“ನಂಬಿಕೆಯ ಸಿದ್ಧಾಂತದ ಡಿಕಾಸ್ಟರಿ” “ನಂಬಿಕೆಯ ಸಿದ್ಧಾಂತದ ಡಿಕಾಸ್ಟರಿ” 

“ಜರ್ಮನಿಯಲ್ಲಿನ ಆಶೀರ್ವಾದಗಳ ವಾಡೆಮೆಕುಮ್‌ಗೆ ಡಿಡಿಎಫ್ ಪ್ರತಿಕ್ರಿಯೆ ನೀಡಿದೆ.”

ನಂಬಿಕೆಯ ಸಿದ್ಧಾಂತದ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡೆಸ್ ರವರು, 2024ರ ನವೆಂಬರ್‌ನ ಪತ್ರವು ಪ್ರಸ್ತುತ ವಾಡೆಮೆಕುಮ್‌ನ ಪಠ್ಯಕ್ಕೂ ಅನ್ವಯಿಸುತ್ತದೆ ಎಂದು ವಿವರಿಸಿದರು. ಈ ವಾಡೆಮೆಕುಮ್‌ಗೆ ಡಿಕಾಸ್ಟರಿಯ ಅನುಮೋದನೆ ಇಲ್ಲ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

2024ರ ನವೆಂಬರ್ 18ರಂದು ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡೆಸ್ ರವರು ಬರೆದ ಪತ್ರವು, ವಿವಾಹೇತರ ಸಂಬಂಧಗಳಿಗಾಗಿ ಆಶೀರ್ವಾದಗಳ ಕುರಿತ ಜರ್ಮನ್ ಬಿಷಪ್‌ಗಳ ಕರಡು ವಾಡೆಮೆಕುಮ್ ಬಗ್ಗೆ ನೀಡಿದ ಪ್ರತಿಕ್ರಿಯೆಯಾಗಿದ್ದು, “ಪ್ರೇಮವನ್ನು ಬಲಪಡಿಸುವ ಆಶೀರ್ವಾದ” ಎಂಬ ಶೀರ್ಷಿಕೆಯ ಪಠ್ಯಕ್ಕೂ ಅನ್ವಯಿಸುತ್ತದೆ. ಈ ಪಠ್ಯವನ್ನು 2025ರ ಏಪ್ರಿಲ್‌ನಲ್ಲಿ ಜರ್ಮನ್ ಬಿಷಪ್‌ಗಳ ಸಮಾವೇಶ (ಡಿಬಿಕೆ) ಮತ್ತು ಜರ್ಮನ್ ಕಥೋಲಿಕರ ಕೇಂದ್ರ ಸಮಿತಿ (ಝೆಡ್ ಡಿ ಕೆ) ಪ್ರತಿನಿಧಿಗಳು ಅಂತಿಮವಾಗಿ ಅನುಮೋದಿಸಿದ್ದರು.

ನಂಬಿಕೆಯ ಸಿದ್ಧಾಂತದ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಫೆರ್ನಾಂಡೆಸ್ ರವರು, 2025ರ ನವೆಂಬರ್ 12ರಂದು ವ್ಯಾಟಿಕನ್‌ನಲ್ಲಿ ಜರ್ಮನ್ ಬಿಷಪ್‌ಗಳೊಂದಿಗೆ ನಡೆದ ಸಭೆಯಲ್ಲಿ ಟ್ರಿಯರ್‌ನ ಬಿಷಪ್ ಹಾಗೂ ಲಿಟರ್ಜಿಕಲ್ ಆಯೋಗದ ಅಧ್ಯಕ್ಷರಾದ ಬಿಷಪ್ ಸ್ಟೆಫನ್ ಅಕ್ಕರ್ಮನ್ ರವರಿಗೆ ಇದನ್ನು ಸ್ಪಷ್ಟಪಡಿಸಿದರು.

ಕಾರ್ಡಿನಲ್ ರವರು, ಜಗದ್ಗುರು ಲಿಯೋರವರ ಒಪ್ಪಿಗೆಯೊಂದಿಗೆ ಇತ್ತೀಚೆಗೆ ಡಿಕಾಸ್ಟರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ 2024ರ ಪತ್ರವೇ “ಏಕೈಕ ಮತ್ತು ಅಂತಿಮ ಪ್ರತಿಕ್ರಿಯೆ” ಎಂದು ವಿವರಿಸಿದರು. ಅದು 2025ರ ಏಪ್ರಿಲ್‌ನಲ್ಲಿ ಅಂತಿಮವಾಗಿ ಅನುಮೋದಿಸಲಾದ ಪಠ್ಯಕ್ಕೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು.

