ಸಂತ ಪೀಟರ್ಸ್ ಬೆಸಿಲಿಕಾದಲ್ಲಿ ನಡೆದ ತೈಲಗಳ ಪವಿತ್ರೀಕರಣದ ಬಲಿಪೂಜೆಯಲ್ಲಿ ಜಗದ್ಗುರು XIVನೇ ಲಿಯೋರವರೊಂದಿಗೆ ಸಾವಿರಾರು ಯಾಜಕರು ಸೇರಿಕೊಂಡರು. ಸಂತ ಪೀಟರ್ಸ್ ಬೆಸಿಲಿಕಾದಲ್ಲಿ ನಡೆದ ತೈಲಗಳ ಪವಿತ್ರೀಕರಣದ ಬಲಿಪೂಜೆಯಲ್ಲಿ ಜಗದ್ಗುರು XIVನೇ ಲಿಯೋರವರೊಂದಿಗೆ ಸಾವಿರಾರು ಯಾಜಕರು ಸೇರಿಕೊಂಡರು. 

ಕಾರ್ಡಿನಲ್ ಯೂ ಹೆಯುಂಗ್-ಸಿಕ್ ಎಲ್ಲಾ ಯಾಜಕರನ್ನು ‘ಪ್ರಭುವಿನ ಸ್ನೇಹಿತರು’ ಎಂದು ಕರೆಯುತ್ತಾರೆ.

ಧರ್ಮಗುರುಗಳ ವಿಭಾಗದ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಲಾಜ್ಜಾರೊ ಯೂ ಹೆಯುಂಗ್-ಸಿಕ್ ರವರು ಪವಿತ್ರ ಗುರುವಾರದ ಅಂಗವಾಗಿ ವಿಶ್ವದಾದ್ಯಂತ ಇರುವ ಎಲ್ಲಾ ಯಾಜಕರು, ಸಹ ಯಾಜಕರು ಮತ್ತು ಧರ್ಮಶಿಕ್ಷಣಾರ್ಥಿಗಳಿಗೆ ಪತ್ರವನ್ನು ರಚಿಸಿ, ತಮ್ಮ ಸೇವೆಯ ಮೂಲಕ ಕ್ರಿಸ್ತನನ್ನು ಜನರಿಗೆ ಸಮೀಪಗೊಳಿಸುತ್ತಿರುವುದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ವ್ಯಾಟಿಕನ್ ವರದಿ

ನಿಮ್ಮ ದೈನಂದಿನ ನಿಷ್ಠೆಗೆ ಧನ್ಯವಾದಗಳು ಅದು  ಮೌನವಾಗಿಯೂ ಅಡಗಿದಂತೆಯೂ ಇರುತ್ತದೆ. ಪ್ರತಿದಿನವೂ ನೀವು ನವೀಕರಿಸುವ ನಿಮ್ಮ ಹೌದು ಎಂಬುದಕ್ಕೆ ಧನ್ಯವಾದಗಳು ಕಷ್ಟಗಳು, ಏಕಾಂತತೆ ಮತ್ತು ತಪ್ಪು ಅರ್ಥೈಸಿಕೊಳ್ಳುವಿಕೆಗಳ ಮಧ್ಯೆಯೂ ಸಹ. ನಿಮ್ಮ ಸೇವೆಯ ಮೂಲಕ ಕ್ರಿಸ್ತನು ತನ್ನ ಜನರ ಬಳಿಗೆ ಸಮೀಪಿಸುತ್ತಾ, ಅವರನ್ನು ಗುಣಪಡಿಸಿ, ಕ್ಷಮಿಸಿ, ಪೋಷಿಸುತ್ತಿರುವುದಕ್ಕಾಗಿ ಧನ್ಯವಾದಗಳು.

