2026.03.27 Monsignor Paolo Rudelli

ಜಗದ್ಗುರುಗಳ ಅಧಿಕಾರ ಸ್ಥಳಕ್ಕೆ ನೇಮಕಗೊಂಡ 13 ರಾಯಭಾರಿಗಳಿಗೆ ಗೌರವ ಸನ್ಮಾನ ಪ್ರದಾನ.

ಜಗದ್ಗುರುಗಳ ಅಧಿಕಾರ ಸ್ಥಳಕ್ಕೆ ಪ್ರತಿನಿಧಿಗಳಾಗಿ ಎರಡು ವರ್ಷಗಳ ಸೇವೆ ಸಲ್ಲಿಸಿದ ಬಳಿಕ, ರಾಯಭಾರಿಗಳ ಒಂದು ತಂಡವು ವ್ಯಾಟಿಕನ್‌ನ ಅತ್ಯುನ್ನತ ರಾಜತಾಂತ್ರಿಕ ಗೌರವಗಳಲ್ಲಿ ಒಂದನ್ನು ಸ್ವೀಕರಿಸಿದೆ.

ವ್ಯಾಟಿಕನ್ ವರದಿ

ನಿನ್ನೆ, ಮೇ 12ರಂದು, ಜಗದ್ಗುರುಗಳ ಅಧಿಕಾರ ಸ್ಥಳದ ಮಾನ್ಯತೆ ಪಡೆದಿದ್ದು ತಮ್ಮ ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದ ರಾಯಭಾರಿಗಳ ಒಂದು ತಂಡಕ್ಕೆ ವ್ಯಾಟಿಕನ್‌ನಲ್ಲಿ ಸಂಪ್ರದಾಯಬದ್ಧ ಗೌರವಗಳನ್ನು ಪ್ರದಾನ ಮಾಡಲಾಯಿತು.

ಜಗದ್ಗುರುಗಳ ಆಯ್ಕೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಈ ಸಮಾರಂಭದಲ್ಲಿ, ರಾಜ್ಯ ಕಾರ್ಯದರ್ಶಾಲಯದ ಸಾಮಾನ್ಯ ವ್ಯವಹಾರಗಳ ಪರ್ಯಾಯ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪಾವೊಲೊ ರುಡೆಲ್ಲಿರವರು 13 ರಾಜತಾಂತ್ರಿಕರಿಗೆ ಗೌರವ ಚಿಹ್ನೆಗಳು ಹಾಗೂ ಅಧಿಕೃತ ಪ್ರಮಾಣಪತ್ರಗಳನ್ನು ವಿತರಿಸಿದರು.

ಈ ರಾಯಭಾರಿಗಳಿಗೆ “ಆರ್ಡರ್ ಆಫ್ ಪಿಯಸ್ IX”ನ “ನೈಟ್ ಗ್ರ್ಯಾಂಡ್ ಕ್ರಾಸ್” ಅಥವಾ “ಡೇಮ್ ಗ್ರ್ಯಾಂಡ್ ಕ್ರಾಸ್” ಎಂಬ ಬಿರುದುಗಳನ್ನು ಪ್ರದಾನಿಸಲಾಯಿತು. ಇದು ರಾಜತಾಂತ್ರಿಕ ಸೇವೆಗೆ ಜಗದ್ಗುರುಗಳ ಅಧಿಕಾರ ಸ್ಥಳವು ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ.

13 ಮೇ 2026, 19:19