ಜಗದ್ಗರುಗಳು ವಿಶ್ವ ಮಕ್ಕಳ ದಿನಾಚರಣೆ ಸಮಿತಿಯನ್ನು ರದ್ದುಗೊಳಿಸಿದರು
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಕಳೆದ ಆಗಸ್ಟ್‌ನಲ್ಲಿ ಜಗದ್ಗುರುಗಳ ವಿಶ್ವ ಮಕ್ಕಳ ದಿನಾಚರಣೆ ಸಮಿತಿಯನ್ನು ಸಾಮಾನ್ಯರು, ಕುಟುಂಬ ಮತ್ತು ಜೀವನಕ್ಕಾಗಿ ಡಿಕ್ಯಾಸ್ಟರಿ ಅಡಿಯಲ್ಲಿ ಸೇರಿಸಿ, ಅದು ನೇರವಾಗಿ ಜಗದ್ಗುರುಗಳ ಅಧೀನದಲ್ಲಿದ್ದ ಸ್ಥಾನಮಾನವನ್ನು ಬದಲಿಸಿದ್ದರು. ನಂತರ ಫೆಬ್ರವರಿ 13ರಂದು ಪ್ರಕಟಿಸಿದ ಚಿರೋಗ್ರಾಫ್ ಮೂಲಕ ಸಮಿತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದರು.
ಈ ಸಮಿತಿಯನ್ನು ಜಗದ್ಗುರು ಫ್ರಾನ್ಸಿಸ್ ರವರು 2024ರ ನವೆಂಬರ್‌ನಲ್ಲಿ ಸ್ಥಾಪಿಸಿದ್ದರು. ವಿಶ್ವ ಮಕ್ಕಳ ದಿನಾಚರಣೆಯ ಧಮ೯ಸಭೆ ಆಧಾರಿತ ಚೈತನ್ಯ ಮತ್ತು ಧರ್ಮಾಧಿಕಾರಿಗಳ ಸಂಘಟನೆ ಕಾರ್ಯಗಳನ್ನು ನಿರ್ವಹಿಸುವುದು ಇದರ ಉದ್ದೇಶವಾಗಿತ್ತು. ವಿಶ್ವ ಯುವ ದಿನಾಚರಣೆಯ ಮಾದರಿಯಲ್ಲಿ ನಡೆದ ಈ ಕಾರ್ಯಕ್ರಮವು ವಿಶ್ವದ ವಿವಿಧ ದೇಶಗಳಿಂದ ಸಾವಿರಾರು ಮಕ್ಕಳನ್ನು ರೋಮ್ ನಗರಕ್ಕೆ ಆಕರ್ಷಿಸಿತು.
ಈ ಮುಂದಿನ ಕಾರ್ಯಕ್ರಮಗಳು ಮುಂದುವರಿಯಲಿವೆ. ಎರಡನೇ ಆವೃತ್ತಿ 2026ರ ಸೆಪ್ಟೆಂಬರ್ 25ರಿಂದ 27ರವರೆಗೆ ರೋಮ್‌ನಲ್ಲಿ ನಡೆಯಲಿದೆ ಎಂದು ಜಗದ್ಗುರು ಲಿಯೋರವರು ಘೋಷಿಸಿದ್ದಾರೆ. ಆದರೆ ಕಾರ್ಯಕ್ರಮದ ಆಯೋಜನೆ ಮತ್ತು ಸಂಯೋಜನೆಗೆ ಸಂಬಂಧಿಸಿದ ಸಂಪೂರ್ಣ ಹೊಣೆಗಾರಿಕೆಯನ್ನು ಈಗ ಡಿಕಾಸ್ಟರಿಯೇ ವಹಿಸಿಕೊಂಡಿದೆ.
ಜಗದ್ಗುರು ಲಿಯೋ ರವರ ವಿವರಣೆಯಂತೆ, ಈ ನಿರ್ಧಾರವು 2025ರ ಆಗಸ್ಟ್‌ನ ನಿಣ೯ಯಪತ್ರದ ದಾರಿಯನ್ನು ಮುಂದುವರಿಸುತ್ತಿದ್ದು, ಉತ್ತಮ ಸಮನ್ವಯ ಮತ್ತು ಪರಿಣಾಮಕಾರಿ ಕಾರ್ಯಸಾಧನೆಗಾಗಿ ಕೈಗೊಳ್ಳಲಾಗಿದೆ. ಈ ಮೂಲಕ ಉದ್ದೇಶಿತ ಮಹತ್ವದ ಉಪಕ್ರಮವನ್ನು ಹೆಚ್ಚು ಸಮರ್ಥವಾಗಿ ನಡೆಸುವ ಆಶಯ ಹೊಂದಿದೆ.
ಸಮಿತಿಯ ಸ್ಥಾಪನಾ ಚಿರೋಗ್ರಾಫ್ ಮತ್ತು ಸಂಬಂಧಿತ ವಿಧಿವಿಧಾನಗಳನ್ನೂ ರದ್ದುಗೊಳಿಸಲಾಗಿದೆ. ಹಿಂದಿನ ಎಲ್ಲಾ ಕ್ರಮಗಳು ಮತ್ತು ನಿಯಮಗಳು ಈಗ ಕಾನೂನುಬದ್ಧ ಪರಿಣಾಮ ಕಳೆದುಕೊಂಡಿವೆ. ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರ ಸದಸ್ಯರು ತಕ್ಷಣವೇ ತಮ್ಮ ಹುದ್ದೆಗಳಿಂದ ವಿನಾಯಿತಿ ಪಡೆದಿದ್ದಾರೆ.
2024ರ ಮೇ 25ರಂದು ರೋಮ್‌ನ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ವಿಶ್ವ ಮಕ್ಕಳ ದಿನಾಚರಣೆಯಲ್ಲಿ 50,000ಕ್ಕೂ ಹೆಚ್ಚು ಮಕ್ಕಳು ಮತ್ತು ಯುವಕರು ಭಾಗವಹಿಸಿದ್ದರು. ಯುದ್ಧಪೀಡಿತ ಪ್ರದೇಶಗಳ ಮಕ್ಕಳೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.