ಅಂತರಿಕ್ಷ ಮತ್ತು ಮಾನವಕುಲ ಒಂದು ಸಂಕಟದ ತಿರುವಿನಲ್ಲಿ: ಸಾಮೂಹಿಕ ಹಿತದ ಹೊಸ ಗಡಿ
ವ್ಯಾಟಿಕನ್ ವರದಿ
ಏಪ್ರಿಲ್ 1ರಂದು ನಾಸಾ ಆರ್ಟೆಮಿಸ್ ಮಿಷನ್ II ಅನ್ನು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲು ಯೋಜಿಸಲಾಗಿದೆ. ಇದು ನಾಸ ಸಂಸ್ಥೆಯ ಆರ್ಟೆಮಿಸ್ ಚಂದ್ರ ಯೋಜನೆಯ ಎರಡನೇ ಮಿಷನ್ ಆಗಿದ್ದು, ಅಂತರಿಕ್ಷಯಾತ್ರಿಗಳನ್ನು ಹೊತ್ತೊಯ್ಯುವ ಮೊದಲ ಮಿಷನ್ ಆಗಿದೆ. ಈ ಮಿಷನ್‌ನಲ್ಲಿ ನಾಲ್ವರು ಅಂತರಿಕ್ಷಯಾತ್ರಿಗಳು ಭಾಗವಹಿಸಲಿದ್ದು, ಅವರು ಭೂಮಿಯ ಕಕ್ಷೆಯಾಚೆಗೆ ಪ್ರಯಾಣಿಸಿ ಚಂದ್ರನ ಸುತ್ತಲೂ ವಿಶಾಲವಾಗಿ ಸುತ್ತುವ ಪ್ರಯೋಗವನ್ನು ನಡೆಸಲಿದ್ದಾರೆ.
ಇದು IIIನೇ ಆರ್ಟೆಮಿಸ್ ಮಿಷನ್ ಗೆ ಮಧ್ಯಂತರ ಹಂತವಾಗಿದ್ದು, 1972 ಡಿಸೆಂಬರ್ 14ರಂದು ಅಂತ್ಯಗೊಂಡ ಅಪೊಲೊ 17 ನಂತರ 53 ವರ್ಷಗಳ ಬಳಿಕ ಮತ್ತೆ ಚಂದ್ರನ ಮೇಲ್ಮೈಯಲ್ಲಿ ಅಂತರಿಕ್ಷಯಾತ್ರಿಗಳು ನಡೆಯುವ ಗುರಿಯನ್ನು ಹೊಂದಿದೆ.
ಅಂತರಿಕ್ಷವು ಇತ್ತೀಚಿನ ವರ್ಷಗಳಲ್ಲಿ ,ವಿಶ್ವಸಂಸ್ಥೆಯಲ್ಲಿ ಹೆಚ್ಚಾಗಿ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಕಕ್ಷೆಯಲ್ಲಿ ಇರುವ ಉಪಗ್ರಹಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ ಹಿನ್ನೆಲೆಯಲ್ಲಿ, ಅಂತರಿಕ್ಷವು ಭೌಗೋಳಿಕ ರಾಜಕೀಯ, ಭದ್ರತೆ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಚರ್ಚೆಗಳಲ್ಲಿ ಪ್ರಮುಖ ವಿಷಯವಾಗಿ ಪರಿಣಮಿಸಿದೆ.
ಅಂತರಿಕ್ಷ ಮಿಷನ್‌ಗಳ ಮಹತ್ವವನ್ನು ಪರಿಶೀಲಿಸಲು, ವೆರಿಟೇಟ್ ಫೌಂಡೇಶನ್‌ನಲ್ಲಿ ಕ್ಯಾರಿಟಾಸ್ ಸಂಸ್ಥೆಯು(ಇದರ ಅಧ್ಯಕ್ಷರು ಆರ್ಚ್‌ಬಿಷಪ್ ಎಟ್ಟೋರ್ ಬ್ಯಾಲೆಸ್ಟ್ರೆರೊ, ಜೆನೀವಾದಲ್ಲಿರುವ ಪವಿತ್ರ ಸಭೆಯ ಸ್ಥಾಯಿ ಪ್ರತಿನಿಧಿ) ಒಂದು ವಿಡಿಯೋವನ್ನು ತಯಾರಿಸಿ ಬಿಡುಗಡೆ ಮಾಡಿದೆ. ಇದು ಕಳೆದ ಫೆಬ್ರವರಿಯಲ್ಲಿ ಪ್ರಕಟವಾದ ಬಾಹ್ಯಾಕಾಶ ಮತ್ತು ಮಾನವೀಯತೆಯು ಕವಲುದಾರಿಯಲ್ಲಿ: ಸಾಮಾನ್ಯ ಒಳಿತಿನ ಹೊಸ ಗಡಿನಾಡು ಎಂಬ ಪ್ರಕಟಣೆಯ ಮುಂದುವರಿಕೆಯಾಗಿದೆ.
