ಕಾಡಿ೯ನಲ್ ಕುಟ್೯ ಕೋಕ್ ಕಾಡಿ೯ನಲ್ ಕುಟ್೯ ಕೋಕ್ 

ಕಾರ್ಡಿನಲ್ ಕೋಕ್: ಐಕ್ಯಮತ ಚಳವಳಿ ವಿಶ್ವಕ್ಕೆ ಶಾಂತಿಯ ಸಾಧನ

ಕ್ರೈಸ್ತ ಏಕತೆಗಾಗಿ ಪ್ರಾರ್ಥನೆಯ ವಾರದ ಅಂಗವಾಗಿ, ಕ್ರೈಸ್ತ ಏಕತೆಯನ್ನು ಉತ್ತೇಜಿಸುವ ದಿಕಾಸ್ಟರಿಯ ಪ್ರಿಫೆಕ್ಟರಾದ ಕಾರ್ಡಿನಲ್ ಕುರ್ಟ್ ಕೋಕ್ ರವರು, ಐಕ್ಯಮತದ ಮಾರ್ಗದಲ್ಲಿ ನಡೆದು ಹೋಗುವಂತೆ ಜಗದ್ಗುರು XIVನೇ ಲಿಯೋರವರು ನೀಡಿರುವ ಆಹ್ವಾನವನ್ನು ಪರಿಶೀಲಿಸುತ್ತಾರೆ.

ವ್ಯಾಟಿಕನ್ ವರದಿ

ಕ್ರೈಸ್ತರು ಜನವರಿ 18ರಿಂದ ಜನವರಿ 25ರವರೆಗೆ ಕ್ರೈಸ್ತ ಏಕತೆಗಾಗಿ ಪ್ರಾರ್ಥನೆಯ ವಾರವನ್ನು ಆಚರಿಸುತ್ತಿದ್ದಾರೆ. ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿದ ಕ್ರೈಸ್ತ ಏಕತೆಯನ್ನು ಉತ್ತೇಜಿಸುವ ದಿಕಾಸ್ಟರಿಯ ಪ್ರಿಫೆಕ್ಟರಾದ ಕಾರ್ಡಿನಲ್ ಕುರ್ಟ್ ಕೋಕ್ ರವರು, ಏಕತೆಯನ್ನು ಹುಡುಕುವ ಕ್ರೈಸ್ತ ಮಿಷನ್‌ನ ಅರ್ಥವನ್ನು ವಿವರಿಸಿದರು.

ಏಕತೆಯ ಪ್ರಯತ್ನಗಳು ಮತ್ತು ಜಗತ್ತಿನ ಶಾಂತಿಗೆ ಬದ್ಧತೆ ಒಟ್ಟಿಗೆ ಸಾಗಬೇಕು ಎಂಬ ಜಗದ್ಗುರು XIVನೇ ಲಿಯೋರವರ ಆಹ್ವಾನದ ಕುರಿತು ಕೇಳಿದಾಗ, ಕಾರ್ಡಿನಲ್ ಕೋಕ್ ರವರು ಕ್ರೈಸ್ತ ಧರ್ಮ ಸಭೆಯ ಪಾತ್ರವನ್ನು ಒತ್ತಿಹೇಳಿದರು. ಐಕ್ಯಮತ ಚಳವಳಿ ಸಮಾಜದ ಅಸಮಾಧಾನ ಮತ್ತು ವಿಭಜನೆಗೆ ಪ್ರತಿಬಿಂಬವಾಗದೆ, ಸ್ವತಃ ಏಕತೆಯ ಸಂಕೇತವಾಗಿದ್ದರೆ, ಅದು ಸಮಾಜಕ್ಕೆ ಸಹಾಯಕವಾಗಬಹುದು ಎಂದು ಅವರು ವಿವರಿಸಿದರು.

ವಿರೋಧಿ ಪ್ರವಾಹಗಳಿಂದ ತುಂಬಿರುವ ಜಗತ್ತಿನಲ್ಲಿ, ವೈವಿಧ್ಯತೆಯ ನಡುವೆಯೂ ಒಬ್ಬರ  ಆತ್ಮದಲ್ಲಿ ಬದುಕುವ ಸವಾಲು ಕ್ರೈಸ್ತರ ಮುಂದಿದೆ ಎಂದು ಕಾರ್ಡಿನಲ್ ಹೇಳಿದರು. ಕ್ರೈಸ್ತಧರ್ಮವೇ ವಿಭಜಿತ ಗುಂಪಾಗಿದ್ದರೆ, ಅದು ಸಮಾಜಕ್ಕೆ ಹೆಚ್ಚಿನದನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಈ ವರ್ಷದ ಪ್ರಾರ್ಥನಾ ವಾರದ ಪಠ್ಯಗಳನ್ನು ಅರ್ಮೇನಿಯನ್ ಪ್ರೇಷಿತರ ಧರ್ಮ ಸಭೆ ತಯಾರಿಸಿದ್ದು, ಅವು ಸಂತ ಪೌಲರು ಎಫೆಸಿಯರಿಗೆ ಬರೆದ ಪತ್ರದಿಂದ ಆಯ್ಕೆಯಾಗಿದೆ ನೀವು ಕರೆಯಲ್ಪಟ್ಟಿರುವ ಒಂದೇ ಆಶಯದಂತೆ, ಒಂದೇ ದೇಹ ಮತ್ತು ಒಂದೇ ಆತ್ಮವಿದೆ.ಈ ಪಠ್ಯದ ಆಯ್ಕೆ ಅತ್ಯಂತ ಸಂಕೇತಾತ್ಮಕವಾಗಿದೆ ಎಂದು ಕಾರ್ಡಿನಲ್ ಕೋಕ್ ರವರು ಹೇಳಿದರು. ಇದು ಏಕತೆಗಾಗಿ ಸಂತ ಪೌಲರು ಮಾಡಿದ ಉತ್ಸಾಹಭರಿತ ಮನವಿ. ಅವರು ಈ ಪತ್ರವನ್ನು ಕಾರಾಗೃಹದಿಂದ ಬರೆದಿರುವುದನ್ನು ಗಮನಿಸಿದರೆ, ಏಕತೆ ಅವರಿಗೆ ಎಷ್ಟು ಮಹತ್ವದ್ದಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಜೈಲಿನಲ್ಲಿ ಅಲ್ಪಪ್ರಾಮುಖ್ಯ ವಿಷಯಗಳ ಬಗ್ಗೆ ಚಿಂತಿಸುವುದಿಲ್ಲ ಎಂದು ಅವರು ಹೇಳಿದರು.

