನ್‌ನ ಕ್ಯಾಸಿನಾ IV ನೇ ಪಿಯೋನದಲ್ಲಿ ನಡೆದ ಸಮ್ಮೇಳನದಲ್ಲಿ ವಿವಿಧ ವಿಭಾಗಗಳಿಂದ 50 ಜಾಗತಿಕ ತಜ್ಞರನ್ನು ಒಟ್ಟುಗೂಡಿಸಿತು. ನಮ್ಮ ಯುಗದ ಅತ್ಯಂತ ಪರಿವರ್ತನಾತ್ಮಕ ತಂತ್ರಜ್ಞಾನಗಳಲ್ಲಿ ಒಂದಾದ ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ, ನೈತಿಕ ಮತ್ತು ಮಾನವ ಕೇಂದ್ರಿತ ಬಳಕೆಯನ್ನು ಉತ್ತೇಜಿಸಲು ಸಹಾಯ ಮಾಡುವ ಸಂವಾದವನ್ನು ಬೆಳೆಸುವುದು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ಇದರ ಗುರಿಯಾಗಿತ್ತು.
ಈ ಕಾರ್ಯಕ್ರಮದ ಸಂದರ್ಭದಲ್ಲಿ, ಭಾಗವಹಿಸುವವರು ಲತೀನ್ ಅಮೇರಿಕದ AI ನೆಟ್‌ವರ್ಕ್ ಫಾರ್ ಇಂಟಿಗ್ರಲ್ ಹ್ಯೂಮನ್ ಡೆವಲಪ್‌ಮೆಂಟನ್ನು ಪ್ರಾರಂಭಿಸಿದರು, ಇದು "ದಲಿತರ ಕೂಗು" ಮತ್ತು ಸಮಗ್ರ ಪರಿಸರ ವಿಜ್ಞಾನದ ತತ್ವಗಳಿಂದ ಪ್ರೇರಿತವಾದ ಸಮಗ್ರ ಮತ್ತು ಸುಸ್ಥಿರ ಉತ್ಪಾದಕ ನೀತಿಗಳ ಪ್ರಗತಿಗೆ ಗಮನ ನೀಡುವ ಮೂಲಕ AI ಬಳಕೆಯನ್ನು ಸಂಯೋಜಿಸಲು ಪ್ರಯತ್ನಿಸುತ್ತಿದೆ.
ಈ ವಿಚಾರದ ಸಂಕಿರಣವು ಶೈಕ್ಷಣಿಕ ಮತ್ತು ಪ್ರಾಯೋಗಿಕ ದೃಷ್ಟಿಕೋನಗಳನ್ನು ಸಂಯೋಜಿಸಿ, ಸೈದ್ಧಾಂತಿಕ ಸಂಶೋಧನೆ ಮತ್ತು ದೃಢವಾದ ಪ್ರಕರಣ ಅಧ್ಯಯನಗಳ ವಿಶ್ಲೇಷಣೆಯನ್ನು ಒಟ್ಟುಗೂಡಿಸಿತು.
ಈ ಸಮ್ಮೇಳನದಲ್ಲಿ ಭಾಗವಹಿಸುವವರು AI ಶಸ್ತ್ರಾಸ್ತ್ರ ಸ್ಪರ್ಧೆಯನ್ನು ನಿಲ್ಲಿಸುವ ತುರ್ತುಸ್ಥಿತಿಯನ್ನು ಒತ್ತಿಹೇಳಿದರು, ಪೋಪ್ XIV ನೇ ಲಿಯೋರವರ ನಿಶ್ಯಸ್ತ್ರೀಕರಣದ ಧೈರ್ಯದ ಮನವಿಯನ್ನು ಪ್ರತಿಧ್ವನಿಸಿದರು. ವಿವಿಧ AI ನಿಯಂತ್ರಣ ಉಪಕ್ರಮಗಳನ್ನು ಹಂಚಿಕೆಯ ಜಾಗತಿಕ ಚೌಕಟ್ಟಿನಡಿಯಲ್ಲಿ ಜೋಡಿಸುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು. ಇದು ಬದ್ಧವಾಗಿದ್ದು, ಜಾರಿಗೊಳಿಸುವ ಕಾರ್ಯವಿಧಾನಗಳನ್ನು ಒಳಗೊಂಡಿದೆ ಮತ್ತು ಡಿಜಿಟಲ್ ಯುಗಕ್ಕೆ ಸೂಕ್ತವಾದ ಸಂಸ್ಥೆಗಳಿಂದ ಬೆಂಬಲಿತವಾಗಿದೆ.
ನೊಟ್ರೆ ಡೇಮ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಲಾದ ಈ ವಿಚಾರ ಸಂಕಿರಣವನ್ನು PASSನ ಕುಲಪತಿ ಕಾರ್ಡಿನಲ್ ಪೀಟರ್ ಟರ್ಕ್ಸನ್ ರವರು ಉದ್ಘಾಟಿಸಿದರು, ಅವರು ಈ ಕ್ಷೇತ್ರದಲ್ಲಿ ಸಂಸ್ಥೆಯ ನಡೆಸುತ್ತಿರುವ ಕೆಲಸವನ್ನು ಪರಿಶೀಲಿಸಿದರು ಮತ್ತು PASSನ ಅಧ್ಯಕ್ಷೆ ಸಿಸ್ಟರ್ ಹೆಲೆನ್ ಆಲ್ಫೋರ್ಡ್ ರವರು AI, ಶಾಂತಿ ಮತ್ತು ಅಭಿವೃದ್ಧಿಯ ನಡುವಿನ ಆಂತರಿಕ ಸಂಪರ್ಕವನ್ನು ಒತ್ತಿ ಹೇಳಿದರು. ಸಂಸ್ಕೃತಿ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾದ ಶ್ರೇಷ್ಠಗುರು ಪಾಲ್ ಟಿಘೆರವರು ಕೆಲಸದ ಭವಿಷ್ಯದ ಕುರಿತು ಅಧಿವೇಶನವನ್ನು ನಿರ್ವಹಿಸಿದರು.
