ಸಂತ ಪೇತ್ರರ ಮಹಾದೇವಾಲಯದಲ್ಲಿ 'ಹೊಸ ಶಿಲುಬೆಯ ಹಾದಿ’ ಉದ್ಘಾಟಿಸಲಾಯಿತು ಸಂತ ಪೇತ್ರರ ಮಹಾದೇವಾಲಯದಲ್ಲಿ 'ಹೊಸ ಶಿಲುಬೆಯ ಹಾದಿ’ ಉದ್ಘಾಟಿಸಲಾಯಿತು 

ಸಂತ ಪೇತ್ರರ ಮಹಾದೇವಾಲಯದಲ್ಲಿ 'ಹೊಸ ಶಿಲುಬೆಯ ಹಾದಿ’ ಆರಂಭಗೊಂಡಿತು

ಸಂತ ಪೇತ್ರರ ಮಹಾದೇವಾಲಯದಲ್ಲಿ ಶುಕ್ರವಾರ ಮಧ್ಯಾಹ್ನ ಹೊಸ ಶಿಲುಬೆಯ ಹಾದಿಯನ್ನು ಉದ್ಘಾಟಿಸಿದರು. ಈ ಶಿಲುಬೆಯ ಹಾದಿಯನ್ನು ಅಂತರರಾಷ್ಟ್ರೀಯ ಸ್ಪರ್ಧೆಯ ನಂತರ ಆಯ್ಕೆಯಾದ ಯುವ ಸ್ವಿಸ್ ಕಲಾವಿದ ಮ್ಯಾನುಯೆಲ್ ಆಂಡ್ರಿಯಾಸ್ ಡರ್ ರವರು ರಚಿಸಿದ್ದಾರೆ. ಈ ಸ್ಪರ್ಧೆಗೆ ಸಾವಿರಕ್ಕೂ ಹೆಚ್ಚು ಕೃತಿಗಳು ಸಲ್ಲಿಕೆಯಾಗಿದ್ದವು.

ವ್ಯಾಟಿಕನ್ ವರದಿ

ಸಂತ ಪೇತ್ರರ ಮಹಾದೇವಾಲಯದ ಸಮರ್ಪಣೆಯ 400ನೇ ವಾರ್ಷಿಕೋತ್ಸವದ (1626–2026) ಅಂಗವಾಗಿ, ಸೇಂಟ್ ಪೇತ್ರರ ಬಟ್ಟೆ ಮಹಾದೇವಾಲಯದ ಒಳಭಾಗದಲ್ಲಿ ಈ ಹೊಸ ‘ಶಿಲುಬೆಯ ಹಾದಿಯನ್ನು  ಪ್ರಸ್ತುತಪಡಿಸುತ್ತಿದೆ.

ಈ ಕೃತಿ 2023ರ ಡಿಸೆಂಬರ್‌ನಲ್ಲಿ ಆರಂಭಿಸಲಾದ ಅಂತರರಾಷ್ಟ್ರೀಯ ಸ್ಪರ್ಧೆಯ ಬಳಿಕ ಆಯ್ಕೆಯಾಯಿತು. ರಾಷ್ಟ್ರೀಯತೆ, ಲಿಂಗ, ವಯಸ್ಸು ಅಥವಾ ಧಾರ್ಮಿಕ ಸಂಬಂಧವನ್ನೇನೂ ಪರಿಗಣಿಸದೆ ಎಲ್ಲರಿಗೂ ತೆರೆಯಲ್ಪಟ್ಟ ಈ ಆಹ್ವಾನಕ್ಕೆ ಐದು ಖಂಡಗಳ ಎಂಭತ್ತು ದೇಶಗಳಿಂದ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದುವು.

ಕಲಾ ಇತಿಹಾಸಜ್ಞರು, ದೈವರಾಧನ ವಿಧಿಯ ತಜ್ಞರು ಹಾಗೂ ವ್ಯಾಟಿಕನ್ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಆಯೋಗವು ಆಯ್ಕೆ ಪ್ರಕ್ರಿಯೆಯನ್ನು ನಡೆಸಿತು. ಜೀವನವಿವರಗಳು ಮತ್ತು ಛಾಯಾಚಿತ್ರ ಪೋರ್ಟ್‌ಫೋಲಿಯೊಗಳನ್ನು ಪರಿಶೀಲಿಸಿದ ನಂತರ, ಹದಿನಾಲ್ಕು ಕಲಾವಿದರನ್ನು ತಲಾ ಎರಡು ರೇಖಾಚಿತ್ರಗಳನ್ನು ಸಲ್ಲಿಸಲು ಆಹ್ವಾನಿಸಲಾಯಿತು. ಇದರಲ್ಲಿ ಯೇಸು ಶಿಲುಬೆಯಲ್ಲಿ ಪ್ರಾಣತ್ಯಾಗ ಮಾಡಿದ ಹನ್ನೆರಡನೇ ಸ್ಥಾನದ ವಿನ್ಯಾಸ ಕಡ್ಡಾಯವಾಗಿತ್ತು.

