ಕಥೋಲಿಕ್ ವೆಬ್‌ಸೈಟ್‌ಗಳಿಗಾಗಿ ಜಗದ್ಗುರುಗಳ ಇತ್ತೀಚಿನ ಸುದ್ದಿಗಳು ಮತ್ತು ವೀಡಿಯೊಗಳನ್ನು ಒಳಗೊಂಡ ಹೊಸ ವೀಡಿಯೊ ಸಾಧನ
ವ್ಯಾಟಿಕನ್ ವರದಿ
“ಪ್ರಿಯ ಸಹೋದರರೇ, ವಾಟಿಕನ್ ನ್ಯೂಸ್‌ನ ಈ ಮುಂದಾಳತ್ವವು ಸುವಾರ್ತಾಪ್ರಚಾರಕ್ಕಾಗಿ ಉಪಯುಕ್ತವಾದ ಸಾಧನವಾಗಿದೆ ಇದು ರೋಮ್ ಮತ್ತು ನಿಮ್ಮ ದೇಶದ ಧರ್ಮ ಸಭೆಯ ನಡುವೆ ಜಾಲತಾಣ ನಿರ್ಮಿಸಲು ಹಾಗೂ ವರಗಳ ವಿನಿಮಯಕ್ಕೆ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ಧರ್ಮ ಕೇಂದ್ರಗಳು ಮತ್ತು ಸಮುದಾಯಗಳು ಮೂಲಸ್ರೋತದಿಂದ ನಿರಂತರವಾಗಿ ಮಾಹಿತಿಯನ್ನು ಪಡೆಯುವ ಒಂದು ಮಾರ್ಗವಾಗಿದೆ.
ಜಗದ್ಗುರು XIVನೇ ಲಿಯೋರವರು ವಿಶ್ವದಾದ್ಯಂತದ ಬಿಷಪ್‌ಗಳಿಗೆ ಕಳುಹಿಸಿದ ಸಂದೇಶದಲ್ಲಿ ಈ ಮಾತುಗಳನ್ನು ಉಲ್ಲೇಖಿಸಿ, ವ್ಯಾಟಿಕನ್ ನ್ಯೂಸ್‌ನ ಹೊಸ ವೀಡಿಯೊ ಸಾಧನವನ್ನು ಬಳಸುವಂತೆ ಅವರನ್ನು ಆಹ್ವಾನಿಸಿದರು.
ಧರ್ಮಪ್ರಾಂತ್ಯಗಳು, ಧರ್ಮಕೇಂದ್ರಗಳು ಹಾಗೂ ಕಥೋಲಿಕ ಸಂಘಗಳು ಮತ್ತು ಸಂಸ್ಥೆಗಳು ಈ ಸಾಧನವನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಜಗದ್ಗುರುಗಳು ಹಾಗೂ ಜಗದ್ಗುರುಗಳ ಅಧಿಕಾರ ಸ್ಥಳದ ಕುರಿತ ವೀಡಿಯೊಗಳು ಮತ್ತು ಸುದ್ದಿಗಳನ್ನು ಉಚಿತವಾಗಿ ಪ್ರದರ್ಶಿಸಬಹುದು.
ಜಗದ್ಗುರುಗಳ ಸಂದೇಶ
ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಮೂಲಕ ಧರ್ಮಪ್ರಾಂತ್ಯ ಅಥವಾ ಧರ್ಮಕೇಂದ್ರದ ವೆಬ್‌ಸೈಟ್‌ಗಳನ್ನು ಭೇಟಿ ಮಾಡುವ ಬಳಕೆದಾರರು, ರೋಮ್‌ನ ಬಿಷಪ್ ರವರ ಬೋಧನೆಗಳು ಮತ್ತು ಚಟುವಟಿಕೆಗಳ ಇತ್ತೀಚಿನ ಸುದ್ದಿಗಳ ಬಗ್ಗೆ ಸದಾ ನವೀಕೃತ ಮಾಹಿತಿಯನ್ನು ಪಡೆಯುತ್ತಾರೆ. ಜಗದ್ಗರುಗಳ ಕುರಿತು ಇರುವ ಎಲ್ಲಾ ವಿಷಯಗಳನ್ನು ತಮ್ಮ ಸ್ವಂತ ಭಾಷೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಜಗದ್ಗುರುಗಳ ಸಂದೇಶಕ್ಕೆ ಜೊತೆಯಾಗಿ ಕಳುಹಿಸಲಾದ ಪತ್ರದಲ್ಲಿ ಸಂವಹನ ಡಿಕಾಸ್ಟರಿಯ ಪ್ರಿಫೆಕ್ಟ್ ಪಾವ್ಲೋ ರುಫಿನಿ ರವರು, ರೋಮ್‌ನ ಬಿಷಪ್ ರವರೊಂದಿಗೆ ಇರುವ ಸಂಪರ್ಕವನ್ನು ಒತ್ತಿ ಹೇಳಲು ಈ ವೀಡಿಯೊ ಸಾಧನ ಹೆಚ್ಚು ಸಾಧ್ಯವಾದಷ್ಟು ವೆಬ್‌ಸೈಟ್‌ಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುವುದು ಮಹತ್ವದ್ದಾಗಿದೆ,ಎಂದು ಹೇಳಿ, ಇದು “ಸುವಾರ್ತಾಪ್ರಚಾರಕ್ಕಾಗಿ ಉಪಯುಕ್ತವಾದ ಸಾಧನ” ಎಂದೂ ಸೇರಿಸಿದರು.
