ಈ ವಷ೯ ಅಸಿಸಿಯ ಸಂತ ಫ್ರಾನ್ಸಿಸ್ ನಿಧನದ ಎಂಟನೇ ಶತಮಾನೋತ್ಸವವನ್ನು  ಆಚರಿಸಲಾಗುತ್ತಿದೆ. ಈ ವಷ೯ ಅಸಿಸಿಯ ಸಂತ ಫ್ರಾನ್ಸಿಸ್ ನಿಧನದ ಎಂಟನೇ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. 

ಸಂತ ಫ್ರಾನ್ಸಿಸ್ ವರ್ಷದ ಕುರಿತು: ಪೂರ್ಣ ಕ್ಷಮೆ ದೇವರೊಂದಿಗೆ ನಡೆಯುವ ಸಮ್ಮಿಲನ ಅದು ಆತ್ಮೀಯ ಒಳದಾರಿ ಅಲ್ಲ’

ಜಗದ್ಗರು XIVನೇ ಲಿಯೋರವರು ಸಂತ ಫ್ರಾನ್ಸಿಸ್ ರವರ ಮರಣದ 800ನೇ ವಾರ್ಷಿಕೋತ್ಸವದ ಸಂದರ್ಭವಾಗಿ ಘೋಷಿಸಿದ ವಿಶೇಷ ಜುಬಿಲಿ ವರ್ಷದ ಅವಧಿಯಲ್ಲಿ ನೀಡಲಾಗುವ ಪೂರ್ಣ ಕ್ಷಮೆಗಳ ಕುರಿತು ಶುಕ್ರವಾರ ಪ್ರಕಟಿಸಲಾದ ಆದೇಶದ ಬಗ್ಗೆ ಪ್ರೇಷಿತರ ಅಧಿಕಾರ ಕಚೇರಿಯ ಪ್ರತಿನಿಧಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರು ಸ್ಪಷ್ಟಪಡಿಸಿದಂತೆ, ಸಂತ ಫ್ರಾನ್ಸಿಸ್ ವರ್ಷವು ಕೇವಲ ವಿಶೇಷ ಆತ್ಮೀಯ ಅನುಗ್ರಹಗಳಿಂದ ತುಂಬಿರುವ ಮತ್ತೊಂದು ಅಧ್ಯಾಯವಾಗಬಾರದು. ಅದು ಉತ್ಸಾಹದಿಂದ ಆಳವಾದ ಪರಿಪಕ್ವತೆಯ ಕಡೆಗೆ, ವೈಭವಯುತ ಆಚರಣೆಯಿಂದ ದೈನಂದಿನ ಜೀವನದಲ್ಲಿ ಅನುಕರಣೆಯ ಕಡೆಗೆ ಕರೆದೊಯ್ಯುವ ಮೌನಯಾತ್ರೆಯಾಗಿರಬೇಕು.

