Il Papa, mai pi� antisemitismo, fermare l'orrore del genocidio ovunque

ವ್ಯಾಟಿಕನ್‌ ಪಾಂಡಿತ್ಯ ಮತ್ತು ಹಾಸ್ಯಬುದ್ಧಿಯೊಂದಿಗೆ ವಿವರಿಸಿದ ಪತ್ರಕರ್ತ ಜಾನ್ ಆಲೆನ್

ಕ್ರಕ್ಸ್ ಪತ್ರಿಕೆಯ ಸಂಪಾದಕ ಮತ್ತು ಸ್ಥಾಪಕರಾದ ಜಾನ್ ಆಲೆನ್ ರವರು ದೀರ್ಘಕಾಲದ ಅನಾರೋಗ್ಯದ ನಂತರ ರೋಮ್‌ನಲ್ಲಿ ನಿಧನರಾದರು. ವ್ಯಾಟಿಕನ್ ತಜ್ಞರಾಗಿದ್ದ ಅವರು, ಕಳೆದ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಕಥೊಲಿಕ ಧರ್ಮ ಸಭೆಯ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳನ್ನು ವಿಶ್ಲೇಷಿಸಿ ದಾಖಲಿಸಿದರು

ವ್ಯಾಟಿಕನ್ ವರದಿ

ಅವರು ನಾಲ್ಕು ವರ್ಷಗಳ ಕಾಲ ಕ್ಯಾನ್ಸರ್‌ ವಿರುದ್ಧ ಹೋರಾಡಿದ ನಂತರ ನಿಧನರಾದರು. ಎಂದಿಗೂ ನಿರಾಶರಾಗದೆ, ತಮ್ಮ ಶಕ್ತಿ ಇರುವವರೆಗೂ ಕೆಲಸ ಮುಂದುವರಿಸಿದರು. 61 ವರ್ಷದ ಜಾನ್ ಆಲೆನ್ ಜೂನಿಯರ್ ರವರು ಇಂಗ್ಲಿಷ್ ಭಾಷೆಯ ಓದುಗರಿಗಾಗಿ ವಿಶೇಷವಾಗಿ ಅಮೆರಿಕಾದಲ್ಲಿ ಜಗದ್ಗುರುಗಳ ಅಧಿಕಾರ ಹುದ್ದೆ ಮತ್ತು ವಿಶ್ವದಾದ್ಯಂತದ ಧರ್ಮ ಸಭೆಯ ಕುರಿತು ವರದಿ ಮಾಡುವಲ್ಲಿ ಪರಿಣತಿಯಾದ ಕ್ರಕ್ಸ್ ಎಂಬ ವೆಬ್‌ಸೈಟ್‌ನ ಸ್ಥಾಪಕರೂ ಸಂಪಾದಕರೂ ಆಗಿದ್ದರು.

ನಾನು ಜಾನ್ ರವರನ್ನು ಮೊದಲ ಬಾರಿಗೆ 26 ವರ್ಷಗಳ ಹಿಂದೆ, ನ್ಯಾಷನಲ್ ಕ್ಯಾಥೊಲಿಕ್ ರಿಪೋರ್ಟರ್ ಪತ್ರಿಕೆಯ ಸಂವಾದದಾತನಾಗಿ ರೋಮ್‌ಗೆ ಬಂದಾಗ ಭೇಟಿಯಾದೆ. ಅವರು ಜಗದ್ಗುರು ಮತ್ತು ಜಗದ್ಗುರುಗಳ ಅಧಿಕಾರ ಹುದ್ದೆಯ ಕುರಿತ ಸುದ್ದಿಗಳ ಮೇಲೆ ಗಮನಹರಿಸುತ್ತಿದ್ದರು ಹಾಗೂ ಸಂತ ದ್ವಿತೀಯ ಜಾನ್ ಪೌಲರ  ಪ್ರೇಷಿತರ ಪ್ರಯಾಣಗಳನ್ನು ಅನುಸರಿಸುತ್ತಿದ್ದರು. ಅವರ ಬಗ್ಗೆ ನನಗೆ ಮೊದಲು ನೆನಪಾಗುವುದು ಅವರ ನಗು ಮತ್ತು ಜನರೊಂದಿಗೆ ತೆರೆದ, ಆತ್ಮೀಯವಾಗಿ ಬೆರೆಯುವ ಶೈಲಿ.

