ITALY-VATICAN-RELIGION-BRITAIN-ROYALS ITALY-VATICAN-RELIGION-BRITAIN-ROYALS  (AFP or licensors)

ಆಂಗ್ಲಿಕನ್ ಐಕ್ಯತೆಯ ಜೊತೆಗಿನ ಭರವಸೆಯ ಸಂಕೇತವಾಗಿ ರಾಜ ಚಾರ್ಲ್ಸ್ ರವರಿಗೆ ರಾಯಲ್ ಕಾನ್ಫ್ರೇಟರ್ ಬಿರುದು

ಬ್ರಿಟಿಷ್ ರಾಜನಿಗೆ "ರಾಯಲ್ ಕಾನ್ಫ್ರೇಟರ್" ಎಂಬ ಬಿರುದನ್ನು ಸೇಂಟ್ ಪಾಲ್ ಔಟ್‌ಸೈಡ್ ದಿ ವಾಲ್ಸ್ ಮಹಾದೇವಾಲಯದಲ್ಲಿ ನೀಡಲಾಗುತ್ತದೆ, "ಅವರೆಲ್ಲಾ ಒಂದಾಗಲಿ" ಎಂಬ ಸುವಾರ್ತೆ ಶಾಸನವನ್ನು ಹೊಂದಿರುವ ಸ್ಥಳದಲ್ಲಿ ಕುಳಿತುಕೊಳ್ಳುತ್ತಾರೆ. ಈ ಆಶಯವನ್ನು ಕಾರ್ಡಿನಲ್ ಹಾರ್ವೆ ಪ್ರತಿಧ್ವನಿಸುತ್ತಾರೆ, ಅವರು ಅಬಾಟ್ ಒಗ್ಲಿಯಾರಿ ಜೊತೆಗೆ, ಎಕ್ಯುಮೆನಿಕಲ್ ಆಚರಣೆಯ ಮೊದಲು ಪವಿತ್ರ ದ್ವಾರಗಳ ಮೂಲಕ ರಾಜಮನೆತನದವರೊಂದಿಗೆ ಹೋಗುತ್ತಾರೆ.

ಲೊರೆನಾ ಲಿಯೊನಾರ್ಡಿ ಮತ್ತು ಎಡೋರ್ಡೊ ಗಿರಿಬಾಲ್ಡಿ

ಉಟ್ ಯುನಮ್ ಸಿಂಟ್ - "ಅವರೆಲ್ಲಾ ಒಂದಾಗಲಿ." ಇಂಗ್ಲೆಂಡ್‌ನ ರಾಜ ಚಾರ್ಲ್ಸ್ III ಅವರಿಗೆ ರಾಯಲ್ ಕಾನ್ಫ್ರೇಟರ್ ಎಂಬ ಬಿರುದನ್ನು ಪ್ರದಾನ ಮಾಡುವ ಸಮಾರಂಭದಲ್ಲಿ, ಸೇಂಟ್ ಪಾಲ್ ಔಟ್‌ಸೈಡ್ ದಿ ವಾಲ್ಸ್‌ನ ಮಹಾದೇವಾಲಯದಲ್ಲಿ, ರಾಣಿ ಕ್ಯಾಮಿಲ್ಲಾರವರೊಂದಿಗೆ ವ್ಯಾಟಿಕನ್‌ಗೆ ರಾಜ್ಯ ಭೇಟಿ ನೀಡಿದಾಗ, ಸೇಂಟ್ ಪಾಲ್ ಔಟ್‌ಸೈಡ್ ದಿ ವಾಲ್ಸ್‌ನ ಮಹಾದೇವಾಲಯದಲ್ಲಿ, ಭವಿಷ್ಯದ ಭರವಸೆಯ ದಿಗಂತದ ವಾತಾವರಣವನ್ನು ನಿರೂಪಿಸಿತು. ವಿಶ್ವಗುರುಗಳ ಮಹಾದೇವಾಲಯದ ಕಾರ್ಡಿನಲ್ ಮಹಾಯಾಜಕರಾದ ಜೇಮ್ಸ್ ಮೈಕೆಲ್ ಹಾರ್ವೆರವರು; ಯಾರ್ಕ್‌ನ ಮಹಾಧರ್ಮಾಧ್ಯಕ್ಷರಾದ ಮತ್ತು ಇಂಗ್ಲೆಂಡ್‌ನ ಪ್ರೈಮೇಟ್ ಸ್ಟೀಫನ್ ಕಾಟ್ರೆಲ್; ಮತ್ತು ಸ್ಕಾಟ್ಲೆಂಡ್ ಧರ್ಮಸಭೆಯ ಸಾಮಾನ್ಯ ಸಭೆಯ ಮಾಡರೇಟರ್ ರೋಸಿ ಫ್ರೂರವರ ಸಮ್ಮುಖದಲ್ಲಿ ಅಬಾಟ್ ಡೊನಾಟೊ ಒಗ್ಲಿಯಾರಿರವರು ಈ ಕ್ರೈಸ್ತ ಧರ್ಮ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಮಹಾದೇವಾಲಯ ಮತ್ತು ಇಂಗ್ಲೆಂಡ್ ನಡುವಿನ ಸಂಬಂಧಗಳು
ಪರಿಚಯಾತ್ಮಕ ವಿಧಿಗಳ ನಂತರ, ಕಾರ್ಡಿನಲ್ ಹಾರ್ವೆ ಭಾಷಣ ಮಾಡಿದರು, ವಿಶ್ವಗುರುಗಳ ಮಹಾದೇವಾಲಯವನ್ನು ಇಂಗ್ಲೆಂಡ್ ಸಾಮ್ರಾಜ್ಯದೊಂದಿಗೆ ಒಂದುಗೂಡಿಸುವ ಬಲವಾದ ಐತಿಹಾಸಿಕ ಸಂಬಂಧಗಳನ್ನು ನೆನಪಿಸಿಕೊಂಡರು. ಈ ಸಂವಾದವು 1966ರಲ್ಲಿ ಆರನೇ ಪೌಲ್ ರವರು ಮತ್ತು ಕ್ಯಾಂಟರ್ಬರಿಯ ಮಹಾಧರ್ಮಾಧ್ಯಕ್ಷರಾದ ಮೈಕೆಲ್ ರಾಮ್ಸೆರವರ ನಡುವಿನ ಸಭೆಯಲ್ಲಿ ನಿರ್ಣಾಯಕ ಹಂತವನ್ನು ತಲುಪಿತು, ಇದು "ಸುಧಾರಣೆಯ ನಂತರ ಮೊದಲ ಬಾರಿಗೆ" ಎರಡು ಏಕತೆಯ ನಡುವೆ ಅಧಿಕೃತ ಸಂವಾದಕ್ಕೆ ಕಾರಣವಾಯಿತು. ಆ ಸಂದರ್ಭದಲ್ಲಿ, ಮಠಾಧೀಶರು ತಮ್ಮ ಧರ್ಮಾದ್ಯಕ್ಷಷರ ಉಂಗುರವನ್ನು ಮಹಾಧರ್ಮಾಧ್ಯಕ್ಷರವರ ಬೆರಳಿಗೆ ಸ್ಮರಣೀಯವಾಗಿ ಹಾಕಿದರು.

