ಫಾದರ್ ಡೇವಿಡ್ ಪಗ್ಲಿಯಾರಾನಿ ರವರೊಂದಿಗೆ ಕಾರ್ಡಿನಲ್ ಫೆರ್ನಾಂಡಿಸ್ ಫಾದರ್ ಡೇವಿಡ್ ಪಗ್ಲಿಯಾರಾನಿ ರವರೊಂದಿಗೆ ಕಾರ್ಡಿನಲ್ ಫೆರ್ನಾಂಡಿಸ್  (ANSA)

ಜಗದ್ಗರುಗಳ ಅಧಿಕಾರ ಸ್ಥಳವು ಸಂತ Xನೇ ಪಿಯಸ್ ಸಮಾಜ ಜೊತೆಗೆ ಧಾರ್ಮಿಕ ಸಂವಾದ

ವ್ಯಾಟಿಕನ್‌ನಲ್ಲಿ ನಡೆದ ಸಭೆಯಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳವು ಸಂತ Xನೇ ಪಿಯಸ್ ಸಮಾಜ ಜೊತೆಗೆ ಧಾರ್ಮಿಕ ಸಂವಾದದ ಮಾರ್ಗವನ್ನು ಪ್ರಸ್ತಾಪಿಸಿದೆ. ಈ ಸಂವಾದದ ಉದ್ದೇಶವು ಕಥೋಲಿಕ ಧರ್ಮ ಸಭೆಯೊಂದಿಗೆ ಸಂಪೂರ್ಣ ಐಕ್ಯತೆಗೆ ಅಗತ್ಯವಾದ ಕನಿಷ್ಠ ಅವಶ್ಯಕತೆಗಳನ್ನು ಸಂರಕ್ಷಿಸುವುದಾಗಿದೆ ಆದರೆ ಅದಕ್ಕಾಗಿ, ಸಮಾಜವು ಫೆಬ್ರವರಿ ಆರಂಭದಲ್ಲಿ ಜಗದ್ಗುರುಗಳ ಅನುಮತಿಯಿಲ್ಲದೆ ಘೋಷಿಸಿದ್ದ ಬಿಷಪ್ ದೀಕ್ಷೆಗಳನ್ನು ಸ್ಥಗಿತಗೊಳಿಸಬೇಕೆಂಬ ಶರತ್ತು ವಿಧಿಸಲಾಗಿದೆ.

ವ್ಯಾಟಿಕನ್ ವರದಿ

ಜಗದ್ಗರುಗಳ ಅಧಿಕಾರ ಸ್ಥಳದ ಸಂತ Xನೇ ಪಿಯಸ್ ಸಮಾಜದ ಜೊತೆ ಧಾರ್ಮಿಕ ಸಂವಾದ ಆರಂಭಿಸುವ ಪ್ರಸ್ತಾವವನ್ನು ಮಾಡಿದೆ. ಈ ಸಂವಾದವು ಜುಲೈ 1ರಂದು ನಿಗದಿಯಾಗಿರುವ ಬಿಷಪ್ ದೀಕ್ಷೆಗಳನ್ನು ಸ್ಥಗಿತಗೊಳಿಸುವ ಶರತ್ತಿನ ಮೇಲೆ ಆಧಾರಿತವಾಗಿದೆ. ಜಗದ್ಗರುಗಳ ಅನುಮೋದನೆಯೊಂದಿಗೆ, ಡಾಕ್ಟ್ರಿನ್ ಆಫ್ ದ ಫೇತ್ ದಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ವಿಕ್ಟರ್ ಮಾನುವೆಲ್ ಫೆರ್ನಾಂಡೆಸ್ ಮತ್ತು ಎಸ್ ಎಸ್ ಪಿ ಎಕ್ಸ್ ನ ಸುಪೀರಿಯರ್ ಜನರಲ್ ಫಾ. ದಾವಿದೆ ಪಾಗ್ಲಿಯಾರಾಣಿ ನಡುವೆ ಪವಿತ್ರ ಕಚೇರಿ ಭವನದಲ್ಲಿ ಸಭೆ ನಡೆಯಿತು.

ಈ ಪ್ರಕ್ರಿಯೆ ಸ್ಪಷ್ಟ ವಿಧಾನ ಹೊಂದಿದದ್ದಾಗಿ ವಿವರಿಸಲ್ಪಟ್ಟಿದ್ದು, ಕಥೋಲಿಕ ಧರ್ಮ ಸಭೆಯೊಂದಿಗೆ ಸಂಪೂರ್ಣ ಐಕ್ಯತೆಗೆ ಅಗತ್ಯವಾದ ಕನಿಷ್ಠ ಅವಶ್ಯಕತೆಗಳನ್ನು ನಿರ್ಧರಿಸುವುದು ಹಾಗೂ ಸಮಾಜಕ್ಕೆ ಸೂಕ್ತವಾದ ಕಾನೂನಾತ್ಮಕ (ಕ್ಯಾನಾನಿಕಲ್) ಸ್ಥಾನಮಾನವನ್ನು ಗುರುತಿಸುವುದನ್ನು ಉದ್ದೇಶಿಸಿದೆ. ಮಧ್ಯಾಹ್ನ ಬಿಡುಗಡೆಗೊಂಡ ಪ್ರಕಟಣೆಯಲ್ಲಿ ಸಭೆಯನ್ನು ಸೌಹಾರ್ದಪೂರ್ಣ ಮತ್ತು ಪ್ರಾಮಾಣಿಕ ಎಂದು ವಿವರಿಸಲಾಗಿದೆ.

