ವ್ಯಾಟಿಕನ್‌ನಲ್ಲಿ ವಿವಾಹ, ನಂಬಿಕೆ ಮತ್ತು ಡೋಸೆಂಡಿ ಮ್ಯೂನಸ್ ಕುರಿತು ಒಂದು ಅಧ್ಯಯನ ದಿನ.
ವ್ಯಾಟಿಕನ್ ವರದಿ
ಸಾಮಾನ್ಯ ಕ್ರೈಸ್ತ ಕುಟುಂಬ ಮತ್ತು ಜೀವನದ ಡಿಕಾಸ್ಟರಿ “ವಿವಾಹದ ಸಂಸ್ಕಾರ, ನಂಬಿಕೆ ಮತ್ತು ಡೋಸೆಂಡಿ ಮ್ಯೂನಸ್ ” ಎಂಬ ವಿಷಯದ ಮೇಲೆ ಒಂದು ಅಧ್ಯಯನ ದಿನವನ್ನು ಆಯೋಜಿಸಲಿದೆ.
ಡಿಕಾಸ್ಟರಿಯ ಪ್ರಕಟಣೆಯ ಪ್ರಕಾರ, ಈ ಕಾರ್ಯಕ್ರಮವು 2026ರ ಏಪ್ರಿಲ್ 28ರಂದು ಮಂಗಳವಾರ ವ್ಯಾಟಿಕನ್‌ನ IVನೇ ಕಾಸಿನಾ ಪಿಯೋ ನಡೆಯಲಿದೆ.
ಆಮಂತ್ರಣದ ಮೇರೆಗೆ ಸುಮಾರು 75 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅವರು ರೋಮಿನ ಪ್ರಾಂತ್ಯದ ವಿವಿಧ ಡಿಕಾಸ್ಟರಿಗಳಿಂದ ಹಾಗೂ ಗುರು ವಿದ್ಯಾರ್ಥಿ ಮಂದಿರಗಳು ಮತ್ತು ತರಬೇತಿ ಕಾರ್ಯಕ್ರಮಗಳಿಂದ ಆಗಮಿಸಲಿದ್ದು, ರೆಕ್ಟರ್‌ಗಳು, ಉಪನ್ಯಾಸಕರು ಹಾಗೂ ಭವಿಷ್ಯದ ಗುರುಗಳನ್ನು ರೂಪಿಸುವ ಮತ್ತು ಧರ್ಮ ಸಭೆಯ ಶಿಕ್ಷಣ ಕಾರ್ಯವನ್ನು ಬೆಂಬಲಿಸುವ ಜವಾಬ್ದಾರಿಯನ್ನು ಹೊಂದಿರುವವರು ಇದರಲ್ಲಿ ಸೇರಿದ್ದಾರೆ.
ಈ ಉಪಕ್ರಮವು, ಡಿಕಾಸ್ಟರಿ ವಿವರಿಸುವಂತೆ, “ವಿವಾಹ, ನಂಬಿಕೆ ಮತ್ತು ಧರ್ಮ ಸಭೆಯ ಗುರಿ ನಡುವಿನ ಸಂಬಂಧವು ಈಗ ವಿಶೇಷ ಮಹತ್ವ ಹೊಂದಿರುವ ಧರ್ಮಾಧ್ಯಕ್ಷೀಯ ಮತ್ತು ಶಿಕ್ಷಣದ ವಿಷಯವಾಗಿದೆ” ಎಂಬ ಅರಿವಿನಿಂದ ಹುಟ್ಟಿಕೊಂಡಿದೆ.
ಅಧ್ಯಯನ ದಿನದ ಕಾರ್ಯಕ್ರಮ
ಡಿಕಾಸ್ಟರಿಯ ಕಾರ್ಯಕ್ರಮದ ಪ್ರಕಾರ, ಈ ಸಭೆ ಬೆಳಿಗ್ಗೆ 8:30ಕ್ಕೆ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೆವಿನ್ ಫಾರೆಲ್ ರವರ ಪರಿಚಯ ಭಾಷಣದಿಂದ ಆರಂಭವಾಗಲಿದೆ.
