ಜಗದ್ಗುರುಗಳ ಅಧಿಕಾರ ಸ್ಥಳವು ಪ್ರಸ್ತಾಪಿಸಿದ ಸಂವಾದವನ್ನು ಸಂತ Xನೇ ಪಿಯಸ್ ಸಮಾಜ ತಿರಸ್ಕರಿಸಿದೆ
ವ್ಯಾಟಿಕನ್ ವರದಿ
ಸಂತ Xನೇ ಪಿಯಸ್ ಸಮಾಜವು ಜಗದ್ಗುರುಗಳ ಅಧಿಕಾರ ಸ್ಥಳದ ವಿಶೇಷವಾಗಿ ತತ್ತ್ವಶಾಸ್ತ್ರೀಯ ಸಂವಾದದ ಪ್ರಸ್ತಾಪವನ್ನು ತಿರಸ್ಕರಿಸಿದೆ. ದ್ವಿತೀಯ ವ್ಯಾಟಿಕನ್ ಪರಿಷತ್ತಿನ ಪಠ್ಯಗಳು ಹಾಗೂ ಲಿಟರ್ಜಿಕಲ್ ಸುಧಾರಣೆಯ ಮಾನ್ಯತೆಯನ್ನು ಪ್ರಶ್ನಿಸಲು ಅವಕಾಶವಿಲ್ಲ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ, ಜುಲೈ 1ರಂದು ನಿಗದಿಪಡಿಸಿರುವ ಬಿಷಪ್ ದೀಕ್ಷೆಗಳನ್ನು ಮುಂದುವರಿಸುವ ತಮ್ಮ ಉದ್ದೇಶವನ್ನೂ ಸಂಘವು ದೃಢಪಡಿಸಿದೆ.
ಈ ಪ್ರತಿಕ್ರಿಯೆ ಸಂಘದ ಪ್ರಧಾನ ಮೇಲ್ವಿಚಾರಕರಾದ ಫಾ. ಡಾವಿದೇ ಪಾಗ್ಲಿಯಾರಾಣಿ ರವರು ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡಿಸ್ ರವರಿಗೆ ಬರೆದ ಪತ್ರದಲ್ಲಿ ವ್ಯಕ್ತವಾಗಿದೆ. ಅವರು ನಂಬಿಕೆಯ ಸಿದ್ಧಾಂತದ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ಆಗಿದ್ದು, ಫೆಬ್ರವರಿ 12ರಂದು ವ್ಯಾಟಿಕನ್‌ನಲ್ಲಿ ನಡೆದ ಭೇಟಿಯ ನಂತರ ಈ ಪತ್ರ ಕಳುಹಿಸಲಾಯಿತು. ನಂತರ ಕಾರ್ಡಿನಲ್ ಫೆರ್ನಾಂಡಿಸ್ ರವರು ಆ ಭೇಟಿಯನ್ನು “ಸೌಹಾರ್ದಯುತ” ಮತ್ತು “ಪ್ರಾಮಾಣಿಕ” ಎಂದು ವಿವರಿಸಿದರು.
ಕಾರ್ಡಿನಲ್ ರವರು ಇನ್ನೂ ಸ್ಪಷ್ಟಪಡಿಸಬೇಕಾದ ವಿಷಯಗಳ ಬಗ್ಗೆ ನಿಖರ ವಿಧಾನಶೈಲಿಯೊಂದಿಗೆ ತತ್ತ್ವಶಾಸ್ತ್ರೀಯ ಸಂವಾದವನ್ನು ಪ್ರಾರಂಭಿಸುವುದಾಗಿ ಪ್ರಸ್ತಾಪಿಸಿದ್ದರು. ಆದರೆ, ಫಾ. ಪಾಗ್ಲಿಯಾರಾಣಿರವರು ಸಂವಾದದ ಸಾಮಾನ್ಯ ಮಾರ್ಗವು ಕಥೋಲಿಕ ಧರ್ಮಸಭೆಯೊಂದಿಗೆ ಸಂಪೂರ್ಣ ಏಕತೆಯ ಕನಿಷ್ಠ ಅವಶ್ಯಕತೆಗಳು ಏನೆಂಬುದನ್ನು ಒಟ್ಟಿಗೆ ನಿರ್ಧರಿಸುವ ಮಟ್ಟಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು. ಪರಿಷತ್ತಿನ ಪಠ್ಯಗಳನ್ನು ತಿದ್ದುಪಡಿ ಮಾಡಲಾಗುವುದಿಲ್ಲ ಹಾಗೂ ಲಿಟರ್ಜಿಕಲ್ ಸುಧಾರಣೆಯ ಮಾನ್ಯತೆಯನ್ನು ಪ್ರಶ್ನಿಸಲಾಗುವುದಿಲ್ಲ ಎಂಬುದನ್ನು ಅವರು ಒತ್ತಿಹೇಳಿದರು.
ಪರಿಷತ್ತು ಕೇವಲ ಸ್ವತಂತ್ರವಾಗಿ ವ್ಯಾಖ್ಯಾನಿಸಬಹುದಾದ ಪಠ್ಯಗಳ ಸಮೂಹವಲ್ಲ ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಜಗದ್ಗುರುಗಳು ಅದನ್ನು ನಿರ್ದಿಷ್ಟ ತತ್ತ್ವಶಾಸ್ತ್ರೀಯ ಮತ್ತು ಧರ್ಮಾಧ್ಯಕ್ಷರ ಮಾರ್ಗಸೂಚಿಗಳ ಪ್ರಕಾರ ಅನುಷ್ಠಾನಗೊಳಿಸಿದ್ದಾರೆ ಎಂದು ಅವರು ಹೇಳಿದರು. ಮಾರ್ಸೆಲ್ ಲೆಫೆಬ್ವ್ರೆ ರವರಿಂದ ಸ್ಥಾಪಿತವಾದ ಈ ಸಂಘವು ಲಿಟರ್ಜಿಕಲ್ ಸುಧಾರಣೆಯ ಫಲವಾಗಿ ರೂಪುಗೊಂಡ ವಿಧಿಯನ್ನು ಮಾನ್ಯವೆಂದು ಒಪ್ಪುವುದಿಲ್ಲ.
ಈ ಹಿನ್ನೆಲೆಯಲ್ಲಿ, ಸಂಘವು ಜುಲೈ 1ರ ಬಿಷಪ್ ದೀಕ್ಷೆಯನ್ನು ಮುಂದೂಡಲು ಸಮ್ಮತಿಸದಿರುವುದಾಗಿ ತಿಳಿಸಿದೆ. ಪರಂಪರೆಯ ಉಳಿವಿಗಾಗಿ ಇದು ತುರ್ತು ಮತ್ತು ಅಗತ್ಯ ಕ್ರಮ ಎಂದು ಹೇಳಲಾಗಿದೆ. ಇದೇ ವೇಳೆ, ಕಾರ್ಡಿನಲ್ ಫೆರ್ನಾಂಡಿಸ್ ರವರು ಜಗದ್ಗುರುಗಳ ಅನುಮತಿಯಿಲ್ಲದೆ ಬಿಷಪ್‌ಗಳನ್ನು ಅಭಿಷೇಕಿಸುವುದು ಧರ್ಮ ಸಭೆಯ ಏಕತೆಯಲ್ಲಿ ಗಂಭೀರ ಬೇಧ (ಶಿಸ್ಮ) ಉಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.