ಈ ವಿಡಿಯೋದಲ್ಲಿ ವಿಶ್ವದ ಅನ್ವೇಷಣೆಯ ಉದ್ದೇಶ, ವಿಜ್ಞಾನ, ಧರ್ಮಶಾಸ್ತ್ರ ಮತ್ತು ಅಂತರಾಷ್ಟ್ರೀಯ ಕಾನೂನುಗಳ ನಡುವಿನ ಸಂವಾದ, ಹಾಗೂ ದೇವರ ಸೃಷ್ಟಿಯ ಎದುರು ಮಾನವಕುಲವು ಅನುಸರಿಸಬೇಕಾದ ತತ್ವಗಳನ್ನು ಸಮಗ್ರವಾಗಿ ಚರ್ಚಿಸಲಾಗಿದೆ.
ಪ್ರಶ್ನೆ: ಅಂತರಿಕ್ಷದ ಬಗ್ಗೆ ರಾಜಕೀಯ ಮತ್ತು ನಿಯಂತ್ರಣಾತ್ಮಕ ನಿರ್ಧಾರಗಳ ಕುರಿತು ಚಿಂತನೆ ಏಕೆ ತುರ್ತು?
ಜೆನೀವಾದ ಪವಿತ್ರ ಸಭೆಯ ಮಿಷನ್ ಮತ್ತು ಅದರೊಂದಿಗೆ ಸಹಕರಿಸುವ ವೆರಿಟೇಟ್ ಫೌಂಡೇಶನ್‌ನಲ್ಲಿ ಕ್ಯಾರಿಟಾಸ್ ಸಂಸ್ಥೆಯ ಅಂತರಿಕ್ಷದ ಬಗ್ಗೆ ಚಿಂತಿತವಾಗಿವೆ, ಏಕೆಂದರೆ ಅದು ದೇವರ ಸೃಷ್ಟಿಯಾಗಿದ್ದು, ಅವನ ನಿಯಮಗಳಿಗೆ ಒಳಪಟ್ಟಿದೆ.
ಸ್ವರ್ಗವನ್ನು (ಆಧ್ಯಾತ್ಮಿಕ ಕಲ್ಪನೆ) ತಲುಪಲು ಮಾನವರು ಅಂತರಿಕ್ಷದಲ್ಲಿಯೂ (ಭೌಗೋಳಿಕ ಮತ್ತು ಭೌತಿಕ ಕಲ್ಪನೆ) ಸತ್ಪ್ರವೃತ್ತಿಯಿಂದ ನಡೆದುಕೊಳ್ಳಬೇಕು. ಅಂತರಿಕ್ಷವು ಯಾರಿಗೂ ಸೇರದ ಭೂಮಿ ಅಲ್ಲ ಅದು ಮೊದಲು ಬಂದವರಿಗೆ ಮೊದಲ ಸೇವೆ ಎಂಬ ನಿಯಮದಡಿ ನಡೆಯುವ ಅಕ್ರಮ ಪ್ರದೇಶವೂ ಅಲ್ಲ.
ಇದೇ ಆ ಪ್ರಕಟಣೆಯ ಶೀರ್ಷಿಕೆಯ ಅರ್ಥ ಹಾಗೂ ನಾವು ನಿರ್ಮಿಸಿದ ವಿಡಿಯೋದಲ್ಲಿನ ಮುಖ್ಯ ಸಂದೇಶ ಎಂದು ಹೇಳಬಹುದು. ಮಾನವಕುಲ ಈಗಾಗಲೇ ಅಂತರಿಕ್ಷದ ಕುರಿತು ದೀರ್ಘಕಾಲದ ಪರಿಣಾಮ ಬೀರುವ ನೈತಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ—ಇವು ಮಾನವತೆಯನ್ನು ನಿರ್ಮಿಸಬಹುದು ಅಥವಾ ನಾಶ ಮಾಡಬಹುದು. ಆದ್ದರಿಂದ ಧರ್ಮ ಸಭೆ ನಿರ್ಲಕ್ಷ್ಯವಾಗಿರಲು ಸಾಧ್ಯವಿಲ್ಲ.