ಅದೇ ಡಿಕಾಸ್ಟರಿಯ ಸಂಪಾದಕೀಯ ನಿರ್ದೇಶಕ ಅಂಡ್ರಿಯಾ ಟೋರ್ನಿಯೆಲ್ಲಿ ರವರು, ಈ ಹೊಸ ಸಾಧನದ ವಿಸ್ತರಣೆ ಸುಳ್ಳು ಸುದ್ದಿಗಳ ಸಮಸ್ಯೆಯನ್ನು ಎದುರಿಸಲು ಸಹಾಯಕವಾಗಬಹುದು. ಇದರಿಂದ ಸುದ್ದಿಗಳ ಮತ್ತು ಪಠ್ಯಗಳ ಮೂಲಸ್ರೋತಕ್ಕೆ ತಕ್ಷಣದ ಪ್ರವೇಶ ದೊರೆಯುತ್ತದೆ. ಜಗದ್ಗರುಗಳು ತಮ್ಮ ಸಂದೇಶದಲ್ಲಿ ಈ ಹೊಸ ಮುಂದಾಳತ್ವವನ್ನು ಬೆಂಬಲಿಸುವ ವೇಳೆ ಇದನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ, ಎಂದು ಹೇಳಿದರು.
ಈ ಸಾಧನವನ್ನು ಯಾವುದೇ ವೆಬ್‌ಸೈಟ್‌ಗೆ ಸರಳವಾಗಿ ಕೋಡ್ ಅನ್ನು ನಕಲಿಸಿ (ಕಾಫಿ) ಅಂಟಿಸುವ (ಪೆಸ್ಟ್) ಮೂಲಕ ಉಚಿತವಾಗಿ ಅಳವಡಿಸಬಹುದು.
ತಮ್ಮ ಇಚ್ಛೆಯ ಭಾಷೆಯಲ್ಲಿ ಹಾಗೂ ಅಗತ್ಯ ಗಾತ್ರದ (ಅಡ್ಡ ಮತ್ತು ಉದ್ದ ವಿನ್ಯಾಸಗಳು ಲಭ್ಯವಿವೆ, ಹಾಗೆಯೇ ಪಠ್ಯದ ಫಾಂಟ್ ಆಯ್ಕೆಯೂ ಇದೆ) ಸಾಧನ ರಚಿಸಲು, ಕೆಳಗಿನ ವೆಬ್ ವಿಳಾಸಕ್ಕೆ ಭೇಟಿ ನೀಡಬೇಕು:
https://www.vaticannews.va/widget/embed.html
ಅವಶ್ಯಕ ವಿವರಗಳನ್ನು ನಮೂದಿಸಿದ ಬಳಿಕ, ವೈಯಕ್ತಿಕೃತ (ಕಸ್ಟಮೈಸ್ ಮಾಡಲಾಗಿರುವ) ಕೋಡ್ ಸೃಷ್ಟಿಯಾಗುತ್ತದೆ ಅದನ್ನು ನಕಲಿಸಿ ವೆಬ್‌ಸೈಟ್‌ನಲ್ಲಿ ಅಳವಡಿಸಬಹುದು. ಇದು ಒಮ್ಮೆ ಮಾತ್ರ ವೆಬ್‌ಸೈಟ್‌ನ ವೆಬ್‌ಮಾಸ್ಟರ್ ನಡೆಸಬೇಕಾದ ಪ್ರಕ್ರಿಯೆಯಾಗಿದ್ದು, ನಂತರ ವೀಡಿಯೊ ಸಾಧನ ಯಾವುದೇ ಹೆಚ್ಚುವರಿ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿ ನವೀಕರಿಸುತ್ತದೆ.
ಈ ಸಾಧನದಲ್ಲಿ ಜಗದ್ಗುರುಗಳು ಹಾಗೂ ಜಗದ್ಗುರುಗಳ ಅಧಿಕಾರ ಸ್ಥಳದ ಕುರಿತು ತಕ್ಷಣದ ಸಂಕ್ಷಿಪ್ತ ವೀಡಿಯೊಗಳು ಅಡ್ಡ ಮತ್ತು ಉದ್ದ ವಿನ್ಯಾಸಗಳಲ್ಲಿ ಲಭ್ಯವಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು; ಆಯ್ದ ಭಾಷೆಯಲ್ಲಿ ವ್ಯಾಟಿಕನ್ ನ್ಯೂಸ್‌ನ ಇತ್ತೀಚಿನ ಸುದ್ದಿಗಳ “ಫೀಡ್” ಕೂಡ ಲಭ್ಯವಿದೆ; ಹಾಗೆಯೇ ಜಗದ್ಗುರುಗಳ ಸಂಪೂರ್ಣ ಪಠ್ಯಗಳು ಸದಾ ಲಭ್ಯವಿರುವ Vatican.va ವೆಬ್‌ಪುಟಗಳಿಗೆ ನೇರ ಸಂಪರ್ಕವೂ ಒಳಗೊಂಡಿದೆ.
ಇದರ ಜೊತೆಗೆ, ಎಲ್'ಒಸ್ಸೆರ್ವಟೋರ್ ರೊಮಾನೋ ರಹಾಗೂ ವಾಟಿಕನ್ ರೇಡಿಯೊಗೆ ನೇರ ಲಿಂಕ್‌ಗಳನ್ನೂ ಈ ಸಾಧನ ಒಳಗೊಂಡಿದೆ.