Pope Leo XIV's apostolic exhortation "Dilexi te", at the Vatican Pope Leo XIV's apostolic exhortation "Dilexi te", at the Vatican 

'ಡಿಲೆಕ್ಸಿ ಟೆ' ಕುರಿತು ಕ್ಯುಪಿಚ್: ಬಡವರೊಂದಿಗೆ ಒಗ್ಗಟ್ಟಿನ ಸ್ಥಳವಾಗಿರುವ ದೈವಾರಾಧನಾ ವಿಧಿ

ಚಿಕಾಗೋದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಕ್ಯುಪಿಚ್ ರವರು, ಪೋಪ್ XIVನೇ ಲಿಯೋರವರ ಮೊದಲ ಪ್ರೇಷಿತ ಉಪದೇಶದ ಕುರಿತು ವ್ಯಾಟಿಕನ್ ಸುದ್ದಿಗಾಗಿ ಪ್ರತಿಬಿಂಬಿಸುತ್ತಿದ್ದಾರೆ. ಎರಡನೇ ವ್ಯಾಟಿಕನ್ ಸಮ್ಮೇಳನವನ್ನು ತೆರೆಯುವ ಮೊದಲು ವಿಶ್ವಗುರುವಇಪ್ಪತ್ತಮೂರನೇಯ ಸಂತ ಜಾನ್ ರವರ ಮಾತುಗಳನ್ನು ಅವರು ತಮ್ಮ ಧ್ಯಾನದಲ್ಲಿ ನೆನಪಿಸಿಕೊಳ್ಳುತ್ತಾರೆ: ದೇವಾಲಯವು, ಎಲ್ಲರ ದೇವಾಲಯವಾಗಿರಬೇಕು ಮತ್ತು ವಿಶೇಷವಾಗಿ ಬಡವರ ದೇವಾಲಯವಾಗಿರಬೇಕು.

ಕಾರ್ಡಿನಲ್ ಬ್ಲೇಸ್ ಕ್ಯುಪಿಚ್, ಚಿಕಾಗೋದ ಮಹಾಧರ್ಮಾಧ್ಯಕ್ಷ

ಡಿಲೆಕ್ಸಿ ಟೆ (ಡಿಟಿ) ಓದುವುದರಿಂದ ಪಡೆದ ಅನೇಕ ಒಳನೋಟಗಳಲ್ಲಿ, "ಎರಡನೇ ವ್ಯಾಟಿಕನ್ ಸಮ್ಮೇಳನವು ದೇವರ ರಕ್ಷಣಾ ಯೋಜನೆಯಲ್ಲಿ ಬಡವರ ಬಗ್ಗೆ ಧರ್ಮಸಭೆಯ ತಿಳುವಳಿಕೆಯಲ್ಲಿ ಒಂದು ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ ಮತ್ತು ಈ ಮೈಲಿಗಲ್ಲು ಸಮ್ಮೇಳನದ ಸಂಪೂರ್ಣ ನಿರ್ದೇಶನ ಮತ್ತು ಅದರ ಸುಧಾರಣೆಗಳನ್ನು ರೂಪಿಸಿತು ಎಂಬ ವಿಶ್ವಗುರು ಲಿಯೋರವರ ವೀಕ್ಷಣೆಯಿಂದ ನಾನು ವಿಶೇಷವಾಗಿ ಪ್ರಭಾವಿತನಾದೆ.
ಪೂರ್ವಸಿದ್ಧತಾ ದಾಖಲೆಗಳಲ್ಲಿ ಬಡವರ ವಿಷಯವನ್ನು ಸ್ವಲ್ಪ ಮಟ್ಟಿಗೆ ಮಾತ್ರ ಉಲ್ಲೇಖಿಸಲಾಗಿದ್ದರೂ, ವಿಶ್ವಗುರು ಇಪ್ಪತ್ತಮೂರನೇಯ ಸಂತ ಜಾನ್ ರವರು ಸಮ್ಮೇಳನದ ಉದ್ಘಾಟನೆಗೆ ಒಂದು ತಿಂಗಳ ಮೊದಲು ರೇಡಿಯೋ ಭಾಷಣದಲ್ಲಿ "ಧರ್ಮಸಭೆಯು ತನ್ನನ್ನು ತಾನು ಇರುವಂತೆಯೇ ಮತ್ತು ತಾನು ಬಯಸಿದಂತೆ ಪ್ರಸ್ತುತಪಡಿಸುತ್ತದೆ: ಎಲ್ಲರ ಧರ್ಮಸಭೆಯು ಮತ್ತು ನಿರ್ದಿಷ್ಟವಾಗಿ ಬಡವರ ಧರ್ಮಸಭೆ ಎಂದು ಹೇಳಿದರು ಎಂದು ಅವರು ಗಮನಿಸುತ್ತಾರೆ.