ಧರ್ಮಗುರುಗಳ ವಿಭಾಗದ ಪ್ರಿಫೆಕ್ಟ್ ಕಾರ್ಡಿನಲ್ ಲಾಜ್ಜಾರೊ ಯೂ ಹೆಯುಂಗ್-ಸಿಕ್ ರವರು, ಅದೇ ವಿಭಾಗದ ಕಾರ್ಯದರ್ಶಿ ಆರ್ಚ್‌ಬಿಷಪ್ ಕಾರ್ಲೊ ರೊಬೆರ್ಟೊ ಮರಿಯಾ ರೆಡಾಯೆಲ್ಲಿ ರವರೊಂದಿಗೆ, ಪವಿತ್ರ ಗುರುವಾರದ ಅಂಗವಾಗಿ ಗುರುಗಳು, ಸಹಗುರುಗಳು ಮತ್ತು ಧರ್ಮಶಿಕ್ಷಣಾರ್ಥಿಗಳಿಗೆ ಕಳುಹಿಸಿದ ಪತ್ರದಲ್ಲಿ ಈ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಧರ್ಮ ಸಭೆಯು ಪರಮ ಪ್ರಸಾದದ ಸ್ಥಾಪನೆ ಮತ್ತು ಸೇವಾ ಯಾಜಕತ್ವವನ್ನು ಸ್ಮರಿಸುವ ಈ ಸಂದರ್ಭದಲ್ಲಿ, ಕಾರ್ಡಿನಲ್ ಯೂ ರವರು ವಿಶ್ವದ ಎಲ್ಲಾ ಭಾಗಗಳಲ್ಲಿರುವ ನಿಮಗೆಲ್ಲರಿಗೂ ಆಳವಾದ ಕೃತಜ್ಞತೆ, ಸಹೋದರ ಪ್ರೀತಿ ಮತ್ತು ಹೃದಯಪೂರ್ವಕ ಉತ್ತೇಜನದ ಸಂದೇಶವನ್ನು ತಲುಪಿಸಲು ನಾವು ಬಯಸುತ್ತೇವೆ ಎಂದು ಹೇಳಿದರು.

ಗುರುಗಳು ಪ್ರಭುವಿನ ಸ್ನೇಹಿತರು

ಅವರು ಪ್ರಭು ಯೇಸು ಕ್ರಿಸ್ತನನ್ನು ಚಿಂತಿಸಿದರು—ಅವರು ಪ್ರೀತಿಯಿಂದ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ, ರೊಟ್ಟಿಯನ್ನು ಮುರಿದು ತನ್ನನ್ನೇ ಅರ್ಪಿಸುತ್ತಾರೆ ಮತ್ತು ಈ ಪ್ರೀತಿಯಿಂದಲೇ ನಮ್ಮ ಕರೆಯು ಹುಟ್ಟುತ್ತದೆ ಈ ಪ್ರೀತಿಗೆ ಅನುಗುಣವಾಗಿ ನಮ್ಮ ಸಂಪೂರ್ಣ ಜೀವನವನ್ನು ರೂಪಿಸಿಕೊಳ್ಳಲು ನಾವು ನಿರಂತರವಾಗಿ ಕರೆಯಲ್ಪಟ್ಟಿದ್ದೇವೆ ಎಂದು ಹೇಳಿದರು.

ಕಾರ್ಡಿನಲ್ ಯೂ ರವರು ಗುರುಗಳ ಮಹತ್ತರ ಪ್ರೀತಿ ಮತ್ತು ಪ್ರಭುವಿನೊಂದಿಗೆ ಇರುವ ಸ್ನೇಹಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಭರವಸೆಯ ಪವಿತ್ರ ವರ್ಷದ ಸಂದರ್ಭದಲ್ಲಿ ಪವಿತ್ರ ತಂದೆ  XIVನೇ ಲಿಯೋರವರು ನಮಗೆ ನೆನಪಿಸಿದರು, ಎಂದು ಅವರು ಹೇಳಿದರು, “ಗುರುಗಳು ಪ್ರಭುವಿನ ಸ್ನೇಹಿತನು ಅವರೊಂದಿಗೆ ವೈಯುಕ್ತಿಕ ಮತ್ತು ವಿಶ್ವಾಸಪೂರ್ಣ ಸಂಬಂಧಕ್ಕೆ ಕರೆಯಲ್ಪಟ್ಟವರು. ಈ ಸಂಬಂಧವು ದೇವರ ವಾಕ್ಯ, ಸಂಸ್ಕಾರಗಳ ಆಚರಣೆ ಮತ್ತು ದೈನಂದಿನ ಪ್ರಾರ್ಥನೆಯಿಂದ ಪೋಷಿಸಲ್ಪಡುತ್ತದೆ. ಹಾಗೆಯೇ ಕ್ರಿಸ್ತನೊಂದಿಗೆ ಇರುವ ಈ ಸ್ನೇಹವೇ ಅರ್ಪಿತ ಸೇವೆಯ ಆತ್ಮೀಯ ಆಧಾರವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ, ಯಾಜಕರಾಗಿರುವುದು ಕೇವಲ ಒಂದು ಹೊಣೆಗಾರಿಕೆಯ ಪಾತ್ರವಲ್ಲ, ಆದರೆ ಕೃತಜ್ಞ ಹೃದಯದಿಂದ ಕಾಪಾಡಬೇಕಾದ ಮತ್ತು ಆಶ್ಚರ್ಯಭಾವದಿಂದ ತುಂಬಿರುವ ಒಂದು ವರವೆಂದು ಕಾರ್ಡಿನಲ್ ನೆನಪಿಸಿದರು.

