“ಅಮೆರಿಕಾದಲ್ಲಿ ಜಗದ್ಗುರುಗಳು ಚಲಿಸುವ ವಾಹನ: ಯುದ್ಧದಿಂದ ಪ್ರಭಾವಿತರಾದ ಮಕ್ಕಳಿಗಾಗಿ ಐಕ್ಯತೆಯ ರಸ್ತೆ ಪ್ರಯಾಣ.”
ವ್ಯಾಟಿಕನ್ ವರದಿ
“ದಾನಧರ್ಮವು ಕ್ರೈಸ್ತ ಜೀವನದ ಬೆನ್ನೆಲುಬಾಗಿದ್ದು, ಅದು ಕೇವಲ ಸಿದ್ಧಾಂತವಾಗಿ ಉಳಿಯದೆ, ಕ್ರಿಯೆಯಲ್ಲಿ ವ್ಯಕ್ತವಾಗಬೇಕು. ಅದು ಸೇವೆಯಾಗಿ ರೂಪಾಂತರಗೊಳ್ಳಬೇಕು.” ಎಂದು ಜಗದ್ಗುರುಗಳು ದಾನಾಧಿಕಾರಿ ಆರ್ಚ್ಬಿಷಪ್ ಲೂಯಿಸ್ ಮರಿನ್ ಡಿ ಸ್ಯಾನ್ ಮಾರ್ಟಿನ್ ರವರು ಹೇಳಿದ್ದಾರೆ. ಈ ಮಾತುಗಳು ಜಗದ್ಗುರುಗಳ ಪರವಾಗಿ ತನ್ನ ಸೇವೆಯನ್ನು ನೆರವೇರಿಸುವ ದತ್ತಿ ಸೇವೆಗಾಗಿ ಡಿಕ್ಯಾಸ್ಟರಿ ಹೊಸ ಉಪಕ್ರಮದ ಮಹತ್ವವನ್ನು ಸ್ಪಷ್ಟಪಡಿಸುತ್ತವೆ. ಏಪ್ರಿಲ್ 28ರಂದು, ಡಿಕಾಸ್ಟರಿಯ ಪ್ರಿಫೆಕ್ಟ್ ಸ್ವತಃ ಜಗದ್ಗುರುಗಳು ಚಲಿಸುವ ವಾಹನದ ಕೀಲಿಗಳನ್ನು ಅಮೆರಿಕಾದ ದಾನಧರ್ಮ ಸಂಸ್ಥೆಯಾದ ಕ್ರಾಸ್ ಕ್ಯಾಥೋಲಿಕ್ ಔಟ್ರೀಚ್ ಅಧ್ಯಕ್ಷ ಮಿಚೆಲ್ ಸಾಗರಿನೊ ರವರಿಗೆ ಹಸ್ತಾಂತರಿಸಿದರು.
ಬುಧವಾರ ಬೆಳಿಗ್ಗೆ, ಸಾಮಾನ್ಯ ಸಭೆಯ ನಂತರ, ಸಾಗರಿನೊರವರು ಜಗದ್ಗುರು XIVನೇ ಲಿಯೋರವರನ್ನು ಭೇಟಿಯಾಗಿ, ಸಂಸ್ಥೆಯ ಕಾರ್ಯಗಳನ್ನು ವಿವರಿಸಿದರು. ಈ ಸಂಸ್ಥೆ ಹಿಂದೆ ಚಿಕ್ಲಾಯೋಗೂ ಡಯಾಸಿಸ್ ಸಹಾಯ ಮಾಡಿತ್ತು. ಈ ಸಂದರ್ಭ "ಅಮೇರಿಕನ್ ಕ್ಯಾಥೋಲಿಕ್ ಹೀರೋಸ್: "ಭರವಸೆಗಾಗಿ ರಸ್ತೆ ಪ್ರವಾಸ"ಎಂಬ ಉಪಕ್ರಮದ ಅಧಿಕೃತ ಪ್ರಾರಂಭವಾಯಿತು ಇದು ನ್ಯೂಯಾರ್ಕ್‌ನಿಂದ ಕ್ಯಾಲಿಫೋರ್ನಿಯಾದವರೆಗೆ ಸುಮಾರು 3,700 ಮೈಲುಗಳ ಅಮೆರಿಕಾ ಪ್ರವಾಸವಾಗಿದ್ದು, ಯುದ್ಧದ ಪರಿಣಾಮಗಳನ್ನು ಅನುಭವಿಸುವ ಮಕ್ಕಳಿಗೂ ದುರ್ಬಲ ವರ್ಗದವರಿಗೆ ಸಹಾಯ ಮಾಡಲು ಮತ್ತು ಪ್ರಾರ್ಥನೆಗೆ ಅವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಿದೆ.
