photo of nuclear arms photo of nuclear arms  (Gerasimov)

ಪವಿತ್ರ ಪೀಠಾಧಿಕಾರಿ: ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮೂಲನೆ ಮಾಡುವುದು ತುರ್ತು ನೈತಿಕ ಕಡ್ಡಾಯ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಪವಿತ್ರ ಪೀಠಾಧಿಕಾರಿಯ ಖಾಯಂ ವೀಕ್ಷಕ ಮಹಾಧರ್ಮಾಧ್ಯಕ್ಷರಾದ ಗೇಬ್ರಿಯಲ್ ಕ್ಯಾಸಿಯಾರವರು, ಪರಮಾಣು ಶಸ್ತ್ರಾಸ್ತ್ರಗಳ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯವು ಕೆಲಸ ಮಾಡುವಂತೆ ಒತ್ತಾಯಿಸುತ್ತಾರೆ.

ಇಸಾಬೆಲ್ಲಾ ಎಚ್. ಡಿ ಕಾರ್ವಾಲ್ಹೋ

ವಿಶ್ವಸಂಸ್ಥೆಗೆ ಪವಿತ್ರ ಪೀಠಾಧಿಕಾರಿಯ ಖಾಯಂ ವೀಕ್ಷಕರಾಗಿರುವ ಮಹಾಧರ್ಮಾಧ್ಯಕ್ಷರಾದ ಗೇಬ್ರಿಯಲ್ ಕ್ಯಾಸಿಯಾರವರು, ಪರಮಾಣು ಶಸ್ತ್ರಾಸ್ತ್ರಗಳ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಅವುಗಳ ನಿರ್ಮೂಲನೆಗೆ ಶ್ರಮಿಸಲು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಮೊದಲ ಸಮಿತಿಯ ಸಂದರ್ಭದಲ್ಲಿ ಅಕ್ಟೋಬರ್ 21, ಮಂಗಳವಾರ ನಡೆದ ವಿಷಯಾಧಾರಿತ ಚರ್ಚೆಯ ಸಂದರ್ಭದಲ್ಲಿ ಓದಿದ ಹೇಳಿಕೆಯಲ್ಲಿ ಅವರು ಈ ಕರೆ ನೀಡಿದರು.

ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯಂತ್ರಿಸುವ, ಮಿತಿಗೊಳಿಸುವ, ಕಡಿಮೆ ಮಾಡುವ ಮತ್ತು ಅಂತಿಮವಾಗಿ ನಿರ್ಮೂಲನೆ ಮಾಡುವ ಪ್ರಯತ್ನಗಳು ಅವಾಸ್ತವಿಕ ನಿರೀಕ್ಷೆಯಲ್ಲ, ಬದಲಿಗೆ ಸಾಧ್ಯತೆ ಮತ್ತು ತುರ್ತು ನೈತಿಕ ಕಡ್ಡಾಯವಾಗಿದೆ ಎಂಬ ತನ್ನ ಅಚಲ ವಿಶ್ವಾಸವನ್ನು ಪವಿತ್ರ ಪೀಠಾಧಿಕಾರಿಯು ದೃಢಪಡಿಸುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರಗಳು ನಿಶ್ಯಸ್ತ್ರೀಕರಣ ಒಪ್ಪಂದಗಳಿಗೆ ಸೇರಬೇಕು
ಎಲ್ಲಾ "ಪರಮಾಣು-ಸಶಸ್ತ್ರ ರಾಷ್ಟ್ರಗಳು" ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ರಹಿತ ಒಪ್ಪಂದದ (NPT) ಕಾಯ್ದೆ ೬ರ ಅಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಪೂರೈಸಲು, ತಮ್ಮ ದಾಸ್ತಾನುಗಳನ್ನು ಕಡಿಮೆ ಮಾಡುವ ಮತ್ತು ಅಂತಿಮವಾಗಿ ತೆಗೆದುಹಾಕುವ ಗುರಿಯೊಂದಿಗೆ ಉತ್ತಮ ನಂಬಿಕೆಯಿಂದ ಮಾತುಕತೆ ನಡೆಸಲು ಮಹಾಧರ್ಮಾಧ್ಯಕ್ಷರಾದ ಗೇಬ್ರಿಯಲ್ ಕ್ಯಾಸಿಯಾರವರು ಒತ್ತಾಯಿಸಿದರು.

ಕೃತಕ ಬುದ್ಧಿಮತ್ತೆಯ ಅಪಾಯಗಳು
ಪವಿತ್ರ ಪೀಠಾಧಿಕಾರಿಯ ಖಾಯಂ ವೀಕ್ಷಕರು ಇಂದು, ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಬೆದರಿಸುವ ವಾಕ್ಚಾತುರ್ಯದಲ್ಲಿ ಆತಂಕಕಾರಿ ಪುನರುಜ್ಜೀವನ ವಿದೆ ಎಂದು ಗಮನಸೆಳೆದರು, ಜೊತೆಗೆ "ಶಸ್ತ್ರಾಸ್ತ್ರಗಳನ್ನು ವಿಸ್ತರಿಸಲು ನವೀಕೃತ ಪ್ರಯತ್ನಗಳು" ಇವೆ, ಇದನ್ನು "ತಡೆಗಟ್ಟುವಿಕೆಯ ದೋಷಪೂರಿತ ತರ್ಕದಿಂದ" ಸಮರ್ಥಿಸಲಾಗುತ್ತದೆ, ಇದು ಭಯವನ್ನು ಉತ್ತೇಜಿಸುತ್ತದೆ ಮತ್ತು ಅಂತರರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಅಸ್ಥಿರಗೊಳಿಸುತ್ತಿದೆ.

