ಚೆಕ್ ಗಣರಾಜ್ಯಕ್ಕೆ ನಡೆದ ಯಾತ್ರೆಯ ಸಂದರ್ಭದಲ್ಲಿ ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಮೈಕಲ್ ಚೆರ್ನಿರವರ  ಚಿತ್ರ. ಚೆಕ್ ಗಣರಾಜ್ಯಕ್ಕೆ ನಡೆದ ಯಾತ್ರೆಯ ಸಂದರ್ಭದಲ್ಲಿ ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಮೈಕಲ್ ಚೆರ್ನಿರವರ ಚಿತ್ರ. 

“ಕ್ರಿಸ್ತನ ಸಾಕ್ಷಿಯಾಗಿದ್ದಕ್ಕಾಗಿ ಹುತಾತ್ಮರಾದ ಚೆಕ್ ಯಾಜಕರನ್ನು ಕಾರ್ಡಿನಲ್ ಚೆರ್ನಿ ಪ್ರಶಂಸಿಸಿದರು.”

ಕಮ್ಯುನಿಸ್ಟ್ ಆಡಳಿತದಡಿಯಲ್ಲಿ ಹುತಾತ್ಮರಾದ ಚೆಕ್ ಗುರುಗಳಾದ ವಂ.ಸ್ವಾಮಿ ಜಾನ್ ಬುಲಾ ಮತ್ತು ವಾಕ್ಲಾವ್ ಡ್ರ್ಬೋಲಾ ಅವರ ಧನ್ಯೀಕರಣ ಸಮಾರಂಭದ ಮುನ್ನ, ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಮೈಕಲ್ ಚೆರ್ನಿ ರೋಮಿನಲ್ಲಿ ನಡೆದ “ಕಮ್ಯುನಿಸಂನಡಿ ಧನ್ಯ ಹುತಾತ್ಮರು” ಎಂಬ ಸಮ್ಮೇಳನದಲ್ಲಿ ಮಾತನಾಡಿದರು. ಅವರ ಹುತಾತ್ಮರು “ಎಷ್ಟು ಅವಮಾನಕರವಾಗಿರಲಿ ಅಥವಾ ಅನ್ಯಾಯಕರವಾಗಿರಲಿ, ಕ್ರಿಸ್ತನಿಗೆ ಸಾಕ್ಷಿಯಾಗಲು ಸಾಧ್ಯವಾಗದಂತಹ ಯಾವುದೇ ಮಾನವ ಪರಿಸ್ಥಿತಿ ಇಲ್ಲ” ಎಂಬುದನ್ನು ನಮಗೆ ಬೋಧಿಸುತ್ತದೆ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ವಂ. ಸ್ವಾಮಿ ಜಾನ್ ಮತ್ತು ವಂ. ಸ್ವಾಮಿ ವಾಕ್ಲಾವ್ ಅವರ ಸಾಕ್ಷಿಜೀವನವು ನಮ್ಮ ಪ್ರತಿಯೊಬ್ಬರಿಗೂ—ದೊಡ್ಡದಾಗಲಿ ಚಿಕ್ಕದಾಗಲಿ ದೈನಂದಿನ ಹೋರಾಟಗಳಲ್ಲಿ ಸ್ಪೂರ್ತಿಯ ಸಂದೇಶವನ್ನು ನೀಡುತ್ತದೆ. ಅವರ ಹುತಾತ್ಮವು, ಎಷ್ಟು ಅವಮಾನಕರವಾಗಿರಲಿ ಅಥವಾ ಅನ್ಯಾಯಪೂರ್ಣವಾಗಿರಲಿ, ಕ್ರಿಸ್ತನಿಗೆ ಸಾಕ್ಷಿಯಾಗಲು ಸಾಧ್ಯವಾಗದಂತಹ ಯಾವುದೇ ಮಾನವ ಪರಿಸ್ಥಿತಿ ಇಲ್ಲ ಎಂಬುದನ್ನು ನಮಗೆ ಬೋಧಿಸುತ್ತದೆ.

