Archbishop Paul Richard Gallagher makes a visit to Sri Lanka for the 50th Anniversary of diplomatic relations with the Holy See Archbishop Paul Richard Gallagher makes a visit to Sri Lanka for the 50th Anniversary of diplomatic relations with the Holy See 

ಶ್ರೀಲಂಕಾದಲ್ಲಿ ಪವಿತ್ರ ಪೀಠಾಧಿಕಾರಿಯ ಜೊತೆಗಿನ ಸಂಬಂಧದ 50 ವರ್ಷಗಳನ್ನು ಆಚರಿಸಲು ಎಬಿಪಿ ಗಲ್ಲಾಘರವರು

ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ನವೆಂಬರ್ 3-8 ರವರೆಗೆ ಶ್ರೀಲಂಕಾದಲ್ಲಿ ಪವಿತ್ರ ಪೀಠಾಧಿಕಾರಿಯ ಮತ್ತು ದೇಶದ ಶಾಂತಿ ಹಾಗೂ ಸಹಕಾರದ ಹಂಚಿಕೆಯ ಬದ್ಧತೆಯನ್ನು ಬಲಪಡಿಸುತ್ತಾರೆ. 2019ರ ಪಾಸ್ಖ ಹಬ್ಬದ ದಿನದ ದಾಳಿಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ವ್ಯಾಟಿಕನ್ ಸುದ್ದಿ

ಈ ವಾರ, ನವೆಂಬರ್ 3-8ರವರೆಗೆ, ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ವ್ಯಾಟಿಕನ್ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷರಾದ ಪೌಲ್ ರಿಚರ್ಡ್ ಗಲ್ಲಾಘರ್ ರವರು ಪವಿತ್ರ ಪೀಠಾಧಿಕಾರಿಯ ಜೊತೆಗಿನ ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವವನ್ನು ಆಚರಿಸಲು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ.

ಈ ಭೇಟಿಯು ಎರಡೂ ರಾಷ್ಟ್ರಗಳ ನಡುವಿನ ಶಾಂತಿ ಮತ್ತು ಸಹಕಾರಕ್ಕೆ ಹಂಚಿಕೆಯ ಬದ್ಧತೆಯನ್ನು ಬಲಪಡಿಸುವ ಪ್ರಯತ್ನವನ್ನು ಸಹ ಸೂಚಿಸುತ್ತದೆ. ದೇಶದಲ್ಲಿ ತಮ್ಮ ಸಮಯದಲ್ಲಿ, ಮಹಾಧರ್ಮಾಧ್ಯಕ್ಷರಾದ ಪೌಲ್ ರಿಚರ್ಡ್ ಗಲ್ಲಾಘರ್ ರವರು 2019ರಲ್ಲಿ ಪಾಸ್ಖ ಹಬ್ಬದ ಭಾನುವಾರದ ಭೀಕರ ದಾಳಿಯಿಂದ ಪ್ರಭಾವಿತವಾದ ಸ್ಥಳಗಳನ್ನು ನೋಡಲು ಸಹ ಪ್ರಯಾಣಿಸಲಿದ್ದಾರೆ.

ಕಾರ್ಯನಿರತ ವಾರ
ಸೋಮವಾರ ದೇಶಕ್ಕೆ ಆಗಮಿಸಿದ ನಂತರ, ಮಹಾಧರ್ಮಾಧ್ಯಕ್ಷರಾದ ಪೌಲ್ ರಿಚರ್ಡ್ ಗಲ್ಲಾಘರ್ ರವರನ್ನು ವಿದೇಶಾಂಗ ವ್ಯವಹಾರಗಳ ಉಪ-ಸಚಿವ ಅರುಣ್ ಹೇಮಚಂದ್ರರವರು ಬರಮಾಡಿಕೊಂಡರು ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯ ವರದಿ ಮಾಡಿದೆ.

ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿಯ ಅಧಿಕೃತ X ಖಾತೆಯಲ್ಲಿ, ಮಹಾಧರ್ಮಾಧ್ಯಕ್ಷರಾದ ಪೌಲ್ ರಿಚರ್ಡ್ ಗಲ್ಲಾಘರ್ರವರ ವೇಳಾಪಟ್ಟಿಯು ಸೋಮವಾರ ಪ್ರಧಾನಿ ಹರಿಣಿ ಅಮರಸೂರ್ಯರವರನ್ನು ಭೇಟಿ ಮಾಡಲಿದ್ದಾರೆ ಎಂದು ತೋರಿಸಿದೆ. ಮರುದಿನ, ನವೆಂಬರ್ 4 ರಂದು, ಕಾರ್ಯಕ್ರಮದಲ್ಲಿ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಮತ್ತು ವಿದೇಶಾಂಗ ಸಚಿವ ವಿಜಿತಾ ಹೆರಾತ್ ರವರೊಂದಿಗಿನ ಸಭೆ ಸೇರಲಿದ್ದಾರೆ.

ಅದೇ ದಿನ, ಕಾರ್ಯದರ್ಶಿಯವರು ಶ್ರೀಲಂಕಾ ಮತ್ತು ಪವಿತ್ರ ಪೀಠಾಧಿಕಾರಿಯ ನಡುವಿನ ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವವನ್ನು ಸ್ಮರಿಸುವ, ಸೆಪ್ಟೆಂಬರ್ 6, 1975 ರಂದು ಸ್ಥಾಪನೆಯಾದ ಪವಿತ್ರ ಪೀಠಾಧಿಕಾರಿಯ ದೃಷ್ಟಿಕೋನ, ಸಂವಾದ ಮತ್ತು ಶಾಂತಿಗೆ ಬದ್ಧತೆಯ ಕುರಿತಾದ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಮಹಾಧರ್ಮಾಧ್ಯಕ್ಷರಾದ ಪೌಲ್ ರಿಚರ್ಡ್ ಗಲ್ಲಾಘರ್ರವರ ಭೇಟಿಯು 250ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ 2019 ರ ಈಸ್ಟರ್ ಭಾನುವಾರದ ದಾಳಿಯ ಸ್ಥಳಗಳಿಗೆ ನಿಗದಿತ ಭೇಟಿಯೊಂದಿಗೆ ಮುಂದುವರಿಯಲಿದೆ. ಅವರು ಕೊಲಂಬೊದ ಸಂತ ಲೂಸಿಯಾ ಪ್ರಧಾನಾಲಯದಲ್ಲಿ ಕೃತಜ್ಞತಾ ದಿವ್ಯಬಲಿಪೂಜೆಯನ್ನು ಆಚರಿಸಲಿದ್ದಾರೆ ಮತ್ತು ಶ್ರೀಲಂಕಾದ ಧರ್ಮಾಧ್ಯಕ್ಷೀಯ ಸಮ್ಮೇಳನದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.

ನವೆಂಬರ್ 6 ರಂದು, ಅವರ ವೇಳಾಪಟ್ಟಿಯಲ್ಲಿ ಮಾಲ್ವಟ್ಟ ಧಾರ್ಮಿಕ ಅಧಿಕಾರಿಗಳೊಂದಿಗೆ ಮತ್ತು ಕ್ಯಾಂಡಿಯಲ್ಲಿರುವ ಅಸ್ಗಿರಿಯ ಧಾರ್ಮಿಕ ಅಧಿಕಾರಿಗಳೊಂದಿಗೆ ಸಭೆಗಳು ನಡೆಯಲಿವೆ. ಇದಾದ ನಂತರ ನಗರದಲ್ಲಿರುವ ಬೌದ್ಧ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ಶ್ರೀಲಂಕಾ ಭೇಟಿಯ ಮುಕ್ತಾಯಕ್ಕಾಗಿ, ಮಹಾಧರ್ಮಾಧ್ಯಕ್ಷರಾದ ಪೌಲ್ ರಿಚರ್ಡ್ ಗಲ್ಲಾಘರ್ರವರ ಕೊನೆಯ ದಿನದಂದು ರಾಷ್ಟ್ರೀಯ ಮಾತೆಮೇರಿಯ ಗುರುವಿದ್ಯಾಮಂದಿರದಲ್ಲಿ, ಲಂಕಾದಲ್ಲಿ ಗುರುವಿದ್ಯಾಮಂದಿರಗಳು ಮತ್ತು ಶೈಕ್ಷಣಿಕ ಸಿಬ್ಬಂದಿಯನ್ನು ಭೇಟಿ ಮಾಡಲಿದ್ದಾರೆ.
 

03 ನವೆಂಬರ್ 2025, 06:38