ಜರ್ಮನಿಯ ವುರ್ಜ್‌ಬರ್ಗ್‌ನಲ್ಲಿ ಕ್ಯಾಥೋಲಿಕೆಂಟಾಗ್ 2026 ರಲ್ಲಿ ಕಾರ್ಡಿನಲ್ ಮಾರಿಯೋ ಗ್ರೆಚ್. ಜರ್ಮನಿಯ ವುರ್ಜ್‌ಬರ್ಗ್‌ನಲ್ಲಿ ಕ್ಯಾಥೋಲಿಕೆಂಟಾಗ್ 2026 ರಲ್ಲಿ ಕಾರ್ಡಿನಲ್ ಮಾರಿಯೋ ಗ್ರೆಚ್. 

ಮಾರಿಯೋ ಗ್ರೆಚ್ ರವರು ಕ್ಯಾಥೋಲಿಕೆಂಟಾಗ್ ಕಾರ್ಯಕ್ರಮದಲ್ಲಿ: “ಪ್ರಶ್ನೆಗಳು ನಮ್ಮನ್ನು ನಿರುತ್ಸಾಹಗೊಳಿಸಬಾರದು” ಎಂದು ಹೇಳಿದರು.

ಮಾರಿಯೋ ಗ್ರೆಚ್ ರವರು ಜರ್ಮನ್ ಕ್ಯಾಥೋಲಿಕರ ಮಹತ್ವದ ಸಮಾಗಮವಾದ 104ನೇ ಕ್ಯಾಥೋಲಿಕೆಂಟಾಗ್ ಸಂದರ್ಭದಲ್ಲಿ ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿ, ಆ ದೇಶದ ಧರ್ಮ ಸಭೆ “ನನಗೆ ಅಪಾರ ವಿಶ್ವಾಸವನ್ನೂ ಮಹತ್ತರ ಭರವಸೆಯನ್ನೂ ನೀಡುತ್ತದೆ” ಎಂದು ಹೇಳಿದರು.

ವ್ಯಾಟಿಕನ್ ವರದಿ

ಮಾರಿಯೋ ಗ್ರೆಚ್ ರವರು ಈ ವರ್ಷ ಜರ್ಮನಿಯ ವುರ್ಝ್ಬರ್ಗ್‌ನಲ್ಲಿ ನಡೆದ 104ನೇ ಕ್ಯಾಥೋಲಿಕೆಂಟಾಗ್ ಸಮಾವೇಶದಲ್ಲಿ ವ್ಯಾಟಿಕನ್‌ನ ಅತ್ಯುನ್ನತ ಪ್ರತಿನಿಧಿಯಾಗಿ ಭಾಗವಹಿಸಿದರು. ಶನಿವಾರ ಅವರು ಸಿನೋಡಾಲಿಟಿ ಕುರಿತು ನಡೆದ ಚರ್ಚಾಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು. ಭಾನುವಾರ ಸಮಾರೋಪದ ಪವಿತ್ರ ಬಲಿಪೂಜೆಯಲ್ಲಿ ಸಹಪೂಜಕರಾಗಿ ಪಾಲ್ಗೊಂಡು, ಜಗದ್ಗುರು XIVನೇ ಲಿಯೋರವರ ಆಶೀರ್ವಾದ ಮತ್ತು ಆತ್ಮೀಯತೆಯ ಸಂದೇಶವನ್ನು ಓದಿದರು. “ಜಗದ್ಗುರು ಲಿಯೋರವರು ನಿಮ್ಮೊಂದಿಗೇ ಇದ್ದು, ಏಕತೆ ಮತ್ತು ಐಕ್ಯತೆಯ ಬೆಂಬಲದಲ್ಲಿ ಸಂಪೂರ್ಣ ಹೃದಯದಿಂದ ನಿಮ್ಮಲ್ಲಿ ನಿಂತಿದ್ದಾರೆ,” ಎಂದು ಕಾರ್ಡಿನಲ್ ಹೇಳಿದರು.