PASS ನ ಸದಸ್ಯರಾದ ಗುಸ್ಟಾವೊ ಬೆಲಿಜ್ ಮತ್ತು ಪಾವೊಲೊ ಕರೋಝಾ, ತಾಂತ್ರಿಕ ವಿಧಾನಗಳನ್ನು ಮೀರಿದ ಬಹುಶಿಸ್ತೀಯ ಸಂವಾದದ ಅಗತ್ಯವನ್ನು ಮತ್ತು ಸಮಗ್ರ ಮಾನವ ಅಭಿವೃದ್ಧಿಯ ಸೇವೆಯಲ್ಲಿ AI ಯ ಸಕಾರಾತ್ಮಕ, ಸಹಕಾರಿ ಮತ್ತು ಅಂತರ್ಗತ ಏಕೀಕರಣವನ್ನು ಖಚಿತಪಡಿಸುವ ಪೂರ್ವಭಾವಿ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು.
ಭಾಗವಹಿಸಿದವರಲ್ಲಿ ಡೇವಿಡ್ ಆಟೋರ್ (MIT), ಜರೋನ್ ಲ್ಯಾನಿಯರ್ (ಮೈಕ್ರೋಸಾಫ್ಟ್), ಡೇನಿಯಲ್ ಇನ್ನರಾರಿಟಿ (ಯುರೋಪ್ ವಿಶ್ವವಿದ್ಯಾಲಯ), ನಾಥನ್ ಗಾರ್ಡೆಲ್ಸ್ (ಬರ್ಗ್ರುಯೆನ್ ಸಂಸ್ಥೆ), ಕಾರ್ಮೆ ಆರ್ಟಿಗಾಸ್, ಜಿಮೆನಾ ವಿವೆರೋಸ್ ಮತ್ತು ವನಿನಾ ಮಾರ್ಟಿನೆಜ್ (AI ಕುರಿತು UN ಉನ್ನತ ಮಟ್ಟದ ಆಯೋಗ), ಮೋಲಿ ಕಿಂಡರ್ (ಬ್ರೂಕಿಂಗ್ಸ್ ಸಂಸ್ಥೆ), ಟಾಂಗ್‌ಡಾಂಗ್ ಬಾಯಿ (ಫುಡಾನ್ ವಿಶ್ವವಿದ್ಯಾಲಯ), ಜೆಫ್ರಿ ಸ್ಯಾಚ್ಸ್ (ಕೊಲಂಬಿಯಾ ವಿಶ್ವವಿದ್ಯಾಲಯ), ಲೂಯಿಸ್ ಮೊರೆನೊ ಒಕಾಂಪೊ ಮತ್ತು ನೆಸ್ಟರ್ ಕ್ಯಾಟಿಚಾ (ಸಾವೊ ಪಾಲೊ ವಿಶ್ವವಿದ್ಯಾಲಯ), ಮಾರ್ಕಸ್ ಬ್ರೂನರ್‌ಮಿಯರ್ (ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ), ಡೆಲ್ಫಿನಾ ಬೆಲ್ಲಿ (ದಿ ಫ್ಯೂಚರ್ ಸೊಸೈಟಿ), ರೆಬೆಕಾ ಫಿನ್ಲೇ (AI ಕುರಿತು ಪಾಲುದಾರಿಕೆ), ಪಾಲ್ ನೆಮಿಟ್ಜ್ (ಯುರೋಪ್ ಕಾಲೇಜು), ಗ್ರೆಗೊರಿ ರೀಚ್‌ಬರ್ಗ್ (ಶಾಂತಿ ಸಂಶೋಧನಾ ಸಂಸ್ಥೆ ಓಸ್ಲೋ), ಮಾಟಿಯೊ ಬಾಲೆರೊ (ಬಾರ್ಸಿಲೋನಾ ಸೂಪರ್‌ಕಂಪ್ಯೂಟಿಂಗ್ ಸೆಂಟರ್), ಜೇಮ್ಸ್ ವಿಲಿಯಮ್ಸ್ (ಆಕ್ಸ್‌ಫರ್ಡ್ ಇಂಟರ್ನೆಟ್ ಸಂಸ್ಥೆ), ಮತ್ತು ನಿತೇಶ್ ಚಾವ್ಲಾ (ನೊಟ್ರೆ ಡೇಮ್ ವಿಶ್ವವಿದ್ಯಾಲಯ) ಸೇರಿದಂತೆ ಪ್ರಮುಖ ತಜ್ಞರು ಈ ಸಮ್ಮೇಳನದಲ್ಲಿ ಇದ್ದರು.