2030: ಗಡುವಲ್ಲ, ಚಿಂತನೆಗೆ ಒಂದು ಬಿಂದು

2030ರಲ್ಲಿ ಸಂತ ಅಗಸ್ಟಿನ್ ನ ಪಾಪನಿವೇದನೆಗಳು (Confessio Augustana) 500ನೇ ವಾರ್ಷಿಕೋತ್ಸವದ ಕುರಿತು ಮಾತನಾಡಿದ ಕಾರ್ಡಿನಲ್ ಕೋಕ್ ರವರು ನಿಶ್ಚಿತ ಗಡುವುಗಳ ನಿರೀಕ್ಷೆಯನ್ನು ತಳ್ಳಿ ಹಾಕಿದರು. ಐಕ್ಯಮತ ಚಳವಳಿಯಲ್ಲಿ ನಾನು ಗಡುವುಗಳನ್ನು ನಿಗದಿಪಡಿಸುವುದಿಲ್ಲ. ಗಡುವುಗಳನ್ನು ನಿಗದಿಪಡಿಸುವವರು ನಾವು ಅಲ್ಲ, ಪವಿತ್ರಾತ್ಮ ಎಂದು ಅವರು ಹೇಳಿದರು. ಆದರೂ, ಧರ್ಮ ಸಭೆಯ ವಿಭಜನೆಗಳನ್ನು ಮೀರಿಸುವ ಕುರಿತು ಹೊಸದಾಗಿ ಚಿಂತಿಸಲು 2030 ಒಂದು ಪ್ರಮುಖ ಆಲೋಚನಾ ಬಿಂದು ಆಗಿ ಉಳಿಯುತ್ತದೆ ಎಂದು ಅವರು ಸೇರಿಸಿದರು.

ಕಾರ್ಡಿನಲ್ ಕೋಕ್ ರವರು ಧರ್ಮಶಾಸ್ತ್ರಜ್ಞ ವೋಲ್ಫ್ಹಾರ್ಟ್ ಪ್ಯಾನೆನ್‌ಬರ್ಗ್ ರವರನ್ನು ಉಲ್ಲೇಖಿಸಿ, ಧರ್ಮ ಸಭೆಯ ವಿಭಜನೆ ಪುನರುತ್ಥಾನದ  ಒಂದು ವಿಫಲತೆ ಎಂದು ಹೇಳಿದ್ದಾರೆ, ಏಕೆಂದರೆ ಮಾರ್ಟಿನ್ ಲೂಥರ್ ಸಂಪೂರ್ಣ ಕ್ರೈಸ್ತಧರ್ಮದ ನವೀಕರಣವನ್ನು ಬಯಸಿದ್ದರು. ಯೇಸು ಒಂದು ಧರ್ಮ ಸಭೆಯನ್ನು ಬಯಸಿದ್ದರು, ಅನೇಕ ಧರ್ಮಗಳನ್ನು ಅಲ್ಲ ಎಂದು ಕಾರ್ಡಿನಲ್ ಹೇಳಿದರು.

ನೈಸಿಯ ಸಭೆಯ ಮಹತ್ವ

ಕೊನೆಗೆ, ಇತ್ತೀಚೆಗೆ 1,700ನೇ ವಾರ್ಷಿಕೋತ್ಸವವನ್ನು ಆಚರಿಸಿದ ನೈಸಿಯ ಸಭೆಯ ಶಾಶ್ವತ ಪ್ರಸ್ತುತತೆಯನ್ನು ಕಾರ್ಡಿನಲ್ ಕೋಕ್ ರವರು ಒತ್ತಿಹೇಳಿದರು. ನಮ್ಮ ಸಾಮಾನ್ಯ ನಂಬಿಕೆಯಲ್ಲಿ ಮಾತ್ರವೇ ನಿಜವಾದ ಏಕತೆಯನ್ನು ಕಂಡುಕೊಳ್ಳಬಹುದು. ನೈಸಿಯ ಸವಾಲು ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.

20 ಜನವರಿ 2026, 00:00