2000ನೇ ವರ್ಷದಲ್ಲಿ, ಆಗಲೇ ಅನಾರೋಗ್ಯದಿಂದ ಬಳಲುತ್ತಿದ್ದ ಜಗದ್ಗುರು ದ್ವಿತೀಯ ಜಾನ್ ಪೌಲರು  ತಮ್ಮ ಹುದ್ದೆಯ ಮಹತ್ವದ ಘಟ್ಟವಾಗಿದ್ದ ಮಹಾ ಜುಬಿಲಿಯನ್ನು ಆಚರಿಸುತ್ತಿದ್ದರು ಮತ್ತು ಇತಿಹಾಸಕ್ಕೆ ಸೇರುವಂತಹ ಪ್ರಯಾಣಗಳನ್ನು ಕೈಗೊಂಡಿದ್ದರು. ಮುಂದಿನ  ಜಗದ್ಗುರುಗಳಾಗುವ ಸಾಧ್ಯತೆಯಿರುವವರು ಕುರಿತು ವರ್ಷಗಳಿಂದಲೇ ವದಂತಿಗಳು ಮತ್ತು ಊಹಾಪೋಹಗಳು ಹರಿದಾಡುತ್ತಿತ್ತು ಅವರಲ್ಲಿ ಕೆಲವರು, ಪೋಲಿಷ್ ಪಾಂಟಿಫ್‌ಗಿಂತಲೂ ಮುಂಚೆ, ತಂದೆಯ ಮನೆಗೆ ಕರೆಯಲ್ಪಟ್ಟಿದ್ದರು. ಕಮ್ಯುನಿಸಂ ಪತನದ ನಂತರ “ಇತಿಹಾಸದ ಅಂತ್ಯ” ಎಂಬ ಭ್ರಮೆಯೊಂದಿಗೆ, ಹೊಸ ಸಹಸ್ರಮಾನವು ಮಹತ್ತರ ನಿರೀಕ್ಷೆಗಳು ಮತ್ತು ತೆರೆದ ಮನಸ್ಸಿನಿಂದ ಆರಂಭವಾಯಿತು. ಆದರೆ 2001ರ ಸೆಪ್ಟೆಂಬರ್ 11ರ ದಾಳಿಗಳು ಹಾಗೂ ನಂತರದ ಆಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು ಆ ದೃಷ್ಟಿಕೋನವನ್ನು ಏಕಾಏಕಿ ಚೂರಾಗಿಸಿತು.

ಜಾನ್ ರವರು ವ್ಯಾಟಿಕನ್ ಮತ್ತು ಧರ್ಮ ಸಭೆಯ ಆಂತರಿಕ ವಿಷಯಗಳನ್ನು ಉದಾಹರಣೆಗೆ, ಅಪ್ರಾಪ್ತರ ಮೇಲೆ ನಡೆದ ದೌರ್ಜನ್ಯದ ಹಗರಣ ಹೊರಬಂದದ್ದು ಮಾತ್ರವಲ್ಲದೆ, ವಿಶೇಷವಾಗಿ ಅಮೆರಿಕವನ್ನು ಒಳಗೊಂಡಂತೆ ಅಂತರರಾಷ್ಟ್ರೀಯ ಘಟನೆಗಳಲ್ಲಿ ಜಗದ್ಗುರುಗಳ ಅಧಿಕಾರ ಹುದ್ದೆ ಮತ್ತು ಅದರ ರಾಜತಾಂತ್ರಿಕ ಪಾತ್ರವನ್ನೂ ವಿವರಿಸಿ ವಿಶ್ಲೇಷಿಸಲು ಸಮರ್ಥರಾಗಿದ್ದರು. ಪ್ರತಿಯೊಂದು ಲೇಖನದಲ್ಲೂ ಅವರು ಮೂಲಗಳಿಗೆ ಕಟ್ಟುನಿಟ್ಟಾದ ನಿಷ್ಠೆ, ಎಚ್ಚರಿಕೆಯಿಂದ ಮಾಹಿತಿ ಸಂಗ್ರಹಣೆ, ವಿಶ್ಲೇಷಣಾತ್ಮಕ ಚೌಕಟ್ಟುಗಳು ಮತ್ತು ಸಂದರ್ಭದ ವಿವರಣೆಯನ್ನು ಒಟ್ಟುಗೂಡಿಸುತ್ತಿದ್ದರು. “ಆನ್ ದ ರೆಕಾರ್ಡ್” ಉಲ್ಲೇಖಗಳನ್ನು ಮಾತ್ರ ಬಳಸಬೇಕು ಎಂದು ಅವರು ಒತ್ತಾಯಿಸುತ್ತಿದ್ದರು ಮತ್ತು ಅವುಗಳನ್ನು ಯಾವಾಗಲೂ ಪೂರ್ಣ ಹೆಸರಿನೊಂದಿಗೆ ನೀಡುತ್ತಿದ್ದರು.