ಅವರು ಮತ್ತಷ್ಟು ಸೇರಿಸಿ, ಗುರುಗಳನ್ನು ಅವರ ಕಾರ್ಯಗಳಿಂದ ಮಾತ್ರವಲ್ಲ, ಕ್ರಿಸ್ತನು ನಮ್ಮನ್ನು ಪ್ರೀತಿಸುವ ಅನಿಯಮಿತ ಪ್ರೀತಿಯಿಂದಲೇ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

ಪರಮ ಪ್ರಸಾದವೇ ನಮ್ಮ ಅಸ್ತಿತ್ವದ ಮೂಲ ಮತ್ತು ಶಿಖರ

ಪತ್ರದಲ್ಲಿ ಕಾರ್ಡಿನಲ್ ರವರು ಗುರುಗಳ ತ್ಯಾಗ ಮತ್ತು ಸೇವೆಯ ಕುರಿತು ಚಿಂತಿಸಿದರು.

ತ್ಯಾಗವು ತನ್ನ ಆಳವಾದ ಸತ್ಯದಲ್ಲಿ ಮೊದಲು ತ್ಯಜಿಸುವುದಲ್ಲ, ಆದರೆ ಒಂದು ಕೊಡುಗೆಯಾಗಿದೆ. “ದೇವರ ಪ್ರೀತಿ ಮತ್ತು ನಮ್ಮ ಸಹೋದರ ಸಹೋದರಿಯರ ಪ್ರೀತಿಗೆ ಸಂಪೂರ್ಣವಾಗಿ ಅರ್ಪಿತವಾಗುವಂತೆ ತಮ್ಮ ಜೀವನವನ್ನು ಸಮರ್ಪಿಸುವುದಾಗಿದೆ” ಎಂದು ಹೇಳಿದರು.

“ನಾವು ನಮ್ಮನ್ನೇ ಸಂಪೂರ್ಣವಾಗಿ ಅರ್ಪಿಸಿದ, ಅಭಿಷಿಕ್ತರಾದ ವ್ಯಕ್ತಿಗಳಾಗಿ ಬದುಕಲು ಕರೆಯಲ್ಪಟ್ಟಿದ್ದೇವೆ ಪರಮ ಪ್ರಸಾದದಲ್ಲಿ ನಮ್ಮ ಅಸ್ತಿತ್ವದ ಮೂಲ ಮತ್ತು ಶಿಖರವನ್ನು ಕಂಡುಕೊಳ್ಳುತ್ತೇವೆ,” ಎಂದು ಅವರು ಮುಂದುವರಿಸಿದರು. ವೇದಿಕೆಯ ಬಳಿಯಲ್ಲಿ ನಾವು ಕ್ರಿಸ್ತನಿಗೆ ಸಮಾನರಾಗುವಂತೆ ನಮ್ಮನ್ನು ರೂಪಿಸಿಕೊಳ್ಳುತ್ತೇವೆ ಇತರರೊಂದಿಗೆ ಸಾಗಲು, ಕ್ಷಮಿಸಲು ಮತ್ತು ಸಾಂತ್ವನ ನೀಡಲು ಅಗತ್ಯವಾದ ಶಕ್ತಿಯನ್ನು ಪಡೆಯುತ್ತೇವೆ.

ಸೇವೆಯು ಈ ಪ್ರೀತಿಯ ಸ್ಪಷ್ಟ ರೂಪವಾಗಿದೆ ಎಂದು ಅವರು ವಿವರಿಸಿದರು.

ಕೊನೆಯ ಸಲಹೆಯಾಗಿ, ಕಾರ್ಡಿನಲ್ ಯೂ ರವರು ಗುರುಗಳಿಗೆ ಇಂದಿನ ಕಾಲದ ಸವಾಲುಗಳಿಂದ ನಿರುತ್ಸಾಹಗೊಳ್ಳಬೇಡಿ ಎಂದು ತಿಳಿಸಿದರು. “ನೆಲ ಬಂಜರಾಗಿರುವಂತೆ ಕಂಡರೂ, ಬೀಜ ಬೆಳೆದುಕೊಳ್ಳಲು ಹೋರಾಡಿದರೂ ಸಹ, ಪ್ರಭು ತನ್ನ ಕಾರ್ಯವನ್ನು ಮುಂದುವರಿಸುತ್ತಾರೆ,ಎಂದು ಅವರು ಭರವಸೆ ನೀಡಿದರು. ಅವನು ನಮ್ಮನ್ನು ಆಯ್ಕೆಮಾಡಿದ್ದಾರೆ, ಅಭಿಷೇಕಿಸಿದ್ದಾರೆ, ಮತ್ತು ಎಂದಿಗೂ ನಮ್ಮನ್ನು ತ್ಯಜಿಸುವುದಿಲ್ಲ ಎಂದರು.