ಈ ದಾನಧರ್ಮ ಸಂಸ್ಥೆ ಅಮೆರಿಕಾದಲ್ಲಿ ಒಂದು ಮಹತ್ತರ ಹರಾಜು ಕಾರ್ಯಕ್ರಮವನ್ನು ಕೂಡ ಆಯೋಜಿಸಲಿದೆ.ಅದರ ಆದಾಯವನ್ನು ಡಿಕಾಸ್ಟರಿಯ ಸೇವಾಕಾರ್ಯಗಳಿಗೆ ಮೀಸಲಿಡಲಾಗುತ್ತದೆ. ಆರ್ಚ್‌ಬಿಷಪ್ ಮಾರಿನ್ ದೆ ಸಾನ್ ಮಾರ್ಟಿನ್ ರವರ ಪ್ರಕಾರ,ಜಗದ್ಗುರುಗಳು ಚಲಿಸುವ ವಾಹನದ ಹಸ್ತಾಂತರವು ಅತ್ಯಂತ ಅಗತ್ಯವಿರುವವರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸುವ ಸಾಮಾಜಿಕ ಮೌಲ್ಯವನ್ನು ಹೊಂದಿದ್ದು, “ಜಗದ್ಗುರುಗಳೊಂದಿಗೆ ಬಂಧವನ್ನು ಬಲಪಡಿಸಿ, ಸುವಾರ್ತಾ ಪ್ರಚಾರವನ್ನು ಉತ್ತೇಜಿಸುತ್ತದೆ.”
ಸುಮಾರು 25 ವರ್ಷಗಳ ಹಿಂದೆ ಸ್ಥಾಪಿತವಾದ ಈ ಸಂಸ್ಥೆ ವಿಶ್ವದ ಅನೇಕ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 2024ರಲ್ಲಿ ಮಾತ್ರವೇ ಇದು 32 ದೇಶಗಳಲ್ಲಿ ಉದಾಹರಣೆಗೆ ಮಲಾವಿ, ಜಾಂಬಿಯಾ ಮತ್ತು ಹೈಟಿ—279 ಯೋಜನೆಗಳಿಗೆ ಬೆಂಬಲ ನೀಡಿದ್ದು, ಆರೋಗ್ಯ, ಕೃಷಿ, ಆಹಾರ, ಶುದ್ಧ ನೀರು, ಶಿಕ್ಷಣ ಹಾಗೂ ವಿಶೇಷವಾಗಿ ಆಧ್ಯಾತ್ಮಿಕ ಸಹಾಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ.