ಅವರ ಕೆಲಸದ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ, ಅವರು ಯಾವುದನ್ನೂ ಸಹಜವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದ್ದರಿಂದ, ಅವರು ಒಳಗಿನವರಿಗಷ್ಟೇ ಬರೆಯುವುದಿಲ್ಲ ಅವರ ಓದುಗರು ಕೇವಲ ಕಥೋಲಿಕರಾಗಿರಲಿ ಅಥವಾ ನಂಬಿಕೆಯುಳ್ಳವರಾಗಲಿ ಮಾತ್ರವಲ್ಲ ಎಂಬುದನ್ನು ಅವರು ಚೆನ್ನಾಗಿ ಅರಿತಿದ್ದರು. ಅವರ ವಿಶ್ಲೇಷಣೆಯ ತೀರ್ಮಾನಗಳಿಗೆ ಒಪ್ಪದೇ ಇದ್ದರೂ ಸಹ, ಅವು ಓದಲು ಸದಾ ಮೌಲ್ಯಯುತವಾಗಿದ್ದವು, ಏಕೆಂದರೆ ಜಗದ್ಗುರುಗಳ ಅಧಿಕಾರ ಹುದ್ದೆಯ ಸಂಕೀರ್ಣ ವಾಸ್ತವಿಕತೆಯನ್ನು ಅವರು ಸರಳೀಕರಣ ಮಾಡದೇ ವಿವರಿಸುತ್ತಿದ್ದರು.

2014ರಲ್ಲಿ ಜಾನ್ ರವರು ನ್ಯಾಷನಲ್ ಕ್ಯಾಥೊಲಿಕ್ ರಿಪೋರ್ಟರ್ನ್ನು ತೊರೆದು ಕ್ರಕ್ಸ್ ಅನ್ನು ಸ್ಥಾಪಿಸಿದರು. ಅದು ಮೊದಲು ಬೋಸ್ಟನ್ ಗ್ಲೋಬ್ ಪತ್ರಿಕೆಯ ಉಪಪ್ರಕಾಶನವಾಗಿ ಆರಂಭವಾಗಿ, ನಂತರ ಸ್ವತಂತ್ರ ಮಾಧ್ಯಮವಾಗಿ ಬೆಳೆಯಿತು. ಮಾಹಿತಿಯು ಅತಿಯಾಗಿ ಸರಳೀಕೃತ ಮತ್ತು ಸಾಮೂಹಿಕಗೊಂಡ ಕಾಲದಲ್ಲಿ, ವೃತ್ತಿಪರ ಹಾಗೂ ಪರಿಣತ ಪತ್ರಿಕೋದ್ಯಮವೇ ಒಂದು ಮೌಲ್ಯವೆಂದು ಅವರು ಅರ್ಥಮಾಡಿಕೊಂಡಿದ್ದರು, ಏಕೆಂದರೆ ಬಹುಮಟ್ಟಿಗೆ ಅಸ್ಪಷ್ಟ ಮಾಹಿತಿಯಿಂದ ದಣಿದ ಓದುಗರು ವಿಷಯವನ್ನು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು ಮತ್ತು ಅಗತ್ಯವಿತ್ತು.

