ವ್ಯಾಟಿಕನ್ ಉದ್ಯಾನವನದಲ್ಲಿರುವ ಲೂದು೯  ಮಾತೆಯ ಗುಹೆಯ ಬಳಿ ಜಗದ್ಗುರು ಲಿಯೋರವರು ರೋಗಿಗಳನ್ನು ಆಶೀರ್ವದಿಸುತ್ತಿದ್ದಾರೆ. ವ್ಯಾಟಿಕನ್ ಉದ್ಯಾನವನದಲ್ಲಿರುವ ಲೂದು೯ ಮಾತೆಯ ಗುಹೆಯ ಬಳಿ ಜಗದ್ಗುರು ಲಿಯೋರವರು ರೋಗಿಗಳನ್ನು ಆಶೀರ್ವದಿಸುತ್ತಿದ್ದಾರೆ.  (ANSA)

ವ್ಯಾಟಿಕನ್ ಉದ್ಯಾನವನದ ಲೂದು೯ ಮಾತೆಯ ಗುಹೆಯಲ್ಲಿ ರೋಗಿಗಳೊಂದಿಗೆ ಜಗದ್ಗುರು ಲಿಯೋರವರ ಪ್ರಾರ್ಥನೆ

ರೋಗಿಗಳ ವಿಶ್ವ ದಿನ ಹಾಗೂ ಲೂದು೯ ಮಾತೆಯ ಹಬ್ಬದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ಉದ್ಯಾನವನದಲ್ಲಿರುವ ಲೂದು೯ ಮಾತೆಯ ಗುಹೆಯ ಮುಂದೆ ರೋಗಿಗಳ ಗುಂಪೊಂದನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರು ಪರಮಪವಿತ್ರ ತಾಯಿ ನಮಗೆ ದುಃಖ ಮತ್ತು ಪ್ರೀತಿಯ ಅರ್ಥವನ್ನು ಬೋಧಿಸುತ್ತಾರೆ ಎಂದು ಅವರಿಗೆ ನೆನಪಿಸಿದರು.

ವ್ಯಾಟಿಕನ್ ವರದಿ

ಇಂದು ಬಹಳ ಸುಂದರವಾದ ದಿನವಾಗಿದೆ. ಇದು ನಮ್ಮ ತಾಯಿ ಲೂದು೯ ಮಾತೆಯ ಸಮೀಪತೆಯನ್ನು ನಮಗೆ ನೆನಪಿಸುತ್ತದೆ. ಅವರು ಸದಾ ನಮ್ಮನ್ನು ಜೊತೆಯಾಗಿ ನಡೆಯುತ್ತಾರೆ ಮತ್ತು ಅನೇಕ ವಿಷಯಗಳನ್ನು ಬೋಧಿಸುತ್ತಾರೆ ದುಃಖದ ಅರ್ಥವೇನು, ಪ್ರೀತಿಯ ಅರ್ಥವೇನು, ಹಾಗೂ ನಮ್ಮ ಜೀವನವನ್ನು ಪ್ರಭುವಿನ ಕೈಗಳಲ್ಲಿ ಒಪ್ಪಿಸುವುದೆಂದರೆ ಏನು ಎಂಬುದನ್ನು ಕಲಿಸುತ್ತದೆ.

ಬುಧವಾರದ ಸಾಮಾನ್ಯ ಸಭೆಯ ನಂತರ, ವ್ಯಾಟಿಕನ್ ಉದ್ಯಾನವನದಲ್ಲಿರುವ ಲೂದು೯ ಮಾತೆಯ ಗುಹೆಯ ಬಳಿ ತನ್ನನ್ನು ಎದುರುನೋಡುತ್ತಿದ್ದ ರೋಗಿಗಳ ಗುಂಪೊಂದರೊಂದಿಗೆ ಮಾತುಕತೆ ನಡೆಸುವಾಗ ಜಗದ್ಗುರು XIVನೇ ಲಿಯೋರವರು ಈ ಮಾತುಗಳನ್ನು ಹೇಳಿದರು. ಫೆಬ್ರವರಿ 11ರಂದು ಆಚರಿಸಲ್ಪಡುವ ರೋಗಿಗಳ ವಿಶ್ವ ದಿನ ಮತ್ತು ಲೂದು೯ ಮಾತೆಯ ಸ್ಮರಣಾ ಹಬ್ಬದ ಅಂಗವಾಗಿ ಈ ಭೇಟಿಯು ನಡೆದಿತು.

ಪ್ರಾರ್ಥನೆಯ ಈ ಕ್ಷಣಕ್ಕಾಗಿ ಪರಮ ಪವಿತ್ರ ತಾಯಿಯ ಸನ್ನಿಧಿಯಲ್ಲಿ ಹಾಜರಾಗಲು ಪ್ರಯತ್ನಪಟ್ಟಿದ್ದಕ್ಕಾಗಿ ತಮ್ಮ ಮುಂದೆ ಇದ್ದ ಎಲ್ಲರಿಗೂ ಜಗದ್ಗುರುಗಳು ಧನ್ಯವಾದಗಳನ್ನು ತಿಳಿಸಿದರು.

ತಮ್ಮ ಪ್ರೇಷಿತರ ಆಶೀರ್ವಾದ ನೀಡುವ ಮೊದಲು, ಜಗದ್ಗುರು XIVನೇ ಲಿಯೋರವರು  ಇಂದು ಹಾಗೂ ಸದಾಕಾಲವೂ ಎಲ್ಲಾ ರೋಗಿಗಳಿಗೂ, ಹಾಗೆಯೇ  ವೈದ್ಯರು, ನರ್ಸ್‌ಗಳು ಮತ್ತು ಇತರ ಸಹಾಯಕರಿಗೂ ಪ್ರಭು ಆಶೀರ್ವದಿಸಲಿ ಎಂದು ಪ್ರಾರ್ಥಿಸಿದರು.

11 ಫೆಬ್ರವರಿ 2026, 17:45