ವಿಶ್ವಗುರು ಲಿಯೋರವರ ಪ್ರಕಾರ, ಈ ಹೇಳಿಕೆಗಳು ದೈವಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಮ್ಮೇಳನಕ್ಕೆ ಹೊಸ ನಿರ್ದೇಶನ ನೀಡಲು ಪ್ರೇರೇಪಿಸಿದವು, ಇದನ್ನು ಬೊಲೊಗ್ನಾದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಲೆರ್ಕಾರೊರವರು ಡಿಸೆಂಬರ್ 6, 1962 ರಂದು ತಮ್ಮ ಹಸ್ತಕ್ಷೇಪದಲ್ಲಿ ಸಂಕ್ಷೇಪಿಸಿದ್ದಾರೆ. ಅವರ ಪ್ರಕಾರ ಧರ್ಮಸಭೆಯಲ್ಲಿ ಕ್ರಿಸ್ತರ ರಹಸ್ಯವು ಇಂದು ಮತ್ತು ಎಂದೆಂದಿಗೂ, ಒಂದು ನಿರ್ದಿಷ್ಟ ರೀತಿಯಲ್ಲಿ, ಬಡವರಲ್ಲಿ ಕ್ರಿಸ್ತರ ರಹಸ್ಯವಾಗಿದೆ.... ಇದು ಇತರ ವಿಷಯಗಳಲ್ಲಿ ಕೇವಲ ಒಂದು ವಿಷಯವಲ್ಲ, ಆದರೆ ಒಂದು ರೀತಿಯ ಅರ್ಥದಲ್ಲಿ ಒಟ್ಟಾರೆಯಾಗಿ ಸಭೆಯ ಏಕೈಕ ವಿಷಯವಾಗಿದೆ.

ನಂತರ ಲೆಕಾರೊರವರು ತಮ್ಮ ಹಸ್ತಕ್ಷೇಪವನ್ನು ಸಿದ್ಧಪಡಿಸುವಾಗ ಸಮ್ಮೇಳನವನ್ನು ವಿಭಿನ್ನವಾಗಿ ನೋಡಿದರು ಎಂದು ಪ್ರತಿಕ್ರಿಯಿಸಿದರು, ಇದು ಬಡವರ, ವಿಶ್ವದಾದ್ಯಂತದ ಲಕ್ಷಾಂತರ ಬಡವರ ಕಾಲವಿದು ಎಂದು ಅವರು ಬರೆದಿದ್ದಾರೆ. ಇದು ಬಡವರ ತಾಯಿಯಾಗಿ ಧರ್ಮಸಭೆಯ ಮಹತ್ವದ ರಹಸ್ಯದ ಸಮಯವಾಗಿದೆ. ಇದು ಕ್ರಿಸ್ತರ ರಹಸ್ಯದ ಸಮಯವಿದು, ವಿಶೇಷವಾಗಿ ಬಡವರಲ್ಲಿ ಪ್ರಸ್ತುತವಾಗಿದೆ.

ಈ ಸಂದರ್ಭದಲ್ಲಿಯೇ 'ಡಿಲೆಕ್ಸಿ ಟೆ'ಯ ಸಮ್ಮೇಳನವು ಧರ್ಮಗುರುಗಳ ದೈವಾರಾಧನಾ ವಿಧಿ ವಿಧಾನದ ಸುಧಾರಣೆಯ ಬಗ್ಗೆ ಹೊಸ ತಿಳುವಳಿಕೆಯನ್ನು ಒದಗಿಸುವ ಒಂದು ವಿಶೇಷವಾಗಿ ಬಹಿರಂಗಪಡಿಸುವ ಅಭಿಪ್ರಾಯವನ್ನು ನೀಡುತ್ತಾರೆ. ಧರ್ಮಸಭೆಯ ಹೊಸ ಚಿತ್ರಣ, ಸರಳ ಮತ್ತು ಹೆಚ್ಚು ಗಂಭೀರವಾದ, ದೇವರ ಜನರನ್ನು ಹಾಗೂ ಇತಿಹಾಸದಲ್ಲಿ ಅದರ ಉಪಸ್ಥಿತಿಯನ್ನು ಅಳವಡಿಸಿಕೊಳ್ಳುವ ಅಗತ್ಯತೆಯ ಪ್ರಜ್ಞೆ ಬೆಳೆಯುತ್ತಿತ್ತು. ಲೌಕಿಕ ಶಕ್ತಿಗಳಿಗಿಂತ ತನ್ನ ದೇವರನ್ನು ಹೆಚ್ಚು ಹೋಲುವ ಮತ್ತು ಜಗತ್ತಿನ ಬಡತನದ ಅಗಾಧ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ಮಾನವೀಯತೆಯ ಕಡೆಯಿಂದ ಒಂದು ನಿರ್ದಿಷ್ಟ ಬದ್ಧತೆಯನ್ನು ಬೆಳೆಸಲು ಕೆಲಸ ಮಾಡುವ ಧರ್ಮಸಭೆಯಿದು.