ತಕ್ಷಣವೇ, ಪಾಂಟಿಫಿಕಲ್ ಸೆಲೇಶಿಯನ್ ವಿಶ್ವವಿದ್ಯಾಲಯದ ರೆಕ್ಟರ್ ವಂ. ಸ್ವಾಮಿ ಆಂಡ್ರಿಯಾ ಬೊಝೋಲೊ ಮತ್ತು ಪಾಂಟಿಫಿಕಲ್ ಯುನಿವರ್ಸಿಟಿ ಆಫ್ ದಿ ಹೋಲಿ ಕ್ರಾಸ್‌ನ ಬೈಬಲ್ ಪಂಡಿತ ಹಾಗೂ ಹೋಮಿಲೆಟಿಕ್ಸ್ ಮತ್ತು ಧರ್ಮಾಧ್ಯಕ್ಷೀಯ ತತ್ವಶಾಸ್ತ್ರದ ಪ್ರಾಧ್ಯಾಪಕ ವಂ. ಸ್ವಾಮಿ ಫಾಬಿಯೋ ರೊಸಿನಿರವರ ಪ್ರಸ್ತುತಿಗಳು ನಡೆಯಲಿವೆ.
ಕಾರ್ಯಕ್ರಮವು ಮಧ್ಯಾಹ್ನ 1:30ಕ್ಕೆ ಸಮಾಪ್ತಿಯಾಗಲಿದ್ದು, ನಂತರ ಸಂವಾದ ಮತ್ತು ಚರ್ಚೆಗೆ ಸಮಯ ಮೀಸಲಿಡಲಾಗುತ್ತದೆ.
ಪ್ರಕಟಣೆಯಲ್ಲಿ ಡಿಕಾಸ್ಟರಿ ಹೇಳುವಂತೆ, “ಗಂಭೀರ ಸಾಂಸ್ಕೃತಿಕ ಬದಲಾವಣೆಗಳಿಂದ ಗುರುತಿಸಲ್ಪಟ್ಟ ಈ ಕಾಲದಲ್ಲಿ, ಯುವಕರು, ನಿಶ್ಚಿತಾರ್ಥಗೊಂಡ ಜೋಡಿಗಳು ಮತ್ತು ವಿವಾಹಿತ ದಂಪತಿಗಳನ್ನು ಹೇಗೆ ಜೊತೆಗೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ಮಾಡಲು ಈ ಕಾರ್ಯಕ್ರಮವು ಅವಕಾಶ ಒದಗಿಸುತ್ತದೆ.” ಜೊತೆಗೆ, “ಈ ಪ್ರಯಾಣವನ್ನು ಹೆಚ್ಚಿನ ಜಾಗೃತಿಯೂ ಸಾಮರ್ಥ್ಯವೂ ಹೊಂದಿ ಬೆಂಬಲಿಸಬಲ್ಲ ಮಂತ್ರಿಗಳು ಮತ್ತು ಧರ್ಮಾಧ್ಯಕ್ಷೀಯ ಕಾರ್ಯಕರ್ತರನ್ನು ಹೇಗೆ ತರಬೇತಿಗೊಳಿಸಬೇಕು ಎಂಬುದರ ಬಗ್ಗೆ” ಕೂಡ ಚಿಂತನೆ ನಡೆಸಲಾಗುತ್ತದೆ.
ಗುರುಗಳ ತರಬೇತಿ
ಈ ಗುರು ವಿದ್ಯಾರ್ಥಿ ಮಂದಿರಗಳು ವಿಶೇಷವಾಗಿ ಗುರುಗಳ ರೂಪಣೆಯ ಮೇಲೆ ಕೇಂದ್ರೀಕೃತವಾಗಿದೆ.
“ಕ್ರೈಸ್ತ ವಿವಾಹದ ವಿಷಯವು ಕೇವಲ ಕುಟುಂಬ ಧರ್ಮಾಧ್ಯಕ್ಷೀಯ ಸೇವೆಯಷ್ಟೇ ಸೀಮಿತವಾಗಿಲ್ಲ ಬದಲಾಗಿ, ಭವಿಷ್ಯದ ಗುರುಗಳನ್ನು ಮಾನವೀಯ, ಆಧ್ಯಾತ್ಮಿಕ ಮತ್ತು ಧರ್ಮಾಧ್ಯಕ್ಷೀಯ ಆಯಾಮಗಳಲ್ಲಿ ವಿವಾಹದ ಕರೆಯನ್ನು ಅರ್ಥಮಾಡಿಕೊಳ್ಳಲು, ಘೋಷಿಸಲು ಮತ್ತು ಜೊತೆಗೊಳ್ಳಲು ಹೇಗೆ ಸಿದ್ಧಪಡಿಸಲಾಗುತ್ತದೆ ಎಂಬ ಪ್ರಶ್ನೆಯನ್ನು ಇದು ಎತ್ತುತ್ತದೆ. ಅನೇಕ ಧರ್ಮ ಸಭೆಯ ಸಂದರ್ಭಗಳಲ್ಲಿ, ಹೆಚ್ಚು ಸೈದ್ಧಾಂತಿಕವಾಗಿರದ, ಕುಟುಂಬಗಳ ದೈನಂದಿನ ಜೀವನ, ಯುವಕರ ಪ್ರಶ್ನೆಗಳು ಹಾಗೂ ಭಾವನಾತ್ಮಕ ಸಂಸ್ಕೃತಿಯ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಸ್ಪರ್ಶಿಸುವ ತರಬೇತಿಯ ಅಗತ್ಯತೆಯಿದೆ” ಎಂದು ಅದು ಸೂಚಿಸುತ್ತದೆ.