ವಾಟಿಕನ್‌ನ ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಮೈಕಲ್ ಚೆರ್ನಿ ಎಸ್.ಜೆ., ರೋಮಿನ ಪೊಂಟಿಫಿಕಲ್ ಕಾಲೇಜ್ ನೆಪೋಮುಚೆನೊದಲ್ಲಿ ನಡೆದ “ಕಮ್ಯುನಿಸಂನ ಧನ್ಯ ಹುತಾತ್ಮರು” ಎಂಬ ಸಮ್ಮೇಳನದಲ್ಲಿ ಈ ಮಾತುಗಳನ್ನು ಹೇಳಿದರು. ಜಗದ್ಗುರುಗಳ ಅಧಿಕಾರ ಸ್ಥಳಕ್ಕೆ ಇರುವ ಚೆಕ್ ಗಣರಾಜ್ಯದ ರಾಯಭಾರ ಕಚೇರಿಯು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ಜೂನ್ 6ರಂದು ಬ್ರ್ನೋ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ವಂ.ಸ್ವಾಮಿ ಜಾನ್ ಬುಲಾ ಮತ್ತು ವಂ.ಸ್ವಾಮಿ ವಾಕ್ಲಾವ್ ಡ್ರ್ಬೋಲಾ ರವರ ಧನ್ಯೀಕರಣ ಸಮಾರಂಭದ ಮುನ್ನ ಅವರ ಜೀವನ ಮತ್ತು ತ್ಯಾಗವನ್ನು ಸ್ಮರಿಸಲಾಯಿತು.

ಚೆಕೊಸ್ಲೊವಾಕಿಯಾದ ಕಮ್ಯುನಿಸ್ಟ್ ಆಡಳಿತದ ಕಾಲದಲ್ಲಿ, “ನಂಬಿಕೆಯ ಮೇಲಿನ ದ್ವೇಷ”ದಿಂದ ಈ ಇಬ್ಬರು ಕಥೋಲಿಕ ಗುರುಗಳನ್ನು ಸುಳ್ಳು ಆರೋಪಗಳ ಮೂಲಕ ವಿಚಾರಣೆ ನಡೆಸಿ ಮರಣದಂಡನೆಗೆ ಗುರಿಮಾಡಲಾಯಿತು. ಆದರೂ ಅವರು ತಮ್ಮ ನಂಬಿಕೆಯನ್ನು ತ್ಯಜಿಸಲಿಲ್ಲ. ಇತಿಹಾಸದ ಕತ್ತಲೆಯ ಮೋಡಗಳನ್ನು ಭೇದಿಸಿ ಬೆಳಕು ಹೊಳೆಯಬಹುದು ಎಂಬುದನ್ನು ತಮ್ಮ ಜೀವನದ ಮೂಲಕ ಅವರು ಸಾಬೀತುಪಡಿಸಿದರು ಎಂದು ಕಾರ್ಡಿನಲ್ ಚೆರ್ನಿ ಹೇಳಿದರು.

ಅವರ ಹುತಾತತ್ವವು ಸೋಲಿನ ಸ್ಮರಣೆ ಅಲ್ಲ, ಜೀವದ ಜಯದ ಆಚರಣೆಯಾಗಿದೆ ಎಂದು ಕಾರ್ಡಿನಲ್ ತಿಳಿಸಿದರು. ಬೋಹೇಮಿಯಾ ಮತ್ತು ಮೊರಾವಿಯಾದ ನೆಲದಲ್ಲಿ ದಶಕಗಳ ಕಾಲ ಮಣ್ಣಿನಡಿಯಲ್ಲಿ ಮರೆವಿದ್ದ ಗೋಧಿಯ ಕಾಳಿನಂತೆ, ಅವರ ತ್ಯಾಗ ಮತ್ತು ನಂಬಿಕೆ ಇಂದು ಹೊಸ ಜೀವವಾಗಿ ಹೊರಹೊಮ್ಮಿದೆ ಎಂದರು. ನಾಸ್ತಿಕತೆ ಮತ್ತು ಹಿಂಸೆಯ ಹಿಮಪಾತದ ನಡುವೆಯೂ ದೇವರಲ್ಲಿ ವಿಶ್ವಾಸವಿಟ್ಟವರೊಳಗಿನ ದೈವಿಕ ಜೀವವನ್ನು ಯಾವುದೇ ಹಿಂಸೆಯೂ ನಾಶಮಾಡಲಾರದು ಎಂದು ಅವರು ಒತ್ತಿಹೇಳಿದರು.