ದ್ವಿತೀಯ ಸಂತ ವಿಶ್ವಗುರು ಜಾನ್ ಪಾಲ್ ರವರು ತಮ್ಮ ಪ್ರೇಷಿತ ಪತ್ರ 'ಮಾನೆ ನೊಬಿಸ್ಕಮ್ ಡೊಮಿನ್' ನಲ್ಲಿ ಹೇಳಿದಂತೆ, ಪರಮಪ್ರಸಾದವನ್ನು ಮತ್ತೊಮ್ಮೆ "ಎಲ್ಲಾ ಮಾನವೀಯತೆಯೊಂದಿಗೆ ಒಗ್ಗಟ್ಟಿನ ಯೋಜನೆಯಾಗಿ" ಸಬಲೀಕರಣಗೊಳಿಸಲು ಮತ್ತು ಆ ಪರಮಪ್ರಸಾದದಲ್ಲಿ ಭಾಗವಹಿಸುವವರನ್ನು "ಪ್ರತಿಯೊಂದು ಸನ್ನಿವೇಶದಲ್ಲೂ ಒಗ್ಗಟ್ಟು, ಶಾಂತಿ ಮತ್ತು ಒಗ್ಗಟ್ಟಿನ ಪ್ರವರ್ತಕರನ್ನಾಗಿ" ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. "ಭಯೋತ್ಪಾದನೆಯ ಭೀತಿ ಮತ್ತು ಯುದ್ಧದ ದುರಂತದಿಂದ ಬಳಲುತ್ತಿರುವ ನಮ್ಮ ಸಮಸ್ಯಾತ್ಮಕ ಜಗತ್ತಿನಲ್ಲಿ ಕ್ರೈಸ್ತರು ಪರಮಪ್ರಸಾದವನ್ನು ಶಾಂತಿಯ ಒಂದು ದೊಡ್ಡ ಶಾಲೆಯಾಗಿ ಅನುಭವಿಸಲು ಕಲಿಯಬೇಕೆಂದು ಒತ್ತಾಯಿಸುತ್ತದೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದಲ್ಲಿ ವಿವಿಧ ಹಂತಗಳ ಜವಾಬ್ದಾರಿಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ರೂಪಿಸುತ್ತದೆ, ಅವರು ಸಂವಾದ ಮತ್ತು ಐಕ್ಯತೆಯ ಪ್ರವರ್ತಕರಾಗಬಹುದು ಎಂದು ಅವರು ಮುಂದುವರಿಸಿದರು. ಸಂತ ಪೋಪ್, ವಿಶ್ವಗುರು ಲಿಯೋರವರ ಬೋಧನೆಯನ್ನು ಮುನ್ಸೂಚಿಸುವ ರೀತಿಯಲ್ಲಿ ನಮ್ಮ ಪರಸ್ಪರ ಪ್ರೀತಿಯಿಂದ ಮತ್ತು ವಿಶೇಷವಾಗಿ, ನೆರವಿನ ಅಗತ್ಯವಿರುವವರ ಬಗ್ಗೆ ನಮ್ಮ ಕಾಳಜಿಯಿಂದ ನಾವು, ಕ್ರಿಸ್ತರ ನೈಜ ಅನುಯಾಯಿಗಳೆಂದು ಗುರುತಿಸಲ್ಪಡುತ್ತೇವೆ ಎಂದು ತೀರ್ಮಾನಿಸಿದರು. ಇದು ನಮ್ಮ ಪರಮಪ್ರಸಾದ ಅಂದರೆ ದಿವ್ಯಬಲಿಪೂಜೆಯ ಆಚರಣೆಗಳ ಸತ್ಯಾಸತ್ಯತೆಯನ್ನು ನಿರ್ಣಯಿಸುವ ನಿಯಮವು ಇದಾಗಿರುತ್ತದೆ.
 

21 ಅಕ್ಟೋಬರ್ 2025, 22:44