ಸಭೆಯಲ್ಲಿ 2017ರಿಂದ 2019ರವರೆಗೆ ಎಸ್ ಎಸ್ ಪಿ ಎಕ್ಸ್  ಕಳುಹಿಸಿದ್ದ ಪತ್ರಗಳಲ್ಲಿ ಉಲ್ಲೇಖಿಸಿದ ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಲಾಯಿತು, ವಿಶೇಷವಾಗಿ ಧಾರ್ಮಿಕ ವೈವಿಧ್ಯತೆ ಕುರಿತ ದೇವರ ಇಚ್ಛೆಯ ಪ್ರಶ್ನೆಯನ್ನು. ಕಾರ್ಡಿನಲ್ ಫೆರ್ನಾಂಡೆಸ್ ವಿಶ್ವಾಸದ ಕ್ರಿಯೆ ಮತ್ತು ವಿಶ್ವಾಸದ ವಿಧೇಯತೆ ನಡುವಿನ ಭೇದ, ಹಾಗೂ ದ್ವಿತೀಯ ವ್ಯಾಟಿಕನ್ ಮಹಾಸಭೆಯ ಪಠ್ಯಗಳಿಗೆ ನೀಡಬೇಕಾದ ಒಪ್ಪಿಗೆಯ ಮಟ್ಟಗಳ ಬಗ್ಗೆ ಚರ್ಚೆ ನಡೆಸುವಂತೆ ಸೂಚಿಸಿದರು.

ಆದರೆ ಜಗದ್ಗುರುಗಳ ಅಧಿಕಾರ ಸ್ಥಳದ, ರೋಮನ್ ಧರ್ಮಾಧ್ಯಕ್ಷರ ಅನುಮತಿಯಿಲ್ಲದೆ ಬಿಷಪ್‌ಗಳ ದೀಕ್ಷೆ ಮಾಡುವುದು ಧರ್ಮ ಸಭೆಯ ಐಕ್ಯತೆಗೆ ಗಂಭೀರ ವಿಚ್ಛೇದನ ಉಂಟುಮಾಡುತ್ತದೆ ಎಂದು ಪುನರುಚ್ಚರಿಸಿದೆ. ಇದು “ಶಿಸ್ಮ್” ಎಂಬ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಆದ್ದರಿಂದ 2026ರ ಜುಲೈ 1ರಂದು ಘೋಷಿಸಲಾದ ದೀಕ್ಷೆಗಳನ್ನು ಸ್ಥಗಿತಗೊಳಿಸುವಂತೆ ಪ್ರಸ್ತಾಪಿಸಲಾಗಿದೆ.

ಎಸ್ ಎಸ್ ಪಿ ಎಕ್ಸ್ ನ ಸುಪೀರಿಯರ್ ಜನರಲ್ ಈ ಪ್ರಸ್ತಾವನೆಯನ್ನು ತನ್ನ ಪರಿಷತ್ತಿಗೆ ಮಂಡಿಸಿ, ದಿಕಾಸ್ಟರಿಗೆ ಪ್ರತಿಕ್ರಿಯೆ ನೀಡಲಿದ್ದಾರೆ. ಪ್ರತಿಕ್ರಿಯೆ ಸಕಾರಾತ್ಮಕವಾದರೆ, ಮುಂದಿನ ಕ್ರಮಗಳನ್ನು ಪರಸ್ಪರ ಒಪ್ಪಿಗೆಯೊಂದಿಗೆ ನಿಗದಿಪಡಿಸಲಾಗುತ್ತದೆ. ಈ ಪ್ರಯಾಣವನ್ನು ಪವಿತ್ರಾತ್ಮನು ಮಾರ್ಗದರ್ಶನ ಮಾಡಲಿ ಎಂದು ಕಾರ್ಡಿನಲ್ ಫೆರ್ನಾಂಡೆಸ್ ಸಂಪೂರ್ಣ ಧರ್ಮ ಸಭೆಗೆ ಪ್ರಾರ್ಥನೆ ಮಾಡಲು ವಿನಂತಿಸಿದ್ದಾರೆ.

12 ಫೆಬ್ರವರಿ 2026, 00:00