ವ್ಯಾಟಿಕನ್ ವರದಿ

ಜಗದ್ಗರು XIVನೇ ಲಿಯೋರವರು ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಮರಣದ 800ನೇ ವಾರ್ಷಿಕೋತ್ಸವದ ಅಂಗವಾಗಿ ಘೋಷಿಸಿದ ವಿಶೇಷ ಸಂತ ಫ್ರಾನ್ಸಿಸ್ ಜುಬಿಲಿ ವರ್ಷ 2026ರ ಜನವರಿ 10ರಿಂದ 2027ರ ಜನವರಿ 10ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರೇಷಿತರ  ಅಧಿಕಾರ ಕಛೇರಿಯ ಆದೇಶದ ಕುರಿತು ವ್ಯಾಟಿಕನ್ ಮಾದ್ಯಮದ ಜೊತೆ ಮಾತನಾಡಿದ ಧರ್ಮಾಧ್ಯಕ್ಷ ಕ್ರಿಜ್‌ಸ್ಟೊಫ್ ನೈಕಿಯೆಲ್ ರವರು, ಜುಬಿಲಿಯ ಪವಿತ್ರ ಕಾಲವು ಸಾಮಾನ್ಯ ಅಥವಾ ಮೇಲ್ಮೈಯಾದ ಆಚರಣೆಯಾಗಿ ಮಾರ್ಪಡಬಾರದು ಎಂದು ಎಚ್ಚರಿಸಿದರು. ದೇವರ ಕರುಣೆ ಮಾನವ ನ್ಯಾಯದ ಮಿತಿಗಳನ್ನು ಮೀರಿದ್ದು, ಪೂರ್ಣ ಕ್ಷಮೆ ದೇವರೊಂದಿಗೆ ನಡೆಯುವ ಆಳವಾದ ಸಮ್ಮಿಲನವೇ ಹೊರತು ಅನುಗ್ರಹ ವಿತರಿಸುವ ಯಂತ್ರವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಂತ ಫ್ರಾನ್ಸಿಸ್ ರವರ ಜೀವನವು ದೇವರ ಕರುಣೆ ಇತಿಹಾಸದಲ್ಲಿ ಮಾನವರ ಮೂಲಕ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಧರ್ಮಾಧ್ಯಕ್ಷ ನೈಕಿಯೆಲ್ ವಿವರಿಸಿದರು. ಪೂರ್ಣ ಕ್ಷಮೆ ಎಂದರೆ, ಪಶ್ಚಾತ್ತಾಪ ಮತ್ತು ಸಮಾಧಾನ ಸಂಸ್ಕಾರದ ಮೂಲಕ ಈಗಾಗಲೇ ಕ್ಷಮಿಸಲ್ಪಟ್ಟ ಪಾಪಗಳಿಗೆ ಸಂಬಂಧಿಸಿದ ತಾತ್ಕಾಲಿಕ ಶಿಕ್ಷೆಯಿಂದ ಹೃದಯವನ್ನು ಮುಕ್ತಗೊಳಿಸುವ ದೇವರ ದಾನವಾಗಿದೆ. ಈ ಜುಬಿಲಿ ವರ್ಷವು ವಿಶ್ವಾಸಿಗಳಿಗೆ ತಮ್ಮ ನಂಬಿಕೆಯನ್ನು ಪುನರ್ಜೀವನಗೊಳಿಸಲು, ದೇವರೊಂದಿಗೆ ಹಾಗೂ ಧರ್ಮ ಸಭೆಯ ಸಮುದಾಯದೊಂದಿಗೆ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಒಂದು ಮಹತ್ವದ ಅವಕಾಶವಾಗಿದೆ.

ಈ ವಿಶೇಷ ವರ್ಷದಲ್ಲಿ ಪೂರ್ಣ ಕ್ಷಮೆಯನ್ನು ಪಡೆಯಲು ಧರ್ಮ ಸಭೆ ಸೂಚಿಸಿದ ಕೆಲವು ಷರತ್ತುಗಳನ್ನು ಪಾಲಿಸಬೇಕು: ಪಾಪನಿವೇದನೆ, ಪವಿತ್ರ ಸಮಾರಂಭದಲ್ಲಿ ಪಾಲ್ಗೊಳ್ಳುವುದು, ಜಗದ್ಗುರುಗಳ ಉದ್ದೇಶಗಳಿಗಾಗಿ ಪ್ರಾರ್ಥನೆ, ಪಾಪದಿಂದ ಅಂತರಂಗದ ವಿರಕ್ತಿ, ಹಾಗೂ ಫ್ರಾನ್ಸಿಸ್ಕನ್ ಚರ್ಚ್‌ಗಳಿಗೆ ಯಾತ್ರೆ, ಜುಬಿಲಿ ಆಚರಣೆಗಳಲ್ಲಿ ಭಾಗವಹಿಸುವುದು, ಸಂತ ಫ್ರಾನ್ಸಿಸ್ ರವರು ಆತ್ಮಭಾವದಲ್ಲಿ ಧ್ಯಾನ ಮತ್ತು ಪ್ರಾರ್ಥನೆ, ಹಾಗೆಯೇ ದೈನಂದಿನ ದಾನ, ವಿನಯ ಮತ್ತು ಸೇವೆಯ ಕೃತ್ಯಗಳು. ಮನೆಬಿಟ್ಟು ಹೊರಗೆ ಹೋಗಲು ಅಸಮರ್ಥರಾದ ರೋಗಿಗಳು ಮತ್ತು ವೃದ್ಧರಿಗೂ ವಿಶೇಷ ಕಾಳಜಿ ವಹಿಸಲಾಗಿದೆ. ಅವರು ತಮ್ಮ ನೋವುಗಳು ಮತ್ತು ಪ್ರಾರ್ಥನೆಗಳನ್ನು ದೇವರಿಗೆ ಅರ್ಪಿಸುವ ಮೂಲಕ ಆತ್ಮೀಯವಾಗಿ ಈ ಜುಬಿಲಿಗೆ ಸೇರ್ಪಡೆಯಾಗಬಹುದು.