ಯಾವ ರೀತಿಯಲ್ಲಿ?
ಅಂತರಿಕ್ಷವನ್ನು ನೈತಿಕ ದೃಷ್ಟಿಯಿಂದ ನೋಡುವುದು ನಮಗೆ ಕೆಲವು ಪ್ರಶ್ನೆಗಳನ್ನು ಎಬ್ಬಿಸುತ್ತದೆ ನಾವು ತಂತ್ರಜ್ಞಾನದಿಂದ ಸಾಧಿಸಬಲ್ಲದ್ದೆಲ್ಲವನ್ನು ಮಾಡುವುದು ಸರಿಯೇ? ಅದನ್ನು ಹೇಗೆ ಮಾಡಬೇಕು? ನಾವು ಯಾವ ರೀತಿಯ ವ್ಯವಸ್ಥೆಯನ್ನು ನಿರ್ಮಿಸಲು ಬಯಸುತ್ತೇವೆ?
ಈ ನೈತಿಕ ಮತ್ತು ಬಹುಪಕ್ಷೀಯ ದೃಷ್ಟಿಕೋನವೇ ಸಂಸ್ಥೆಯ ದಾಖಲೆ ಮತ್ತು ವಿಡಿಯೋ ಪ್ರಸ್ತಾಪಿಸುತ್ತದೆ.
ಯಾವ ಕ್ರಮಗಳು ಅಗತ್ಯ?
ಅಂತರಿಕ್ಷವು ಎಲ್ಲಾ ಮಾನವಕುಲಕ್ಕೂ ಸೇರಿದ ಸಾಮೂಹಿಕ ಹಿತವಾಗಿಯೇ ಉಳಿಯಬೇಕು. ಅದನ್ನು ನಿಯಂತ್ರಿಸಲು ಸ್ಪಷ್ಟ ಕಾನೂನು ನಿಯಮಗಳು ಇರಬೇಕು ಮತ್ತು ಅವುಗಳನ್ನು ಅಗತ್ಯವಿದ್ದಲ್ಲಿ ನವೀಕರಿಸಬೇಕು.
ಜೆನೀವಾದಲ್ಲಿ ವಿಶ್ವ ಸಂಸ್ಥೆಯಲ್ಲಿ ಈ ಪ್ರಕಟಣೆಯನ್ನು ಪರಿಚಯಿಸಿದಾಗ, ಮೈಕೆಲ್ ಸ್ಕಾಟ್ ಹಾಪ್ಕಿನ್ಸ್ ಎಂಬ ಅಂತರಿಕ್ಷಯಾತ್ರಿಯ ಅನುಭವವು ಎಲ್ಲರ ಮೇಲೆ ಆಳವಾದ ಪರಿಣಾಮ ಬೀರಿತು. ಅವರು "ಅವಲೋಕನ ಪರಿಣಾಮ” ಎಂಬ ಅನುಭವವನ್ನು ವಿವರಿಸಿದರು.
ಅದು ಏನು?
ಅಂತರಿಕ್ಷದಲ್ಲಿ ಇರುವ ಅಂತರಿಕ್ಷಯಾತ್ರಿಗಳು ಭೂಮಿಯನ್ನು ನೋಡಿದಾಗ, ಅದು ಸಣ್ಣದು, ನಾಜೂಕಾದುದು, ಗಡಿ-ವಿಭಾಗಗಳಿಲ್ಲದ ಒಂದು ಸಾಮಾನ್ಯ ಗೃಹದಂತೆ ಕಾಣುತ್ತದೆ ಇದು ಮಾನವಕುಲದ ಒಕ್ಕೂಟ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ.