ಕಾರ್ಡಿನಲ್ ಗ್ರೆಕ್ ರವರ ಪ್ರಕಾರ, ಪವಿತ್ರಾತ್ಮನಿಗೆ ತೆರೆದಿರುವ ಸಿನೋಡಲ್ ಧರ್ಮ ಸಭೆಗೆ ಭವಿಷ್ಯವಿದೆ. ಸ್ಥಳೀಯ ಧರ್ಮ ಸಭೆಗೆ ಸ್ಥಳೀಯ ಬಿಷಪ್‌ರ ಸೇವೆಯೂ, ವಿಶ್ವ ಧರ್ಮ ಸಭೆಗೆ ಪೇತ್ರನ ಸೇವೆಯೂ ದೇವರ ಇಚ್ಛೆಯನ್ನು ನೆರವೇರಿಸಲು ಒಟ್ಟಾಗಿ ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು. ವುರ್ಝ್ಬರ್ಗ್ ನಗರದ ವಿವಿಧ ಕಾರ್ಯಕ್ರಮಗಳು ಮತ್ತು ಪ್ರದರ್ಶನ ಮಳಿಗೆಗಳಿಗೂ ಅವರು ಭೇಟಿ ನೀಡಿ, ಭಾಗವಹಿಸಿದ್ದವರೊಂದಿಗೆ ಸಂವಾದ ನಡೆಸಿದರು.

ತಮ್ಮ ಭಾಷಣದಲ್ಲಿ ಸಿನೋಡಾಲಿಟಿಯನ್ನು ಒಂದು ಸಂಗೀತ ಸಿಂಫನಿಯಂತೆ ಪರಿಗಣಿಸಬೇಕು ಎಂದು ಅವರು ಹೇಳಿದರು. ಪ್ರತಿಯೊಂದು ವಾದ್ಯಕ್ಕೂ ತನ್ನದೇ ಆದ ಪಾತ್ರವಿದ್ದರೂ, ಅಂತಿಮವಾಗಿ ಸಮ್ಮಿಲನವೇ ಮುಖ್ಯ ಎಂದು ಅವರು ವಿವರಿಸಿದರು. ಪಾಲ್ಗೊಳ್ಳುವಿಕೆ ಮತ್ತು ಐಕ್ಯತೆ ಒಂದಕ್ಕೊಂದು ಸಂಬಂಧಪಟ್ಟಿರಬೇಕು ಹಾಗೂ ಧರ್ಮ ಸಭೆ ಪವಿತ್ರಾತ್ಮನ ಕಾರ್ಯಕ್ಕೆ ಅವಕಾಶ ನೀಡುತ್ತಾ ತನ್ನ ಮಿಷನರಿ ಧ್ಯೇಯವನ್ನು ಮರೆಯಬಾರದು ಎಂದು ಅವರು ಒತ್ತಿಹೇಳಿದರು.

ಸಿನೋಡಾಲಿಟಿ ಸ್ಥಳೀಯ ಧರ್ಮ ಸಭೆಗಳ ಭಾಗವಹಿಸುವಿಕೆ ಇಲ್ಲದೆ ಸಾಧ್ಯವಿಲ್ಲ ಎಂದು ಕಾರ್ಡಿನಲ್ ಹೇಳಿದರು. ಹಾಗೆಯೇ ಸ್ಥಳೀಯ ಧರ್ಮ ಸಭೆಗಳನ್ನು ವಿಶ್ವ ಧರ್ಮ ಸಭೆಯಿಂದ ಬೇರ್ಪಡಿಸಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು. ಸಿನೋಡಲ್ ನಿರ್ಧಾರಗಳು ರಾಜಕೀಯ ತಂತ್ರಗಳಾಗಿಯೂ ಅಥವಾ ಬಹುಮತದ ಮತದಾನಗಳಾಗಿಯೂ ಮಾರ್ಪಡಬಾರದು, ಬದಲಾಗಿ ಪರಸ್ಪರ ಆಲಿಸುವಿಕೆ ಮತ್ತು ಆತ್ಮೀಯ ವಿವೇಚನೆಯಿಂದ ಹುಟ್ಟಿಬರಬೇಕು ಎಂದು ಅವರು ಎಚ್ಚರಿಸಿದರು.

