ಜೋರ್ಡಾನ್ ನಾಸ್ಟ್ರಾ ಏಟೇಟ್‌ನ 60ನೇ ವಾರ್ಷಿಕೋತ್ಸವವನ್ನು ಅಂತರ್‌ಧರ್ಮೀಯ ವಿಚಾರ ಸಂಕಿರಣದೊಂದಿಗೆ ಆಚರಿತಿಸುತ್ತಿದೆ
ವ್ಯಾಟಿಕನ್ ಸುದ್ದಿ
ಸೋಮವಾರ, ಅಕ್ಟೋಬರ್ 20, 2025ರಂದು, ಕಥೋಲಿಕ ಅಧ್ಯಯನ ಮತ್ತು ಮಾಧ್ಯಮದ ಕೇಂದ್ರ (CCSM), ಮಡಬಾದ ಅಮೇರಿಕದ ವಿಶ್ವವಿದ್ಯಾನಿಲಯ (AUM) ದೊಂದಿಗೆ ಸಹಯೋಗದೊಂದಿಗೆ, 1965ರಲ್ಲಿ ದ್ವಿತೀಯ ವ್ಯಾಟಿಕನ್ ಸಮ್ಮೇಳನ ಹೊರಡಿಸಿದ ನಾಸ್ಟ್ರಾ ಏಟೇಟ್ ದಾಖಲೆಯ ಬಿಡುಗಡೆಯ 60ನೇ ವಾರ್ಷಿಕೋತ್ಸವವನ್ನು ಗುರುತಿಸುವ ವಿಚಾರ ಸಂಕಿರಣವನ್ನು ನಡೆಸಿತು.
ಈ ದಾಖಲೆಯು ಅಂತರಧರ್ಮೀಯ ಸಂವಾದ ಮತ್ತು ಪರಸ್ಪರ ತಿಳುವಳಿಕೆಯ ವರ್ಧನೆಗೆ ವಿಶಾಲವಾದ ದಿಗಂತಗಳನ್ನು ತೆರೆಯಿತು.
ಈ ವಿಚಾರ ಸಂಕಿರಣದ ಸಂದರ್ಭದಲ್ಲಿ, ಜೆರುಸಲೇಮ್‌ನ ಲತೀನ್ ಪಿತಾಮಹ ಮತ್ತು ವ್ಯಾಟಿಕನ್‌ನ ಅಂತರಧರ್ಮೀಯ ಸಂವಾದದ ಡಿಕಾಸ್ಟರಿ ಸದಸ್ಯ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಾಬಲ್ಲಾರವರು ಮತ್ತು ಹ್ಯಾಶೆಮೈಟ್ ರಾಯಲ್ ಕೋರ್ಟ್‌ನ ಇಮಾಮ್, ಹಿಸ್ ಎಮಿನೆನ್ಸ್ ಡಾ. ಅಹ್ಮದ್ ಅಲ್-ಖಲೈಲೆಹ್ ರವರು ಭಾಷಣಗಳನ್ನು ಮಾಡಿದರು.
ಈ ವಿಚಾರ ಸಂಕಿರಣದಲ್ಲಿ ಮದಬಾ ರಾಜ್ಯಪಾಲರಾದ ಹಸನ್ ಅಲ್-ಜಬೌರ್, ಮುಖ್ಯ ನ್ಯಾಯಮೂರ್ತಿ ಇಲಾಖೆ, ಇಫ್ತಾ ಇಲಾಖೆ ಮತ್ತು ಅವ್ಕಾಫ್ ಮತ್ತು ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದ ಹಲವಾರು ಧರ್ಮಾಧ್ಯಕ್ಷರುಗಳು, ಯಾಜಕರುಗಳು, ಸನ್ಯಾಸಿಗಳು ಮತ್ತು ಇಸ್ಲಾಂ ಧರ್ಮದ ಧರ್ಮಗುರುಗಳು, ಗವರ್ನರೇಟ್‌ನಲ್ಲಿರುವ ಧಾರ್ಮಿಕ ವಿಭಾಗಗಳ ಮುಖ್ಯಸ್ಥರು ಮತ್ತು AUM ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಮ್ಮ ಮುಖ್ಯ ಭಾಷಣದಲ್ಲಿ, ಕಾರ್ಡಿನಲ್ ಪಿಜ್ಜಬಲ್ಲಾರವರು ಸಿಂಪೋಸಿಯಂನ್ನು ಆಯೋಜಿಸಿದ್ದಕ್ಕಾಗಿ ಸಿಸಿಎಸ್ಎಂ ಮತ್ತು ಎಯುಎಂಗೆ ಧನ್ಯವಾದ ಅರ್ಪಿಸಿದರು, ಪರಸ್ಪರ ಗೌರವ ಮತ್ತು ದೇವರ ಮೇಲಿನ ವಿಶ್ವಾಸದ ಆಧಾರದ ಮೇಲೆ ಮುಸ್ಲಿಮರು ಮತ್ತು ಕ್ರೈಸ್ತರ ನಡುವಿನ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ತೆರೆಯುವಲ್ಲಿ, ಅದರ ಐತಿಹಾಸಿಕ ಮಹತ್ವವನ್ನು ಒತ್ತಿ ಹೇಳಿದರು.