ಆದ್ದರಿಂದ,ಅವರು ಹೇಳಿದರು, “ತೆರೆದ ಹೃದಯ ಹೊಂದಿದ ಗುರುಗಳಾಗಿರಿ ಸಮೀಪತೆ, ಆಲಿಸುವಿಕೆ ಮತ್ತು ಕರುಣೆಯಿಂದ ಕೂಡಿದವರು ಏಕತೆಯ ಪುರುಷರಾಗಿರಿ, ಸಮನ್ವಯ ಮತ್ತು ಮಿಷನರಿ ಧರ್ಮ ಸಭೆಯ ನಂಬಲರ್ಹ ಚಿಹ್ನೆಗಳಾಗಿರಿ ತ್ಯಾಗವನ್ನು ಒಳಗೊಂಡಿದ್ದರೂ ಸಹ ಸುವಾರ್ತೆಯ ಸಂತೋಷಭರಿತ ಸಾಕ್ಷಿಗಳಾಗಿರಿ.

ನಿಮ್ಮ ಕರೆಯ ಸಂತೋಷವನ್ನು ಕಾಪಾಡಿಕೊಳ್ಳಿ

ಕಾರ್ಡಿನಲ್ ಯೂ ರವರು ಶಾಶ್ವತ ಉಪಯಾಜಕರುಗಳಿಗೂ ಧನ್ಯವಾದಗಳನ್ನು ತಿಳಿಸಿದರು ತಮ್ಮ ಉದಾರ ಮತ್ತು ಮೌನ ಸೇವೆಯ ಮೂಲಕ ಕ್ರಿಸ್ತ ಸೇವಕನ ಪ್ರೀತಿಯನ್ನು ಗೋಚರಗೊಳಿಸುವವರು ಎಂದರು.

ಉಪಯಾಜಕರ ಸೇವೆ “ಧಮ೯ಸಭೆಯ ಜೀವನಕ್ಕೆ ಅಮೂಲ್ಯವೂ ಅಗತ್ಯವೂ ಆಗಿದೆ ಇಂದಿನ ಕಾಲದಲ್ಲಿ ಇನ್ನಷ್ಟು, ಎಂದು ಅವರು ಒತ್ತಿ ಹೇಳಿದರು.

ಅಂತಿಮವಾಗಿ, ಅವರು ಯಾಜಕತ್ವಕ್ಕೆ ಸಿದ್ಧರಾಗುತ್ತಿರುವ ಎಲ್ಲಾ ಧರ್ಮಶಿಕ್ಷಣಾರ್ಥಿಗಳತ್ತ ಮುಖಮಾಡಿದರು.

ಭಯಪಡಬೇಡಿ, ಎಂದು ಕಾರ್ಡಿನಲ್ ರವರು ಉತ್ತೇಜಿಸಿದರು, “ನಿಮ್ಮ ಸಂಪೂರ್ಣ ಜೀವನವನ್ನು ಪ್ರಭುವಿಗೆ ಸಮರ್ಪಿಸಲು” ತಿಳಿಸಿದರು.

ಅವರು ಎಲ್ಲ ಧರ್ಮಶಿಕ್ಷಣಾರ್ಥಿಗಳನ್ನು ತಮ್ಮ ಕರೆಯ ಸಂತೋಷವನ್ನು ಕಾಪಾಡಿಕೊಳ್ಳಲು ಮತ್ತು ಪ್ರತಿದಿನವೂ ಪ್ರಭುವಿನ ಪ್ರೀತಿಯಿಂದ ರೂಪುಗೊಳ್ಳಲು ಆಹ್ವಾನಿಸಿದರು, ಏಕೆಂದರೆ ಧರ್ಮ ಸಭೆಗೆ ಅವರ ನೈಜತೆ, ಉತ್ಸಾಹ ಮತ್ತು ನಂಬಿಕೆ ಅಗತ್ಯವಿದೆ.

ಕೊನೆಗೆ, ಧರ್ಮಗುರುಗಳ ವಿಭಾಗದ ಪ್ರಿಫೆಕ್ಟ್ ಮತ್ತು ಕಾರ್ಯದರ್ಶಿ ಎಲ್ಲ ಯಾಜಕರು, ಉಪಯಾಜಕರು ಮತ್ತು ಧರ್ಮಶಿಕ್ಷಣಾರ್ಥಿಗಳನ್ನು ಧನ್ಯ ಮಾತೆ ಮರಿಯಮ್ಮನವರ ರಕ್ಷಣೆಗೆ ಒಪ್ಪಿಸಿ, ಪ್ರಭು ಯೇಸು ಕ್ರಿಸ್ತನೊಂದಿಗೆ ಆಳವಾದ ಏಕತೆಯಲ್ಲಿ ಫಲಪ್ರದವಾದ ಪವಿತ್ರ ಮೂರು ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

02 ಏಪ್ರಿಲ್ 2026, 18:44