ಕಾರಾಗೃಹದ ಕಂಬಿಗಳ ಹಿಂದೆ, ದೀರ್ಘ ವಿಚಾರಣೆಗಳ ಮಧ್ಯೆ ಮತ್ತು ಅತ್ಯಂತ ಅವಮಾನಕರ ಸಂದರ್ಭಗಳಲ್ಲಿಯೂ ದೇವರ ಕೈಗಳೇ ವಂ.ಸ್ವಾಮಿ ಜಾನ್ ಮತ್ತು ವಂ.ಸ್ವಾಮಿ ವಾಕ್ಲಾವ್ ರವರಿಗೆ ಆಧಾರವಾಗಿದ್ದವು ಎಂದು ಕಾರ್ಡಿನಲ್ ಸ್ಮರಿಸಿದರು. ಕಮ್ಯುನಿಸ್ಟ್ ಆಡಳಿತವು ಕೇವಲ ಅವರನ್ನು ಕೊಲ್ಲುವುದಷ್ಟೇ ಅಲ್ಲ, ಅವರ ಯಾಜಕತ್ವದ ಗುರುತನ್ನೇ ಅಳಿಸಿಹಾಕಲು ಪ್ರಯತ್ನಿಸಿತು. ಆದರೆ ಬೆಂಕಿಯಲ್ಲಿ ಪರೀಕ್ಷಿಸಲ್ಪಟ್ಟ ಚಿನ್ನದಂತೆ, ಅವರ ನಂಬಿಕೆ ಇನ್ನಷ್ಟು ಪ್ರಕಾಶಮಾನವಾಯಿತು. ಬಂಧನಕ್ಕೂ ಮುನ್ನ ದಿವ್ಯಪೀಠದ ಮುಂದೆ ಮೊಣಕಾಲೂರಿ ಮಾಡಿದ ಪ್ರಾರ್ಥನೆಯ ಜೀವನವೇ ಅವರಿಗೆ ನಿಂದನೆ, ಏಕಾಂತ ಮತ್ತು ಮರಣದ ಕಣ್ತೂಗು ಎದುರಿಸುವ ಧೈರ್ಯವನ್ನು ನೀಡಿತು ಎಂದು ಹೇಳಿದರು.

ಕೊನೆಯಲ್ಲಿ, ಅವರ ಹುತಾತತ್ವವು ಇಂದಿಗೂ ಸುವಾರ್ತೆಯನ್ನು ಸಾರುತ್ತಿದೆ ಎಂದು ಕಾರ್ಡಿನಲ್ ಚೆರ್ನಿ ಹೇಳಿದರು. ಸೇವೆ, ಕ್ಷಮೆ ಮತ್ತು ಸತ್ಯಕ್ಕಾಗಿ ತಮ್ಮ ಜೀವವನ್ನು ಅರ್ಪಿಸುವ ನಿಜವಾದ ಕ್ರೈಸ್ತರಾಗಲು ಅವರ ತ್ಯಾಗ ನಮಗೆ ಪ್ರೇರಣೆಯಾಗಲಿ ಎಂದು ಆಶಿಸಿದರು. ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಉಲ್ಲೇಖಿಸಿದ ಅವರು, ದ್ವೇಷ, ಹಿಂಸೆ ಮತ್ತು ಯುದ್ಧಗಳಿಂದ ಕೂಡಿದ ಜಗತ್ತಿನಲ್ಲಿಯೂ ಅವರ ಸಾಕ್ಷಿಜೀವನವು ಸತ್ಪ್ರವೃತ್ತಿಯು ದುಷ್ಟತೆಯ ಮೇಲೆ ಜಯ ಸಾಧಿಸುವ ಪ್ರವಾದಿಯಂತಿದೆ ಎಂದು ಹೇಳಿದರು.

20 ಮೇ 2026, 21:24