ಇತ್ತೀಚೆಗೆ ಮುಗಿದ ಮಹಾ ಜುಬಿಲಿ ವರ್ಷದ ನಂತರ, ಮತ್ತೊಂದು ವಿಶೇಷ ವರ್ಷ ಬಂದಿರುವುದರಿಂದ ಆತ್ಮೀಯ ದಣಿವು ಉಂಟಾಗಬಹುದೆಂಬ ಪ್ರಶ್ನೆಗೆ ಉತ್ತರಿಸಿದ ಧರ್ಮಾಧ್ಯಕ್ಷ ನೈಕಿಯೆಲ್, ನಂಬಿಕೆಯ ಜೀವನದಲ್ಲಿ ,"ಹೆಚ್ಚು”ಗಿಂತ “ಆಳ” ಮುಖ್ಯ ಎಂದು ಹೇಳಿದರು. ಸಂತ ಫ್ರಾನ್ಸಿಸ್ ರವರ ಜೀವನವು ಹೆಚ್ಚಿನ ಆಚರಣೆಗಳಿಗಿಂತ ಸರಳತೆ, ಸತ್ಯನಿಷ್ಠೆ ಮತ್ತು ದೈನಂದಿನ ಜೀವನದಲ್ಲಿ ಸುವಾರ್ತೆಯನ್ನು ಬದುಕುವ ಮಾರ್ಗವನ್ನು ತೋರಿಸುತ್ತದೆ. ಈ ವರ್ಷವು ಪ್ರಾರ್ಥನೆಯನ್ನು ಹೆಚ್ಚಿಸುವುದಕ್ಕಿಂತ ಅದನ್ನು ಆಳಗೊಳಿಸುವ, ಮಾತಿಗಿಂತ ಕ್ರಿಯೆಯ ಮೂಲಕ ನಂಬಿಕೆಯನ್ನು ವ್ಯಕ್ತಪಡಿಸುವ ಆಹ್ವಾನವಾಗಿದೆ.

ಅಂತಿಮವಾಗಿ, ಪಾಪದಿಂದ ಸಂಪೂರ್ಣವಾಗಿ ದೂರವಿರುವುದು ಎಂದರೆ ಪಾಪರಹಿತ ಸ್ಥಿತಿ ಅಲ್ಲ, ಆದರೆ ನಮಗೆ ಯಾವುದೇ ಪಾಪ ಬೇಕಿಲ್ಲ ಎನ್ನುವ ಹೃದಯದ ದೃಢ ನಿರ್ಧಾರ ಎಂದು ಅವರು ವಿವರಿಸಿದರು. ಪೂರ್ಣ ಕ್ಷಮೆ ದೇವರ ಕೃಪೆಯನ್ನು ಗೆಲ್ಲುವ ಯತ್ನವಲ್ಲ, ಬದಲಾಗಿ ಅದನ್ನು ವಿನಮ್ರತೆಯಿಂದ ಸ್ವೀಕರಿಸುವ ಒಂದು ಜೀವಂತ ಸಂಬಂಧವಾಗಿದೆ. ಈ ದೃಷ್ಟಿಕೋನದಿಂದಲೇ ಸಂತ ಫ್ರಾನ್ಸಿಸ್ ಜುಬಿಲಿ ವರ್ಷವು ಉತ್ಸಾಹದಿಂದ ಆಳವಾದ ಪರಿಪಕ್ವತೆಯ ಕಡೆಗೆ ಕರೆದೊಯ್ಯುವ, ದೈನಂದಿನ ಜೀವನದಲ್ಲಿ ಕ್ರಿಸ್ತನ ಅನುಕರಣೆಗೆ ಪ್ರೇರೇಪಿಸುವ ಪವಿತ್ರ ಸಮಯವಾಗಬೇಕೆಂದು ಅವರು ಒತ್ತಿ ಹೇಳಿದರು.

16 ಜನವರಿ 2026, 17:42