ಆದರೆ ಭೂಮಿಗೆ ಮರಳಿದಾಗ ಯುದ್ಧಗಳು, ಹಿಂಸಾಚಾರಗಳು ಮತ್ತು ಅನ್ಯಾಯಗಳು ಈ ದೃಶ್ಯಕ್ಕೆ ವಿರುದ್ಧವಾಗಿ ಕಾಣಿಸುತ್ತವೆ. ಜಗದ್ಗುರು XVIನೇ ಬೆನೆಡಿಕ್ಟ್ ರವರು ಇದನ್ನು ನೆನಪಿಸಿಕೊಂಡು ಹೇಳಿದ್ದು ನಾವು ಎಲ್ಲರೂ ಒಂದೇ ಭೂಮಿಯಲ್ಲಿ ಬದುಕುತ್ತಿದ್ದೇವೆ ಒಬ್ಬರನ್ನೊಬ್ಬರು ಹೋರಾಡುವುದು ಮತ್ತು ಕೊಲ್ಲುವುದು ಎಷ್ಟು ಅಸಂಬದ್ಧ!” ಎಂದರು.
ಅಂತರಿಕ್ಷವೂ ಸಾಮಾನ್ಯ ಗೃಹವೇ?
ಹೌದು, ಮತ್ತು ಅದರ ನಿಯಮಗಳನ್ನು ಗೌರವಿಸಬೇಕು. ಧರ್ಮ ಸಭೆ ಹೇಳುವ ಪ್ರಮುಖ ಸಂದೇಶವೇನೆಂದರೆ ಅಂತರಿಕ್ಷವನ್ನು ‘ಕಾಡು’ಯಂತೆ ಮಾಡಬಾರದು. ಇದು ಮಾನವಕುಲಕ್ಕೆ ಎರಡನೇ ಅವಕಾಶ ನೀಡುತ್ತದೆ ಭೂಮಿಯಲ್ಲಿ ಮಾಡಿದ ತಪ್ಪುಗಳನ್ನು ಮರುಕಳಿಸದಂತೆ ಮಾಡುತ್ತದೆ.
ಅಂತರಿಕ್ಷ ಅನ್ವೇಷಣೆ ಹೊಣೆಗಾರಿಕೆ, ಏಕತೆ ಮತ್ತು ಪರಸ್ಪರ ಗೌರವದೊಂದಿಗೆ ನಡೆಯಬೇಕು.
ಹೇಗೆ?
ಅಂತರಿಕ್ಷವು ನಿಯಂತ್ರಣವಿಲ್ಲದ ಸ್ಪರ್ಧೆ ಅಥವಾ ಸಂಘರ್ಷದ ವೇದಿಕೆಯಾಗದಂತೆ ತಡೆಯಬೇಕು.
ಪವಿತ್ರ ಸಭೆ ಒತ್ತಾಯಿಸುವ ಪ್ರಮುಖ ಕ್ರಮವೆಂದರೆ ಬಾಹ್ಯಾಕಾಶ ಒಪ್ಪಂದಕ್ಕೆ ಗೌರವ ತೋರಿಸುವುದು. ಸುಮಾರು 120 ದೇಶಗಳು ಸಹಿ ಮಾಡಿದ ಈ ಒಪ್ಪಂದವು, ಅಂತರಿಕ್ಷದ ಅನ್ವೇಷಣೆ ಎಲ್ಲ ದೇಶಗಳ ಹಿತಕ್ಕಾಗಿ ನಡೆಯಬೇಕು ಎಂದು ಹೇಳುತ್ತದೆ.
ಅಂತರಿಕ್ಷವನ್ನು ಮಾನವಕುಲದ ಸಾಮೂಹಿಕ ಸ್ವತ್ತು ಎಂದು ಈ ಒಪ್ಪಂದ ವ್ಯಾಖ್ಯಾನಿಸುತ್ತದೆ.
ಸೈನ್ಯೀಕರಣದ ಅಪಾಯ ಇದೆಯೇ?
ಹೌದು. ಈ ಒಪ್ಪಂದವು ಪರಮಾಣು ಮತ್ತು ಮಹಾ ವಿನಾಶಕಾರಿ ಆಯುಧಗಳನ್ನು ನಿಷೇಧಿಸಿದರೂ, ಸಾಮಾನ್ಯ ಆಯುಧಗಳು ಅಥವಾ ಸೈಬರ್ ದಾಳಿಗಳನ್ನು ಸ್ಪಷ್ಟವಾಗಿ ನಿಷೇಧಿಸುವುದಿಲ್ಲ.
