ಜಗದ್ಗುರುಗಳ ಅಧಿಕಾರ ಸ್ಥಳದ ದೈತ್ಯ ಡಿಜಿಟಲ್ ಪರದೆಗಳಲ್ಲಿ ದೈನಂದಿನ ಕಾರ್ಯಕ್ರಮ ಪ್ರಸಾರ ಆರಂಭಿಸಿದೆ.
ವ್ಯಾಟಿಕನ್ ವರದಿ
ಸಂವಹನ ಇಲಾಖೆ ಜಗದ್ಗುರುಗಳ ಅಧಿಕಾರ ಸ್ಥಳಕ್ಕೆ ಸಂಬಂಧಿಸಿದ ಅಧಿಕೃತ ವಿಷಯಗಳನ್ನು ಇಟಾಲಿಯ ಡಿಜಿಟಲ್ ವೇದಿಕೆಯಾದ "ಸೆಲ್ಫಿಸ್ಟ್ರೀಟ್" ನಿರ್ವಹಿಸುವ ಡಿಜಿಟಲ್ ಪರದೆಗಳ ಜಾಲದ ಮೂಲಕ ಪ್ರಸಾರ ಮಾಡುವ ಹೊಸ ಉಪಕ್ರಮವನ್ನು ಘೋಷಿಸಿದೆ.
ಮೇ 17ರಿಂದ ಆರಂಭವಾಗುವ ಈ ಯೋಜನೆಯಡಿ, ರೋಮ್ ಮತ್ತು ಮಿಲಾನ್ ನಗರಗಳ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿದಿನ ಚಿತ್ರಗಳು, ವೀಡಿಯೊಗಳು ಮತ್ತು ವಿಶೇಷ ಪ್ರಸಾರಗಳ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುತ್ತದೆ.
ಆಧುನಿಕ ಡಿಜಿಟಲ್ ಸಂವಹನ ವಿಧಾನಗಳ ಮೂಲಕ ಜಗದ್ಗುರುಗಳ ಅಧಿಕಾರ ಸ್ಥಳದ ಧ್ವನಿ ಮತ್ತು ಚಟುವಟಿಕೆಗಳನ್ನು ಹೆಚ್ಚಿನ ಜನರಿಗೆ ತಲುಪಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.
ಮುಂದಿನ ತಿಂಗಳುಗಳಲ್ಲಿ, ಈ ಯೋಜನೆಯನ್ನು ಇಟಲಿಯ ಇತರೆ ನಗರಗಳಲ್ಲಿಯೂ ಹೆಚ್ಚುವರಿ ಡಿಜಿಟಲ್ ಪರದೆಗಳಿಗೆ ಹಂತ ಹಂತವಾಗಿ ವಿಸ್ತರಿಸುವ ನಿರೀಕ್ಷೆಯಿದೆ. ಇದರ ಮೂಲಕ ವ್ಯಾಟಿಕನ್‌ನ ವಿಷಯಗಳು ಪರಂಪರಾಗತ ಮಾಧ್ಯಮ ವೇದಿಕೆಗಳಾಚೆಯೂ ಹೆಚ್ಚಿನ ಜನರಿಗೆ ತಲುಪಲಿವೆ.
ಈ ಸಹಯೋಗವು 2025ರ ಕ್ರಿಸ್ಮಸ್ ಕಾಲದಲ್ಲಿ ಪ್ರಾರಂಭಿಸಲಾದ ದೃಶ್ಯ ಸಂವಹನ ಅಭಿಯಾನದ ಮುಂದುವರಿಕೆಯಾಗಿದೆ. ಆ ಸಂದರ್ಭದಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳವು ಆಯ್ದ ಚಿತ್ರಗಳು ಮತ್ತು ಕ್ರಿಸ್ಮಸ್ ಪ್ರೇರಿತ ಸಂದೇಶಗಳನ್ನು ಸಂತ ಪೇತ್ರರ ಬಸಿಲಿಕಾ ಸಮೀಪದ ದೈತ್ಯ ಡಿಜಿಟಲ್ ಪರದೆಗಳಲ್ಲಿ ಪ್ರದರ್ಶಿಸಲಾಗಿತ್ತು.