"ಅವರೆಲ್ಲಾ ಒಂದಾಗಲಿ"
ರಾಜ ಚಾರ್ಲ್ಸ್ ರವರ ಈ ಸಂದರ್ಭಕ್ಕಾಗಿ ರಚಿಸಲಾದ ಸಿಂಹಾಸನದ ಮೇಲೆ ಕುಳಿತರು, ಅದರಲ್ಲಿ ರಾಜ ಲಾಂಛನ ಮತ್ತು ಶುಭಸಂದೇಶಕಾರ ಸಂತ ಯೋವಾನ್ನರವರ ಸುವಾರ್ತೆಯ ಲತೀನ್ ಶಾಸನವಾದ ಉಟ್ ಉನಮ್ ಸಿಂಟ್ - "ಅವರೆಲ್ಲಾ ಒಂದಾಗಲಿ" ಎಂಬ ಶಾಸನವನ್ನು ಹೊಂದಿದ್ದರು. ಇದು ಮಹಾದೇವಾಲಯದ ಮೇಲ್ಭಾಗದಲ್ಲಿ ಇದೆ ಮತ್ತು ಭವಿಷ್ಯದಲ್ಲಿ ರಾಜನು ಹಾಗೂ ಆತನ ಉತ್ತರಾಧಿಕಾರಿಗಳು ಇದನ್ನು ಬಳಸುತ್ತಾರೆ.

ಮಠಕ್ಕೆ ಭೇಟಿ
ಅಂತಿಮ ಪ್ರಾರ್ಥನೆಗೆ ಮುನ್ನ, ಈ ವರ್ಷ ಸಂಯೋಜಕರ 500ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ, ಜಿಯೋವಾನಿ ಪಿಯರ್ಲುಯಿಗಿ ಡ ಪ್ಯಾಲೆಸ್ಟ್ರೀನಾರವರ "ಎಕ್ಸಲ್ಟೇಟ್ ಡಿಯೋ" ಎಂಬ ಮೋಟೆಟ್ ನ್ನು ಪ್ರದರ್ಶಿಸಲಾಯಿತು. ಆಚರಣೆಯು "ಪ್ರೈಸ್ ಟು ದಿ ಹೋಲಿಯೆಸ್ಟ್ ಇನ್ ದಿ ಹೈಟ್" ಗೀತೆಯೊಂದಿಗೆ ಮುಕ್ತಾಯವಾಯಿತು, ಇದರ ಪಠ್ಯವನ್ನು ಸಂತ ಜಾನ್ ಹೆನ್ರಿ ನ್ಯೂಮನ್ ರವರ ಕವಿತೆ "ದಿ ಡ್ರೀಮ್ ಆಫ್ ಜೆರೊಂಟಿಯಸ್" ನಿಂದ ತೆಗೆದುಕೊಳ್ಳಲಾಗಿದೆ. ನವೆಂಬರ್ 1 ರಂದು ಬ್ರಿಟಿಷ್ ಕಾರ್ಡಿನಲ್ ರವರನ್ನು ಧರ್ಮಸಭೆಯ ಪಂಡಿತರಾಗಿ ಘೋಷಿಸಲಾಗುವುದು. ಕಥೋಲಿಕರಾಗಿದ್ದ ಎಲ್ಗರ್, 1924 ರಿಂದ 1934 ರವರೆಗೆ ರಾಜನ ಸಂಗೀತದ ಮಾಸ್ಟರ್ ಗಿ ಸೇವೆ ಸಲ್ಲಿಸಿದರು. ನಂತರ, ರಾಯಲ್ಸ್ ಮಹಾದೇವಾಲಯಕ್ಕೆ ಜೋಡಿಸಲಾದ ಅಬ್ಬೆಯ ಸ್ಮಾರಕ ಗ್ರಂಥಾಲಯಕ್ಕೆ ಸಂಕ್ಷಿಪ್ತ ಖಾಸಗಿ ಭೇಟಿ ನೀಡಿದರು.
 

23 ಅಕ್ಟೋಬರ್ 2025, 22:14