ಕೆಲವು ದೇಶಗಳು ಕಕ್ಷೆಯಲ್ಲಿ ಆಯುಧಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ ಇದು ಅಂತರಾಷ್ಟ್ರೀಯ ಅಸ್ಥಿರತೆಯನ್ನು ಹೆಚ್ಚಿಸುತ್ತದೆ.
ಅಂತರಿಕ್ಷದಲ್ಲಿ ಸಂಘರ್ಷ ಉಂಟಾದರೆ, ಅದರ ಪರಿಣಾಮ ಭೂಮಿಯ ಮೇಲೆ ಎಲ್ಲರಿಗೂ ತಲುಪಬಹುದು.
ಸ್ಪರ್ಧೆ ಹೇಗೆ ಒಳ್ಳೆಯದಾಗಬಹುದು?
ಸ್ಪರ್ಧೆ ಸಹಕಾರದೊಂದಿಗೆ ಸಮತೋಲನದಲ್ಲಿರಬೇಕು. ಸಹಕಾರವಿಲ್ಲದ ಸ್ಪರ್ಧೆ ಅಸ್ಥಿರತೆ ಮತ್ತು ಹಿಂಸೆಗೆ ಕಾರಣವಾಗುತ್ತದೆ.
ಆದರೆ ಸಮತೋಲನ ಇದ್ದರೆ, ಇದು ಸಂಶೋಧನೆಗೆ ಉತ್ತೇಜನ ನೀಡುತ್ತದೆ ಮತ್ತು ಮಾನವ ಗೌರವ ಹಾಗೂ ಸಾಮೂಹಿಕ ಹಿತಕ್ಕೆ ಸೇವೆ ಮಾಡುತ್ತದೆ—ಉದಾಹರಣೆಗೆ ವಿಪತ್ತು ಸಮಯದ ಸಂಪರ್ಕ ವ್ಯವಸ್ಥೆಗಳು, ಕೃಷಿ, ಆರೋಗ್ಯ ಮತ್ತು ಹವಾಮಾನ ಮಾಹಿತಿ.
ವಿಜ್ಞಾನ ಮತ್ತು ನಂಬಿಕೆ ಒಂದಾಗಿ ಹೇಗೆ ಸಾಗಬಹುದು?
ವಿಜ್ಞಾನ “ಹೇಗೆ?” ಎಂಬ ಪ್ರಶ್ನೆಗೆ ಉತ್ತರ ಕೊಡುತ್ತದೆ ನಂಬಿಕೆ “ಏಕೆ?” ಎಂಬುದನ್ನು ಬೆಳಗಿಸುತ್ತದೆ. ಇವು ಪರಸ್ಪರ ವಿರೋಧಿಯಾಗಿಲ್ಲ, ಪರಸ್ಪರ ಪೂರಕವಾಗಿವೆ.
ಪವಿತ್ರ ಸಭೆಯ ಪಾತ್ರ ಏನು?
ಪವಿತ್ರ ಸಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ನೈತಿಕ ಮಾರ್ಗದರ್ಶನ ನೀಡುತ್ತದೆ, ಮಾನವ ಗೌರವವನ್ನು ಕೇಂದ್ರವಾಗಿಟ್ಟುಕೊಂಡು ಸಂವಾದವನ್ನು ಉತ್ತೇಜಿಸುತ್ತದೆ.
ಇದಲ್ಲದೆ, ವ್ಯಾಟಿಕನ್ ವೀಕ್ಷಣಾಲಯ ಎಂಬ ಪ್ರಾಚೀನ ಖಗೋಳಶಾಸ್ತ್ರೀಯ ಕೇಂದ್ರವನ್ನೂ ಪವಿತ್ರ ಸಭೆ ನಡೆಸುತ್ತಿದೆ, ಇದನ್ನು ಜಗದ್ಗುರು XIIIನೇ ಲಿಯೋರವರು 1891ರಲ್ಲಿ ಸ್ಥಾಪಿಸಿದರು. ಇದು ಧರ್ಮ ಸಭೆಯ ವಿಜ್ಞಾನಕ್ಕೆ ವಿರೋಧವಲ್ಲ, ಅದನ್ನು ಉತ್ತೇಜಿಸುತ್ತದೆ ಎಂಬುದನ್ನು ತೋರಿಸುತ್ತದೆ.