ಜಾನ್ ಆಲೆನ್ ರವರು ಕಾನ್‌ಕ್ಲೇವ್‌ಗಳ ಚಲನವಲನಗಳನ್ನು ದಾಖಲಿಸಿದ್ದರು ಮತ್ತು ಜೋಸೆಫ್ ರಾಟ್ಸಿಂಗರ್ ಕುರಿತಾಗಿ ದ ವ್ಯಾಟಿಕನ್ ಎನ್ಫೋಸ೯ ಎಂಬ ಜೀವನಚರಿತ್ರೆಯನ್ನು ಅವರು ಜಗದ್ಗುರು XVI ನೇ ಬೆನೆಡಿಕ್ಟ್ ಆಗುವ ಐದು ವರ್ಷಗಳ ಮೊದಲೇ ಬರೆದಿದ್ದರು. ಅವರು ಅವರ ಹುದ್ದೆಯ ಹಾಗೂ ಜಗದ್ಗುರು ಫ್ರಾನ್ಸಿಸ್ ರವರ ಆಯ್ಕೆಯನ್ನೂ ಅನುಸರಿಸಿದರು.

ಇದಲ್ಲದೆ, ಕಥೋಲಿಕ ಧರ್ಮ ಸಭೆ ಇತಿಹಾಸದಲ್ಲಿ ಮೊದಲ ಅಮೆರಿಕನ್ ವ್ಯಕ್ತಿ ಪೇತ್ರನ ಉತ್ತರಾಧಿಕಾರಿಯಾಗಿ ಆಯ್ಕೆಯಾದುದನ್ನು ನೋಡುವ ಸಂತೋಷವೂ ಅವರಿಗೆ ದೊರಕಿತು. ಆ ಜಗದ್ಗುರುಗಳು ಅವರನ್ನು ಜಾನ್ ವೈಯಕ್ತಿಕವಾಗಿ ತಿಳಿದಿದ್ದರು ಮತ್ತು ಸಮಯ ಕಳೆಯುತ್ತಿದ್ದರು. ಇದಕ್ಕೆ ಕಾರಣವಾಗಿ, ಆರು ವರ್ಷಗಳ ಹಿಂದೆ ಅವರು ವಿವಾಹವಾದ ಎಲೀಸ್  ವ್ಯಾಟಿಕನ್ ಸಂವಾದದಾತೆಯೂ XIV ನೇ ಲಿಯೋರವರ  ಜೀವನಚರಿತ್ರೆಯ ಲೇಖಕಿಯೂ ಆಗಿದ್ದವರು ಈ ಕಷ್ಟದ ಅನಾರೋಗ್ಯದ ಅವಧಿಯಲ್ಲಿ ಅವರ ಸೇವೆ ಮತ್ತು ಆರೈಕೆಯನ್ನು ಸಮರ್ಪಿಸಿದರು.

ಜಾನ್ ಬಗ್ಗೆ — ರೋಮನ್ ಅಡುಗೆಗೆ ಅಭಿಮಾನಿಯಾಗಿದ್ದ ಹಾಗೂ ಎ ಎಸ್ ರೋಮಾ ಫುಟ್ಬಾಲ್ ತಂಡದ ಭಾರೀ ಬೆಂಬಲಿಗನಾಗಿದ್ದ ಅವರು  ನಾನು ಇನ್ನೂ ನಾಲ್ಕು ಗುಣಗಳನ್ನು ಸ್ಮರಿಸಲು ಇಚ್ಛಿಸುತ್ತೇನೆ: ಧರ್ಮ ಸಭೆಯ ಎಲ್ಲ ಮಟ್ಟದ ವ್ಯಕ್ತಿಗಳೊಂದಿಗೆ ಸಂಬಂಧ ಮತ್ತು ಸಂಪರ್ಕಗಳನ್ನು ನಿರ್ಮಿಸುವ ಅವರ ಅಪೂರ್ವ ಸಾಮರ್ಥ್ಯ ಮೊದಲ ಅಭಿಪ್ರಾಯದಲ್ಲೇ ನಿಲ್ಲದೆ, ಇತರರ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ದೃಢನಿಶ್ಚಯ ಅವರ ಹಾಸ್ಯಬುದ್ಧಿ ಮತ್ತು ಉನ್ನತ ಮಟ್ಟದ ವಿಶ್ಲೇಷಣೆಯನ್ನು ಕಥೆಗಳು ಮತ್ತು ವಿನೋದದೊಂದಿಗೆ ಬೆರೆಸಿ, ಯಾವುದೇ ಪ್ರೇಕ್ಷಕವರ್ಗವನ್ನೂ ಮನಮೋಹಕವಾಗಿ ಹಿಡಿದಿಡುವ ಅವರ ಅಸಾಧಾರಣ ಭಾಷಣ ಕೌಶಲ್ಯ.

23 ಜನವರಿ 2026, 00:00