ಸಂತ ಪೇತ್ರರ ಚೌಕ ಸಂತ ಪೇತ್ರರ ಚೌಕ  (© - Ruddi Hansen 2015)

ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಸಂತ X ನೇ ಪಿಯಸ್ ಸಂಘದ ನಡುವೆ ಸಂಪರ್ಕಗಳು ಮುಂದುವರಿದಿವೆ

ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರು, ಜುಲೈ ತಿಂಗಳಲ್ಲಿ ನಿಗದಿಯಾಗಿರುವ ಬಿಷಪ್ ದೀಕ್ಷೆಯ ಘೋಷಣೆಯ ನಂತರವೂ ಸಂತ X ನೇ ಪಿಯಸ್ ಸಂಘ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ನಡುವೆ ಸಂವಾದಗಳು ಮುಂದುವರಿದಿವೆ ಎಂದು ಸ್ಪಷ್ಟಪಡಿಸಿದರು.

ವ್ಯಾಟಿಕನ್ ವರದಿ

ಸಂತ Xನೇ ಪಿಯಸ್ ಸಂಘ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ನಡುವೆ ಸಂಪರ್ಕಗಳು ಮುಂದುವರಿದಿವೆ ಉದ್ಭವಿಸಿರುವ ವಿಷಯಗಳ ಕುರಿತು ಭಿನ್ನಾಭಿಪ್ರಾಯಗಳು ಅಥವಾ ಏಕಪಕ್ಷೀಯ ಪರಿಹಾರಗಳನ್ನು ತಪ್ಪಿಸುವುದೇ ಉದ್ದೇಶವಾಗಿದೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕ ಮಾತಿಯೋ ಬ್ರೂನಿರವರು ಫೆಬ್ರವರಿ 3ರಂದು ತಿಳಿಸಿದ್ದಾರೆ.

ಅವರು ಈ ಮಾತುಗಳನ್ನು ಫೆಬ್ರವರಿ 2ರಂದು ಸಂತ X ನೇ ಪಿಯಸ್  ಸಂಘವು ಪ್ರಕಟಿಸಿದ ಪ್ರಕಟಣೆಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದರು. ಆ ಪ್ರಕಟಣೆಯಲ್ಲಿ ಫ್ರಾನ್ಸ್‌ನ ಫ್ಲಾವಿನಿ-ಸೂರ್-ಓಝರೇನ್‌ನಲ್ಲಿ ಇರುವ ಸಂತ ಕುರೇ ದಿ ಆರ್ಸ್ ಅಂತರರಾಷ್ಟ್ರೀಯ ಸೆಮಿನರಿಯಲ್ಲಿ ಜುಲೈ 1ರಂದು ಬಿಷಪ್ ದೀಕ್ಷೆಯನ್ನು  ನಡೆಸುವ ಯೋಜನೆ ಘೋಷಿಸಲಾಯಿತು.

ಸಂತ  X ಪಿಯಾಸ್ ಸಂಘದ ಪ್ರಕಟಣೆಯಲ್ಲಿ, ತಮ್ಮ ಬಿಷಪ್‌ಗಳ ಧರ್ಮಸೇವೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವ ವಿಶೇಷ ಅಗತ್ಯತೆಯನ್ನು ವ್ಯಕ್ತಪಡಿಸಿ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರ ಕಳುಹಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಆ ಪ್ರಕಟಣೆಯ ಪ್ರಕಾರ, ಜಗದ್ಗುರುಗಳ ಅಧಿಕಾರ ಸ್ಥಳದಿಂದ ಬಂದ ಉತ್ತರ ಪತ್ರವು ನಮ್ಮ ಬೇಡಿಕೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಸಂಘವು ಅಭಿಪ್ರಾಯಪಟ್ಟಿದ್ದು, ಇದರಿಂದಾಗಿ ಸೂಚಿಸಲಾದ ಮಾರ್ಗದಲ್ಲಿ ಮುಂದುವರಿಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

04 ಫೆಬ್ರವರಿ 2026, 00:00