ಆ ಪತ್ರದಲ್ಲಿ ಹೇಳಿರುವುದು, ಎಂದು ಕಾರ್ಡಿನಲ್ ವ್ಯಾಟಿಕನ್ ನ್ಯೂಸ್‌ಗೆ ತಿಳಿಸಿದರು, “ಪ್ರಸ್ತುತ ವಾಡೆಮೆಕುಮ್ ಪಠ್ಯಕ್ಕೂ ಅನ್ವಯಿಸುತ್ತದೆ, ಮತ್ತು ಅದಕ್ಕೆ ಡಿಕಾಸ್ಟರಿಯ ಅನುಮೋದನೆ ಇಲ್ಲ.”

ವಾಸ್ತವವಾಗಿ, ಅಂತಿಮ ಪಠ್ಯವು ಮೂಲ ಕರಡು ಪಠ್ಯದಿಂದ ಕೆಲವು ಬದಲಾವಣೆಗಳನ್ನು ಹೊಂದಿದ್ದರೂ, 2024ರ ಪತ್ರದಲ್ಲಿದ್ದ ಸೂಚನೆಗಳನ್ನು ಸಂಪೂರ್ಣವಾಗಿ ಒಳಗೊಂಡಿಲ್ಲ. ಅದು ವಿವಾಹೇತರ ಜೋಡಿಗಳಿಗೆ ಆಶೀರ್ವಾದ ನೀಡುವಲ್ಲಿ ಸ್ವಯಂಸ್ಫೂರ್ತಿ ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರೂ, ಡಿಸೆಂಬರ್ 2023ರಲ್ಲಿ ಪ್ರಕಟಿಸಲಾದ “ಫಿಡುಷಿಯಾ ಸಪ್ಪ್ಲಿಕಾನ್ಸ್” ಘೋಷಣೆಯು ಅನುಮತಿಸದ ವಿಧದ ಒಂದು ವಿಧಿ ಅಥವಾ ಲಿಟರ್ಜಿಕಲ್ ಕ್ರಮವನ್ನು ಸೂಚಿಸುತ್ತದೆ. ಆ ಘೋಷಣೆಯ ಪ್ರಕಾರ, ಧಮ೯ಸಭೆ ತನ್ನ ನಂಬಿಕೆಗೆ ವಿರುದ್ಧವಾಗುವ ಅಥವಾ ಗೊಂದಲ ಉಂಟುಮಾಡುವ ಯಾವುದೇ ವಿಧಿಯನ್ನೂ ತಪ್ಪಿಸುವ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ, ವಿಶೇಷವಾಗಿ ವಿವಾಹದ ವಿಷಯದಲ್ಲಿ.

ಏಪ್ರಿಲ್ 23ರಂದು ಇಕ್ವಟೋರಿಯಲ್ ಗಿನಿಯಾದಿಂದ ಮರಳುವ ವಿಮಾನ ಪ್ರಯಾಣದ ವೇಳೆ, ಜರ್ಮನಿಯಲ್ಲಿ ಸಮಲಿಂಗಿ ಜೋಡಿಗಳಿಗೆ ಅಧಿಕೃತ ಆಶೀರ್ವಾದ ನೀಡುವ ಪ್ರಸ್ತಾವನೆಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಗದ್ಗುರು ಲಿಯೋರವರು ಹೇಳಿದರು: “ಜಗದ್ಗುರುಗಳ ಅಧಿಕಾರ ಸ್ಥಳವು ಈಗಾಗಲೇ ಜರ್ಮನ್ ಬಿಷಪ್‌ಗಳಿಗೆ ಈ ವಿಷಯದಲ್ಲಿ ಸ್ಪಷ್ಟವಾಗಿ ಹೇಳಿದೆ.”

“ಜಗದ್ಗುರುಗಳ ಅಧಿಕಾರ ಸ್ಥಳವು ಸ್ಪಷ್ಟಪಡಿಸಿದೆ,” ಎಂದು ಜಗದ್ಗುರುಗಳು ಹೇಳಿದರು, “ನಾವು ಜೋಡಿಗಳಿಗೆ, ವಿಶೇಷವಾಗಿ ಸಮಲಿಂಗಿ ಜೋಡಿಗಳಿಗೆ ಅಥವಾ ಅಸಮರ್ಪಕ ಪರಿಸ್ಥಿತಿಯಲ್ಲಿರುವ ಜೋಡಿಗಳಿಗೆ ಅಧಿಕೃತ ರೂಪದ ಆಶೀರ್ವಾದ ನೀಡುವುದನ್ನು ಒಪ್ಪುವುದಿಲ್ಲ, ಜಗದ್ಗುರು ಫ್ರಾನ್ಸಿಸ್ ರವರು ನಿರ್ದಿಷ್ಟವಾಗಿ ಅನುಮತಿಸಿದ ಮಿತಿಯನ್ನು ಮೀರಿ”ಎಂದು ಹೇಳಿದರು.

06 ಮೇ 2026, 18:16