ಕಾರ್ಡಿನಲ್ ಪಾರೋಲಿನ್ ರವರು ಇಸ್ರೇಲ್‌ನ ರಾಯಭಾರಿಯನ್ನು ಭೇಟಿ ಮಾಡಿ, ಹೋಲಿ ಸೆಪಲ್ಕರ್ ಘಟನೆ ಕುರಿತು ವಿಷಾದವನ್ನು ವ್ಯಕ್ತಪಡಿಸಿದರು.
ವ್ಯಾಟಿಕನ್ ವರದಿ
ಮಾರ್ಚ್ 30, ಸೋಮವಾರ, ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೇತ್ರೋ ಪಾರೋಲಿನ್ ರವರು, ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪಾಲ್ ಆರ್. ಗ್ಯಾಲಘರ್ ರವರೊಂದಿಗೆ, ಜಗದ್ಗುರುಗಳ ಅಧಿಕಾರ ಸ್ಥಳದ ಇಸ್ರೇಲ್ ರಾಜ್ಯದ ರಾಯಭಾರಿಯಾದ ಯಾರೋನ್ ಸೈಡಮನ್ ರವರೊಂದಿಗೆ ಸಭೆ ನಡೆಸಿದರು.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ತನ್ನ ಟೆಲಿಗ್ರಾಂ ಚಾನೆಲ್ ಮೂಲಕ ಈ ಭೇಟಿಯ ಕುರಿತು ಮಾಹಿತಿ ನೀಡಿದ್ದು, ಮಾರ್ಚ್ 29ರ ಗರಿಗಳ ಭಾನುವಾರದ ದಿನ ನಡೆದ “ದುರ್ಭಾಗ್ಯಕರ ಘಟನೆ” ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು ಎಂದು ತಿಳಿಸಿದೆ. ಆ ಸಂದರ್ಭದಲ್ಲಿ ಜೆರುಸಲೇಮಿನ ಲ್ಯಾಟಿನ್ ಪ್ಯಾಟ್ರಿಯಾರ್ಕ್ ಕಾರ್ಡಿನಲ್ ಪಿಯರ್ಬಟ್ಟಿಸ್ತಾ ಪಿಜ್ಜಾಬಲ್ಲಾ, ಒಎಚ್ಎ, ಮತ್ತು ಪವಿತ್ರ ಭೂಮಿಯ ಕುಸ್ಟೋಸ್ ವೀಕ್.ಸ್ವಾಮಿ ಫ್ರಾನ್ಸೆಸ್ಕೋ ಇಯೆಲ್ಪೋ, ಒಎಚ್ಎ ರವರನ್ನು ಇಸ್ರೇಲ್ ಪೊಲೀಸರು ಜೆರುಸಲೇಮಿನ ಹೋಲಿ ಸೆಪಲ್ಕರ್ ಬ್ಯಾಸಿಲಿಕಾಗೆ ಪ್ರವೇಶಿಸಲು ತಡೆದಿದ್ದರು.
“ಈ ಸಂಭಾಷಣೆಯ ವೇಳೆ,” ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಪ್ರಕಟಣೆ ಹೇಳುತ್ತದೆ, ನಡೆದ ಘಟನೆಯ ಕುರಿತು ವಿಷಾದವನ್ನು ವ್ಯಕ್ತಪಡಿಸಲಾಯಿತು, ಸ್ಪಷ್ಟೀಕರಣಗಳನ್ನು ನೀಡಲಾಯಿತು, ಮತ್ತು ಜೆರುಸಲೇಮಿನ ಲ್ಯಾಟಿನ್ ಪ್ಯಾಟ್ರಿಯಾರ್ಕೇಟ್ ಹಾಗೂ ಸ್ಥಳೀಯ ಅಧಿಕಾರಿಗಳ ನಡುವೆ, ಜೆರುಸಲೇಮಿನ ಹೋಲಿ ಸೆಪಲ್ಕರ್ ಬ್ಯಾಸಿಲಿಕಾದಲ್ಲಿ ಪುನರುತ್ಥಾನದ ಮೂರು ದಿನಗಳ ಧ್ಯಾನ ಆಚರಣೆಗಳಲ್ಲಿ ಭಾಗವಹಿಸುವ ಕುರಿತು ತಲುಪಿದ ಒಪ್ಪಂದವನ್ನು ಗಮನಕ್ಕೆ ತೆಗೆದುಕೊಳ್ಳಲಾಯಿತು.”