ಈ ವಿಶೇಷ ರಸ್ತೆ ಪ್ರಯಾಣದಲ್ಲಿ ಜಗದ್ಗುರುಗಳು ಚಲಿಸುವ ವಾಹನ “ಭರವಸೆಯ ವಾಹನವಾಗಿ” ರೂಪಾಂತರಗೊಳ್ಳಲಿದೆ ಅಂದರೆ ದುಃಖದಲ್ಲಿರುವವರತ್ತ ಸಾಗುವ ಭರವಸೆಯ ವಾಹನ. 2026ರ ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯಲಿರುವ ಈ ಪ್ರಯಾಣ, 1776ರಲ್ಲಿ ಸಹಿ ಮಾಡಲಾದ ಅಮೆರಿಕದ ಸ್ವಾತಂತ್ರ್ಯ ಘೋಷಣೆಯ 250ನೇ ವಾರ್ಷಿಕೋತ್ಸವದೊಂದಿಗೆ ಕೂಡ ಹೊಂದಿಕೆಯಾಗುತ್ತದೆ. ಇದು ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಸೇರಿದಂತೆ 13 ನಗರಗಳಿಗೆ ಭೇಟಿ ನೀಡಲಿದೆ ನೊಟ್ರೆ ಡೇಮ್ ವಿಶ್ವವಿದ್ಯಾಲಯ ಮತ್ತು ಸೇಂಟ್ ಲೂಯಿಸ್ ಮುಂತಾದ ಸ್ಥಳಗಳಲ್ಲಿಯೂ ತಂಗಲಿದೆ ಮತ್ತು ದಕ್ಷಿಣ–ಪಶ್ಚಿಮ ಭಾಗಗಳವರೆಗೆ ಹಾಗೂ ಕ್ಯಾಲಿಫೋರ್ನಿಯಾದವರೆಗೆ ವಿಸ್ತರಿಸಲಿದೆ.
ಈ ಉಪಕ್ರಮವನ್ನು ಮೂಲತಃ ಜಗದ್ಗುರು ಫ್ರಾನ್ಸಿಸ್ ರವರು ಪ್ರಾರಂಭಿಸಲು ಅನುಮತಿಸಿದ್ದರು, ಮತ್ತು ಇದರ ಆದಾಯವನ್ನು ಬಡವರಿಗೂ ವಿಶೇಷವಾಗಿ ಯುದ್ಧದಿಂದ ಬಳಲುತ್ತಿರುವ ಮಕ್ಕಳಿಗೂ ಮೀಸಲಿಡಲಾಗುತ್ತದೆ. ತಮ್ಮ ಡಿಲೆಕ್ಸಿ ತೇ ಎಂಬ ಪ್ರೇಷಿತರ ಉಪದೇಶದಲ್ಲಿ ಜಗದ್ಗುರು XIVನೇ ಲಿಯೋರವರು “ಕ್ರೈಸ್ತ ಪವಿತ್ರತೆ ಮಾನವಕುಲದ ಅತ್ಯಂತ ಮರೆತ ಮತ್ತು ಗಾಯಗೊಂಡ ಸ್ಥಳಗಳಲ್ಲಿ ಅರಳುತ್ತದೆ. ಅತ್ಯಂತ ಬಡವರಿಗೆ ದೇವರ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಅವರು ಸುವಾರ್ತೆಯ ಪ್ರಿಯಜನರು ಮತ್ತು ರಾಜ್ಯದ ವಾರಸುದಾರರು. ಅವರಲ್ಲೇ ಕ್ರಿಸ್ತನು ಇಂದಿಗೂ ದುಃಖಿಸುತ್ತಾನೆ ಮತ್ತು ಪುನರುತ್ಥಾನಗೊಳ್ಳುತ್ತಾನೆ.ಅವರಲ್ಲೇ ಧರ್ಮಸಭೆಯ ತನ್ನ ನಿಜವಾದ ಕರೆಯನ್ನು ಮರುಕಂಡುಕೊಳ್ಳುತ್ತದೆ” ಎಂದು ಬರೆಯುತ್ತಾರೆ.
ಇದೇ ದರ್ಶನವನ್ನು ಮುಂದುವರಿಸುತ್ತಾ, ದತ್ತಿ ಸೇವೆಗಾಗಿ ಡಿಕ್ಯಾಸ್ಟರಿ ತನ್ನ ಸೇವೆಯನ್ನು ಮಹಾ ಸಮರ್ಪಣೆಯೊಂದಿಗೆ ಮುಂದುವರಿಸುತ್ತಿದೆ.