ಕಷ್ಟಕರ ಪ್ರಶ್ನೆಗಳ ಬಗ್ಗೆ ಭಯಪಡಬಾರದು ಎಂದು ಅವರು ಸ್ಪಷ್ಟಪಡಿಸಿದರು. ಇಂತಹ ಪ್ರಶ್ನೆಗಳು ಧರ್ಮ ಸಭೆಗೆ ವಿಷಯಗಳನ್ನು ಇನ್ನಷ್ಟು ಆಳವಾಗಿ ಪರಿಶೀಲಿಸಲು ಸಹಾಯ ಮಾಡುತ್ತವೆ ಎಂದರು. ಧರ್ಮ ಸಭೆಯೊಳಗಿನ ಭಿನ್ನಾಭಿಪ್ರಾಯಗಳು ಸಂಘರ್ಷದ ಕಾರಣವಾಗದೆ ಪರಸ್ಪರ ಶ್ರೀಮಂತಿಕೆಗೆ ಮತ್ತು ವಿವೇಚನೆಗೆ ಕಾರಣವಾಗಬೇಕು ಎಂದು ಹೇಳಿದರು. ಕ್ರೈಸ್ತರು ತಮ್ಮ ಸಮುದಾಯಗಳ ಅಗತ್ಯಗಳಿಗೆ ಸೃಜನಾತ್ಮಕ ಹಾಗೂ ಪ್ರವಾದಿತನದ ಪ್ರತಿಕ್ರಿಯೆ ನೀಡಬೇಕು, ಆದರೆ ಸುವಾರ್ತೆಯಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಎಂದು ಅವರು ನೆನಪಿಸಿದರು.

ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಜರ್ಮನಿಯ ಧರ್ಮ ಸಭೆ “ನನಗೆ ಮಹತ್ತರ ವಿಶ್ವಾಸ ಮತ್ತು ಆಶಯವನ್ನು ನೀಡುತ್ತದೆ” ಎಂದು ಕಾರ್ಡಿನಲ್ ಗ್ರೆಕ್ ಹೇಳಿದರು. “ಇದು ಸತ್ತ ಧರ್ಮ ಸಭೆ ಅಲ್ಲ. ಜನರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ಅದು ಒಳ್ಳೆಯದೇ. ಪ್ರಶ್ನೆಗಳು ನಮ್ಮನ್ನು ನಿರುತ್ಸಾಹಗೊಳಿಸಬಾರದು, ಬದಲಾಗಿ ಅವು ವಿಷಯಗಳನ್ನು ಸ್ಪಷ್ಟಗೊಳಿಸಿ ಆಳವಾಗಿ ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತವೆ,” ಎಂದರು. 2028ರಲ್ಲಿ ನಡೆಯಲಿರುವ ಧರ್ಮ ಸಭೆಯ ಮಹಾಸಭೆಯತ್ತ ಸಾಗುವ ಮಾರ್ಗದಲ್ಲಿ ಸ್ಥಳೀಯ ಧರ್ಮ ಸಭೆಗಳಿಗೆ ಮಾರ್ಗದರ್ಶನ ನೀಡಲು ಸಿನೋಡ್ ಕಾರ್ಯದರ್ಶಾಲಯವು ಶೀಘ್ರದಲ್ಲೇ ಹೊಸ ನಿರ್ದೇಶನಗಳನ್ನು ಪ್ರಕಟಿಸಲಿದೆ ಎಂದು ಅವರು ತಿಳಿಸಿದರು.

18 ಮೇ 2026, 20:06