ಕೃತಕ ಬುದ್ಧಿಮತ್ತೆ, ಸ್ವಾಯತ್ತ ವ್ಯವಸ್ಥೆಗಳು ಮತ್ತು ಸೈಬರ್ ತಂತ್ರಜ್ಞಾನಗಳನ್ನು ಪರಮಾಣು ಆಜ್ಞೆ, ನಿಯಂತ್ರಣ ಮತ್ತು ನಿಯೋಜನಾ ವ್ಯವಸ್ಥೆಗಳಲ್ಲಿ ಸಂಯೋಜಿಸುವ ಬಗ್ಗೆ ಅವರು ವಿಶೇಷವಾಗಿ ಒತ್ತಿ ಹೇಳಿದರು. ಈ ತಂತ್ರಜ್ಞಾನಗಳು, ನಿರ್ಧಾರ ತೆಗೆದುಕೊಳ್ಳುವ ಅವಧಿಯನ್ನು ಕಡಿಮೆ ಮಾಡುತ್ತವೆ, ಮಾನವ ಮೇಲ್ವಿಚಾರಣೆಯನ್ನು ಕಡಿಮೆ ಮಾಡುತ್ತವೆ ಮತ್ತು ತಪ್ಪು ಲೆಕ್ಕಾಚಾರ ಹಾಗೂ ದೋಷದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.

ಶಸ್ತ್ರಾಸ್ತ್ರಗಳಿಗೆ ಮೀಸಲಾದ ಸಂಪನ್ಮೂಲಗಳು - ನೈತಿಕ ಸೋಲು
ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲಿನ ದಾಳಿಯ 80 ವರ್ಷಗಳ ನಂತರವೂ - ಪರಮಾಣು ಶಸ್ತ್ರಾಸ್ತ್ರಗಳು "ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ದೊಡ್ಡ ಬೆದರಿಕೆಗಳಲ್ಲಿ ಒಂದನ್ನು ಒಡ್ಡುತ್ತಿವೆ ಎಂದು ಮಹಾಧರ್ಮಾಧ್ಯಕ್ಷರಾದ ಗೇಬ್ರಿಯಲ್ ಕ್ಯಾಸಿಯಾರವರು ಎತ್ತಿ ತೋರಿಸಿದರು. ಈ ಘಟನೆಗಳಿಂದ ಉಂಟಾದ ಸಂಕಟ ಮತ್ತು ವಿನಾಶವು ಈ ಶಸ್ತ್ರಾಸ್ತ್ರಗಳ ದುರಂತ ಸಾಮರ್ಥ್ಯದ ಗಂಭೀರ ಮತ್ತು ಶಾಶ್ವತ ಜ್ಞಾಪನೆಯಾಗಿದೆ ಮತ್ತು ಇಂತಹ ದುರಂತಗಳು ಮತ್ತೆ ಸಂಭವಿಸದಂತೆ ತಡೆಯುವ ಹಂಚಿಕೆಯ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಅವರು ಒತ್ತಾಯಿಸಿದರು.

ಶಸ್ತ್ರಾಸ್ತ್ರಗಳಿಗೆ ಮೀಸಲಾಗಿರುವ ಅಗಾಧ ಸಂಪನ್ಮೂಲಗಳು, ಅನೇಕರು ಬಳಲುತ್ತಿರುವಾಗ, ಆಳವಾದ ನೈತಿಕ ಸೋಲನ್ನುಂಟುಮಾಡುತ್ತವೆ ಎಂದು ಅವರು ಹೇಳಿದರು, ನಿಜವಾದ ಭದ್ರತೆಯೆಂದರೆ ಜೀವಗಳನ್ನು ರಕ್ಷಿಸುವುದು, ನ್ಯಾಯವನ್ನು ಉತ್ತೇಜಿಸುವುದು ಮತ್ತು ಶಾಂತಿಯನ್ನು ಬೆಳೆಸುವುದು ಇಂದು ಅಗತ್ಯವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದೇವರು ನೀಡಿರುವ ಅಂತರ್ಗತ ಘನತೆಗೆ ಸಂವಾದ, ಭ್ರಾತೃತ್ವ ಮತ್ತು ಗೌರವವನ್ನು ಆಧರಿಸಿದ ಭದ್ರತೆಯ ಮಾನವ ಕೇಂದ್ರಿತ ದೃಷ್ಟಿಕೋನಕ್ಕೆ ಬದ್ಧರಾಗಿರಲು ಅವರು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು.
 

22 ಅಕ್ಟೋಬರ್ 2025, 22:49