ಯುವ ಸ್ವಿಸ್ ಕಲಾವಿದ ಮ್ಯಾನುಯೆಲ್ ಆಂಡ್ರಿಯಾಸ್ ಡರ್ ರವರ ಪ್ರಸ್ತಾವನೆ ಸಂಯೋಜನಾ ಸಮತೋಲನ ಮತ್ತು ಪಾಸ್ಕ ರಹಸ್ಯವನ್ನು ಅಭಿವ್ಯಕ್ತಿಸುವ ಶಕ್ತಿಗಾಗಿ ಏಕಮತದಿಂದ ಆಯ್ಕೆಯಾಯಿತು.

ಹದಿನಾಲ್ಕು ಸ್ಥಾಣಗಳನ್ನು ಸಂತ ಪೇತ್ರರ ಬಟ್ಟೆಯಿಂದ ಕರಕುಶಲಕಾರರು ಅಲಂಕರಿಸಿ, ಮಹಾದೇವಾಲಯದ ಮಧ್ಯ ನಾವೆಯಲ್ಲಿ ಹಾಗೂ ‘ಕನ್‌ಫೆಷನ್’ ಭಾಗದ ಸುತ್ತಲೂ ತಪಸ್ಸು ಕಾಲಾವಧಿಯವರೆಗೆ ಪ್ರದರ್ಶಿಸಲಿದ್ದಾರೆ. ಇದು ಭಕ್ತರು ಮತ್ತು ಸಂದರ್ಶಕರಿಗೆ ಪ್ರಾರ್ಥನೆ ಮತ್ತು ಧ್ಯಾನಕ್ಕಾಗಿ ವಿಶೇಷ ಅವಕಾಶವನ್ನು ಒದಗಿಸುತ್ತದೆ.

ಸಂಕ್ಷಿಪ್ತ ಉದ್ಘಾಟನೆಯ ನಂತರ, ಶಿಲುಬೆ ಹಾದಿಯ ವಿಧಿ ಮಹಾದೇವಾಲಯಯೊಳಗೆ ನಡೆಯಲಿದೆ. ಭಾಗವಹಿಸುವವರು ಹದಿನಾಲ್ಕು ಸ್ಥಾಳಗಳ ಮೂಲಕ ಸಾಗುತ್ತಾ, ಓದುವುದು, ಪ್ರಾರ್ಥನೆಗಳು ಮತ್ತು ಮೌನ ಕ್ಷಣಗಳ ಮೂಲಕ ಪ್ರಭುವಿನ ಪಾಡುಗಳನ್ನು ಧ್ಯಾನಿಸುವರು ಪ್ರೇಷಿತರು ಪೇತ್ರನ ಸ್ಮರಣೆಯನ್ನು ಸಂರಕ್ಷಿಸುವ ಈ ಪವಿತ್ರ ಸ್ಥಳದ ಹೃದಯಭಾಗದಲ್ಲೇ.

ಈ ಹೊಸ ‘ಶಿಲುಬೆ ಹಾದಿಯ’ ಮೂಲಕ, ಸಂತ ಪೇತ್ರರ ಮಹಾದೇವಾಲಯ ಕಲೆ ಮತ್ತು ದೈವಾರಾಧನೆ ವಿಧಿಯ ನಡುವಿನ ಸಂವಾದವನ್ನು ಮತ್ತೊಮ್ಮೆ ಹೊಸದಾಗಿ ಜೀವಂತಗೊಳಿಸುತ್ತಿದ್ದು, ಸೌಂದರ್ಯವು ಶಿಲುಬೆಯ ರಹಸ್ಯವನ್ನು ಹೇಗೆ ಬೆಳಗಿಸುತ್ತದೆ ಎಂಬುದಕ್ಕೆ ದೃಶ್ಯಾತ್ಮಕ ಅಭಿವ್ಯಕ್ತಿಯನ್ನು ಧರ್ಮ ಸಭೆ ಹಾಗೂ ಯಾತ್ರಿಕರಿಗೆ ನೀಡುತ್ತದೆ.

20 ಫೆಬ್ರವರಿ 2026, 10:50