ಈ ದಿನವು 2016ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಪ್ರಕಟಿಸಿದ ಕುಟುಂಬದ ಕುರಿತು ಅಪೋಸ್ತೋಲಿಕ್ ಎಕ್ಸಾರ್ಟೇಶನ್ ಅಮೋರಿಸ್ ಲೇಟಿಷಿಯಾ ದಶಮಾನೋತ್ಸವ ಆಚರಣೆಗಳ ಭಾಗವಾಗಿಯೂ ಇದೆ.
2026ರ ಮಾರ್ಚ್ 19ರಂದು ನೀಡಿದ ಸಂದೇಶದಲ್ಲಿ, ಈ ದಶಮಾನೋತ್ಸವದ ಅಂಗವಾಗಿ, ಜಗದ್ಗುರು XIVನೇ ಲಿಯೋರವರು ವಿವಾಹ ಸಂಸ್ಕಾರದ ಮೂಲಕ ದಂಪತಿಗಳು “ಗೃಹ ಧರ್ಮಸಭೆ” ಯನ್ನು ರೂಪಿಸುತ್ತಾರೆ ಎಂದು ನೆನಪಿಸಿ, ನಂಬಿಕೆಯ ಶಿಕ್ಷಣ ಮತ್ತು ಪ್ರಸರಣದಲ್ಲಿ ಅವರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು. ಜೊತೆಗೆ, ಈ ಕ್ಷೇತ್ರದಲ್ಲಿ ಧರ್ಮ ಸಭೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವಂತೆ ಅವರು ಕರೆ ನೀಡಿದರು, ಹಾಗಾಗಿ ವಿವಾಹಕ್ಕೆ ಕರೆಯಲ್ಪಟ್ಟವರು ಕ್ರಿಸ್ತನಲ್ಲಿ ತಮ್ಮ ವೈವಾಹಿಕ ಪ್ರೀತಿಯನ್ನು ಬದುಕಲು ಸಾಧ್ಯವಾಗಲಿ ಮತ್ತು ಯುವಕರು ಈ ಕರೆಯ ಆಳತೆಯನ್ನು ಮರುಅನ್ವೇಷಿಸಲಿ ಎಂದರು.
ಈ ಹಿನ್ನೆಲೆಯಲ್ಲೇ, ಡಿಕಾಸ್ಟರಿ ಹೇಳುವಂತೆ, ಈ ವಿದ್ಯಾರ್ಥಿ ಗುರು ಮಂದಿರ ಧರ್ಮ ಸಭೆಯ ಜೀವನದಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿರುವ ಒಂದು ನಂಬಿಕೆಯನ್ನು ಉಲ್ಲೇಖಿಸುತ್ತದೆ ಅಂದರೆ, ವಿವಾಹದ ಕರೆ ಭವಿಷ್ಯದ ಧರ್ಮಾಧ್ಯಕ್ಷರುಗಳ ತರಬೇತಿಯಲ್ಲಿ ದ್ವಿತೀಯ ವಿಷಯವೆಂದು ಪರಿಗಣಿಸಲಾಗುವುದಿಲ್ಲ.
“ಸುವಾರ್ತಾ ಪ್ರಸಾರದ ಪರಿಣಾಮಕಾರಿತ್ವ, ನಂಬಿಕೆಯ ಪರಿಪಕ್ವತೆ ಮತ್ತು ಕ್ರೈಸ್ತ ಸಮುದಾಯವು ಯುವ ಪೀಳಿಗೆಗೆ ಬೆಂಬಲ ನೀಡುವ ಸಾಮರ್ಥ್ಯವು ಬಹುಮಟ್ಟಿಗೆ ಭಾವನಾತ್ಮಕ ಮತ್ತು ಕುಟುಂಬ ಜೀವನದ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ.”